Sunday, 5th January 2025

ಟೆಸ್ಲಾ ಪಿಕಪ್‌ ವಾಹನ

ರವಿ ದುಡ್ಡಿನಜಡ್ಡು

ಇಲೋನ್ ಮಸ್ಕ್ ಅವರ ಕಾರು ಉತ್ಪಾದಕಾ ಸಂಸ್ಥೆ ಟೆಸ್ಲಾ, ಈ ವರ್ಷ  ಒಂದು ವಿದ್ಯುತ್ ಪಿಕಪ್ ವಾಹನವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ, ಈಚಿನ ಸುದ್ದಿ ಪ್ರಕಾರ, ಬಹು ನಿರೀಕ್ಷಿತ ವಿದ್ಯುತ್ ಪಿಕಪ್ ವಾಹನವನ್ನು 2022ರಲ್ಲಿ ಬಿಡುಗಡೆ ಮಾಡುವು ದಾಗಿ ಟೆಸ್ಲಾ ಹೇಳಿದೆ.

ಪಿಕ್‌ಅಪ್ ವಾಹನದ ವಿವಿಧ ಮಾದರಿಗಳಲ್ಲಿ ಒಂದು ಮೋಟಾರ್, ಎರಡು ಮತ್ತು ಮುರು ಮೋಟಾರ್‌ಗಳ ಮಾದರಿಗಳಿದ್ದು,  ಅವೆಲ್ಲವೂ 2022ರಕ್ಕಿಂತ ಮುಂಚೆ ಕಾರ್ಖಾನೆಯಿಂದ ಹೊರಬರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಉತ್ಪಾದನೆಯಲ್ಲಿ ವಿಳಂಬ.  ಕಳೆದ ಒಂದು ವರ್ಷದಿಂದ ವಿಶ್ವದಾದ್ಯಂತ ಹೊಸ  ಹೊಸ ವಾಹನಗಳ ಬಿಡುಗಡೆ ವಿಳಂಬವಾಗುತ್ತಿದೆ.

ಚಿಪ್ ಕೊರತೆ ಅಥವಾ ಕೋವಿಡ್ 19 ಜನ್ಯವಿವಿಧ  ತಂತ್ರಜ್ಞಾನದ ಸಮಸ್ಯೆಯಿಂದಾಗಿ ಹೆಸರಾಂತ  ಬ್ರ್ಯಾಂಡ್‌ನ ಕಾರುಗಳ ಬಿಡುಗಡೆಯನ್ನು ಸಹ ಮುಂದೂಡ ಲಾಗಿದೆ. ಟೆಸ್ಲಾ ಸಹ ಇತ್ತೀಚೆಗೆ ತನ್ನ ಸೆಮಿ ಟ್ರಕ್ ವಾಹನದ ಬಿಡುಗಡೆಯನ್ನು 2022ಕ್ಕೆ  ಮುಂದೂಡಿತ್ತು. ಮುಖ್ಯವಾಗಿ ಬ್ಯಾಟರಿ ಲಭ್ಯತೆ ಮತ್ತು ಕೋವಿಡ್-19 ನಿಂದಾಗಿ ಉಂಟಾದ ಒಟ್ಟಾರೆ ತೊಡಕುಗಳಿಂದಾಗಿ ಈ ಬಿಡುಗಡೆ ಮುಂದೆ ಹೋಗಿತ್ತು. ಜತೆಗೆ ಟೆಸ್ಲಾ ರೋಡ್‌ಸ್ಟರ್ ಬಿಡುಗಡೆ ಸಹ 2022ಕ್ಕೆ ಮುಂದೂಡ ಲ್ಪಟ್ಟಿದೆ.

ಈ ಕುರಿತು ಟೆಸ್ಲಾ ಮುಖ್ಯಸ್ಥ ಇಲೋನ್ ಮಸ್ಕ್ ಸಹ ಒಂದು ಹೇಳಿಕೆ ನೀಡಿ, 2022ರಲ್ಲಿ ತಮ್ಮ ಸೈಬರ್‌ಟ್ರಕ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿಯುತ್ತವೆ ಎಂದು ತಿಳಿಸಿದ್ದಾರೆ. ಅತ್ಯಾಧುನಿಕ ವಿದ್ಯುತ್ ಕಾರುಗಳನ್ನು ಈಗಾಗಲೇ ಅಮೆರಿಕದಲ್ಲಿ ಜನಪ್ರಿಯಗೊಳಿಸಿರುವ ಟೆಸ್ಲಾ, ಮುಂದಿನ ಉದ್ದೇಶಿತ ವಿದ್ಯುತ್ ಪಿಕಪ್ ಟ್ರಕ್ ಕುರಿತು ಹೈಪ್‌ನ್ನು ಚಾಲ್ತಿಯಲ್ಲಿಡುವಲ್ಲಿ  ಯಶಸ್ವಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ.

 

Leave a Reply

Your email address will not be published. Required fields are marked *