ನವದೆಹಲಿ: ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ತಲಾ ಒಂದು ಸ್ಥಾನ ಸೇರಿದಂತೆ ಆರು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆಗೆ ಗುರುವಾರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ.
ಆಯೋಗವು ಪಶ್ಚಿಮ ಬಂಗಾಳ, ಅಸ್ಸಾಂ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದು ಮತ್ತು ತಮಿಳುನಾಡಿನಲ್ಲಿ 2 ರಾಜ್ಯಸಭಾ ಸ್ಥಾನಗಳಿಗೆ ಅಕ್ಟೋಬರ್ 4 ರಂದು ಉಪಚುನಾವಣೆಗಳನ್ನು ನಡೆಸಲಿದೆ. ಬಿಹಾರದಲ್ಲಿ ಅಕ್ಟೋಬರ್ 4 ರಂದು ವಿಧಾನಸಭಾ ಕೌನ್ಸಿಲ್ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಅಕ್ಟೋಬರ್ 4 ರಂದು ಪುದುಚೇರಿಯ ಒಂದು ಸ್ಥಾನಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ ಮತ್ತು ಅಸ್ಸಾಂ ನಿಂದ ಆಯ್ಕೆಯಾಗಿದ್ದ ರಾಜ್ಯ ಸಭಾ ಸದಸ್ಯರು ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ಖಾಲಿ ಆಗಿದ್ದರೆ, ಮಹಾರಾಷ್ಟ್ರದಲ್ಲಿ, ರಾಜ್ಯಸಭಾ ಸದಸ್ಯ ರಾಜೀವ್ ಶಂಕರ ರಾವ್ ಸತಾವ್ ಮೃತರಾದ ಹಿನ್ನೆಲೆಯಲ್ಲಿ ಖಾಲಿಯಾಗಿತ್ತು. ಪಶ್ಚಿಮ ಬಂಗಾಳದ ಮಾನಸ್ ರಂಜನ್ ಭುನಿಯಾ, ಅಸ್ಸಾಂ ರಾಜ್ಯ ಸಭಾ ಸದಸ್ಯ ಬಿಸ್ವಜಿತ್ ದೈರ್ಮರ್ಯ, ತಮಿಳುನಾಡಿನ ಕೆ.ಪಿ.ಮುನುಸಾಮಿ ಮತ್ತು ಆರ್.ವೈಥಿಲಿಂಗಮ್ ಮತ್ತು ಮಧ್ಯಪ್ರದೇಶದ ಥಾವರ್ಚಾಂದ್ ಗೆಹ್ಲೋಟ್ ರಾಜೀನಾಮೆ ನೀಡಿದ್ದಾರೆ.
ಜತೆಗೆ, ಬಿಹಾರದ ವಿಧಾನಪರಿಷತ್ನಲ್ಲಿರುವ ಒಂದು ಖಾಲಿ ಸ್ಥಾನಕ್ಕೂ ಅಕ್ಟೋಬರ್ 4ರಂದೇ ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.