Thursday, 19th September 2024

ಫಲಿತಾಂಶದ ಬೆನ್ನೇರಿ ಬಂತಾ ವಿಶ್ಲೇಷಣಾ ವಿಲಾಸ!

ಪ್ರಸ್ತುತ

ರಾಂ ಎಲ್ಲಂಗಳ, ಹವ್ಯಾಸಿ ಬಹರಗಾರರು 

ಎಲ್ಲ ಲೆಕ್ಕಾಾಚಾರಗಳನ್ನು ತಲೆಕೆಳಗು ಮಾಡಿದ ಈ ಜನಾದೇಶಕ್ಕೆೆ ಮಣಿಯದೆ ವಿಧಿಯಿಲ್ಲವಾದರೂ ಫಲಿತಾಂಶವಂತೂ ನಿಜಕ್ಕೂ ಅಚ್ಚರಿಯುಂಟು ಮಾಡುವಂತಿದೆ. ಎರಡೂ ರಾಜ್ಯಗಳಲ್ಲಿ ಅನಿರೀಕ್ಷಿತ ಫಲಿತಾಂಶದ ಪರಿಣಾಮ ಅಲ್ಲಿಯ ರಾಜಕೀಯವು ಹೊಸ ತಿರುವು ಪಡೆದುಕೊಂಡಿದೆ.

ಚುನಾವಣಾ ಫಲಿತಾಂಶವೆಂದರೆ ಹಾಗೆ. ಅದರಲ್ಲೂ ಎಲ್ಲ ಸಮೀಕ್ಷೆಗಳೂ ತಲೆಕೆಳಗಾದರಂತೂ ಹೇಳುವುದೇ ಬೇಡ. ಫಲಿತಾಂಶದ ಬೆನ್ನಿಿಗೆ ಸೋಲು-ಗೆಲುವುಗಳ ಕುರಿತ ವಿಶ್ಲೇಷಣೆ, ರಾಜಕೀಯ ಲಾಭ-ನಷ್ಟಗಳ ಲೆಕ್ಕಾಾಚಾರ, ಅಧಿಕಾರದ ಕನಸು ಗರಿಗೆದರುವುದು, ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುವುದು ಇವೆಲ್ಲಾಾ ಸಾಮಾನ್ಯ. ಇದಕ್ಕೆೆ ನಿನ್ನೆೆ-ಮೊನ್ನೆೆ ಹೊರಬಿದ್ದ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಸದ್ಯದ ಉದಾಹರಣೆ. ಫಲಿತಾಂಶವು ಚುನಾವಣೋತ್ತರ ಸಮೀಕ್ಷೆಗಳನ್ನು ತಲೆಕೆಳಗು ಮಾಡಿತ್ತು. ಬಿಜೆಪಿಯ ನಾಗಾಲೋಟಕ್ಕೆೆ ಕೊಂಚ ಬ್ರೇಕ್ ಬಿದ್ದಿತ್ತು. ಕಾಂಗ್ರೆೆಸ್ ತುಸು ಚೇತರಿಕೆ ಕಂಡಿತ್ತು. ಜನರು ಮೋದಿಯನ್ನು ತಿರಸ್ಕರಿಸಿದ್ದಾಾರೆ ಅಂಥ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದ್ದೂ ಆಯಿತು. ನೈತಿಕ ಹೊಣೆಹೊತ್ತು ಮೋದಿ ರಾಜೀನಾಮೆ ನೀಡಬೇಕು ಎಂದು ಕೇಳಲಿಲ್ಲ!

