Monday, 25th November 2024

ಮುನಿಸು ತರವೇ? ಹಿತವಾಗಿ ನಗಲು ಬಾರದೇ?

* ಸುಷ್ಮಾ ಶ್ರೀಧರ್

 ಇಬ್ಬರು ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಮದುವೆ ಅನ್ನೋ ಪ್ರಕ್ರಿಯೆಯಿಂದ ಒಟ್ಟಾಗಿರ್ತಾರೆ. ಬೇರೆ ಬೇರೆ ಆಸೆ ಅಭಿರುಚಿಗಳಿರೋ ಮನಸ್ಸುಗಳು ಒಂದಕ್ಕೊೊಂದು ಹೊಂದುವಾಗ ಹೆಚ್ಚು ಕಮ್ಮಿಿ ಆಗೋದು ಸರ್ವೇ ಸಾಮಾನ್ಯ. ಕೋಪದ ಕೈಗೆ ಬುದ್ಧಿಿ ಕೊಟ್ರೆೆ ಸಂಬಂಧ ಹಳಸತ್ತೆೆ. ಅದರ ಸಮಾಧಾನ, ತಾಳ್ಮೆೆ ಎಂಬ ಪರಿಕರಗಳನ್ನ ಸಂಸಾರದ ಅಡುಗೆಯಲ್ಲಿ ಬಳಸಿದ್ರೆೆ, ಅಡುಗೆ ಹಾಳಾಗೋಲ್ಲ ಹಾಗೆಯೇ ಹೆಚ್ಚು ಕಾಲ ಅದರ ರುಚಿಯೂ ಇರುತ್ತದೆ.

ಮನುಷ್ಯನ ದೊಡ್ಡ ಶತ್ರು ಕೋಪ. ಅಯ್ಯೋ ಸಿಟ್ಟು ಮಾಡದ ಜನ ಇದಾರ ಅಂತೀರಾ? ಇರ್ತಾರೆ ಆದ್ರೆೆ ಬಲು ಅಪರೂಪ ಅಷ್ಟೇ. ಕೋಪ ಎಲ್ಲರಿಗೂ ಬರತ್ತೆೆ ಆದ್ರೆೆ ಕೆಲವರು ಮಾತ್ರ ಹತೋಟಿಗೆ ತರ್ತಾರೆ ಮಿಕ್ಕಿಿದವ್ರು ಹೋ.. ಅಂತ ಕಿರ್ಚೋದೆ ಜಾಸ್ತಿಿ. ಅದು ಅಷ್ಟಕ್ಕೇ ನಿಲ್ಲಲ್ಲ, ಜಗಳ ಆಗತ್ತೆೆ.. ಹೋಗತ್ತೆೆ, ಕಡೆಗೆ ಸಂಬಂಧನು ಕೆಡತ್ತೆೆ. ಎಷ್ಟೋೋ ತುಂಬು ಕುಟುಂಬಗಳು ಕೋಪದಿಂದ ಆಗೋ ಭಿನ್ನಾಾಭಿಪ್ರಾಾಯಗಳಿಂದ ಒಡೆದು ಹೋಗಿದೆ. ಇನ್ನು ನಮ್ ಜನರೇಷನ್ ಹುಡುಗ್ರು ಆ ಅಂದ್ರೆೆ ಟೋ ಅಂತಾರೆ. ಆದರ್ಶ ಪ್ರೇಮ ವಿವಾಹ ಅಂತಿದ್ ಅದೆಷ್ಟೋೋ ಜೋಡಿಗಳು ಕೋಪದ ಕೈಗೆ ಬುದ್ಧಿಿ ಕೊಟ್ಟು ತಮ್ಮ ಸಂಬಂಧಾನೆ ಮುರಿದುಹಾಕಿಬೇರೆ ಆಗ್ತಿಿದ್ದಾಾರೆ.

