Saturday, 21st September 2024

ಹನಿಮೂನ್ ಸ್ಪಾಟ್ ಏರ್ಕಾಡ್ ಪರ್ವತ

ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿರುವ ಏರ್ಕಾಡ್ ಗಿರಿಧಾಮವು ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿದೆ. ಬೆಂಗಳೂರಿಗೆ ಹತ್ತಿಿರವಿರುವ ಈ ಜಾಗವು, ಬೇಸಿಗೆಯಲ್ಲೂ ತಂಪಾಗಿರುವುದು ವಿಶೇಷ. ಈ ಬೆಟ್ಟದ ಮೇಲೆ ಬೆಳೆದಿರುವ ಏರ್ಕಾಡ್ ಇಂದಿಗೂ ಗ್ರಾಾಮೀಣ ಸೊಗಡನ್ನು ಉಳಿಸಿಕೊಂಡಿದ್ದು, ಸ್ಥಳೀಯ ಜನರು ತಮ್ಮ ಜಾನಪದ ಜೀವನ ಶೈಲಿಯನ್ನು ಬಿಟ್ಟುಕೊಟ್ಟಿಿಲ್ಲ. ಇಲ್ಲಿ ವಿವಿಧ ಬಜೆಟ್ ಗೆ ಹೊಂದುವ ವಸತಿಗೃಹಗಳಿದ್ದು, ಸರಳತೆಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಹಲವು ಐತಿಹಾಸಿಕ ಪ್ರವಾಸಿ ತಾಣಗಳು, ಪರ್ವತದ ಮೂಲೆಯ ಕಡಿದಾದ ಏಣುಗಳು, ಕಣಿವೆಗಳು, ಬೆಟ್ಟಗುಡ್ಡಗಳು, ಕೆರೆಗಳು, ಅಲ್ಲಿನ ದೋಣಿ ವಿಹಾರ ಸುಂದರ ಅನುಭವವನ್ನು ನೀಡಬಲ್ಲವು. ತಿಂಡಿ ತಿನಿಸುಗಳಿಗಾಗಿ ವಿವಿಧ ಹೋಟೆಲ್ ಗಳು ಇರುವ ಜೊತೆಗೆ, ಸ್ಥಳೀಯ ಆಹಾರದ ರುಚಿಯನ್ನು ನೋಡುವ ಅವಕಾಶವೂ ಹನಿಮೂನ್ ಮಾಡಲು ಉತ್ತಮ ಸ್ಥಳ. ಬೆಂಗಳೂರಿನಿಂದ ಸುಮಾರು 230 ಕಿಲೋಮೀಟರ್ ದೂರದಲ್ಲಿ ಇರುವ ಏರ್ಕಾಡಿಗೆ, ಕಾರಿನಲ್ಲಿ ಸಂಚರಿಸಿದರೆ ಸುಮಾರು ಐದು ಗಂಟೆಯ ಪಯಣ.