Saturday, 21st September 2024

ಬೆಡಗಿನ ಬಾರ್ಸಿಲೋನಾ…

* ಎಸ್.ಪಿ.ವಿಜಯಲಕ್ಷ್ಮೀ

ಸರಿಸುಮಾರು 2 ಸಾವಿರ ವರ್ಷದಷ್ಟು ಹಳೆಯದಾದ ಇತಿಹಾಸ ಹೊಂದಿರುವ ಬಾರ್ಸಿಲೋನಾ ನಗರ ಪ್ರವಾಸಕ್ಕೆೆ ಪ್ರಶಸ್ತವಾದ ತಾಣ. ಒಂದಿಷ್ಟು ಪೂರ್ವಸಿದ್ಧತೆಗಳಿದ್ದರೆ ಪ್ರಯಾಸವಿಲ್ಲದೆ ಸುಂದರ, ಸುಖಕರ ಪ್ರವಾಸ ಅನುಭವಕ್ಕೆೆ ಮತ್ತು ಈ ರಾಜ್ಯವನ್ನು ಹೊಂದಿರುವ ಸ್ಪೇನ್ ದೇಶ ನಿಜಕ್ಕೂ ರಮ್ಯತಾಣಗಳು.

ಬಾರ್ಸಿಲೋನಾ ಸಿಟಿಯ ಹೆಸರು ಬಹಳಷ್ಟು ಜನರು ಕೇಳಿದ್ದಾಾರೆ.ಈ ನಗರದ ಸ್ವಂತಿಕೆ, ಸಾಂಸ್ಕೃತಿಕತೆ ಮತ್ತು ಜೀವಂತಿಕೆಯ ಸೌಂದರ್ಯಕ್ಕೆೆ ವಿಶ್ವದ ಎಲ್ಲ ಭಾಗದ ಜನರೂ ಆಕರ್ಷಿತರಾಗಿ ಪ್ರವಾಸಿಗರಾಗಿ ಬರುತ್ತಾಾರೆ. ಈ ನಗರಕ್ಕೆೆ ಇತಿಹಾಸದ ತಳುಕೂ ಇದೆ. ರೋಮನ್ನರು ಇಲ್ಲಿ ನೆಲೆಯೂರಿದ ಕಾಲದ ಭಾಗಗಳು ಇಂದೂ ಅಸ್ಥಿಿತ್ವದಲ್ಲಿದ್ದು, ಮೆಡಿವಲ್ ಪೀರಿಯಡ್‌ನ ಬಹುತೇಕ ಕಟ್ಟಡಗಳನ್ನೂ ಇಲ್ಲಿ ಕಾಣಬಹುದು.

ನಾವು ಬಾರ್ಸಿಲೋನಾಗೆ ಹೋಗಿದ್ದು ಮ್ಯೂನಿಕ್ ನಗರದಿಂದ. ಈ ದೇಶಗಳಲ್ಲಿ ಎಲ್ಲವೂ ನೇರ, ಫಟಾಫಟ್. ಒಂದು
ನಿಮಿಷವೂ ತಡಮಾಡದೇ ಬರುವ ಲೋಕಲ್ ಟ್ರೈನ್ ಹಿಡಿದು ಕರಾರುವಾಕ್ಕಾಾಗಿ ಏರ್‌ಪೋರ್ಟ್ ತಲುಪಿ, ನಾವು ಹೋಗಬೇಕಾದ

ಬಾರ್ಸಿಲೋನಾಗೆ ಚೆಕ್‌ಇನ್, ಬೋರ್ಡಿಂಗ್ ಅಂತ ಮುಗಿಸಿದ್ದು ಎಲ್ಲವೂ ತೀರಾ ವ್ಯವಸ್ಥಿಿತವಾಗಿ. ಇಲ್ಲಿಂದ ವಿಮಾನದಲ್ಲಿ ಎರಡು ಗಂಟೆಗಳ ಪಯಣ. ಬಾರ್ಸಿಲೋನಾ ವಿಮಾನನಿಲ್ದಾಾಣದಲ್ಲಿ ನಡೆದುಬರುವಾಗ ಖಂಡಿತಾ ನಮ್ಮ ಬಾಯಿಯಿಂದ ಉದ್ಗಾಾರ ಹೊರಡದೇ ಇರಲು ಸಾಧ್ಯವಿಲ್ಲ. ಯಾಕೆಂದರೆ, ಇದೇನು ಮನುಷ್ಯ ನಿರ್ಮಿತಯೋ ಅಥವಾ ಪುರಾಣ ನಿರ್ಮಿತ ಎನ್ನುವಷ್ಟು ಅದ್ಭುತವಾಗಿದೆ ಈ ಏರ್‌ಪೋರ್ಟ್.

