Thursday, 19th September 2024

ರಾಜ್ಯ ನಾಟಕ ಅಕಾಡೆಮಿಯ ಅಧ್ಯಕ್ಷರ ನೇಮಕಾತಿ ಸಿಂಧುವೇ?

ಬಿ. ಎನ್. ಯಳಮಳ್ಳಿ. ಬೆಂಗಳೂರು
ವೃತ್ತಿಗೆ, ಯೋಗ್ಯತೆಗೆ ಮತ್ತು ಸಾಧನೆಗೇ ಗೌರವ ಅನ್ನುವದು ಬರೀ ನಾಟಕದ ಡೈಲಾಗು ಅಂತ ಕಾಣುತ್ತದೆ ಸ್ವಾಮಿ.

ಪಕ್ಷ ಯಾವುದೇ ಇರಲಿ, ಚುನಾವಣೆಯಲ್ಲಿ ಬಹುಮತ ಗೆದ್ದು ಮಂತ್ರಿಿಗಳ, ಇತರ ನಿಗಮಗಳ ಅಧ್ಯಕ್ಷರ ನೇಮಕಾತಿಗಳಲ್ಲಿ ಏನೆಲ್ಲಾ ರಾಜಕೀಯ, ಒತ್ತಡಗಳು, ಶಿಫಾರಸ್ಸುಗಳು ಮತ್ತು ಭಿನ್ನಾಾಭಿಪ್ರಾಾಯಗಳು ನಡೆಯುತ್ತವೆ ಎಂಬುದು ರಾಜಕಾರಣದ ಅನಿವಾರ್ಯವಾಗಿ ಸರ್ವವಿದಿತ, ಸದಾ ಸ್ವೀಕೃತ. ಆಡಳಿತ ಮಾಡುವವರು ಐಎಎಸ್ ಸಿಬ್ಬಂದಿ, ಪಕ್ಷದ ಪ್ರಣಾಳಿಕೆಗಳನ್ನು ನೋಡಿಕೊಂಡು. ಈ ರಾಜಕೀಯ ಸಾರಸ್ವತ ಲೋಕದ ಅಕಾಡೆಮಿಗಳಿಗೆ ನೇಮಕಾತಿ ಮಾಡುವಾಗಲೂ, ತನ್ನ ಪ್ರಭಾವ ಬೀರಬಾರದು ಎನ್ನುವುದು ಒಂದು ಸಾಧುವಾದ ಆಶಯ. ಯಾಕೆಂದರೆ ಇಲ್ಲಿ ಕೆಲಸ ಮಾಡಬೇಕಾಗಿರೋದು ಆ ಅಕಾಡೆಮಿಗಳ ನಿಯೋಜಿತ ಅಧ್ಯಕ್ಷರು ಮತ್ತು ಸದಸ್ಯರು. ಇಲ್ಲಿ ರಾಜಕೀಯ ಪ್ರಣಾಳಿಕೆ ಮಾರ್ಗದರ್ಶಿ ಅಲ್ಲ, ಅದು ಸಾಂಸ್ಕೃತಿಕ ಅಭಿವೃಧ್ಧಿಿಯ ಕೆಲಸ. ಆದರೆ ರಾಜಕಾರಣಿಗಳಿಗೆ ಧನ, ಧರ್ಮ, ಜಾತಿ, ಪ್ರದೇಶ, ಉದ್ಯಮಗಳ ಧಣಿಗಳು, ಮತದಾರ ಜನತೆಯ ನಂತರ ಬುದ್ಧಿಿಜೀವಿಗಳದ್ದೇ ಆಸರೆ. ಇಲ್ಲಿ ರಾಜಕಾರಣಿಗಳ ಮತ್ತು ಸಾರಸ್ವತ ಲೋಕದವರ ಮಧ್ಯೆೆ ಕೊಡುಕೊಳ್ಳುವ ವ್ಯವಹಾರ ಇಣುಕುತ್ತದೆ. ಆದರೆ ಕೆಲಸ, ಕೊಡುಗೆ ಸಾಂಸ್ಕೃತಿಕವಾದದ್ದರಿಂದ ಇಲ್ಲಿ ಶಿಫಾರಸ್ಸಿಿಗೆ ಒಂದಷ್ಟು ಕಡಿವಾಣ ಇರಬೇಕಾಗುತ್ತದೆ. ಆದರೆ ರಾಜಕೀಯ ಸಾಧನೆಯಲ್ಲಿ ಸಾಂಸ್ಕೃತಿಕ ಅಭಿವೃದ್ಧಿಿಯನ್ನು ಗಣನೆಗೆ ತೆಗೆದುಕೊಳ್ಳುವುದು ವಿರಳ. ಇದೇ ಅಕ್ಟೊೊಬರ್ 15 ಕ್ಕೆೆ ರಚಿತವಾದ ವಿವಿಧ ಅಕಾಡೆಮಿಗಳ ಬಗ್ಗೆೆ ಮಾಧ್ಯಮದಲ್ಲಿ ಟೀಕೆ ವ್ಯಕ್ತವಾಗುತ್ತಲಿದೆ.

