Thursday, 19th September 2024

ನಿಜವಾದ ಉಕ್ಕಿನ ಮನುಷ್ಯ ಅಂದರೆ ಅದು ಸರದಾರ ಮಾತ್ರ

ತನ್ನಿಮಿತ್ತ ಲೇಖನ

ಶಿವಾನಂದ ಸೈದಾಪೂರ

ಸರದಾರ ವಲ್ಲಭಾಯಿ ಪಟೇಲ್‌ರು ಭಾರತ ಕಂಡ ಅತ್ಯುತ್ತಮ ಉಪಪ್ರಧಾನಿ ಹಾಗೂ ಗೃಹ ಮಂತ್ರಿಗಳಲೊಬ್ಬರು. ‘ಭಾರತದ ಉಕ್ಕಿನ ಮನುಷ್ಯ’ಯೆಂದೇ ಅವರು ಹೆಸರುವಾಸಿಯಾದರು. ಭಾರತವನ್ನು ಒಗ್ಗೂಡಿಸಿದ ಮಹಾನ್ ವ್ಯಕ್ತಿ ಪಟೇಲರ ಇಂದು 145ನೇ ಜನ್ಮದಿನ. ಈ ಸಂದರ್ಭದಲ್ಲಿ ಪಾಟೇಲರ ಕುರಿತು ವಿಶೇಷ ಲೇಖನ.

1942ರ ಚಲೇಜಾವ್ ಚಳವಳಿ ನಡೆದಾಗ ಎಲ್ಲ ಶಾಂತಿಪ್ರಿಿಯ ಹೋರಾಟಗಾರರು ಬ್ರಿಿಟಿಷ್ ಜೈಲಿನಲ್ಲಿ ಬಂದಿಯಾಗಿದ್ದರು. ಹೇಗಾದರೂ ಮಾಡಿ ಹೋರಾಟದ ಬಿಸಿಯನ್ನು ತನಗಾಗಿಸಬೇಕೆಂದು ಬ್ರಿಿಟಿಷರು ಎಲ್ಲಿಲ್ಲದ ತಂತ್ರಗಳನ್ನೆೆಲ್ಲ ರೂಪಿಸಿದರು. ಮುಸ್ಲಿಿಮರ ಮೂಗಿಗೆ ತುಪ್ಪ ಸವರಿ ಹಿಂದೂಗಳ ತಲೆ ಏರುವಂತೆ ಪ್ರೇರೇಪಿಸಿದರು. ಚಲೇಜಾವ್ ಚಳವಳಿಯಲ್ಲಿ ಬಂದಿಯಾದವರೂ ಬಿಡುಗಡೆಗೊಂಡಿದ್ದು ಮುಂದೆ ಮೂರು ವರ್ಷಗಳ ನಂತರವೇ! ಅಷ್ಟೊೊತ್ತಿಿಗೆ ಮುಸ್ಲಿಿಂ ಹೋರಾಟಗಾರರ ಮಾನಸಿಕತೆಯಯೇ ಬದಲಾಗಿ ಹೋಗಿತ್ತು. ಅವರ ಹೋರಾಟ ಏನಿದ್ದರೂ ಭಾರತದ ವಿರುದ್ಧವಾಗಿತ್ತು. ಭಾರತೀಯರಿಗೆ ಸ್ವಾಾತಂತ್ರ್ಯ ಹೋರಾಟಕ್ಕೆೆ ಬ್ರಿಿಟಿಷರು ಮಾತ್ರವಲ್ಲ ಮುಸ್ಲಿಿಮರು ಕೂಡ ಶತ್ರುಗಳಾದರು. ದುರಂತವೆಂದರೆ ಸರದಾರರನ್ನು ಹೊರತು ಪಡಿಸಿ ಮುಸ್ಲಿಿಂ ಭಾಯಿಗಳ ವಿರುದ್ಧ ಬಾಯಿ ತೆಗೆದು ಮಾತನಾಡುವ ಒಬ್ಬೇ ಒಬ್ಬ ಕಾಂಗ್ರೆೆಸ್ಸಿಿಗ ಇರಲಿಲ್ಲ. ಅವತ್ತು ಮುಸ್ಲಿಿಮರ ವಿರುದ್ಧ ಗುಡುಗಿದ್ದು ಮಾತ್ರ ಸರದಾರರು! ಸ್ವಾಾತಂತ್ರ್ಯ ಭಾರತಕ್ಕೆೆ ಯಾರೆ ಎದುರು ನಿಂತರು ಅವರನ್ನು ಮೆಟ್ಟಿಿ ಸ್ವಾಾತಂತ್ರ್ಯ ಪಡೆಯುತ್ತೇವೆ ಎಂದು ಖಡಾಖಂಡಿತವಾಗಿ ಮುಖಕ್ಕೆೆ ಹೊಡೆದಂತೆ ಹೇಳಿದರು.

