ನವದೆಹಲಿ: ಭಾರತದಲ್ಲಿ ಮಹಾಮಾರಿ ಕರೋನಾ ಅಬ್ಬರ ಇಳಿಕೆಯಾಗುತ್ತಿದ್ದು, ಮಂಗಳವಾರ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 12 ಸಾವಿರದ 428 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 356 ಮಂದಿ ಮೃತಪಟ್ಟಿದ್ದಾರೆ.
ದೇಶದಲ್ಲಿ 12 ಸಾವಿರದ 428 ಹೊಸ ಕೇಸುಗಳು ಮತ್ತು 356 ಸಾವಿನ ಪೈಕಿ 6 ಸಾವಿರದ 664 ಕೇಸುಗಳು ಕೇರಳ ರಾಜ್ಯವೊಂದರಲ್ಲಿಯೇ ಪತ್ತೆಯಾಗಿದ್ದು 53 ಮಂದಿ ನಿನ್ನೆ ಮೃತಪಟ್ಟಿದ್ದಾರೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷದ 63 ಸಾವಿರದ 816 ಕ್ಕೆ ತಲುಪಿದೆ. ಗುಣಮುಖ ಹೊಂದುತ್ತಿರುವ ದರ ಪ್ರಸ್ತುತ ಶೇಕಡಾ 98.19ರಷ್ಟಿದ್ದು, ಕಳೆದ ಮಾರ್ಚ್ 2020ರಿಂದ ಅಧಿಕವಾಗಿದೆ. ಕಳೆದ 24 ಗಂಟೆಗಳಲ್ಲಿ 15 ಸಾವಿರದ 951 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖ ಹೊಂದಿದವರ ಸಂಖ್ಯೆ 3 ಕೋಟಿಯ 35 ಲಕ್ಷದ 83 ಸಾವಿರದ 318 ಆಗಿದೆ.
ಭಾರತದಲ್ಲಿ ಒಂದೇ 11 ಲಕ್ಷದ 31 ಸಾವಿರದ 826 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದುವರೆಗೆ 60 ಕೋಟಿಯ 19 ಲಕ್ಷದ 01 ಸಾವಿರದ 543 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.