Thursday, 24th October 2024

ರಾಷ್ಟ್ರ ರಾಜಕಾರಣಕ್ಕೆ ರಾಜ್ಯದಿಂದ ಮತ್ತೊಂದು ರಾಜಕೀಯ ಪಾಠ

ರಂಜಿತ್ ಎಚ್ ಅಶ್ವತ್ಥ

ಅರ್ನಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿದ ಶಾಸಕರಿಗೆ ತಮ್ಮ ಅರ್ನಹುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ ಪಕ್ಷದಲ್ಲಿ ಸಂವಿಧಾನದಲ್ಲಿರುವ ಹಲವು ವಿಚಾರದ ಬಗ್ಗೆೆ ಇರುವ ಗೊಂದಲಗಳ ನಿವಾರಣೆಗೆ ಸಹಕಾರಿಯಾಗಲಿದೆ.

ಇಡೀ ಕರ್ನಾಟಕ ಇದೀಗ ಉಪಚುನಾವಣೆಗಿಂತ ಹೆಚ್ಚಾಾಗಿ, ರಾಜ್ಯದಲ್ಲಿ ಉಪಚುನಾವಣೆಗೆ ಕಾರಣವಾದ 17 ಶಾಸಕರ ಅನರ್ಹತೆ ಪ್ರಕರಣದ ತೀರ್ಪಿನತ್ತ ಗಮನ ಹರಿಸಿದೆ. ಒಂದೆಡೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಅನರ್ಹರ ಭವಿಷ್ಯ ನಿರ್ಧರಿಸುವುದಾದರೆ, ಇನ್ನೊೊಂದೆಡೆ ಈ ತೀರ್ಪು ಮುಂದಿನ ದಿನದಲ್ಲಿ ರಾಜೀನಾಮೆ ನೀಡುವವರಿಗೆ ಪಾಠವಾಗಲಿದೆ ಎನ್ನುವ ಕಾರಣಕ್ಕೆೆ.

ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಕಾಂಗ್ರೆೆಸ್-ಜೆಡಿಎಸ್‌ನಿಂದ ರಾಜೀನಾಮೆ ನೀಡಿದ 17 ಶಾಸಕರು ಈಗಾಗಲೇ ಸುಪ್ರೀಂ ಕೋರ್ಟ್ ವಾದ ಮಂಡಿಸುವ ಜತೆಜತೆಗೆ ‘ಬೇಕಿತ್ತ ಈ ತಲೆಬೇನೆ’ ಎನ್ನುವ ಪರಿಸ್ಥಿಿತಿ ತಲುಪಿದ್ದಾಾರೆ. ಪಕ್ಷವೊಂದರ ಚಿಹ್ನೆೆಯಿಂದ ಗೆದ್ದ ಮೇಲೆ ಆ ಪಕ್ಷಕ್ಕೆೆ ನಿಷ್ಠೆೆಯಿಂದ ಇರದೇ, ಅಧಿಕಾರಕ್ಕಾಾಗಿಯೋ ಅಥವಾ ಇನ್ಯಾಾವುದೋ ಆಮೀಷಕ್ಕೆೆ ಒಳಗಾಗಿ ಪಕ್ಷಾಾಂತರ ಮಾಡಲು ಮುಂದಾದರೆ ಏನೆಲ್ಲ ಸಮಸ್ಯೆೆ ಎದುರಾಗುತ್ತದೆ ಎನ್ನುವುದು ಈಗಾಗಲೇ ಕಲಿತಿದ್ದಾಾರೆ.