ಸರದಾರರು ತಮ್ಮ ಜೀವನದುದ್ದಕ್ಕೂ ಅಧಿಕಾರ, ಅಂತಸ್ತಿಿನಿಂದ ದೂರವೇ ಇದ್ದವರು. ಬದುಕಿರುವಷ್ಟು ದಿನ ಅಧಿಕಾರಕ್ಕಾಾಗಿ ಆಸೆ ಪಡಲಿಲ್ಲ. ಸ್ವಾಾತಂತ್ರ್ಯಕ್ಕಾಾಗಿ ಇಡೀ ಬದುಕನ್ನೆೆ ಸಮರ್ಪಿಸಿದರು. ಕಾಂಗ್ರೆೆಸ್ಸನ್ನು ದೇಶಾದ್ಯಂತ ಹರಡಿಸುವ ಏಕೈಕ ಗುರಿ ಇತ್ತೇ ಹೊರತು ಅಧಿಕಾರ ದಾಹವಲ್ಲ. 1929, 1936, 1939ರ ಅವಕಾಶಗಳು ಹುಡುಕಿಕೊಂಡು ಬಂದರು ಸರದಾರ ತಿರುಗಿ ನೋಡಲಿಲ್ಲ. 1946ರಲ್ಲಿ ಅಂತು ಯಾರೂ ಕಾಂಗ್ರೆೆಸ್ ಅಧ್ಯಕ್ಷರಾಗುತ್ತಾಾರೋ ಅವರೇ ಮುಂದಿನ ಪ್ರಧಾನಿ ಆಗುವವರಿದ್ದರು; ಕಾಂಗ್ರೆೆಸ್ ಕಾರ್ಯಕಾರಿ ಸಮಿತಿಯ 15 ಜನ ಸದಸ್ಯರಲ್ಲಿ 13 ಜನ ಸದಸ್ಯರು ತಮ್ಮ ಬೆಂಬಲ ಸೂಚಿಸಿದರು ಆಗಲೂ ಕೂಡ ವಿಚಲಿತರಾಗಲಿಲ್ಲ.

ಸರದಾರರು ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಸರದಾರ ವಲ್ಲಭಾಯಿ ಪಟೇಲ್ ಎಂಬ ಉಕ್ಕಿಿನ ಮನುಷ್ಯ ಸ್ವಾಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು! ಆದರೆ, ಮಹಾತ್ಮಾಾ ಗಾಂಧೀಜಿಯವರಿಗೆ ಜವಾಹರಲಾಲ್ ನೆಹರೂ ಅವರ ಮೇಲಿದ್ದ ಮಮಕಾರ ಪ್ರಧಾನಿ ಹುದ್ದೆಯನ್ನು ಪಟೇಲರಿಂದ ತ್ಯಾಾಗ ಮಾಡಿಸಿತು!

