Saturday, 23rd November 2024

ಆಪಲ್ ಡೈಲಿ ಪತ್ರಿಕೆಯ ಸಂಪಾದಕ, ಸಿಇಓಗೆ ಜಾಮೀನು ನಿರಾಕರಣೆ

ಹಾಂಗ್‌ ಕಾಂಗ್‌: ರಾಷ್ಟ್ರೀಯ ಭದ್ರತಾ ಕಾನೂನಿನಡಿ ಬಂಧನಕ್ಕೊಳಗಾಗಿದ್ದ ಆಪಲ್ ಡೈಲಿ ಪತ್ರಿಕೆಯ ಮುಖ್ಯ ಪತ್ರಿಕೆಯ ಮುಖ್ಯ ಸಂಪಾದಕರು ಮತ್ತು ಕಂಪನಿಯ ಮುಖ್ಯಸ್ಥರಿಗೆ ಹಾಂಗ್‌ಕಾಂಗ್‌ ನ್ಯಾಯಾಲಯ ಶನಿವಾರ ಜಾಮೀನು ನಿರಾಕರಿಸಿ, ವಿಚಾರಣೆಗೆ ಹಾಜರಾಗು ವಂತೆ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ಮ್ಯಾಜಿಸ್ಟ್ರೇಟ್ ವಿಕ್ಟರ್, ರಾಷ್ಟ್ರೀಯ ಭದ್ರತಾ ಕಾನೂನನ್ನು ಮತ್ತೆ ಉಲ್ಲಂಘಿಸುವುದಿಲ್ಲ ಎಂಬುದಕ್ಕೆ ಸಾಕಷ್ಟು ಆಧಾರಗಳಿಲ್ಲ. ಹಾಗೆಯೇ ಆರೋಪಿಗಳನ್ನು ಬಂಧಿಸಿ, ಲೈ ಚಿ ಕೋಕ್ ಕೇಂದ್ರಕ್ಕೆ ಕಳುಹಿಸುವಂತೆ ಆದೇಶಿಸಿದರು. ಮುಂದಿನ ವಿಚಾರಣೆಯನ್ನು ಆಗಸ್ಟ್ 13 ಕ್ಕೆ ನಿಗದಿಪಡಿಸಿದರು.

ಮುಖ್ಯ ಸಂಪಾದಕ ರ‍್ಯಾನ್‌ ಲಾ, ನೆಕ್ಸ್ಟ್‌ ಡಿಜಿಟಲ್‌ನ ಸಿಇಒ ಚೌಂಗ್‌ ಕಿಮ್-ಹಂಗ್‌ ಅವರ ವಿರುದ್ಧ ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸುವ ಮೂಲಕ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿರುವ ಆರೋಪ ಹೊರಿಸಲಾಗಿತ್ತು.