ಕರ್ನಾಟಕ ನಾಟಕ ಅಕಾಡೆಮಿ ಒಂದು ಮಹತ್ವದ ಸಂಸ್ಥೆೆ. ಸಾಹಿತ್ಯ ಮಾಧ್ಯಮಕ್ಕೆೆ ತಲುಪಿಸಲಾಗದ್ದನ್ನು ನಾಟಕ ಜನಕ್ಕೆೆ ತಲುಪಿಸುವ ಸಾಧ್ಯತೆ ಇರುತ್ತದೆ. ಸಂದೇಶ ಬೀರುವ ಜತೆಗೆ ಮನರಂಜನೆ ನೀಡುವ ಮಾಧ್ಯಮ. ಒಂದು ಕಡೆ ಮುದ್ರಿಿಸಿ ನಾಡಿನ ತುಂಬ ಹಂಚುವ ಕೆಲಸವಲ್ಲ. ನಾಟಕ ನಾಡಿನ ತುಂಬ ನಡೆದು ಹೋಗಬೇಕಾಗುತ್ತದೆ. ಬರೀ ಸೌಥ್ ಬೆಂಗಳೂರಿನ ಜನ ಮಾತ್ರ ಕರ್ನಾಟಕದ ಪ್ರೇಕ್ಷಕರಲ್ಲ. ಈ ನಾಡಿನ ತುಂಬ ನಾಟಕದ ಪಾದಯಾತ್ರೆೆ ಅದಾಗಲೇ ಮಾಡಿಸಿದ ಒಬ್ಬರೇ ಒಬ್ಬ ವಿಶಿಷ್ಟ ರಂಗಕರ್ಮಿ ಶ್ರೀ ಎಲ್. ಕೃಷ್ಣಪ್ಪ. ಅವರು ಕಳೆದ ಅರುವತ್ತು ವರುಷಗಳಿಂದ ಕನ್ನಡ ನಾಟಕ ರಂಗದ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆ ಮಾಡಿದ್ದಾರೆ.

ರಂಗ ಮಂಚ ವಿನ್ಯಾಾಸ, ರಂಗ ಮಂಚದ ಮೇಲಿನ ಬೆಳಕು ಕತ್ತಲೆಯ ವಿನ್ಯಾಾಸ, ವಸ್ತ್ರ ವಿನ್ಯಾಾಸ, ನಾಟಕ ನಿರ್ದೇಶನಗಳಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಕರ್ನಾಟಕ ನಾಟಕ ರಂಗದಲ್ಲಿ ‘ದೀವಟಿಗೆ ಕೃಷ್ಣಪ್ಪ’ ಎಂಬ ಅನ್ವರ್ಥನಾಮ ಗಳಿಸಿದ್ದಾರೆ. ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರದ ಸ್ಟೇಜ್ ಮೇಲೆ ಅಲ್ಲದೆ, ರಿಪೇರಿಗೆಂದು ಮುಚ್ಚಿಿದಾಗ ಕಲಾಕ್ಷೇತ್ರದ ಹಿಂಭಾಗ, ಮುಂಭಾಗಗಳ ಕಟ್ಟೆೆಗಳ ಮೇಲೆ ಸ್ಟೇಜ್ ಕಟ್ಟಿಿ ಬಯಲು ನಾಟಕ ಆಡಿಸಿದ್ದಾರೆ. ನಾಡಿನ ಮೂಲೆ ಮೂಲೆಗಳಿಗೂ ಒಬ್ಬರೇ ಸಂಚರಿಸಿ ನಾಟಕ ಶಿಬಿರಗಳನ್ನು,ನಾಟಕೋತ್ಸವ, ವಿಚಾರ ಸಂಕಿರಣಗಳನ್ನು ನಡೆಸಿ ತಾವೊಬ್ಬರೇ ‘ಮೊಬೈಲ್ ಡ್ರಾಾಮಾ ಸ್ಕೂಲ್’ ಆಗಿ ರಂಗ ಕಲಾಕಾರರನ್ನು ಬೆಳೆಸಿದ್ದಾರೆ, ಹವ್ಯಾಾಸಿ ನಾಟಕ ಸಂಸ್ಥೆೆಗಳನ್ನು ಕಟ್ಟಿಿದ್ದಾರೆ. ಜತೆಗೆ ‘ಈ ಮಾಸ ನಾಟಕ’ ಅಂತ ರಂಗಪತ್ರಿಿಕೆ ತೆಗೆದು ಸ್ವತಃ ವಿಶೇಷ ಸುದ್ದಿಗಾರರಾಗಿ ನಾಡಿನಾದ್ಯಂತ ಸಂಚರಿಸಿ, ಪತ್ರಿಿಕೆಯ ಲೇಖನಗಳನ್ನುಬರೆದು, ಸಂಪಾದಕರಾಗಿ, ಮುದ್ರಿಿಸಿ, ತಾವೇ ಪ್ಟ್‌ೋ ಮಾಡಿ ವಿತರಣೆ ಮಾಡಿ ಹದಿನೇಳು ವರ್ಷಗಳವರೆಗೆ ನಡೆಸಿದ್ದಾರೆ. ಇದೆಲ್ಲವೂ ಕೃಷ್ಣಪ್ಪನವರ ಸ್ವಯಂ ನಿರ್ದೇಶನದ ಏಕಪಾತ್ರಾಾಭಿನಯದಲ್ಲಿ ನಡೆದದ್ದು. ಕರ್ನಾಟಕದಲ್ಲಿ ಇದಕ್ಕೆೆ ಸಾಟಿಯಾದ ಇನ್ನೊೊಂದು ಉದಾಹರಣೆ ಇಲ್ಲ.