ಎಲ್ಲ ಕಾಂಗ್ರೆೆಸ್ಸಿಿಗರ ಮಾನಸಿಕತೆ ಬೇರೆ ಬೇರೆ ಇತ್ತು. ಅವರಲ್ಲಿಯೇ ಗುಂಪುಗಳು ಸಹ ಆಗಿದ್ದವು. ಸರದಾರ ಮತ್ತು ನೆಹರೂ ನಡುವೆ ಒಂದಷ್ಟು ಭಿನ್ನಾಾಭಿಪ್ರಾಾಯಗಳು ಇದ್ದವು. ನೆಹರೂ ಅವರಲ್ಲಿ ಭವಿಷ್ಯತ್ತಿಿನ ಭಾರತದಲ್ಲಿ ಅಧಿಕಾರದ ಕನಸುಗಳಿದ್ದವು. ಸರದಾರರಿಗೆ ಭಾರತವನ್ನು ಯಾವ ದಿಕ್ಕಿಿನೆಡೆ ಕರೆದೊಯ್ಯಬೇಕೆಂದು ಕನಸಿತ್ತು. ನೆಹರೂಗೆ ಸುಭಾಷ್ ಚಂದ್ರ ಬೋಸರ ನಂತರ ರಾಜಕೀಯ ಎದುರಾಳಿ ಇದ್ದದ್ದೇ ಸರದಾರ. ಸಮಯ ಸಿಕ್ಕಾಾಗಲೆಲ್ಲ ನೆಹರೂ ಅನುಯಾಯಿಗಳು ಗಾಂಧೀಜಿ ಮುಂದೆ ಸರದಾರರ ಮೇಲೆ ಚಾಡಿ ಹೇಳಿದರೆ, ನೆಹರೂ ಅಸಮಾಧಾನ ಹೊರ ಹಾಕುತ್ತಿಿದ್ದರು. ಸ್ವಾಾತಂತ್ರ್ಯ ಸಿಗುವುದು ಖಾತ್ರಿಿಯಾದೊಡನೆ ನೆಹರೂ ಅವರ ಬಾಲ ಬುಡುಕರು ಆಯಕಟ್ಟಿಿನ ಜಾಗದ ಬಗ್ಗೆೆ ಕನಸು ಕಾಣುತ್ತಿಿದ್ದರು. ಸರದಾರ ಯಾವುದರ ಬಗ್ಗೆೆನು ದ್ವೇಷ ಮತ್ಸರ ಇಟ್ಟುಕೊಳ್ಳುತ್ತಿಿರಲಿಲ್ಲ. ಭವಿಷ್ಯತ್ತಿಿನ ಭಾರತದ ಬಗ್ಗೆೆ ಯೋಚನೆ ಮಾಡತೊಡಗಿದರು. 1947ಕ್ಕೆೆ ಸ್ವಾಾತಂತ್ರ್ಯ ಪ್ರಾಾಪ್ತಿಿಯಾಗುವುದು ಖಾತ್ರಿಿಯಾಗಿತ್ತು. ಹಾಗಂತ ಎಲ್ಲ ಮುಗಿಯಿತೆಂದು ನಿರಾಳವಾಗಿ ಸರದಾರರು ಕುಳಿತುಕೊಳ್ಳಲಿಲ್ಲ. 565 ದೇಶೀಯ ಸಂಸ್ಥಾಾನಗಳನ್ನು ಭಾರತದಲ್ಲಿ ಯಾವ ರೀತಿಯಲ್ಲಿ ಹಿಡಿದಿಟ್ಟುಕೊಳ್ಳಬಹುದೆಂಬ ಯೋಚನೆ ಮಾಡುತ್ತಿಿದ್ದರು.

