ಹೈದರಾಬಾದ್: ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಯವರ ಸಹೋದರಿ ವೈ.ಎಸ್.ಶರ್ಮಿಳಾ, ಇಂದಿನಿಂದ 400 ದಿನಗಳಲ್ಲಿ 4,000 ಕಿಲೋಮೀಟರ್‌ಗಳ ದಾಖಲೆ ಪಾದಯಾತ್ರೆ ಕೈಗೊಳ್ಳುವರು.
ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಆಡಳಿತಾವಧಿಯಲ್ಲಿ ಕಳೆದ ಏಳು ವರ್ಷಗಳಲ್ಲಿ ಏಳು ಸಾವಿರ ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಶರ್ಮಿಳಾ ಇತ್ತೀಚೆಗೆ ಆಪಾದಿಸಿದ್ದರು. ವೈಎYSಸ್‌ಆರ್ ತೆಲಂಗಾಣ ಪಾರ್ಟಿಯ ಸಂಸ್ಥಾಪಕಿ, 400 ದಿನಗಳ ಅವಧಿಯಲ್ಲಿ 4000 ಕಿಲೋ ಮೀಟರ್ ಪಾದಯಾತ್ರೆ ನಡೆಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಪಾದಯಾತ್ರೆ ರಾಜ್ಯದ ಎಲ್ಲ 90 ವಿಧಾನಸಭಾ ಕ್ಷೇತ್ರಗಳಲ್ಲೂ ವ್ಯಾಪಿಸಲಿದೆ. “ಈ ಪಾದಯಾತ್ರೆಯ ಉದ್ದೇಶ ಕೇವಲ ಜನರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅರಿತುಕೊಳ್ಳುವುದು ಮಾತ್ರವಲ್ಲದೇ, ಈ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವುದೂ ಆಗಿದೆ” ಎಂದು ಪಕ್ಷದ ಪ್ರಕಟನೆ ಹೇಳಿದೆ.
ಕೆಸಿಆರ್ ಆಡಳಿತಾವಧಿಯಲ್ಲಿ ದಲಿತರ ಮೇಲಿನ ದಾಳಿಗಳು ಶೇಕಡ 800ರಷ್ಟು ಹೆಚ್ಚಿವೆ. ಮದ್ಯಪಾನ ಮಾರಾಟ ಕೂಡಾ ಶೇಕಡ 300ರಷ್ಟು ಹೆಚ್ಚಿದ್ದು, ಮಹಿಳೆಯರ ಮೇಲಿನ ದೌರ್ಜನ್ಯವೂ ಹೆಚ್ಚಳವಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಜನರ ಸಮಸ್ಯೆಗಳನು ಆಲಿಸಲು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ತೋರಿಸಿಕೊಟ್ಟ ಮಾರ್ಗವನ್ನು ತಾವು ಅನುಸರಿಸುವುದಾಗಿ ಸ್ಪಷ್ಟಪಡಿಸಿದರು.
ಅ.20ರಿಂದ ಆರಂಭವಾಗುವ ಯಾತ್ರೆಗೆ ‘ಪ್ರಜಾ ಪ್ರಸ್ತಾನ ಯಾತ್ರೆ’ ಎಂದು ಹೆಸರಿಸಲಾಗಿದೆ.