Friday, 20th September 2024

ಶಿಕ್ಷಣ ಸುಧಾರಣೆಯ ಕಾಯಿದೆಗೆ ಆರ್‌ಟಿಇಗೆ ಹತ್ತು ವರ್ಷ

ದೂರದೃಷ್ಟಿ

ಗುರುರಾಜ್ ಎಸ್. ದಾವಣಗೆರೆ, ಪ್ರಾಚಾರ್ಯರು 

ಆರರಿಂದ ಹದಿನಾಲ್ಕು ವರ್ಷ ವಯಸ್ಸಿಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಾಯ ಶಿಕ್ಷಣದ ಹಕ್ಕು ನೀಡುವ ಆರ್‌ಟಿಇ-ರೈಟ್ ಟು ಎಜುಕೇಶನ್ ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳಾಗಿವೆ. ಅದರ ಮುಂದುವರಿಕೆ ಎಂಬಂತೆ ಪಿಯುಸಿ ಹಂತದ ಶಿಕ್ಷಣವನ್ನೂ ಕಾಯಿದೆಯ ವ್ಯಾಾಪ್ತಿಿಗೆ ತಂದು ಕಾಲೇಜು ಓದುವ ವಿದ್ಯಾಾರ್ಥಿಗಳಿಗೂ ನೆರವಾಗುವ ಯೋಜನೆ ರೂಪಿಸುತ್ತಿಿರುವ ಸರಕಾರ ಲಕ್ಷಾಂತರ ವಿದ್ಯಾಾರ್ಥಿಗಳ ಕಾಲೇಜು ವಿದ್ಯಾಾಭ್ಯಾಾಸದ ಕನಸನ್ನು ನನಸಾಗಿಸಲು ಸಿದ್ಧವಾಗಿದೆ.

ರಾಜ್ಯಸಭೆ, ಲೋಕಸಭೆಗಳೆರಡರಿಂದಲೂ ಅಂಗೀಕೃತಗೊಂಡು ಹತ್ತು ವರ್ಷಗಳ ಹಿಂದೆ ಜಾರಿಗೆ ಬಂದ ಕಾಯಿದೆ ಅನುಷ್ಠಾಾನದ ಪ್ರಕ್ರಿಿಯೆಯನ್ನು ಕೂಡಲೇ ಪ್ರಾಾರಂಭಿಸಿತು. ಕಾಯಿದೆಯ ಪ್ರಕಾರ ಖಾಸಗಿ, ಸರಕಾರಿ, ಅನುದಾನಿತ, ಅನುದಾನರಹಿತ ಮತ್ತು ವಿಶೇಷ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾಾರ್ಥಿಗಳಿಗೆ ಶೇ.25 ರಷ್ಟು ಪ್ರವೇಶಗಳನ್ನು ಕಡ್ಡಾಾಯವಾಗಿ ಮೀಸಲಿರಿಸಿ ಹಂಚಬೇಕು ಎಂಬ ನಿಯಮ ರೂಪಿಸಿತು. ಖಾಸಗಿ ಶಾಲೆಗಳ ವಿದ್ಯಾಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸಲು ಪ್ರಾಾರಂಭಿಸಿತು. ಕಾಯಿದೆ ಜಾರಿಗೆ ಬಂದಾಗ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಾಗಿಸಿರುವ ವಿಶ್ವದ ನೂರಾ ಐವತ್ತೈದು ರಾಷ್ಟ್ರಗಳ ಪೈಕಿ ಭಾರತವೂ ಒಂದೆನಿಸಿತು. ವಿದ್ಯಾಾರ್ಥಿಗಳ ಪ್ರವೇಶವಷ್ಟೇ ಅಲ್ಲದೆ, ಅವರಿಗೆ ಪಾಠ ಮಾಡುವ ಶಿಕ್ಷಕರು ಅಗತ್ಯ ತರಬೇತಿ ಹೊಂದಲೇಬೇಕೆಂಬ ನಿಯಮವನ್ನೂ ವಿಧಿಸಿ, ಶಾಲಾ ವ್ಯವಸ್ಥೆೆಯ ಗುಣಮಟ್ಟವನ್ನು ಹೆಚ್ಚಿಿಸಲು ಕ್ರಮ ತೆಗೆದುಕೊಳ್ಳಲಾಯಿತು. ಕಾಯಿದೆಯ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಕನಿಷ್ಠ ವಿದ್ಯಾಾರ್ಹತೆಯನ್ನು ಶಿಕ್ಷಕರು ಹೊಂದಿರಲೇಬೇಕು, ಇಲ್ಲದಿದ್ದರೆ ಐದು ವರ್ಷಗಳ ಅವಧಿಯಲ್ಲಿ ಅದನ್ನು ಪೂರೈಸಿಕೊಳ್ಳಬೇಕೆಂಬ ಆದೇಶ ಜಾರಿಗೆ ಮಾಡಿತು. ಕಾಯಿದೆ ಜಾರಿಗೆ ಬಂದಾಗ ಸೇವೆಯಲ್ಲಿದ್ದ 66.41 ಲಕ್ಷ ಶಿಕ್ಷಕರ ಪೈಕಿ ಸುಮಾರು 12 ಲಕ್ಷ ಜನರಿಗೆ ಯಾವುದೇ ತರಬೇತಿ ಇರಲಿಲ್ಲ. ಇದರಲ್ಲಿ ಅರ್ಧದಷ್ಟು ಜನ ಸರಕಾರಿ ಮತ್ತು ಅನುದಾನಿತ ವಲಯದಲ್ಲೇ ಇದ್ದುದು ಆತಂಕಕ್ಕೆೆ ಕಾರಣವಾಗಿತ್ತು. ನಿಯಮಿತ ವೇಳಾವಧಿಯಲ್ಲಿ ತರಬೇತಿ ಪಡೆದುಕೊಳ್ಳಲಾಗದ ಶಿಕ್ಷಕರಿಗೆ ಮೊದಲು ನೀಡಲಾಗಿದ್ದ ವಾಯಿದೆಯನ್ನು ಮತ್ತೂ ನಾಲ್ಕು ವರ್ಷಗಳಿಗೆ ವಿಸ್ತರಿಸಲಾಯಿತು. ಇಷ್ಟಾಾದರೂ ಎಲ್ಲರೂ ತರಬೇತಿ ಪಡೆದುಕೊಂಡಿಲ್ಲ.