ಇದಕ್ಕೆೆಲ್ಲ ಮುಖ್ಯವಾದ ಕಾರಣ ಸಿಟ್ಟು. ದಿನನಿತ್ಯದ ಪ್ರತಿಯೊಂದು ಕೆಲ್ಸದಲ್ಲು ತಪ್ಪುು ಹುಡುಕಿ ಸಿಟ್ಟು ಮಾಡ್ಕೊೊಳೋದು. ಜಗಳ ಆಡೋದು. ಸಿಟ್ಟು ಬಂದಾಗ ಶತ್ರು ಆಗ್ತಾಾನೆ. ಜಗಳ ಆದ್ರೆೆ ಎಲ್ಲ ಮುಗಿದುಹೋಯ್ತು ಅಂತಲ್ಲ. ಮಾತಾಡಬೇಕು, ಮಾತು ಮರಿಬೇಕು, ಮೌನ ಮರೀಬೇಕು. ಅದುಬಿಟ್ಟು ನಿನ್ನೆೆ ಆಡಿದ ಮಾತನ್ನು ನಾಳೇನು ಮುಂದುವರೆಸಿದರೆ ಬದುಕಿನಲ್ಲಿ ಬರೀ ಕೋಪವೇ ತುಂಬಿಹೋಗತ್ತೆೆ. ಪ್ರೀತಿ ಇಲ್ಲದೆ ಬರೀ ಮತ್ಸರ ಬದುಕು ಬದುಕೇ ಅಲ್ಲ. ಎಷ್ಟು ಬೇಕೋ ಅಷ್ಟೇ ಮಾತು ಎಲ್ಲರಿಗೂ ಒಳ್ಳೆೆಯದು. ಮೌನ ಬಂಗಾರ. ಕೋಪ ಬಂದಾಗಂತು ತೆಪ್ಪಗೆ ಇರೋದೆ ಒಳ್ಳೇದು. ಅದನ್ನ ಅಭ್ಯಾಾಸ ಕೂಡ ಮಾಡ್ಬೇಕು. ಉದ್ಯೋೋಗ ದಲ್ಲಿ ಅತಿಹೆಚ್ಚು ಗಳಿಸೂರು ಸಮಾಧಾನದಿಂದ ಇರೋರೆ. ಇನ್ನು ಸಂಸಾರಕ್ಕೆೆ ದೊಡ್ಡ ಶತ್ರು ಈ ಸಿಟ್ಟು.

ಭಿನ್ನ ಅಭಿಪ್ರಾಾಯಗಳನ್ನು ಗೌರವಿಸಿ, ಆಲಿಸಿ. ತಾನೇ ಸರಿ ಎಂಬ ಮೊಂಡು ವಾದದಿಂದ ಯಾರು ನೆಮ್ಮದಿ ಇಂದಿಲ್ಲ. ಮನೆಯೊಳಗಿನ ಕಿಚ್ಚು ಮನೆಯನ್ನೇ ಸುಡೋ ಹಾಗೆ. ಮನಸ್ಸಿಿನಲ್ಲಿರುವ ಹಗೆ ಮನುಷ್ಯನನ್ನು ಸುಡುತ್ತೇ. ನಿಮ್ಮ ಸಿಟ್ಟನ್ನು ಕೃಷ್ಣಾಾರ್ಪಣೆ ಮಾಡಿ, ಆಮೇಲೆ ನೋಡಿ ನಿಮ್ಮ ಜೀವನ.. ಆನಂದ ಸಾಗರ. ಮನಸ್ಸು ಮಾತನ್ನು ಹತೋಟಿ ಯಲ್ಲಿಡಿ.ನಿಮ್ಮ ಬದುಕು ಸ್ವರ್ಗಕ್ಕೆೆ ಕಿಚ್ಚು ಹಚ್ಚೋೋ