ಅಂದಾಜು ಹದಿನಾರುಲಕ್ಷ ಜನಸಂಖ್ಯೆೆಯನ್ನು ಹೊಂದಿರುವ

ಬಾರ್ಸಿಲೋನಾ ಸ್ಪೇನಿನ ಹದಿನೈದು ಪ್ರಾಾವಿನ್‌ಸ್‌‌ಗಳಲ್ಲಿ ಒಂದು ಪ್ರಾಾವಿನ್‌ಸ್‌‌ಗೆ ರಾಜಧಾನಿಯಾಗಿದೆ. ಅಚ್ಚರಿಯೆಂದರೆ, ಆ ಪ್ರಾಾವಿನ್‌ಸ್‌‌ನ ಹೆಸರೂ ಬಾರ್ಸಿಲೋನಾ ಎಂದೇ ಇದೆ. ಈ ನಗರ ಸ್ಪೇನಿನ ಪ್ಯಾಾರಿಸ್ ಎಂದು ಕರೆಯಲ್ಪಡುತ್ತದೆ. ಇದು ಮೆಡಿಟರೇನಿಯನ್ ಸಮುದ್ರದ ತಟದಲ್ಲಿದ್ದು ಬಂದರುನಗರಿಯೂ ಹೌದು. ಇದಲ್ಲದೆ ಎರಡು ನದಿಗಳೂ ಇಲ್ಲಿ ಹರಿಯುತ್ತವೆ. ಹಾಗಾಗಿ ನೀರಿನ ತಾಣಗಳಿಂದ ಸುತ್ತುವರಿದ ನಗರ ಆಕರ್ಷಣೀಯ.

ಇತಿಹಾಸ

ಕ್ರಿಿ.ಪೂ. 3ನೇ ಶತಮಾನದಲ್ಲಿ ಪಂಗಡದ ಹೆಮಿಲ್ಕರ್ ಬಾರ್ಸಾ ಎಂಬುವವನ ಹೆಸರಲ್ಲಿ ಹುಟ್ಟಿದ್ದು ಎಂದು.ಮೊದಲಿಗೆ ರೋಮನ್ ಮಿಲಿಟರಿ ಕ್ಯಾಾಂಪ್ ಆಗಿದ್ದ ಈ ತಾಣ, ಇಲ್ಲಿ ನಡೆದ ಅನೇಕ ದಾಳಿಗಳನ್ನು ಕಂಡಿದೆ. ಇಲ್ಲಿ ಮೊದಲಿನಿಂದಲೂ ಕೆಟಲೂನಿಯನ್ ಎಂಬ ಪಂಗಡವೇ ಪ್ರಾಾಬಲ್ಯ ಪಡೆದಿತ್ತು. ಆದರೆ, 1930ರ ಹೊತ್ತಿಿಗೆ ಇವರ ಸಂಸ್ಕೃತಿಯ ಅವನತಿ ಆರಂಭವಾಯ್ತು. ಕಾರಣ, ಈ ದೇಶದ ಆಂತರಿಕ ಗಲಭೆಗಳಿಂದಾಗಿ ಇಲ್ಲಿಯದೇ ಬೇರೆಬೇರೆ ಹಿಂದುಳಿದ ಭಾಗಗಳಿಂದ ಅಂದಲೂಸಿಯಾ, ಮರ್ಸಿಯಾ, ಗೆಲೀಸಿಯಾ ಮುಂತಾದ ಪಂಗಡದ ಜನ ವಲಸೆಬಂದರು. ಒಂದು ಪಲ್ಲಟದಲ್ಲಿ, ಇಂತಹ ಸುತ್ತಮುತ್ತಲಿನ ಸಂಗಮದಲ್ಲಿ ಈ ಕ್ಯಾಾಂಪ್ ನಗರೀಕರಣಕ್ಕೆೆ ಒಳಪಟ್ಟಿಿತು. ಕೆಟಲೂನಿಯನ್ನರು ಒಂದಿಷ್ಟು ಹಿನ್ನಡೆಯನ್ನು ಕಾಣಬೇಕಾಯ್ತು.ಬದಲಾವಣೆ ಬೆಳವಣಿಗೆಯ ಸಂಕೇತವಷ್ಟೇ. ಹಾಗಾಗಿ ಈ ಎಲ್ಲ ರಭಸಗಳನ್ನೂ ಬಾರ್ಸಿಲೋನಾ ಸ್ವೀಕರಿಸಿತು. ಗಟ್ಟಿಿಯಾಗಿ ನಿಂತು ಪ್ರಮುಖನಗರವಾಗಿ ಬೆಳೆದು, ಯೂರೋಪಿನ ಅತೀ ದಟ್ಟಜ ನಸಾಂದ್ರಿಿತ ನಗರವೆಂಬ ಹೆಗ್ಗಳಿಕೆಗೆ, ಪ್ರಪಂಚದ 16ನೇ ಅತಿಹೆಚ್ಚಿಿನ ಪ್ರವಾಸೀಆಕರ್ಷಣಾ ಕೇಂದ್ರವೆಂಬ ಪಟ್ಟಕ್ಕೆೆ ಏರಿತು. ಪ್ರವಾಸಿಗರ ಸ್ವರ್ಗವೆಂದೂ ಖ್ಯಾಾತಿಯಾಯಿತು. ಬಾರ್ಸಿಲೋನಾ ಮತ್ತೆೆ ಕೆಟಲೂನಿಯನ್ನರ ಕ್ಯಾಾಪಿಟಲ್ ಸಿಟಿ ಎಂದೇ ಕರೆಸಿಕೊಳ್ಳುತ್ತಿಿದೆ. ಇಲ್ಲಿಯ ಕೆಟಲೂನ್ ಭಾಷೆ ಮತ್ತು ಸ್ಪಾಾನಿಷ್ ಭಾಷೆ ಎರಡನ್ನೂ ಮಾತನಾಡುತ್ತಾಾರೆ.