ಬಿಜೆಪಿ ಮಹಾರಾಷ್ಟ್ರದಲ್ಲಿ 200ಕ್ಕಿಿಂತ ಹೆಚ್ಚು ಸ್ಥಾಾನ ಗೆಲ್ಲುವ ಕನಸು ಕಂಡಿತ್ತು. ಹರಿಯಾಣದಲ್ಲಿ ಮಿಷನ್ 75ರ ಗುರಿಹೊಂದಿತ್ತು. ಆದರೆ, ಫಲಿತಾಂಶ ಮಾತ್ರ ಆತ್ಮವಿಶ್ವಾಾಸದಿಂದ ಬೀಗುವ ಬಿಜೆಪಿಗೆ ಬಿಗ್ ಶಾಕ್ ನೀಡಿತ್ತು. ಮಹಾರಾಷ್ಟ್ರದಲ್ಲೇನೋ ಬಿಜೆಪಿ-ಶಿವಸೇನೆ ಮೈತ್ರಿಿಕೂಟ 288 ಸ್ಥಾಾನಗಳ ಪೈಕಿ 163 ಸ್ಥಾಾನ ಗಳಿಸಿ ಮತ್ತೊೊಂದು ಅವಧಿಗೆ ಸರಕಾರ ಕಟ್ಟುವ ಅರ್ಹತೆ ಉಳಿಸಿಕೊಂಡಿತು. ಆದರೆ, 2014ರ ಫಲಿತಾಂಶಕ್ಕೆೆ ಹೋಲಿಸಿದಲ್ಲಿ ಅದು 22 ಸ್ಥಾಾನಗಳನ್ನು ಕಳೆದುಕೊಂಡಿದೆ. ಕಾಂಗ್ರೆೆಸ್ ಮೈತ್ರಿಿಕೂಟ 16 ಸ್ಥಾಾನಗಳನ್ನು ಹೆಚ್ಚುವರಿಯಾಗಿ ಗಳಿಸಿಕೊಂಡಿದೆ. ಹರಿಯಾಣದಲ್ಲಿ ಬಿಜೆಪಿ 90 ಸ್ಥಾಾನಗಳ ಪೈಕಿ ಕೇವಲ 40 ಸ್ಥಾಾನ ಗೆದ್ದು ಸರಳ ಬಹುಮತ ಗಳಿಸುವಲ್ಲಿ ಮುಗ್ಗರಿಸಿದೆ. ಕಾಂಗ್ರೆೆಸ್ ಹೋದ ಬಾರಿಗಿಂತ 16 ಸ್ಥಾಾನ ಹೆಚ್ಚು ಗೆದ್ದು 31 ಸ್ಥಾಾನಗಳಿಗೆ ತೃಪ್ತಿಿಪಟ್ಟುಕೊಂಡಿದೆ. ಮತದಾರ ಪ್ರಭು ಬಿಜೆಪಿ ಬಗ್ಗೆೆ ಭ್ರಮ ನಿರಶನನಾಗಿದ್ದಾಾನೆ. ಕಾಂಗ್ರೆೆಸ್‌ನ್ನು ಉಪೇಕ್ಷಿಸಿದ್ದಾಾನೆ. ಹೊಸಮುಖಗಳತ್ತ ಮುಖಮಾಡಿದ್ದಾಾನೆ ಎಂಬುದಕ್ಕೆೆ ಜೆಜೆಪಿ ಮೊದಲ ಬಾರಿಗೆ 10 ಸ್ಥಾಾನ ಗಳಿಸಿದ್ದೇ ಸಾಕ್ಷಿಯಾಗಿದೆ.

ಬಿಜೆಪಿ ಕಳೆದು ಕೊಂಡಾಗಲೆಲ್ಲಾಾ ಅದನ್ನು ಮೋದಿ ತಲೆಗೆ ಕಟ್ಟುವುದು ರೂಢಿ. ಆದರೆ, ಮೋದಿಯವರದ್ದೇನಿದ್ದರೂ ರಾಷ್ಟ್ರಮಟ್ಟದ ಸಾಧನೆ. ಅದನ್ನು ರಾಜ್ಯಕ್ಕೆೆ ಅನ್ವಯಿಸಲಾಗದು. ಅದೂ ಅಲ್ಲದೆ ವರ್ಚಸ್ಸು-ಪ್ರಭಾವ ಇವೆಲ್ಲಾಾ ಎಲ್ಲ ಕಾಲಕ್ಕೂ ಒಂದೇ ತೆರನಾಗಿರುವುದಿಲ್ಲ. ಕಡಲಿಗೂ ಏರಿಳಿತಗಳಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದನ್ನು ಮರೆಯುವಂತಿಲ್ಲ. ಉಲ್ಲೇಖಿಸಲೇಬೇಕಾದ ಮತ್ತೊೊಂದು ಮಹತ್ವದ ಸಂಗತಿಯೆಂದರೆ ಪ್ರಧಾನಿ ಮೋದಿಯವರು ಹೊರಗಿನವರಿಗೆ ಹತ್ತಿಿರವಾದದ್ದೇ ಹೆಚ್ಚು ಹೊರತು ಒಳಗಿನವರಿಗೆ ಹತ್ತಿಿರವಾದದ್ದು ಕಡಿಮೆ. ಅದರಲ್ಲೂ ನಮ್ಮ ಬಹುತೇಕ ಪಕ್ಷಗಳಿಗೆ ಅವರಿನ್ನೂ ಅಪಥ್ಯ. ಸೈದ್ಧಾಾಂತಿಕವಾಗಿ ಎಂದಿಗೂ ಬಿಜೆಪಿಯನ್ನು ಒಪ್ಪಿಿಕೊಳ್ಳದ ಕಮ್ಮುನಿಸ್‌ಟ್‌ ಪಕ್ಷ, ಅರ್ಧ ಶತಕಕ್ಕಿಿಂತಲೂ ಅಧಿಕ ಕಾಲ ಅಧಿಕಾರದ ಸವಿಯುಂಡು ಇದೀಗ ಅಸ್ತಿಿತ್ವಕ್ಕಾಾಗಿ ಹೆಣಗಾಡುವ ಕಾಂಗ್ರೆೆಸ್ ಪಕ್ಷ, ಒಂದಲ್ಲ ಒಂದು ದಿನ ಪ್ರಧಾನಿಯಾಗುವ ಕನಸು ಹೊತ್ತ ಮಮತಾ ಬ್ಯಾಾನರ್ಜಿಯವರನ್ನು ಅಧಿನಾಯಕಿಯಾಗುಳ್ಳ ತೃಣಮೂಲ ಕಾಂಗ್ರೆೆಸ್ ಪಕ್ಷ, ಇಂಥದ್ದೇ ಕನಸು ನನಸಾಗಲು ಚಾದಗೆಯಂತೆ ಕಾದುಕುಳಿತ ಮಾಯಾವತಿಯವರ ಸಮಾಜವಾದಿ ಪಕ್ಷ ಇಂತಹ ನಾಕಾರು ಪಕ್ಷಗಳ ವೈರಿ ಕಟ್ಟಿಿಕೊಂಡು ಬಿಜೆಪಿ ಇಷ್ಟು ಸಾಧನೆ ಮಾಡುತ್ತಿಿರುವುದೇ ವಿಶೇಷವೆನಿಸುವುದಿಲ್ಲವೇ?

ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವ ಮತ್ತೊೊಂದು ಪ್ರಮುಖ ಅಂಶವೆಂದರೆ ಆಡಳಿತ ವಿರೋಧಿ ಅಲೆ. ಯಾಕೋ ಏನೋ ಮತದಾರ ಪ್ರಭು ಬದಲಾವಣೆಗಾಗಿ ಬದಲಾವಣೆ ಬಯಸುತ್ತಾಾನೆ ಅನಿಸುತ್ತದೆ. ಅವನಿಗೆ ಇದ್ದ ಸರಕಾರ ಬೇಡ. ಸರಕಾರ ಬದಲಾಗಬೇಕು. ಹೊಸ ಸರಕಾರದ ಬಗ್ಗೆೆ ಏನೋ ನಿರೀಕ್ಷೆ. ಪ್ರಸ್ತುತ ಮಹಾರಾಷ್ಟ್ರ ಮತ್ತು ಹರಿಯಾಣಾ ರಾಜ್ಯಗಳಲ್ಲಿ ಆಗಿರುವುದೇ ಅದೇ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಿ ದೇವೇಂದ್ರ ಫಡ್ನವೀಸ್ ಅವರು ಏನೂ ಮಾಡಿಲ್ಲ; ಉತ್ತಮ ಆಡಳಿತ ಕೊಟ್ಟಿಿಲ್ಲವೆಂದಲ್ಲ. ಮೀನಿನ ಹೆಜ್ಜೆೆ ಕಂಡವರಾರು? ಜನತೆಯ ನಾಡಿಮಿಡಿತ ನೋಡಿದವರಾರು?