ಕರ್ನಾಟಕ ನಾಟಕ ಕ್ಷೇತ್ರದಲ್ಲಿ ಯಾವ ಯಾವ ಸೆಲೆಬ್ರಿಿಟಿಗಳು ಹೆಸರು ಮಾಡಿದ್ದಾರೋ, ಅವರೆಲ್ಲರ ಜತೆ ಭುಜಕ್ಕೆೆ ಭುಜ ಕೊಟ್ಟು ಕೃಷ್ಣಪ್ಪ ಕೆಲಸ ಮಾಡಿದ್ದಾರೆ. ಬಿ.ವಿ. ಕಾರಂತ, ಕಾರ್ನಾಡ, ಚಂದ್ರಶೇಖರ ಕಂಬಾರ, ಪಿ. ಲಂಕೇಶ್, ಆರ್. ನಾಗೇಶ್, ಪ್ರಸನ್ನ, ಬಿ.ಚಂದ್ರಶೇಖರ್, ಟಿ.ಎನ್. ಸೀತಾರಾಂ ಎಲ್ಲರಿಗೂ ಸಾಥ್ ಕೊಟ್ಟಿಿದ್ದಾರೆ. ನಾಟಕಬ್ರಹ್ಮ ಬಿ.ವಿ. ಕಾರಂತರು, ‘ನನ್ನ ಮತ್ತು ಕೃಷ್ಣಪ್ಪನವರ ಸಂಬಂಧ’ ಅಂತ ಬರೆಯುತ್ತ ಹೇಳಿದ್ದಾರೆ. ‘ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಹೊರಬಿದ್ದು ಬೆಂಗಳೂರಿಗೆ ನಾಟಕ ಮಾಡಲಿಕ್ಕೆೆ ಅಂತ ಬಂದಾಗ, ಅಲ್ಲೇ ನಮಗಾಗಿಯೇ ಹುಟ್ಟಿಿದ್ದಾರೋ ಎಂಬಂತೆ ಈ ಕೃಷ್ಣಪ್ಪ ಎದುರಾದರು. ನಾನು ಮತ್ತು ಕೃಷ್ಣಪ್ಪ ಒಟ್ಟೊೊಟ್ಟಿಿಗೆ ಕನಸು ಕಾಣುತ್ತಿಿದ್ದೆವು. ನಾನು ಯಾವ ನಾಟಕ ಆಡಿದರೆ ಜನರ ಒಳ್ಳೆೆಯ ಪ್ರತಿಕ್ರಿಿಯೆ ಬರುತ್ತದೆ ಅಂತ ಕನಸು ಕಾಣುತ್ತಿಿದ್ದರೆ, ಕೃಷ್ಣಪ್ಪ ಯಾವ ನಾಟಕ ಎಲ್ಲಿ, ಹೇಗೆ ಆಡಬೇಕು ಅಂತ ಕನಸು ಕಾಣುತ್ತಿಿದ್ದರು. ನಾನು ಶ್ರೀರಂಗರ ನಾಟಕ ‘ಸ್ವರ್ಗಕ್ಕೆೆ ಮೂರೇ ಬಾಗಿಲು’ ಮಾಡುವಾಗ ಕೃಷ್ಣಪ್ಪನವರ ರಂಗ ಸೃಷ್ಟಿಿಯ ವಿರಾಟ್ ಸ್ವರೂಪವನ್ನು ನೋಡಿದೆ. ನನಗಂತೂ ಆಗ ಕರ್ನಾಟಕದಲ್ಲಿ ಎಲ್ಲೇ ಹೋದರೂ, ಕೃಷ್ಣಪ್ಪ ಬೇಕೇ ಬೇಕು ಅನ್ನುವಷ್ಟು ಅನಿವಾರ್ಯವಾದರು.’ ಯಾರಿಗುಂಟು, ಯಾರಿಗಿಲ್ಲ ಈ ಹೊಗಳಿಕೆ, ಹೆಗ್ಗಳಿಕೆ!