           ನಗರ ಪ್ರದಕ್ಷಿಣೆ

ಬೆಳಿಗ್ಗೆೆ ನಗರದರ್ಶನಕ್ಕೆೆ ಹೊರಟಾಗ ಬಾರ್ಸಿಲೋನಾ ಭವ್ಯವಾಗಿ ತೆರೆಯುತ್ತಾಾ ಹೋಯಿತು. ಸಾಮಾನ್ಯವಾಗಿ ಯೂರೋಪಿನಲ್ಲಿ ಯಾವುದೇ ಪ್ರಸಿದ್ಧ ಸ್ಥಳಗಳಿಗೆ ಹೋದರೂ ಅಲ್ಲಿ ನಗರದ ಹಳೆಯಭಾಗ ಮತ್ತು ಹೊಸಭಾಗಗಳು ಕಂಡುಬರುತ್ತವೆ. ಕಾರಣ, ಯೂರೋಪಿಗೆ ಬಹಳ ಹಳೆಯದಾದ ಇತಿಹಾಸ ಉಂಟು. ಎಲ್ಲಿಯೂ ಹಳೆಯದನ್ನು ಹಾಳುಗೆಡವದೆ, ಇಂದಿನ ಕಾಲಮಾನಕ್ಕೆೆ ಅಗತ್ಯವಾದ ನವೀಕರಣವನ್ನು ಭವ್ಯವಾಗಿ ನಿರ್ಮಿಸುವುದರಲ್ಲಿ ಇವರು ಸಿದ್ಧಹಸ್ತರು. ಹಾಗೆಂದೇ ಇಲ್ಲಿಯೂ, ಹಳೆಯಭಾಗದಲ್ಲಿ ಇರಬಹುದಾದ ಗಮನದಲ್ಲಿರಿಸಿಕೊಂಡು ಅವುಗಳನ್ನು ಪರಿಹರಿಸುವ, ಹಾಗೆಯೇ ಆ ಭಾಗ ತನ್ನ ಪ್ರಾಾಮುಖ್ಯತೆಯನ್ನು ಕಳೆದುಕೊಳ್ಳದಂತೆ ಅದನ್ನೇ ಕೇಂದ್ರಬಿಂದುವಾಗಿರಿಸಿಕೊಂಡು ನಗರ ಬೆಳೆಯುವಂಥ ರೂಪರೇಖೆಗಳನ್ನು ರಚಿಸಿ ಬಾರ್ಸಿಲೋನಾ ಸಿಟಿಯನ್ನು ನವೀಕರಿಸಿದ್ದಾಾರೆ. ಈ ಕಾರಣಕ್ಕೆೆ ಇಲ್ಲಿ ರೋಮನ್ ಸೆಟ್‌ಲ್‌‌ಮೆಂಟ್‌ನಷ್ಟು ಹಳೆಯದಾದ ಕಟ್ಟಡಗಳು, ರಸ್ತೆೆಗಳು, ಮೆಡಿವಲ್‌ಪೀರಿಯಡ್‌ನ ಕಟ್ಟಡಗಳು ರಸ್ತೆೆಗಳು ಜತೆಯಲ್ಲಿ ಇಂದು ಆಧುನಿಕವಾಗಿ ಮೈತಳೆದ ಅಗಲರಸ್ತೆೆ, ವಿಶಿಷ್ಟವಿನ್ಯಾಾಸದ ಭವ್ಯಕಟ್ಟಡಗಳನ್ನೂ