ಸುಪ್ರೀಂ ಕೋರ್ಟ್ ನೀಡುವ ತೀರ್ಪು ಏನೇ ಆಗಿರಬಹುದು. ಆದರೆ ತೀರ್ಪು ನೀಡುವ ಮೊದಲು ವಿಚಾರಣೆ ಹಂತದಿಂದ, ಕಳೆದ ಶುಕ್ರವಾರದವರೆಗೆ ಪಕ್ಷಾಾಂತರ ಮಾಡಿದವರಿಗೆ ಅಲೆದಾಡಿಸಿದ ಪರಿಯನ್ನು ಗಮನಿಸಬೇಕಿದೆ. ಈಗಾಗಲೇ 17 ಶಾಸಕರು, ಸುಪ್ರಿಿಂ ಕೋರ್ಟ್ ತಮ್ಮನ್ನು ನಡೆಸಿಕೊಂಡಿರುವ ಪರಿಯನ್ನು ನೋಡಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿಿ ಹೋಗಿದ್ದಾಾರೆ. ಹಾಗೇ ನೋಡಿದರೆ ಕ್ಷೇತ್ರದ ಜನ ಸೇವೆಗೆಂದು ಪಕ್ಷವೊಂದರ ಚಿಹ್ನೆೆಯಲ್ಲಿ ನಿಂತ ಅಭ್ಯರ್ಥಿಯನ್ನು ಆರಿಸಿ ಕಳುಹಿಸುತ್ತಾಾರೆ. ಆದರೆ ಅದನ್ನು ಮಾಡುವುದನ್ನು ಬಿಟ್ಟು ಅಧಿಕಾರ ಹಾಗೂ ಅನುದಾನಕ್ಕಾಾಗಿ, ಆಪರೇಷನ್-ರಿವರ್ಸ್ ಆಪರೇಷನ್ ಎಂದು ಹೇಳಿಕೊಂಡು ರಾಜೀನಾಮೆ ನೀಡುವುದು ಎಷ್ಟು ಸರಿ? ಕಳೆದ ಚುನಾವಣೆಯಲ್ಲಿ ಬಿಜೆಪಿ ಸಿದ್ಧಾಾಂತವನ್ನು ಟೀಕಿಸಿ ಅಧಿಕಾರಕ್ಕೆೆ ಬಂದವರಿಗೆ, ಇದ್ದಕ್ಕಿಿದಂತೆ ಆ ಪಕ್ಷದ ಸಿದ್ಧಾಾಂತ ಒಪ್ಪಿಿಗೆಯಾಗುವುದಾದರೂ ಹೇಗೆ? (ಬಿಜೆಪಿಯಿಂದ ಕಾಂಗ್ರೆೆಸ್ ಬರುವವರಿಗೂ ಅನ್ವಯವಾಗುತ್ತದೆ).

ಈ ಎಲ್ಲ ಗೊಂದಲ, ಅನುಮಾನದ ನಡುವೆ 17 ಶಾಸಕರ ರಾಜೀನಾಮೆ ತೀರ್ಪಿಗೆ ಸುಪ್ರಿಿಂ ಕೋರ್ಟ್ ಷರ ಬರೆಯಲು ಶುರು ಮಾಡಿದ್ದು, ಬುಧವಾರ ತೀರ್ಪು ಹೊರಬೀಳಲಿದೆ ಎಂದು ಭಾವಿಸಲಾಗಿದೆ. ಆದ್ದರಿಂದ ಉಪಚುನಾವಣೆಗಿಂತ ಹೆಚ್ಚಾಾಗಿ ಸುಪ್ರಿಿಂ ತೀರ್ಪಿ ಕೋರ್ಟಿನ ತೀರ್ಪಿನ ಮೇಲೆ ಕಣ್ಣಿಿಡಲಾಗಿದೆ. ರಾಜ್ಯದ 15 ಕ್ಷೇತ್ರಗಳಿಗೆ ನಡೆಯುತ್ತಿಿರುವ ಈ ಉಪಚುನಾವಣೆ ಯಾವುದೇ ಸಾರ್ವತ್ರಿಿಕ ಚುನಾವಣೆಗೂ ಕಮ್ಮಿಿಯಿಲ್ಲ. ಆದರೆ ಈ ಚುನಾವಣೆಗೆ ಮೊದಲು, ಇಡೀ ರಾಷ್ಟ್ರ ರಾಜಕಾರಣಕ್ಕೆೆ ಐತಿಹಾಸಿಕ ಹಾಗೂ ಭವಿಷ್ಯದಲ್ಲಿ ಜನಪ್ರತಿನಿಧಿಗಳಾಗಿದ್ದಾಾಗಲೇ, ಪಕ್ಷಾಾಂತರದ ಬಗ್ಗೆೆ ಯೋಚಿಸುವ ಮೊದಲು ಮುಂದಾಗಬಹುದಾದ ಕಾನಾನಾತ್ಮಕ ಸಮಸ್ಯೆೆ ಬಗ್ಗೆೆ ಯೋಚಿಸುವಂತೆ ಮಾಡುವ ಮನಸ್ಥಿಿತಿಯನ್ನು ಈ ತೀರ್ಪು ನೀಡಲಿದೆ ಎಂದರೆ ತಪ್ಪಾಾಗಲಿಕ್ಕಿಿಲ್ಲ.

