ಮಯೂರ್ಭಂಜ್ : ಒಡಿಶಾದಲ್ಲಿ ಆರೋಗ್ಯ ಕಾರ್ಯಕರ್ತರ ಎಡವಟ್ಟಿನಿಂದ ಕೋವಿಡ್ ವ್ಯಾಕ್ಸಿನೇಷನ್ ವೇಳೆ ಒಬ್ಬ ವ್ಯಕ್ತಿಗೆ ಎರಡು ಬಾರಿ ಲಸಿಕೆ ಹಾಕಿರುವ ಪ್ರಕರಣ ವರದಿಯಾಗಿದೆ. ಮಯೂರ್ಭಂಜ್ ಜಿಲ್ಲೆಯ 51 ವರ್ಷದ ವ್ಯಕ್ತಿ ಎರಡೆರಡು ಬಾರಿ ಲಸಿಕೆ ಪಡೆದಿದ್ದಾನೆ.
ರಘುಪುರ ಗ್ರಾಮದ ಪ್ರಸನ್ನ ಕುಮಾರ್ ಸಾಹು ಎಂಬವರು ಸರ್ಕಾರಿ ಪ್ರೌಢಶಾಲೆಯಲ್ಲಿ ಲಸಿಕೆ ಪಡೆಯಲು ತೆರಳಿದ್ದರು. ಒಂದು ಬಾರಿ ಲಸಿಕೆ ಕೊಟ್ಟು ಅರ್ಧ ಗಂಟೆ ಇರುವಂತೆ ಹೇಳಲಾಗಿತ್ತು, ಆದರೆ ಈ ವೇಳೆ ನರ್ಸ್ ಮತ್ತೊಮ್ಮೆ ವ್ಯಾಕ್ಸಿನ್ ಚುಚ್ಚಿದ್ದಾರೆ. ಬಳಿಕ ಇವರನ್ನು ಮತ್ತೆ 2 ಗಂಟೆಗಳ ಕಾಲ ನಿಗಾದಲ್ಲಿರಿಸಿ, ಒಆರ್ಎಸ್ ಕುಡಿಸಿ ಕೂರಿಸಲಾಗಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಖಚಿತ ವಾದ ಬಳಿಕ ಮನೆಗೆ ಕಳುಹಿಸಿದ್ದಾರೆ.
ಪ್ರಕರಣ ಕುರಿತು, ಲಸಿಕಾ ಕೇಂದ್ರದ ಉಸ್ತುವಾರಿ ರಾಜೇಂದ್ರ ಬೆಹೆರಾ, ಲಸಿಕೆ ಹಾಕಿಸಿಕೊಂಡ ಬಳಿಕ ವ್ಯಕ್ತಿ ವೀಕ್ಷಣಾ ಕೊಠಡಿಗೆ ಹೋಗುವ ಬದಲು ವ್ಯಾಕ್ಸಿನೇಷನ್ ಸ್ಥಳದಲ್ಲೇ ಕುಳಿತಿದ್ದಾನೆ. ಹೀಗಾಗಿ ನರ್ಸ್ಗೆ ಗೊಂದಲ ಉಂಟಾಗಿಗಿದೆ ಎಂದು ಹೇಳಿದ್ದಾರೆ.