ಪ್ರಜೆಗಳು ಪ್ರಜ್ಞಾಾವಂತರಾಗುತ್ತಿಿದ್ದಾಾರೆ ಎನ್ನಲಾಗುತ್ತದೆ. ಆದರೆ, ಎಲ್ಲ ಲೆಕ್ಕಾಾಚಾರಗಳನ್ನು ತಲೆಕೆಳಗು ಮಾಡಿದ ಈ ಜನಾದೇಶಕ್ಕೆೆ ಮಣಿಯದೆ ವಿಧಿಯಿಲ್ಲವಾದರೂ ಫಲಿತಾಂಶವಂತೂ ನಿಜಕ್ಕೂ ಅಚ್ಚರಿಯುಂಟು ಮಾಡುವಂತಿದೆ. ಎರಡೂ ರಾಜ್ಯಗಳಲ್ಲಿ ಅನಿರೀಕ್ಷಿತ ಫಲಿತಾಂಶದ ಪರಿಣಾಮ ಅಲ್ಲಿಯ ರಾಜಕೀಯವು ಹೊಸ ತಿರುವು ಪಡೆದುಕೊಳ್ಳುವ, ಹೊಸ ಸಮಸ್ಯೆೆ ಹುಟ್ಟುಹಾಕುವ ಸೂಚನೆ ಕಂಡು ಬರುತ್ತದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನಿರೀಕ್ಷೆಗಿಂತ ಕಡಿಮೆ ಸ್ಥಾಾನ ಪಡೆದಿದೆ. ನಿರೀಕ್ಷೆಗಿಂತ ಹೆಚ್ಚು ಸ್ಥಾಾನ ಪಡೆದ ಮಿತ್ರಪಕ್ಷ ಶಿವಸೇನೆ 50ಃ50ರ ಅನುಪಾತದಲ್ಲಿ ಅಧಿಕಾರ ಹಂಚಿಕೊಳ್ಳುವ ಇಂಗಿತವನ್ನು ಬಿಜೆಪಿಯ ಮುಂದಿಟ್ಟಿಿದೆ. ಇದೇ ಮೊದಲ ಬಾರಿ ಗೆದ್ದುಬಂದ ಆದಿತ್ಯ ಠಾಕ್ರೆೆಯವರನ್ನು ಮುಖ್ಯಮಂತ್ರಿಿಯನ್ನಾಾಗಿಸುವ ಕನಸನ್ನೂ ಹೊಂದಿದೆ. ಆದರೆ, ದೇವೇಂದ್ರ ಫಡ್ನವೀಸ್ ಅವರು ಶಿವಸೇನೆಯ ಬೇಡಿಕೆಯನ್ನು ನಿರಾಕರಿಸಿದ್ದಾಾರೆ. ಅಧಿಕಾರದಾಹ ಮುಂದೆ ಉಭಯ ಪಕ್ಷಗಳ ನಡುವಣ ಮೈತ್ರಿಿ ಮೇಲೆ ಅದಾವ ಪರಿಣಾಮ ಬೀರುವುದೋ ಎಂಬ ಆತಂಕ ಇದ್ದೇ ಇದೆ.

ಅತ್ತ ಹರಿಯಾಣಾದಲ್ಲಿ ಪರಿಸ್ಥಿಿತಿ ಇದಕ್ಕಿಿಂತಲೂ ಭಿನ್ನ. ಅಲ್ಲಿ ಬಿಜೆಪಿ ಸರಳ ಬಹುಮತ ಪಡೆಯುವಲ್ಲಿ ಎಡವಿದೆ. ಅಧಿಕಾರ ಉಳಿಸಿಕೊಳ್ಳಬೇಕಾದರೆ ಇನ್ನೂ 6 ಸ್ಥಾಾನದ ಅಗತ್ಯವಿದೆ. ಇಷ್ಟರಲ್ಲೇ ಅಲ್ಲಿ ಸರಕಾರ ರಚನೆಯ ಕಸರತ್ತು ನಡೆಸಿತ್ತು. ಜೆಜೆಪಿಯ ಈ ಬಾರಿ 10 ಸ್ಥಾಾನ ಗೆದ್ದುಕೊಂಡಿದೆ. ಅದು ಕಿಂಗ್ ಮೇಕರ್ ಆಗುವ ತನ್ನ ಸಾಧ್ಯತೆಯನ್ನು ಯಶಸ್ವಿಿಯಾಗಿ ಕಂಡಿತ್ತು. ಪಕ್ಷದ ನಾಯಕ ದುಷ್ಯಂತ ಚೌಟಾಲಾ ಅವರು ತಮ್ಮನ್ನು ಮುಖ್ಯಮಂತ್ರಿಿಯನ್ನಾಾಗಿ ಮಾಡುವ ಪಕ್ಷವನ್ನು ಬೆಂಬಲಿಸುವುದಾಗಿ ಬಾಯಿಬಿಟ್ಟು ಆದರೆ, ಕೊನೆಗೂ ಅವರು ಡಿಸಿಎಂಯಾಗಿ ಆಯ್ಕೆೆಯಾಗಿದ್ದಾಾರೆ. ಮುಖ್ಯಮಂತ್ರಿಿ ಮನೋಹರ್ ಲಾಲ್ ಖಟ್ಟರ್ ಜೆಜೆಪಿಯನ್ನು ಸೇರಿಸಿಕೊಂಡಾದರೂ ಅಧಿಕಾರ ಉಳಿಸಿಕೊಳ್ಳುವಲ್ಲಿ ಬಹಳ ಯಶಸ್ವಿಿಯಾದರು.