ಈ ರೀತಿ ಇಡೀ ರಾಷ್ಟ್ರ ರಾಜಕಾರಣಕ್ಕೆೆ ‘ಮಾದರಿ’ಯಾಗುವ ತೀರ್ಪು ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆ 1994ರಲ್ಲಿಯೂ ಎಸ್.ಆರ್ ಬೊಮ್ಮಾಾಯಿ ಹಾಗೂ ಕೇಂದ್ರ ಸರಕಾರದ ನಡುವೆ ಶುರುವಾಗಿದ್ದ ರಂಪಾಟದ ಫಲವಾಗಿ, 356ರ ವಿಧಿಯಲ್ಲಿನ ಮಹತ್ತರ ಬದಲಾವಣೆ ಇಡೀ ರಾಷ್ಟ್ರದಲ್ಲಿ ಉಂಟಾಯಿತು. 1988ರಲ್ಲಿ ಬೊಮ್ಮಾಾಯಿ ಸರಕಾರಕ್ಕೆೆ ಬಹುಮತವಿಲ್ಲ ಎನ್ನುವುದನ್ನು ರಾಜ್ಯಪಾಲರು ಸಲ್ಲಿಸಿದ ವರದಿ ಆಧಾರದಲ್ಲಿಯೇ ಕೇಂದ್ರ ಸರಕಾರ ರಾಷ್ಟ್ರಪತಿ ಆಡಳಿತವನ್ನು ಹೇರಿತ್ತು.

ಇದನ್ನು ಪ್ರಶ್ನಿಿಸಿ, ಸುಪ್ರೀಂ ಮೊರೆ ಹೋಗಿದ್ದ ಎಸ್.ಆರ್ ಬೊಮ್ಮಾಾಯಿ ಅವರ ವರ್ಷಗಟ್ಟಲೇ ಹೋರಾಟ ಫಲವಾಗಿ, ‘ಬಹುಮತ ಸಾಬೀತುಪಡಿಸುವುದು ವಿಧಾನಸಭೆಯಲ್ಲಿ ಹೊರೆತು ರಾಜಭವನದಲ್ಲಲ್ಲ’ ಎನ್ನುವ ಮಹತ್ತರ ತೀರ್ಪನ್ನು ನೀಡಿತ್ತು. ಇದಾದ ಬಳಿಕ ಇಡೀ ರಾಷ್ಟ್ರದಲ್ಲಿಯೇ ಬೊಮ್ಮಾಾಯಿಯವರ ಪ್ರಕರಣದ ತೀರ್ಪನ್ನು ಹಲವು ಪಕ್ಷಗಳು ಬಳಸಿಕೊಂಡಿವೆ.

ಇನ್ನು ಇದೀಗ ಅರ್ನಹತೆ ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಮೆಟ್ಟಿಿಲೇರಿರುವುದು ತಮ್ಮ ಅನರ್ಹತೆಯನ್ನು ರದ್ದುಪಡಿಸಲು. ಆದರೆ ಈ ಪ್ರಕರಣದಿಂದ ಸಾರ್ವಜನಿಕರಲ್ಲಿ ಹಾಗೂ ರಾಜಕೀಯ ಪಕ್ಷದಲ್ಲಿ ಸಂವಿಧಾನದಲ್ಲಿರುವ ಹಲವು ವಿಚಾರದ ಬಗ್ಗೆೆ ಇರುವ ಗೊಂದಲಗಳ ನಿವಾರಣೆಗೆ ಸಹಕಾರಿಯಾಗಲಿದೆ. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸ್ವಾಾತಂತ್ರ್ಯ ಬಳಿಕ ರಚಿತವಾದ ಸಂವಿಧಾನದಲ್ಲಿ ಈ ರೀತಿಯ* ‘ಜ್ಟ ್ಟಛಿ’ಗಳು ಸಾಕಷ್ಟಿಿವೆ. ಅಂದಿನ ದಿನಮಾನಕ್ಕೆೆ ತಕ್ಕಂತೆ ಸಂವಿಧಾನ ರಚಿಸಲಾಗಿತ್ತು. ಆದರೆ ಸಂವಿಧಾನದಲ್ಲಿರುವ ಕೆಲ ಲೋಪದೋಷಗಳನ್ನು ಈ ರೀತಿಯ ಪ್ರಕರಣಗಳಿಂದ ಸರಿಪಡಿಸುವ ಅಥವಾ ತಿದ್ದುಪಡಿ ಮಾಡಲು ಸಹಕಾರಿಯಾಗಲಿದೆ. ಹಾಗೇ ನೋಡಿದರೆ ಪಕ್ಷಾಾಂತರ ಕಾಯಿದೆಯನ್ನು ರಾಜೀವ್ ಗಾಂಧಿ ದೇಶದಲ್ಲಿ ತಂದಿದ್ದು ಇದೇ ಪಕ್ಷಾಾಂತರ ಪರ್ವದಿಂದಲೇ.

