Tuesday, 26th November 2024

ಕರೀನಾ ಬೆಂಬಲಕ್ಕೆ ತಾಪ್ಸಿ

ಬಾಲಿವುಡ್ ಬೇಬೋ ಕರೀನಾ ಕಪೂರ್ ಸೀತೆಯ ಪಾತ್ರಕ್ಕಾಗಿ ಬರೋಬ್ಬರಿ ಹನ್ನೆರಡು ಕೋಟಿ ರು. ಸಂಭಾವನೆ ಕೇಳಿದ್ದರು. ಪೌರಾಣಿಕ ಪಾತ್ರಕ್ಕೆ ಇಷ್ಟೊಂದು ಹಣ ಕೇಳಿದ ಕರೀನಾ ವಿರುದ್ದ ನೆಟ್ಟಿಗರು ಸೆಟ್ಟಾಗಿದ್ದರು.

ಕರೀನಾ ಅವರನ್ನು ಬ್ಯಾನ್ ಮಾಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನು ಆರಂಭಿಸಿ ದ್ದರು. ಈಗ ಕರೀನಾ ಕಪೂರ್ ಬೆಂಬಕ್ಕೆ ನಟಿ ತಾಪ್ಸಿಪನ್ನು ನಿಂತಿದ್ದಾರೆ. ಕರೀನಾ ಪರವಾಗಿ ಮಾತನಾಡಿರುವ ತಾಪ್ಸಿ, ಒಬ್ಬ ನಟಿ ಪೌರಾಣಿಕ ಪಾತ್ರಕ್ಕೆ ಹೆಚ್ಚಿನ ಸಂಭಾವನೆ ಕೇಳಿದ ಮಾತ್ರಕ್ಕೆ ಅವರನ್ನು ದೂಷಿಸ ಲಾಗು ತ್ತಿದೆ. ಅದೇ ಒಬ್ಬ ನಟ ಪೌರಾಣಿಕ ಪಾತ್ರಕ್ಕಾಗಿ ಸಂಭಾವನೆ ಹೆಚ್ಚಿಸಿಕೊಂಡಿದ್ದರೆ, ಅದನ್ನು ಪಾಸಿಟಿವ್ ಆಗಿ ಕಾಣಲಾಗುತ್ತಿತ್ತು. ಅದರ ಬಗ್ಗೆ ಯಾರೂ ನಗೆಟಿವ್ ಆಗಿ ಮಾತನಾಡುತ್ತಿರಲಿಲ್ಲ.

ಇದೇ ಕರೀನಾ ಪಾತ್ರದಲ್ಲಿ ಬೇರೊಬ್ಬ ನಟರಿದ್ದು, ಅವರು ಹೆಚ್ಚು ಸಂಭಾವನೆ ಕೇಳಿದ್ದರೆ ಆ ನಟನ ಮಾರುಕಟ್ಟೆ ಮೌಲ್ಯ ವೃದ್ಧಿಸಿದೆ. ಆತ ಭಾರೀ ಯಶಸ್ಸು ಕಂಡಿದ್ದಾನೆ ಎಂದು ಹೇಳುತ್ತಿದ್ದರು. ಆದರೆ ನಟಿಯೊಬ್ಬಳು ಹೆಚ್ಚು ಸಂಭಾವನೆ ಕೇಳಿದ್ದು, ಕೆಲವರಿಗೆ ಸಹಿಸಕೊಳ್ಳಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರೀನಾ ಕಪೂರ್ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು.

ಆಕೆ ಸೂಪರ್ ಸ್ಟಾರ್. ಆಕೆ ಪಾತ್ರವೊಂದಕ್ಕೆ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ ಎಂದರೆ ಆಕೆ ಆ ಸಿನಿಮಾಗೆ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಅದೇ
ಯಾರಾದರು ನಟರು ಸಂಭಾವನೆ ಪಡೆಯದೆ ಪೌರಾಣಿಕ ಸಿನಿಮಾದಲ್ಲಿ ನಟಿಸಿದ್ದಾರ ಎಂದು ತಾಪ್ಸಿ ಪ್ರಶ್ನಿಸಿದ್ದಾರೆ. ಟಾಲಿವುಡ್ ಪ್ರಸಿದ್ಧ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಸೀತಾ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ.