ಟೊರಾಂಟೊ: ಭಾರತ ಮೂಲದ ಅನಿತಾ ಆನಂದ್ ಅವರು ಕೆನಡಾದ ರಕ್ಷಣಾ ಸಚಿವ ರಾಗಿ ಆಯ್ಕೆಯಾಗಿದ್ದಾರೆ.
ಒಂಟಾರಿಯೋ ಪ್ರಾಂತ್ಯವನ್ನು ಅನಿತಾ ಆನಂದ್ ಪ್ರತಿನಿಧಿಸುತ್ತಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೋ ಸಂಪುಟ ಪುನಾರಚನೆಯಾದ ಕಾರಣ ಅನಿತಾರನ್ನು ರಕ್ಷಣಾ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ದೇಶದ ಮೊದಲ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಪಾತ್ರರಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ಅನಿತಾ ಆನಂದ್ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಶೀಘ್ರವಾಗಿ ಕೋವಿಡ್ 19 ಲಸಿಕೆಗಳು ದೇಶಕ್ಕೆ ಲಭ್ಯವಾಗುವಂತೆ ಮಾಡುವುದರಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.
ಕೊರೊನಾ ಜಾಗೃತಿ ಅಭಿಯಾನದ ಉಸ್ತುವಾರಿಯನ್ನು ನೋಡಿಕೊಂಡಿದ್ದರು. ರಕ್ಷಣಾ ಇಲಾಖೆಯನ್ನು ಮುನ್ನಡೆಸಲು ಅವರು ಸಮರ್ಥರಾಗಿದ್ದಾರೆ ಎಂದು ವರದಿ ಮಾಡಲಾ ಗಿದೆ.
ಅನಿತಾ ಆನಂದ್ ಅವರು ದೀರ್ಘಾವಧಿ ರಕ್ಷಣಾ ಸಚಿವರಾಗಿದ್ದ ಭಾರತೀಯ ಮೂಲದ ಹರ್ಜಿತ್ ಸಜ್ಜನ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸಜ್ಜನ್ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿಗೆ ನೇಮಿಸಲಾಗಿದೆ.