ಇದೀಗ ಸುಪ್ರೀಂ ಕೋರ್ಟ್ ಅರ್ನಹತೆ ವಿಚಾರಕ್ಕೆೆ ಸಂಬಂಧಿಸಿದಂತೆ ನೀಡುವ ತೀರ್ಪಿನಿಂದ ಅನರ್ಹರ ರಾಜಕೀಯ ಭವಿಷ್ಯದೊಂದಿಗೆ, ವಿಧಾನಸಭಾಧ್ಯಕ್ಷರಿಗೆ ಇರುವ ಪರಿಮಿತಿ, ಪಕ್ಷಾಾಂತರ ಕಾಯಿದೆಯ ಮಿತಿಗಳು, ಜನಪ್ರತಿನಿಧಿಗಳು ಈ ರೀತಿ ಪಕ್ಷಾಾಂತರ ಮಾಡಿದರೆ ಪಕ್ಷಗಳು ಯಾವ ರೀತಿ ಕ್ರಮಕೈಗೊಳ್ಳಬಹುದು ಎನ್ನುವ ಪ್ರಶ್ನೆೆಗಳಿಗೆ ಉತ್ತರವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಅಷ್ಟಕ್ಕೂ ಇಡೀ ರಾಷ್ಟ್ರ ರಾಜಕೀಯ ಕರ್ನಾಟಕದತ್ತ ನೋಡುವಂತೆ ಮಾಡಲು ಹಾಗೂ ಭವಿಷ್ಯದಲ್ಲಿ ಪಕ್ಷಾಾಂತರ ಮಾಡುವವರಿಗೆ ಎರಡು ಬಾರಿ ಯೋಚಿಸುವಂತೆ ಮಾಡಿದ್ದು, ಆಪರೇಷನ್ ಕಮಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುವುದಕ್ಕಾಾಗಿ, ಮೆಟ್ಟಿಿಲುಗಳ ರೀತಿ ಕೆಲಸ ಮಾಡಿರುವ 17 ಶಾಸಕರ ರಾಜಕೀಯ ಭವಿಷ್ಯ ಇದೀಗ ಸುಪ್ರೀಂ ಅಂಗಳದಲ್ಲಿದೆ. ಕೇವಲ ಈ 17 ಶಾಸಕರ ರಾಜಕೀಯ ಭವಿಷ್ಯ ಮಾತ್ರವಲ್ಲದೇ, ಮುಂದಿನ ದಿನದಲ್ಲಿ ಪಕ್ಷಾಾಂತರ ಮಾಡುವಾಗ ಆಗಬಹುದಾದ ಅನಾಹುತದ ಬಗ್ಗೆೆ ಇಡೀ ದೇಶದ ಜನಪ್ರತಿನಿಧಿಗಳಿಗೆ ಎಚ್ಚರಿಕೆ ರವಾನೆಯಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಜೆಡಿಎಸ್-ಕಾಂಗ್ರೆೆಸ್ ಶಾಸಕರು ಬಿಜೆಪಿಯ ಆಪರೇಷನ್ ಕಮಲಕ್ಕೆೆ ಮಣಿದೋ ಅಥವಾ ತಮ್ಮ ಪಕ್ಷದಲ್ಲಿ ತಮಗೆ ಅನ್ಯಾಾಯವಾಗುತ್ತಿಿದೆ ಎನ್ನುವ ಆಕ್ರೋೋಶಕ್ಕೋೋ ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್ ಸೇರಿದರು. ಆದರೆ ಇವರ ರಾಜೀನಾಮೆ ಅಂಗೀಕರಿಸದೇ, ಪಕ್ಷಾಾಂತರ ಕಾಯಿದೆಯ ಅಸ್ತ್ರ ಬಳಸಿ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಈ 17 ಶಾಸಕರು ಅನರ್ಹತೆಯನ್ನು ಪ್ರಶ್ನಿಿಸಿ ಸುಪ್ರೀಂ ಕೋರ್ಟ್ ಕದತಟ್ಟಿಿದ್ದರು. ಇದೀಗ ಸುದೀರ್ಘ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ತನ್ನ ತೀರ್ಪು ಸಿದ್ಧಪಡಿಸಿಕೊಳ್ಳುತ್ತಿಿದೆ. ಬುಧವಾರ ಈ ತೀರ್ಪು ಕೇವಲ ಅನರ್ಹರ, ಬಿಜೆಪಿ ಅಥವಾ ಕಾಂಗ್ರೆೆಸ್ ಪಕ್ಷದ ಭವಿಷ್ಯ ಮಾತ್ರವಲ್ಲದೇ ಇಡೀ ರಾಜಕೀಯ ವ್ಯವಸ್ಥೆೆಗೆ ಮುಂದಿನ ದಿನದಲ್ಲಿ ಗೈಡ್‌ಲೈನ್ ಆಗಲಿದೆ ಎಂದರೆ ತಪ್ಪಾಾಗಲಿಕ್ಕಿಿಲ್ಲ.