ಇತ್ತ ಕಾಂಗ್ರೆೆಸ್ ಕೂಡಾ ಕೈಕಟ್ಟಿಿ ಕೂತಿಲ್ಲ. ಮಾಜಿ ಮುಖ್ಯಮಂತ್ರಿಿ ಭೂಪಿಂದರ್ ಹೂಡಾ ಜೆಜೆಪಿಯ ದುಷ್ಯಂತ್ ಚೌಟಾಲಾ ಅವರಿಗೆ ದುಂಬಾಲು ಬಿದ್ದರು ಸಹ ಕೊನೆಯಲ್ಲಿ ವಿಫಲಾರಾಗಿದ್ದಾಾರೆ. ಹೆಚ್ಚು ಸ್ಥಾಾನ ಗೆದ್ದಿರುವ ಬಿಜೆಪಿಯನ್ನು ಹೊರಗಿಟ್ಟು ಸರಕಾರ ರಚಿಸಲು ಶತಾಯಗತಾಯ ಪ್ರಯತ್ನ ನಡೆಸಿದರು ಸಹ ಕೊನೆಯ ಗಳಿಗೆಯಲ್ಲಿ ಸಾಧ್ಯವಾಗಲಿಲ್ಲ. ಅವರ ಪ್ರಯತ್ನ ಕೈಗೂಡಿದಲ್ಲಿ ಹರಿಯಾಣಾದಲ್ಲೂ ಈ ಹಿಂದಿದ್ದ ಕರ್ನಾಟಕ ಮಾದರಿಯ ಮೈತ್ರಿಿ ಸರಕಾರ ಅಸ್ತಿಿತ್ವಕ್ಕೆೆ ಬರಲಿದೆ. ನಮಗಾದ ಕಹಿ ಅವರಿಗೂ ಆಗಲಿದೆ!

ಹರಿಯಾಣಾ-ಮಹಾರಾಷ್ಟ್ರಗಳಲ್ಲಿ ಪಕ್ಷಾಂತರಿಗಳು ಸೋಲುಂಡಿದ್ದಾಾರೆ. ಪಕ್ಷೇತರರು ಗೆಲುವು ಸಾಧಿಸಿದ್ದಾಾರೆ. ಸದ್ಯದಲ್ಲೇ ಕರ್ನಾಟಕದಲ್ಲಿ 15 ವಿಧಾನಸಭಾ ಸ್ಥಾಾನಗಳಿಗೆ ಉಪಚುನಾವಣೆ ನಡೆಯಲಿದೆ. ಅಲ್ಲೂ ಇಲ್ಲಾಾದಂತೆ ಪಕ್ಷಾಂತರಿಗಳು ಸೋಲು ಕಂಡರೆ, ರಾಜ್ಯ ಬಿಜೆಪಿ ಸರಕಾರ ಪತನ ನಿಶ್ಚಿಿತವೆನ್ನಲಾಗುತ್ತದೆ. ಕಾತರವಂತೂ ಇದ್ದೇ ಇದೆ. ಕಾದುನೋಡಬೇಕಿದೆ. ಆದರೆ, ಈ ಎಲ್ಲ ವಿದ್ಯಮಾನಗಳಿಗೂ ಒಂದು ರೀತಿಯಲ್ಲಿ ಮತದಾರಪ್ರಭು ನೀಡುವ ಜನಾದೇಶವೇ ಕಾರಣ. ಆಡಳಿತ ವಿರೋಧಿ ಅಲೆ ಹೆಸರಲ್ಲಿ ಒಂದು ಸರಕಾರವನ್ನು ಕೆಳಗಿಳಿಸಿ ಮತ್ತೊೊಂದು ಸರಕಾರವನ್ನು ಅಧಿಕಾರಕ್ಕೆೆ ತರುವ ಮತದಾರ ಪ್ರಭುವಿನ ಪ್ರಜ್ಞಾಾವಂತಿಕೆ ಪ್ರಶ್ನಾಾರ್ಹವೆನಿಸುತ್ತದೆ. ಚುನಾವಣೆಯೊಂದು ಮುಗಿದು ಫಲಿತಾಂಶ ಹೊರಬೀಳುವ ಸಂದರ್ಭದಲ್ಲಿ ಪಕ್ಷ, ಸರಕಾರಗಳಷ್ಟೇ ಅಲ್ಲ ಪ್ರಜೆಗಳೂ ಆತ್ಮಾಾವಲೋಕನ ಮಾಡಿಕೊಳ್ಳಬೇಕಿದೆ. ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ. ಅತಂತ್ರ ಸ್ಥಿಿತಿ ನಿರ್ಮಾಣಕ್ಕೆೆ ಎಡೆಯಾಗದಂತೆ ನೋಡಿಕೊಳ್ಳುವುದರಲ್ಲಿ ಜಾಣತನವಿದೆ. ದೇಶದ ಹಿತ ಅಡಗಿದೆ.

Leave a Reply

Your email address will not be published. Required fields are marked *