ಕಾಣಬಹುದು. ಇಲ್ಲಿಯ ಬಹುತೇಕ ಕಟ್ಟಡಗಳ ಗೌಡಿ ಎಂಬ ವಿನ್ಯಾಾಸ ತಜ್ಞನ ರಚನೆಗಳಾಗಿರುವುದೊಂದು ವಿಶೇಷ. ಅನೇಕವು
ರೋಮನ್-ಗೋಥಿಕ್ ಶೈಲಿಯಲ್ಲಿವೆ.

                                                 ವಿಲೇಜ್

ಬಾರ್ಸಿಲೋನಾ ಬೆಟ್ಟಗುಡ್ಡಗಳಿಂದ ಆವೃತವಾಗಿದ್ದು ಬೆಟ್ಟಗಳ ಮೇಲೂ ನಗರ ಬೆಳೆದಿದೆ. ಈ ನಗರದ ಹೆಸರು ಕೇಳಿದಾಕ್ಷಣ ನಮ್ಮೆೆಲ್ಲರಿಗೂ ಮೊದಲು ಹೊಳೆಯುವ ಸಂಗತಿ ಎಂದರೆ 1992ರ ಸಮ್ಮರ್ ಒಲಿಂಪಿಕ್‌ಸ್‌ ನ ಅತಿಥೇಯನಗರ ಇದಾಗಿತ್ತು ಎನ್ನುವುದು.

ಒಲಿಂಪಿಕ್ ವಿಲೇಜ್ ನಿರ್ಮಾಣವಾಗಿರುವುದು ಮಾಂಟ್ ಜುಕ್ ಬೆಟ್ಟದಮೇಲೇ. ಇದಂತೂ ಬಹಳ ಸುಂದರವಾದ ತಾಣ. ಇಲ್ಲಿ ಅತ್ಯಾಾಧುನಿಕ ಸ್ಟೇಡಿಯಂಗಳಿವೆ. ವಿಶಾಲವಾದ ಅಷ್ಟೇ ಮನೋಹರವಾದ ಕೊಳ, ಸುಂದರ ಏರುರಸ್ತೆೆಗಳು, ಮರಗಿಡ ಹೂಗಳು, ಶಿಲೋದ್ಯಾಾನ, ಕ್ರೀಡೆಯನ್ನು ಸಂಕೇತಿಸುವ ಶಿಲೆಗಳು ಅತ್ಯಂತ ಸುವ್ಯವಸ್ಥಿಿತವಾಗಿರುವ ಈ ತಾಣಕ್ಕೆೆ ವಾಹನಗಳಲ್ಲದೆ ಕೇಬಲ್‌ಕಾರ್ ವ್ಯವಸ್ಥೆೆಯೂ ಇದೆ. ಇಲ್ಲಿ ವೈರ್‌ಲೆಸ್ ಟಿವಿಟವರ್ ಅಳವಡಿಸಿದ್ದಾಾರೆ.

ಇಡೀ ಆವರಣ ಮನಮೋಹಕವಾಗಿದ್ದು ದಿನವಿಡೀ ಇಲ್ಲಿ ಕಾಲಕಳೆಯಲು ಪ್ರಶಸ್ತವಾದ ಜಾಗವಾಗಿದೆ.