ಅಷ್ಟಕ್ಕೂ ಆಪರೇಷನ್ ಕಮಲವೆಂಬ ಹೊಸ ಕಾನ್ಸೆೆಪ್‌ಟ್‌ ಶುರುವಾಗಿದ್ದೂ ಸಹ ನಮ್ಮ ಕರ್ನಾಟಕದಲ್ಲಿಯೇ. ಮೊದಲ ಬಾರಿಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸ್ವಾಾತಂತ್ರ್ಯವಾಗಿ ಬಿಜೆಪಿ ಅಧಿಕಾರಕ್ಕೆೆ ಬಂದಾಗ, ಮ್ಯಾಾಜಿಕ್ ನಂಬರ್ ಇರಲಿಲ್ಲ. ಈ ವೇಳೆ ಪಕ್ಷೇತರವಾಗಿ ಗೆದ್ದಿದ್ದ ಏಳು ಶಾಸಕರ ಬಲದೊಂದಿಗೆ ಬಹುಮತ ಸಾಬೀತುಪಡಿಸಿದರೂ, ಈ ಪಕ್ಷೇತರರು ‘ಮಗ್ಗಲ ಮುಳ್ಳು’ ಎನ್ನುವುದು ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಚೆನ್ನಾಾಗಿ ಗೊತ್ತಿಿತ್ತು. ಆದ್ದರಿಂದಲೇ, ಅಂದಿನ ಸರಕಾರದಲ್ಲಿ ಭಾರಿ ಪ್ರಭಾವ ಹೊಂದಿದ್ದ ಬಳ್ಳಾಾರಿ ಗಣಿ ಧಣಿ ಜನಾರ್ಧನ ರೆಡ್ಡಿಿ ನೇತೃತ್ವದಲ್ಲಿ ವೈದ್ಯರ ತಂಡವನ್ನು ರಚಿಸಿ, ಕಾಂಗ್ರೆೆಸ್ ಹಾಗೂ ಜೆಡಿಎಸ್‌ನ ಶಾಸಕರನ್ನು ರಾಜೀನಾಮೆ ಕೊಡಿಸಿದರು.

ಕರ್ನಾಟಕದಲ್ಲಿ ಅದೇ ಮೊದಲ ಬಾರಿಗೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಶಾಸಕರು ರಾಜೀನಾಮೆ ನೀಡಿ ಪಕ್ಷಾಾಂತರವಾಗಿದ್ದು ಎಂದರೆ ತಪ್ಪಾಾಗುವುದಿಲ್ಲ. ಆದರೆ ಅಂದಿನ ಸಮಯದಲ್ಲಿ ಶಾಸಕರ ರಾಜೀನಾಮೆ ಸ್ವೀಕರಿಸಿ ಅಂಗೀಕರಿಸುವ ಹುದ್ದೆೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಹಾಗೂ ಯಡಿಯೂರಪ್ಪ ಅವರ ಆಪ್ತರಾಗಿದ್ದ ಕೆ.ಜೆ ಬೋಪಯ್ಯ ಅವರೇ ಇದಿದ್ದರಿಂದ, ಪ್ರತಿ ಆಪರೇಷನ್ ಸಹ ಯಶಸ್ವಿಿಯಾಗುತ್ತಿಿತ್ತು.