ಕಾಯಿದೆಯನ್ನು ರೂಪಿಸುವ ಒಂದು ವರ್ಷ ಮೊದಲು ಪ್ರಕಟವಾದ * ಅಖಉ್ಕ (ಅ್ಞ್ಞ್ಠ್ಝ ಖಠಿಠ್ಠಿಿ ಟ್ಛ ಉ್ಠ್ಚಠಿಜಿಟ್ಞ ್ಕಛಿಟ್ಟಠಿ) ವರದಿಯ ಪ್ರಕಾರ 2 ನೆಯ ತರಗತಿಯ ಪುಸ್ತಕಗಳನ್ನು ತಪ್ಪಿಿಲ್ಲದೆ ಸರಿಯಾಗಿ ಓದಬಲ್ಲ 5 ನೆಯ ತರಗತಿಯ ಸರಕಾರಿ ಶಾಲೆಯ ವಿದ್ಯಾಾರ್ಥಿಗಳ ಸಂಖ್ಯೆೆ ಶೇ.35 ರಷ್ಟಿಿತ್ತು. ಕಳೆದ ವರ್ಷದ ಅಂಕಿ ಅಂಶದ ಪ್ರಕಾರ ಅದು ಶೇ.22 ಕ್ಕಿಿಳಿದಿದೆ. ಹಾಗೆಯೇ ಆಗ ಖಾಸಗಿ ಶಾಲೆಯ ಶೇ.47 ರಷ್ಟು ಜನ ವಿದ್ಯಾಾರ್ಥಿಗಳು ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ ಲೆಕ್ಕ ಮಾಡಬಲ್ಲವರಾಗಿದ್ದರು. ಈಗ ಅವರ ಸಂಖ್ಯೆೆ ಶೇ.39 ಕ್ಕಿಿಳಿದಿದೆ. ಕಾಯಿದೆ ರೂಪುಗೊಂಡು, ಶಿಕ್ಷಕರ ತರಬೇತಿ ನಡೆದಿದ್ದರೂ ಸರಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾಾರ್ಥಿಗಳಿಬ್ಬರಲ್ಲೂ ಕಲಿಕಾ ಪ್ರಗತಿ ವೃದ್ಧಿಿಸುವುದರ ಬದಲು ಕುಸಿಯುತ್ತಿಿರುವುದು ಸರಕಾರ ಮತ್ತು ಯೋಜನಾಧಿಕಾರಿಗಳ ನಿದ್ದೆೆ ಕಸಿದಿದೆ. ಶಾಲೆಗೆ ಸೇರುವವರ ಸಂಖ್ಯೆೆ ಹೆಚ್ಚಾಾಗಿದೆಯಾದರೂ ಕಲಿಕಾ ಗುಣಮಟ್ಟದಲ್ಲಿ ಹೇಳಕೋಳ್ಳುವ ಪ್ರಗತಿಯೇನೂ ಆಗಿಲ್ಲ. ಕಾಯಿದೆಯ ಅನುಷ್ಠಾಾನವನ್ನು ಹತ್ತಿಿರದಿಂದ ಗಮನಿಸಿದವರು ಈ ರೀತಿಯ ಇಳಿಮುಖ ಬೆಳವಣಿಗೆಗೆ ಕೆಳಕಂಡ ಕಾರಣಗಳನ್ನು ಪಟ್ಟಿಿ ಮಾಡುತ್ತಾಾರೆ.