ಜಿನ್ನಾಾ ತಾನು ಪಾಕಿಸ್ತಾಾನ ನಿರ್ಮಿಸಿಕೊಂಡು ಹೊರ ಹೋಗುವುದಲ್ಲದೆ 565 ದೇಶೀಯ ಸಂಸ್ಥಾಾಗಳಲ್ಲಿ ಹಲವಾರು ಸಂಸ್ಥಾಾನಗಳಿಗೆ ಆಸೆ ಆಮಿಷಗಳನ್ನು ಒಡ್ಡಿಿ ಅವರ ತಲೆಯನ್ನು ಕೆಡಿಸಿದ. ಹಲವಾರು ಸಂಸ್ಥಾಾನಿಗರು ಪಾಕಿಸ್ತಾಾನ ಜತೆ ಕೈಜೋಡಿಸಲು ಮುಂದಾದರೆ ಇನ್ನು ಕೆಲವರು ಸಿಕ್ಕಿಿದ್ದೆ ಅವಕಾಶವೆಂದು ಮಿತಿಮೀರಿದ ಬೇಡಿಕೆಗಳನ್ನು ಭಾರತದ ಮುಂದೆ ಇಡತೊಡಗಿದರು. ಇನ್ನು ಕೆಲವರು ತಮ್ಮನ್ನು ತಾವು ಸ್ವತಂತ್ರವಾಗಿರಲು ಯೋಚಿಸುತ್ತಿಿದ್ದರು. ಭೂಪಾಲದ ನವಾಬ್ ಮೊದಲಿಗೆ ಬಂಡಾಯದ ಬಾವುಟ ಹಾರಿಸಿದ್ದ. ತಿರುವಾಂಕೂರಿನ ದಿವಾನ್ ಸ್ವತಂತ್ರವಾಗಿ ಉಳಿಯುವುದಲ್ಲದೆ ಪಾಕಿಸ್ತಾಾನದೊಂದಿಗೆ ವ್ಯಾಾಪಾರಕ್ಕೆೆ ಸಿದ್ಧತೆ ಮಾಡಿಕೊಂಡಿದ್ದ. ಹೈದರಾಬಾದಿನ ನಿಜಾಮನಂತು ಯಾವುದಕ್ಕೂ ಜಗ್ಗದೆ ತನ್ನ ಮೊಂಡುತನವನ್ನೇ ಪ್ರದರ್ಶಿಸುತ್ತಿಿದ್ದ. ಜಿನ್ನಾಾ ಅಂತು ಭೂಪಾಲದ ನವಾಬನನ್ನು ಸರಿಯಾಗಿಯೇ ಹಿಡಿದುಕೊಂಡಿದ್ದ. ಅದರ ಜತೆಗೆ ಇಂದೊರ್, ಉದಯಪೂರ್, ಬರೋಡಾಗಳ ಜತೆಗೆ ಸರಿಯಾಗಿಯೇ ಸಂಪರ್ಕವಿಟ್ಟುಕೊಂಡಿದ್ದ. ಅವರೆಲ್ಲರ ಬೇಡಿಕೆ ಏನಿದ್ದರೂ ಈಡೇರಿಸುವ ಭರವಸೆಯನ್ನು ನೀಡಿದ್ದ. ಸಂಸ್ಥಾಾನಿಗರು ಭಾರತದೊಂದಿಗೆ ಸೇರದ ರೀತಿಯಲ್ಲಿ ಯೋಜನೆಗಳನ್ನು ಹೆಣೆದಿದ್ದ. ಈ ರೀತಿ ಒಂದೊಂದು ಸಂಸ್ಥಾಾನಗಳದು ಒಂದೊಂದು ಕಥೆಯಾಗಿತ್ತು. ನೂರಾರು ವರ್ಷಗಳ ಕಾಲ ಸ್ವಾಾತಂತ್ರ್ಯಕ್ಕಾಾಗಿ ಹೋರಾಡಿದ್ದು ಒಂದೇ 565 ದೇಶೀಯ ಸಂಸ್ಥಾಾನಗಳನ್ನು ಒಂದುಗೂಡಿಸುವುದು ಒಂದೇಯಾಗಿತ್ತು. ಒಂದು ವೇಳೆ ಈ ಸರದಾರರೇನಾದರೂ ಇರದೆ ಹೋಗಿದ್ದರೆ ಬ್ರಿಿಟಿಷರನ್ನು ಓಡಿಸಿದ ಮೇಲೆ ನಾವು ನಾವೇ ಹೊಡದಾಡಿಕೊಂಡಿರಬೇಕಾಗಿತ್ತು.

ಸ್ವಾಾತಂತ್ರ್ಯದ ನಂತರ ಭಾರತವನ್ನು ಹೇಗೆ ಮತ್ತು ಯಾರು ಮುನ್ನಡೆಸಬೇಕೆಂದು ಸರದಾರ ಸಂಪೂರ್ಣವಾಗಿ ಅರಿತಿದ್ದರು. ಅದಕ್ಕಾಾಗಿಯೇ ಮಂತ್ರಿಿಮಂಡಲದ ಎಲ್ಲ ರೂಪುರೇಷೆಗಳನ್ನು ತಯಾರಿಸಿಕೊಂಡಿದ್ದರು. ವಿಲಾಸಿ ಜೀವನ, ಇಂಗ್ಲೆೆಂಡ್ ಪ್ರೀಯರನ್ನು ಆದಷ್ಟು ಹೊರತುಪಡಿಸಿ ದೇಶೀಯತೆಯನ್ನು ಮೈಗೂಡಿಸಿಕೊಂಡಿದ್ದ ಬಹಳಷ್ಟು ಜನರನ್ನು ಮಂತ್ರಿಿ ಮಂಡಲದಲ್ಲಿ ಸೇರುವಂತೆ ಮಾಡಿದರು. ಅದರಿಂದಾಗಿಯೇ ಶ್ಯಾಾಮ್ ಪ್ರಸಾದ್ ಮುಖರ್ಜಿಯಂತವರಿಗೆ ಅವಕಾಶ ಸಿಕ್ಕಿಿತು. ಸದನದ ಹೊರಗೆ ಯಾರೇ ಎಷ್ಟೇ ಮೋಡಿ ಮಾಡಿದರು ಸದನದ ಒಳಗೆ ಮಾತ್ರ ಸರದಾರ ಮಾತೇ ಅಂತಿಮವಾಗಿತ್ತು.