ಏರುಹಾದಿಯಲ್ಲಿ ಸಾಗುವ ಈ ಪಾರ್ಕಿನ ತುತ್ತತುದಿಗೆ ಮೌಂಟ್ ಆಫ್ ದಿ ಜೂಯಿಸ್ ಎನ್ನುತ್ತಾಾರೆ. ಇಲ್ಲಿಂದ ಬಾರ್ಸಿಲೋನಾನಗರದ ಸಮುದ್ರ, ಬಂದರಿನ ದೃಶ್ಯ ನೋಡಲು ಅತೀ ಚೇತೋಹಾರಿ.

ಇನ್ನು ಕ್ರೀಡೆಗಳಲ್ಲಿ ಮುಂದಿರುವ ಕಾರಣಕ್ಕೆೆ ಇಲ್ಲಿ ವ್ಯವಸ್ಥಿಿತ ಸ್ಟೇಡಿಯಂಗಳಿವೆ. ಸ್ಪೇನ್ ದೇಶ ಬುಲ್‌ಫೈಟ್‌ಗೆ ಪ್ರಸಿದ್ಧ ಎಲ್ಲರೂ ತಿಳಿದ ವಿಷಯವೇ. ಆದರೆ ಇದು ಅತ್ಯಂತ ಕ್ರೂರವಾದ ಮನರಂಜನೆ ಎಂದು ಪ್ರಾಾಣಿ ದಯಾಸಂಘದ ಕೂಗು ಎದ್ದಿದ್ದರಿಂದ ಈಗ ಈ ದೇಶದ ರಾಜಧಾನಿ ಮ್ಯಾಾಡ್ರಿಿಡ್ ಹೊರತಾಗಿ ಬೇರೆಡೆಯಲ್ಲಿ ಇದನ್ನು ನಿಷೇಧಿಸಲಾಗಿದೆ. ಹಾಗಾಗಿ ಬಾರ್ಸಿಲೋನಾದಲ್ಲಿ ಇದಕ್ಕೆೆಂದೇ

ನಿರ್ಮಿಸಲಾದ ವಿಶೇಷ ಸ್ಟೇಡಿಯಂ ಈಗ ಮಾಲ್ ಆಗಿ ಪರಿವರ್ತಿತವಾಗಿದೆ. ಇದು ಬಹಳ ಸುಂದರವಾದ, ವಿಶಿಷ್ಟರೀತಿಯಲ್ಲಿ ಕಟ್ಟಿರುವ ಕಟ್ಟಡ. ಈ ನಗರದ ಹಳೆಯಭಾಗದಲ್ಲಿ ಓಡಾಡುವುದೂ ಕೂಡ ಒಂದು ರೋಮಾಂಚನಕಾರಿ ಅನುಭವ. ಕಾರಣ ಈ ರಸ್ತೆೆಗಳು ಇಕ್ಕಟ್ಟಾಾಗಿ ಕಟ್ಟಲ್ಪಟ್ಟವು. ಇಕ್ಕೆೆಲಗಳಲ್ಲೂ ಎತ್ತರದ ಕಲ್ಲಿನ ಕಟ್ಟಡಗಳು ಕಂಡುಬರುತ್ತವೆ.

ಇಲ್ಲಿ ಸೂರ್ಯನ ಬಿಸಿಲು ಹೆಚ್ಚು ಬೀಳದೆ ನೆರಳಿದ್ದು ತಂಪಿನ ಅನುಭವ ನೀಡುವುದರಿಂದ ಅಲ್ಲಿಯ ಬಿಸಿಲಿನ ಝಳಕ್ಕೆ ಹಾಯೆನಿಸುವುದು. ಜೊತೆಗೆ, ಆ ಕಾಲದ ಕಟ್ಟಡರಚನೆಯ ವಿನ್ಯಾಾಸ ಕೂಡ ಮನಸೆಳೆಯುವಂತಹುದು. ಇಲ್ಲಿ ನಗರದೊಳಗೆ ಸುತ್ತಾಡಲು ಬಸ್, ಟ್ಯಾಕ್ಸಿ, ಟ್ರಾಾಮ್,ಮೆಟ್ರೊೊ, ಈ ಎಲ್ಲ ಸೌಲಭ್ಯವೂ ಪ್ರವಾಸಿಗರಿಗೆ ಲಭ್ಯ. ಆದರೆ, ಇದನ್ನೆೆಲ್ಲ ಮುಂಚಿತವಾಗಿ ತಿಳಿದುಕೊಂಡು ಹೋಗುವುದು ಉತ್ತಮ. ಇಲ್ಲಿಯ ಕರೆನ್ಸಿ ಯೂರೋ.