* ಶಿಕ್ಷಣವನ್ನು ಹಕ್ಕಾಾಗಿಸುವುದಕ್ಕೆೆ ನೀಡಿದ ಪ್ರಾಾಮುಖ್ಯತೆಯನ್ನು ಜ್ಞಾಾನಾರ್ಜನೆ ಮತ್ತು ಸಹಜ ಬುದ್ಧಿಿಮತ್ತೆೆಯ ಬೆಳವಣಿಗೆಗೆ ನೀಡದಿರುವುದು.
* ಕಾನೂನಿಗೆ ಹೆದರಿ ಪ್ರವೇಶ ಕಲ್ಪಿಿಸುವ ಉತ್ತಮ ಖಾಸಗಿ ಶಾಲೆಗಳು ಅವಕಾಶ ವಂಚಿತ ಹಿಂದುಳಿದ ಮತ್ತು ಅಲ್ಪಸಂಖ್ಯಾಾತ ವರ್ಗದ ಮಕ್ಕಳನ್ನು ಮುಖ್ಯವಾಹಿನಿಯಲ್ಲಿರುವ ಇತರ ಮುಕ್ಕಳೊಂದಿಗೆ ಸಂವೇದಿಯಾಗಲು ಬೇಕಾದ ಕೌಶಲವನ್ನಾಾಗಲೀ, ನೆರವನ್ನಾಾಗಲೀ ಪೂರ್ಣ ರೂಪದಲ್ಲಿ ಕಲ್ಪಿಿಸದಿರುವುದು.
* ಶಿಕ್ಷಕ ವಿದ್ಯಾಾರ್ಥಿಯ ಅನುಪಾತ 2010ರಲ್ಲಿದ್ದುದಕ್ಕಿಿಂತ ದುಪ್ಪಟ್ಟಾಾಗಿರುವುದು ಗುಣಮಟ್ಟದ ಪಾಠ-ಪ್ರವಚನಗಳು ವಿದ್ಯಾಾರ್ಥಿಗಳನ್ನು ಸರಿಯಾಗಿ ತಲುಪದಿರುವುದು.
* ಪ್ರವೇಶ ಸಂಖ್ಯೆೆಗಳಿಗೆ ಹೆಚ್ಚು ಗಮನ ನೀಡುವ ಸರಕಾರ, ಗುಣಮಟ್ಟ ಸುಧಾರಣೆಯ ಕಡೆ ಗಮನ ಹರಿಸದಿರುವುದು.
* ಹೆಣ್ಣುಮಕ್ಕಳ ಶಿಕ್ಷಣದ ಸಲುವಾಗಿ ಸ್ಥಾಾಪಿಸಲಾಗಿರುವ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಾಲಯಗಳ ಪ್ರವೇಶ ಮತ್ತು ಆರ್‌ಟಿಇ ಪ್ರವೇಶಗಳಿಗೆ ಯಾವುದೇ ಸಂಬಂಧವಿಲ್ಲದಿರುವುದು.