ಈ ಕೃಷ್ಣಪ್ಪನವರಿಗೆ ನಾಟಕ ಅಕಾಡೆಮಿ ಪ್ರಶಸ್ತಿಿ, ರಾಜ್ಯೋೋತ್ಸವ ಪ್ರಶಸ್ತಿಿ ಬಂದಿದೆ. ಕರ್ನಾಟಕ ನಾಟಕ ಅಕಾಡೆಮಿ ಕೃಷ್ಣಪ್ಪನವರ ಜೀವನ ಸಾಧನೆಯ ಬಗ್ಗೆೆ ಪುಸ್ತಕ ಪ್ರಕಾಶಿಸಿದೆ. ಕನ್ನಡ ಸಂಸ್ಕೃತಿ ಇಲಾಖೆ ಕೃಷ್ಣಪ್ಪನವರ ಬಗ್ಗೆೆ ಸಾಕ್ಷ್ಯಚಿತ್ರ ಮಾಡಿಸಿದೆ.

ಇಷ್ಟೆೆಲ್ಲಾ ಆದರೂ 2004 ರಿಂದ ಸತತವಾಗಿ ಪ್ರತಿ ಮೂರು ವರ್ಷಕ್ಕೊೊಮ್ಮೆೆ ಕೃಷ್ಣಪ್ಪನವರ ಹೆಸರು ಇಲಾಖೆಯಿಂದ ವಿಧ್ಯುಕ್ತವಾಗಿ ಸೂಚ್ಯಗೊಂಡರೂ, ನಿನ್ನೆೆಯವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಸ್ಥಾಾನ ಲಭ್ಯವಾಗಲೇ ಇಲ್ಲ. ನಾಟಕದ ಒಂದೊಂದೇ ಕ್ಷೇತ್ರದಲ್ಲಿ ಕೆಲಸ ಮಾಡಿದವರೂ ಅಧ್ಯಕ್ಷರಾಗಿದ್ದಾರೆ. ಬರಿಯೆ ಪಾರುಪತ್ಯ ಮಾಡಿಕೊಂಡು ರಾಜಕಾರಣಿಗಳ ಜತೆ ಕಲಾಕ್ಷೇತ್ರದ ಮೆಟ್ಟಿಿಲುಗಳನ್ನು ಮಾತ್ರ ತುಳಿದ ಅಣ್ಣಂದಿರೂ ಅಧ್ಯಕ್ಷರಾಗಿದ್ದಾರೆ. ವೃತ್ತಿಿಗೆ, ಯೋಗ್ಯತೆಗೆ ಮತ್ತು ಸಾಧನೆಗೇ ಗೌರವ ಅನ್ನುವದು ಬರೀ ನಾಟಕದ ಡೈಲಾಗು ಅಂತ ಕಾಣುತ್ತದೆ ಸ್ವಾಾಮಿ.
(ಪೂರ್ತಿ ವಿವರಗಳಿಗೆ ಫೇಸ್ ಬುಕ್ ಪೇಜ್ ದೀವಟಿಗೆ ಕೃಷ್ಣಪ್ಪ ನೋಡಬಹುದು.)

Leave a Reply

Your email address will not be published. Required fields are marked *