ಆಂತರಿಕ ಭದ್ರತೆಯಲ್ಲಿಯು ಸರದಾರ ಎತ್ತಿಿದ ಕೈ. ಸ್ವತಂತ್ರ ನಂತರ ಭದ್ರತೆಯ ವಿಚಾರದಲ್ಲಿ ನೆಹರೂಗೆ ಎಚ್ಚರಿಸಿದ್ದರು. 1949ರಲ್ಲಿಯೇ ಟಿಬೆಟ್ ವಿಚಾರವಾಗಿ ಕಮ್ಯುನಿಸ್ಟರ ಬಗ್ಗೆೆ ನೆಹರೂ ಗಮನಕ್ಕೆೆ ತಂದಿದ್ದರು. ಸಿಕ್ಕಿಿಂನಲ್ಲಿ ನಮ್ಮ ಶಕ್ತಿಿಯನ್ನು ಹೆಚ್ಚಿಿಸಿಕೊಳ್ಳಬೇಕೆಂದೂ ಹೇಳಿದರು. ನೆಹರೂ ಮಾಡಿದ್ದು ಶುದ್ಧ ಮೂರ್ಖತನ. ಸರದಾರರ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಮುಂದೆ ಮಾವೋ ಕ್ರಾಾಂತಿಯ ಕುರಿತಾಗಿ ಕ್ಲೆೆಮೆಂಟ್ ಆಟ್ಲಿಿ ನೆಹರೂಗೆ ಪತ್ರ ಬರೆದಿದ್ದನ್ನು ತಿಳಿದಿದ್ದರು. ಅದಕ್ಕೆೆ ಪ್ರತಿಕ್ರಿಿಯಿಸುವ ಮುನ್ನ ತಿಳಿಸು ಸಮಯಕ್ಕೆೆ ಅನುಗುಣವಾಗಿ ಏನಾದರೂ ಯೋಚಿಸಬಹುದೆಂದು ಹೇಳಿದ್ದರು. ಅಧಿಕಾರದ ಅಮಲಿನಲ್ಲಿದ್ದ ಪಂಡಿತ್ ಜಿ ಅಲ್ಲಿಯೂ ಕೂಡ ತಮ್ಮ ಅಧಿಕಾರವನ್ನೇ ಚಲಾಯಿಸಿದರು. ಪರಿಣಾಮ ಸರದಾರರು ನೀಡಿದ ಎಲ್ಲ ಎಚ್ಚರಿಕೆಗಳು ಚೀನಾ ವಿಚಾರದಲ್ಲಿ ನಿಜವಾದ ತೊಡಗಿದ್ದವು. ಕಮ್ಯುನಿಸ್ಟರ ಬಗ್ಗೆೆ ಚೆನ್ನಾಾಗಿ ಯೋಚಿಸಿದ್ದರು. ಭವಿಷ್ಯತ್ತಿಿನಲ್ಲಿ ನಾವು ಯಾವ ರೀತಿ ಇರಬೇಕೆಂಬುದು ಮುಂಚಿತವಾಗಿ ಹೇಳಿದರು. ಅದೇನು ಪ್ರೇಮವೋ ಗೊತ್ತಿಿಲ್ಲ ಚೀನಾ ವಿಚಾರದಲ್ಲಿ ವಿಶ್ವಸಂಸ್ಥೆೆಯಲ್ಲಿ ಚೀನಾವನ್ನು ಹಲವಾರು ದೇಶಗಳು ವಿರೋಧಿಸಿದರೂ ನೆಹರೂ ಅದನ್ನು ಅಪ್ಪಿಿಕೊಂಡು ಹಿಂದಿ-ಚೀನಿ ಭಾಯಿ ಭಾಯಿ ಎಂದರು. ಮುಂದೆ ಚೀನಾ ಆಕ್ರಮಣ ಮಾಡಿದ ಸಾವಿರಾರು ಭಾರತೀಯ ಯೋಧರನ್ನು ಬಲಿ ಕೊಟ್ಟರು.

Leave a Reply

Your email address will not be published. Required fields are marked *