ವೈಯಕ್ತಿಿಕ ಸ್ವಾಾತಂತ್ರ್ಯ ಮತ್ತು ಸಬಲೀಕರಣವನ್ನು ನೀಡುವ ಶಿಕ್ಷಣವು ಸವಲತ್ತಲ್ಲ ಅದೊಂದು ಹಕ್ಕು ಎಂದು ಸಂವಿಧಾನದಲ್ಲೇ ಹೇಳಲಾಗಿದ್ದರೂ ಅದನ್ನು ಅವಕಾಶ ವಂಚಿತ ಸಮುದಾಯಕ್ಕೆೆ ತಲುಪಿಸುವ ಪ್ರತ್ಯೇಕ ಕಾಯಿದೆಯೊಂದನ್ನು ರೂಪಿಸುವ ಸಂದರ್ಭ ಎದುರಾದದ್ದೇ ನಮ್ಮ ಅನಾರೋಗ್ಯಕರ ಚಿಂತನೆ ಅನುಷ್ಠಾಾನ-ಪಾಲನೆಗಳಿಗೆ ಹಿಡಿದ ಕನ್ನಡಿಯಾಗಿತ್ತು. ವಿಶ್ವಸಂಸ್ಥೆೆಯ ಮಾನವ ಹಕ್ಕುಗಳ ಒಡಂಬಡಿಕೆಯ 54 ನೇ ಪರಿಚ್ಛೇದಗಳಲ್ಲಿ ಶಿಕ್ಷಣ ಮಗುವಿನ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ವಿವರಿಸಲಾಗಿದೆಯಾದರೂ ಈಗಲೂ ಬಹು ಸಂಖ್ಯಾಾತ ಮಕ್ಕಳು ಶಾಲಾ ವ್ಯವಸ್ಥೆೆಯಿಂದ ಹೊರಗುಳಿದಿದ್ದಾಾರೆ. ಕಾಯಿದೆ ಜಾರಿಗೆ ಬಂದಾಗಿನಿಂದ ಶಾಲೆಗಳ ಮೂಲ ಸೌಕರ್ಯ ಉತ್ತಮಗೊಂಡಿದ್ದು ಶೇ.64 ರಷ್ಟು ಶಾಲೆಗಳಲ್ಲಿ ವಿದ್ಯಾಾರ್ಥಿ-ವಿದ್ಯಾಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆೆ ಕಲ್ಪಿಿಸಿರುವುದು ಉತ್ತಮ ಬೆಳವಣಿಗೆಯೇ ಸರಿ. ಆದರೆ, ಎಲ್ಲವೂ ಸರಿಯಿಲ್ಲ ಎಂಬುದನ್ನು ಈ ಕೆಳಗಿನ ಅಂಶಗಳು ಮುಕ್ತವಾಗಿ ಹೇಳುತ್ತವೆ.

ನಮ್ಮಲ್ಲಿ 14 ಲಕ್ಷಕ್ಕೂ ಹೆಚ್ಚು ಶಾಲೆಗಳಿವೆ. ಇವುಗಳಲ್ಲಿ ಹನ್ನೊೊಂದು ಲಕ್ಷ ಸರಕಾರಿ ಶಾಲೆಗಳಿವೆ. ಆರ್‌ಟಿಇ ಜಾರಿಗೆ ಬಂದ ಮೂರು ವರ್ಷಗಳಲ್ಲಿ ಎಲ್ಲ ಶಾಲೆಗಳೂ ಸರ್ವ ಋತುಗಳಲ್ಲೂ ಕೆಲಸ ನಿರ್ವಹಿಸಬಲ್ಲ ಕಟ್ಟಡ, ಬಿಸಿಯೂಟ ತಯಾರಿಸಲು ಅಡುಗೆ ಶಾಲೆ, ಗ್ರಂಥಾಲಯ, ಆಟದ ಮೈದಾನ, ಹುಡುಗ-ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆೆ ಹೊಂದುವುದನ್ನು ಕಡ್ಡಾಾಯ ಮಾಡಲಾಗಿತ್ತು. ಆದರೆ, ವಾಸ್ತವ ಬೇರೆಯದೇ ಕತೆ ಹೇಳುತ್ತದೆ. ಒಂದೇ ತರಗತಿ ಕೊಠಡಿ ಹೊಂದಿರುವ ಆರು ಸಾವಿರ ಶಾಲೆಗಳಿವೆ. ಸರಕಾರಿ ಶಾಲೆಗಳಲ್ಲಿ ಲಭ್ಯವಿರುವ ತರಗತಿ ಕೊಠಡಿಗಳ ಸರಾಸರಿ ಸಂಖ್ಯೆೆ ನಾಲ್ಕು, ಇನ್ನೂ ಖಾಸಗಿ ಶಾಲೆಗಳಲ್ಲಿ ಇದರ ದುಪ್ಪಟ್ಟು ತರಗತಿ ಕೊಠಡಿಗಳಿವೆ. ಖಾಸಗಿ ಶಾಲೆಗಳು ಕಾಯಿದೆಯನ್ನು ಸಂಪೂರ್ಣವಾಗಿ ಪಾಲಿಸುತ್ತಿಿಲ್ಲ. ಶೇ.38 ರಷ್ಟು ಶಾಲೆಗಳಿಗೆ ಆಟದ ಮೈದಾನ ಇಲ್ಲ. ಶೇ.36 ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಬಿಹಾರದ ಶಾಲೆಗಳಲ್ಲಿ 47 ವಿದ್ಯಾಾರ್ಥಿಗಳಿಗೆ ಒಬ್ಬ ಶಿಕ್ಷಕ ಇದ್ದಾಾನೆ. ಈಶಾನ್ಯ ರಾಜ್ಯಗಳಲ್ಲಿ ಈ ಅನುಪಾತ 1:6 ಆಗಿದೆ. ಸುಮಾರು ಹತ್ತು ಸಾವಿರ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾಾರೆ. ಸರಕಾರಿ ದಾಖಲೆಯ ಪ್ರಕಾರ ಶೇ.98 ರಷ್ಟು ಶಾಲೆಗಳಲ್ಲಿ ಮಧ್ಯಾಾಹ್ನದ ಬಿಸಿಯೂಟ ಯೋಜನೆ ಜಾರಿಯಲ್ಲಿದ್ದು ಶೇ.70 ರಷ್ಟು ಶಾಲೆಗಳಲ್ಲಿ ಮಾತ್ರ ಆರೋಗ್ಯ ತಪಾಸಣೆ ನಡೆಯುತ್ತಿಿದೆ. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಪ್ರಾಾಥಮಿಕ ಶಿಕ್ಷಣಕ್ಕಾಾಗಿ ಸರಕಾರ ವಾರ್ಷಿಕ ನಲವತ್ತೆೆಂಟು ಸಾವಿರ ಕೋಟಿ ರುಪಾಯಿ ವ್ಯಯಿಸುತ್ತಿಿದೆ.