ಹಾಗಿರತ್ತೆೆ. ಜನನ..ವಿರಸ ಮರಣ.. ಸಮರಸವೇ ಜೀವನ ಅನ್ನೋೋ ವರಕವಿಯ ಮಾತಿನಂತೆ ಬದುಕಿ. ಕೋಪ ಆ ಕ್ಷಣಕ್ಕೆೆ ಗೆಲುವನ್ನು ತಂದುಕೊಟ್ಟರೂ ಬದುಕಲ್ಲಿ ಅದು ಒಂದು ರೀತಿಯ ಸೋಲು ಎಂಬುದನ್ನು ತಿಳಿಯಲೇಬೇಕು. ಸಂಸಾರದಲ್ಲಿ ಕೋಪ ತಾಪಗಳು ಹೆಚ್ಚಾಾದಂತೆಯೇ ಅಸಮಾಧಾನ ತಾರಕ್ಕೇರಿ, ನೆಮ್ಮದಿ ಶಾಂತಿಗಳು ಕ್ಷೀಣಿಸುತ್ತವೆ. ಇದರಿಂದ ಯಾವುದೇ ಅಭಿವೃದ್ಧಿಿಯೂ ಸಾಧ್ಯವಾಗೋಲ್ಲ.

ಭವಿಷ್ಯದ ಚಿಂತನೆ
ಗಂಡ ಹೆಂಡತಿಯ ಸಂಬಂಧ ಅಷ್ಟೂ ಸಲೀಸಾಗಿ ವಿವರಿಸುವಂತದ್ದಲ್ಲ. ಒಬ್ಬರನ್ನೊೊಬ್ಬರು ತಿಳಿದು ಜತೆಗೆ ಬಾಳಲು ವರ್ಷಗಳೇ ಬೇಕಾಗಬಹುದು. ಸಿಕ್ಕಿಿರುವ ಸಮಯದಲ್ಲಿ ಜೀವನವನ್ನು ಎಂಜಾಯ್ ಮಾಡದೇ, ಇಬ್ಬರೂ ಸೇರಿ ಯಾವ ರೀತಿಯ ಸಾಧನೆಯನ್ನೂ ಮಾಡದೇ ಪ್ರತಿನಿತ್ಯ ಹಾವು ಮುಂಗುಸಿ ತರಹ ಕಿತ್ತಾಾಡೋದ್ರಿಿಂದ ಇಬ್ಬರ ಸಮಯ ಮತ್ತು ಎನರ್ಜಿ ಎಲ್ಲವೂ ಹಾಳಾಗುತ್ತೆೆ.

ಕೋಪದಿಂದ ಹದಗೆಟ್ಟ ಸಂಬಂಧವನ್ನು ಪ್ರೀತಿಯಿಂದ ಸರಿಪಡಿಸಿ. ಆದಷ್ಟು ಮಾತು ನಿಲ್ಲಿಸಿ, ಸಿಕ್ಕಾಾಗ ಒಳ್ಳೆೆಮಾತಾಡಿ.ಮತ್ತೆೆ ಹಳೆಯ ಮಾತು ತೆಗೆಯಬೇಡಿ. ಜೀವನಕ್ಕೆೆ ಹೊಸತನ ಬೇಕು, ಒಳ್ಳೆೆಯ ವಿಚಾರಗಳು ವಿನಿಮಯ ಮಾಡ್ಕೊೊಳ್ಳಿಿ. ಅಪ್ಪಿಿತಪ್ಪಿಿ ಎದುರಿನ ವ್ಯಕ್ತಿಿ ಇನ್ನು ಹಳೇ ರಾಗವೇ ತೆಗೆದರೆ ಕೋಪಗೊಳ್ಳಬೇಡಿ. ಆದಷ್ಟು ಪ್ರೀತಿಯಿಂದ ವರ್ತಿಸಿ. ಇನ್ನೂ ದಾರಿಗೆ ಬರದಿದ್ದರೆ. ಸುದ್ದಿಗೆ ಹೋಗಬೇಡಿ. ನೀನೇ ದೇವ್ರು ಅಂತ ಸುಮ್ಮನಾಗಿ. ಸಂಬಂಧಗಳಲ್ಲಿ ಸೋಲೇ ಗೆಲುವು. ಮಾತು ಮಾತಿಗೂ ಮುನಿಸು ಬಿಟ್ಟು, ಸ್ನೇಹ ಬೆಳಸಿ