ಇನ್ನು ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಅದೇ ಶಾಸಕರನ್ನು ನಿಲ್ಲಿಸಿ, ರಾಜ್ಯ ಸರಕಾರದ ಇಡೀ ಸಚಿವ ಸಂಪುಟವನ್ನು ಕ್ಷೇತ್ರದಲ್ಲಿ ಓಡಾಡಿಸಿ ಉಪಚುನಾವಣೆಯಲ್ಲಿ ರಾಜೀನಾಮೆ ನೀಡಿದ್ದ ಬಹುತೇಕ ಶಾಸಕರು ಗೆಲ್ಲುವಂತೆ ನೋಡಿಕೊಂಡರು. ಪ್ರಚಾರದೊಂದಿಗೆ ಪ್ರತಿ ಉಪಚುನಾವಣೆಯಲ್ಲಿರುವಂತೆ ರಾಜ್ಯ ಸರಕಾರ ತನ್ನ ‘ಪ್ರಭಾವ’ವನ್ನು ಬಳಸಿತ್ತು. ಈ ಎರಡರೊಂದಿಗೆ ಗಣಿ ಧಣಿಗಳು ಬಳ್ಳಾಾರಿ ಗಣಿ ಧೂಳನ್ನು ಉಪಚುನಾವಣೆ ನಡೆಯುವ ಕ್ಷೇತ್ರಗಳ ಮೇಲೂ ಕೊಂಚ ‘ಉದುರಿಸಿದ್ದರು’ ಈ ಎಲ್ಲದರ ಫಲವಾಗಿ ಅಂದಿನ ಆಪರೇಷನ್ ಕಮಲಕ್ಕೆೆ ಯಾವುದೇ ಅಡ್ಡಿಿ ಆತಂಕಗಳು ಕಾಣಿಸಿಕೊಳ್ಳಲಿಲ್ಲ.

ಇದೇ ಫಾರ್ಮುಲವನ್ನು 2018ರ ಚುನಾವಣೆಯಲ್ಲಿ 104 ಸ್ಥಾಾನ ಪಡೆದು, ಮ್ಯಾಾಜಿಕ್ ನಂಬರ್ ತಲುಪಲು 9 ಶಾಸಕರ ಸಂಖ್ಯಾಾಬಲದ ಕೊರತೆ ಎದುರಾದಾಗಲೂ ಬಳಸಲು ಮುಂದಾದರು. ಆದರೆ ಪಕ್ಷದೊಳಗಿನ ಭಿನ್ನಾಾಭಿಪ್ರಾಾಯ, ಇದನ್ನು ಯಶಸ್ವಿಿಯಾಗಿ ನಿಭಾಯಿಸಲು ಬೇಕಿದ್ದ ನಾಯಕತ್ವದ ಕೊರತೆಯಿಂದ ಸುಮಾರು ಒಂದು ವರ್ಷ ಯೋಜನೆ ಫಲಿಸಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆೆಗಿಂತ ಹೆಚ್ಚು ಗೆದ್ದ ಕೂಡಲೇ, ಮತ್ತೆೆ ಆಪರೇಷನ್ ಕಮಲದ ಮೂಲಕ ಸರಕಾರ ತರುವುದಕ್ಕೆೆ ತಂತ್ರ ರೂಪಿಸಿತ್ತು.

ಲೋಕಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ತುಮಕೂರಿನಲ್ಲಿ ದೇವೇಗೌಡ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಾಮಿ ಅವರ ಸೋಲು ದೋಸ್ತಿಿಯಲ್ಲಿ ಕಾಣಿಸಿಕೊಂಡ ಬಿರುಕು, ಮುಖ್ಯಮಂತ್ರಿಿಯಾಗಿದ್ದ ಕುಮಾರಸ್ವಾಾಮಿ ಅವರ ಮೇಲಿನ ಮೈತ್ರಿಿ ಪಕ್ಷದ ಶಾಸಕರ ಆಕ್ರೋೋಶ ಹಾಗೂ ಅಧಿಕಾರ ವಿಚಾರದಲ್ಲಿ ಜೆಡಿಎಸ್ ವರಿಷ್ಠರ ಮಧ್ಯಪ್ರವೇಶಿಸುವ ನೀತಿಯಿಂದ ಬೇಸತ್ತಿಿದ್ದ 17 ಶಾಸಕರು ರಾಜೀನಾಮೆ ಸಜ್ಜಾಾಗಿದ್ದರೂ, ಅವರಿಗೆ ಮುಂದಿನ ಭವಿಷ್ಯದ ಬಗ್ಗೆೆ ಹಲವು ಗೊಂದಲಗಳಿತ್ತು. ಈ ಹಂತದಲ್ಲಿ ಬಿಜೆಪಿ ನಾಯಕರು ರಾಜೀನಾಮೆ ನೀಡಿ, ಮುಂದಿನ ಬಾರಿ ಬಿಜೆಪಿಯಿಂದ ಪುನರ್ ಆಯ್ಕೆೆಯ ಭರವಸೆಯನ್ನು ನೀಡಿದ್ದರಿಂದ 17 ಶಾಸಕರು ತಮ್ಮ ಸ್ಥಾಾನಕ್ಕೆೆ ರಾಜೀನಾಮೆ ಕೊಟ್ಟು, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಲೆಕ್ಕಾಾಚಾರದಲ್ಲಿದ್ದರು.

ಬೋಪಯ್ಯ ರೀತಿಯಲ್ಲಿಯೇ ಮೈತ್ರಿಿ ಸರಕಾರದ ಅವಧಿಯಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಅಂಗೀಕರಿಸುವುದಿಲ್ಲ ಎನ್ನುವ ಅರಿವಿದ್ದರು, ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸಿದ ರೀತಿಯಲ್ಲಿ ನಮ್ಮ ರಾಜೀನಾಮೆ ಪತ್ರಗಳಿಗೂ ಒಪ್ಪಿಿಗೆ ನೀಡಿದರು. ಆದರೆ ರಮೇಶ್ ಕುಮಾರ್ ಅವರು ಶಾಸಕರ ಊಹೆಯನ್ನು ಮೀರಿ ಪಕ್ಷಾಾಂತರ ಕಾಯಿದೆಯ ಅಸ್ತ್ರ ಬಳಸಿ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾಾರೆ. ಅನರ್ಹತೆಯಿಂದ ಬಿಜೆಪಿ ಅಧಿಕಾರಕ್ಕೆೆ ಬರುವುದನ್ನು ತಪ್ಪಿಿಸಲು ಸಾಧ್ಯವಾಗದಿದ್ದರೂ, ಪಕ್ಷಕ್ಕೆೆ ದ್ರೋಹ ಎಸಗಿದ ಅನರ್ಹರ ಪಾಡು, ಇದೀಗ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇದೀಗ ಬುಧವಾರ ತೀರ್ಪು ಸಿಗುವ ವಿಶ್ವಾಾಸದಲ್ಲಿ ಅನರ್ಹರಿದ್ದಾಾರೆ. ಎಲ್ಲವೂ ಅಂದುಕೊಂಡಂತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕರೂ ಹಾದಿ ಸುಗಮವಲ್ಲ ಎನ್ನುವುದು ಬೇರೆ ಮಾತು.

ಆದ್ದರಿಂದ ಉಪಚುನಾವಣೆಗಿಂತ ಹೆಚ್ಚು ಥ್ರಿಿಲ್ ಆಗಿರುವ ಅನರ್ಹರ ತೀರ್ಪು ಮುಂದಿನ ದಿನದಲ್ಲಿ ರಾಜಕೀಯ ಪಕ್ಷಗಳಿಗೆ ಹಾಗೂ ಯಾವುದೋ ಒಂದು ಆಸೆಗೆ ಕಟ್ಟುಬಿದ್ದ ಪಕ್ಷಾಾಂತರ ಮಾಡುವವರಿಗೆ ‘ಪಾಠ’ವಾಗಲಿದೆ ಎನ್ನುವ ಭರವಸೆಯಲ್ಲಿ ರಾಜ್ಯದ ಜನರಿದ್ದಾಾರೆ.