ಉಚಿತ ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ಮಧ್ಯಾಾಹ್ನದ ಬಿಸಿಯೂಟ, ಕುಡಿಯುವ ನೀರಿನ ವ್ಯವಸ್ಥೆೆ ಕಲ್ಪಿಿಸಿರುವ ರಾಜ್ಯ ಸರಕಾರಗಳು ಕಾಯಿದೆಯ ಮುಖಾಂತರ ಶೈಕ್ಷಣಿಕ ಗುಣಮಟ್ಟವನ್ನೂ ಹೆಚ್ಚಿಿಸುವುದಕ್ಕೆೆ ಆದ್ಯತೆ ನೀಡಬೇಕು. ಕೇವಲ ಪ್ರವೇಶಗಳ ಸಂಖ್ಯೆೆಯ ದೃಷ್ಟಿಿಯಿಂದ ಯೋಜನೆ ಕಾಯಿದೆಯ ಸೋಲು-ಗೆಲುವುಗಳನ್ನು ವಿಶ್ಲೇಷಿಸುವುದನ್ನು ನಿಲ್ಲಿಸಬೇಕು. ಹಲವು ಭೌಗೋಳಿಕ ಹಾಗೂ ಸಾಂಸ್ಕೃತಿಕ ಭಿನ್ನತೆ ಹೊಂದಿರುವ ಬೃಹತ್ ಜನಸಂಖ್ಯೆೆಯ ಅಗತ್ಯಗಳನ್ನು ಒಂದೇ ಮಾನದಂಡದಿಂದ ಸರಿ ಪಡಿಸುತ್ತೇವೆ ಎಂಬುದನ್ನು ಮೊದಲು ಬಿಡಬೇಕು. ಶಿಕ್ಷಕ ತರಬೇತಿ, ಸಂಬಳದ ಹೆಚ್ಚಳ, ಮೂಲ ಸೌಕರ್ಯ ಅಭಿವೃದ್ಧಿಿ, ಸಮರ್ಥ ಶಿಕ್ಷಕರ ನಿಯೋಜನೆ, ಸಂಖ್ಯಾಾನುಪಾತದ ಮೇಲೆ ನಿಗಾ ಮತ್ತು ನಿಯಂತ್ರಣಗಳತ್ತ ಹೆಚ್ಚಿಿನ ಗಮನ ಹರಿಸಿದರೆ ಪರಿಸ್ಥಿಿತಿಯನ್ನು ಸುಧಾರಿಸಲು ಯಾವ ಕಾಯಿದೆಯೂ ಬೇಕಾಗುವುದಿಲ್ಲ. ಸಿಗುತ್ತಿಿರುವ ಸಾಧಾರಣ ಶಿಕ್ಷಣದ ಬದಲು ಮೌಲಿಕ ಶಿಕ್ಷಣ ಹಕ್ಕಾಾದಾಗ ಮಾತ್ರ ಸಾಮುದಾಯಿಕ ಜವಾಬ್ದಾಾರಿ ಮತ್ತು ಸಾಮೂಹಿಕ ಪ್ರಕ್ರಿಿಯೆಯಾಗಿರುವ ಶಿಕ್ಷಣಕ್ಕೆೆ ಅರ್ಥ ಒದಗುತ್ತದೆ.