Sunday, 22nd September 2024

ಬೆಂಕಿಯಲ್ಲಿ ಅರಳಿದ ಹೂವು ಜೋಗತಿ ಮಂಜಮ್ಮ

*ಸುರೇಶ ಗುದಗನವರ, 9449294694

ಇಳಕಲ್ ಸೀರೆಯುಟ್ಟು, ಹಸಿರು ಬಳೆ ತೊಟ್ಟು ತಲೆಯ ಮೇಲೆ ದೇವರನ್ನು ಹೊತ್ತು ಗಂಡಸರು ಮಾಡುವ ನೃತ್ಯಕ್ಕೆೆ ಜೋಗತಿ ಕಲೆ ಎನ್ನುತ್ತಾಾರೆ. ಉತ್ತರ ಕರ್ನಾಟಕದ ಎಲ್ಲಮ್ಮ, ಹುಲಿಗೆಮ್ಮ ಮುಂತಾದ ದೇವತೆಗಳ ಜಾತ್ರೆೆಗಳಲ್ಲಿ ಜೋಗತಿ ಕಲೆ ಪ್ರಸಿದ್ಧ. ಬದುಕಿನಲ್ಲಿ ಸಾಕಷ್ಟು ನೋವುಂಡು, ಸಮಾಜದ ಕಟ್ಟುಪಾಡುಗಳಿಗೆ ಹೆದರಿ, ಸ್ವಂತ ತಂದೆ ತಾಯಿಯರೇ ದೂರ ಮಾಡಿದಾಗ, ಹೊರಟ ಓರ್ವ ಜೋಗತಿ, ಇಂದು ರಾಜ್ಯದ ಹೆಸರಾಂತ ಕಲಾವಿದೆ ಎಂದು ಗುರುತಿಸಲ್ಪಟ್ಟಿಿದ್ದಾಾರೆ. ಮೊನ್ನೆೆ ಮೊನ್ನೆೆ ತನಕ ಸಮಾಜದಿಂದ ಪರಿತ್ಯಕ್ತರಾಗಿ, ಜೋಗತಿ ತಂಡ ಕಟ್ಟಿಿಕೊಂಡು ನೃತ್ಯ ಮಾಡುತ್ತಿಿದ್ದ ವ್ಯಕ್ತಿಿ ಇಂದು ಪ್ರಮುಖ ಸ್ಥಾಾನ ಅಲಂಕರಿಸಿದ್ದಾಾರೆ. ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಕರ್ನಾಟಕ ಜಾನಪದ ಅಕಾಡೆಮಿಗೆ ಅಧ್ಯಕ್ಷರಾಗಿ ಆಯ್ಕೆೆಯಾಗಿದ್ದಾಾರೆ. ಅವರೇ ಜೋಗತಿ ಮಂಜಮ್ಮ. ಕರ್ನಾಟಕ ಸರ್ಕಾರ ಅಕಾಡೆಮಿವು ಜೋಗತಿಯನ್ನು ಅಕಾಡೆಮಿ ಅಧ್ಯಕ್ಷರನ್ನಾಾಗಿ ಆಯ್ಕೆೆ ಮಾಡಿದ್ದು ಇದೇ ಮೊದಲು. ಇದು ಅಚ್ಚರಿಯ, ಸಂತಸದ ನಮ್ಮ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳು ಆಗಾಗ ಆಗುತ್ತಿಿವೆ ಎಂಬುದಕ್ಕೆೆ ಇದು ಒಂದು ಉದಾಹರಣೆ.

ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿಿಯ ಜೋಗತಿ ಮಂಜಮ್ಮ ಇಂದು ಹೆಸರು ಗಳಿಸಿದ್ದಾಾರೆ, ಜೋಗತಿ ನೃತ್ಯ ಮತ್ತು ಹಾಡುಗಳ ಮೂಲಕ ಹೆಸರುವಾಸಿಯಾಗಿದ್ದಾಾರೆ. ಜಾನಪದ ಅಕಾಡೆಮಿಯ ಅಧ್ಯಕ್ಷ ಸ್ಥಾಾನ ಅಲಂಕರಿಸಿದ್ದಾಾರೆ. ಆದರೆ ಅವರ ಜೀವನ ಮುಳ್ಳಿಿನ ದಾರಿ. ಅಕ್ಷರಶಃ ಬೆಂಕಿಯಲ್ಲಿ ಹಾದು, ಅಗ್ನಿಿಪರೀಕ್ಷೆೆಗೆ ಗುರಿಯಾದ ನಂತರವಷ್ಟೇ ಕಟ್ಟಿಿಕೊಂಡ ಜೀವನ ಅವರದು. ಸಾಕಷ್ಟು ಕಷ್ಟ, ನೋವುಂಡು, ಸಾವಿನ ಮನೆ ತಟ್ಟಿಿ, ಬದುಕಿ, ಇಂದು ಈ ಸ್ಥಿಿತಿ ತಲುಪಿದ್ದಾಾರೆ. ಮೂಲತಃ ಬಳ್ಳಾಾರಿ ಜಿಲ್ಲೆೆಯ ಕಲ್ಲುಕಂಬದವರು. ಮಂಜಮ್ಮಳ ತಂದೆ ಹನುಮಂತಯ್ಯ, ತಾಯಿ ಜಯಲಕ್ಷ್ಮೀ. ಮೂಲ ಹೆಸರು ಮಂಜುನಾಥ. ಗಂಡು ಮಗುವಾಯಿತೆಂದು ತಂದೆ ತಾಯಿ ಇಟ್ಟ ಹೆಸರು. ಮಂಜುನಾಥ 7ನೇ ತರಗತಿಯಲ್ಲಿದ್ದಾಾಗಲೇ ಶರೀರದಲ್ಲಿ ಬದಲಾವಣೆಯಾಗುವುದನ್ನು ಅನುಭವಿಸಿದ್ದಾಾನೆ. ಇವರ ತಂದೆ ಸಕ್ಕರೆ ಕಾರ್ಖಾನೆಯ ಉದ್ಯೋೋಗಿಯಾಗಿದ್ದರು. ಹೀಗಾಗಿ ಇವರ ಕುಟುಂಬ ದಾವಣಗೆರೆ ಸಮೀಪದ ಕುಕ್ಕವಾಡ ಗ್ರಾಾಮಕ್ಕೆೆ ತೆರಳಿತು.

ಮಂಜುನಾಥ ಹತ್ತನೆಯ ತರಗತಿಯಲ್ಲಿದ್ದಾಾಗ, ದೇಹದಲ್ಲಿ ಇನ್ನಷ್ಟು ಬದಲಾವಣೆಗಳು ನಡುವಳಿಕೆಯು ಓರ್ವ ಹುಡುಗನಿಗಿಂತ ಹೆಚ್ಚಾಾಗಿ ಹೆಣ್ಣಿಿನ ಹಾವ ಭಾವಗಳನ್ನು ಹೋಲತೊಡಗಿತು. ಸಮಾಜದಿಂದ ನೋವು ಮತ್ತು ಸಂಕಟಗಳನ್ನು ಅನುಭವಿಸಿದನು. ಮನೆಯಲ್ಲೂ ಇರುಸು ಮುರುಸು, ತಿರಸ್ಕಾಾರ. ಈತನ ದೇಹದ ಹಾವಭಾವಗಳನ್ನು ಕಂಡು, ತಂದೆ ತಾಯಿಯರಿಗೂ ಸಂಕೋಚ, ಮುಜುಗರ. ಕೊನೆಗೆ ಮನೆಯವರೆಲ್ಲ ಸೇರಿ ಹುಲಿಗೆಮ್ಮ ದೇವತೆಯ ಸಮ್ಮುಖದಲ್ಲಿ ಮುತ್ತು ಕಟ್ಟಿಿಸಿ, ಜೋಗತಿಯಾಗಿ ದೀಕ್ಷೆ ಕೊಡಿಸುತ್ತಾಾರೆ. ಈ ಘಟನೆಯ ನಂತರ, ತೀವ್ರ ಮಾನಸಿಕ ಕ್ಷೋೋಭೆಗೆ ಒಳಗಾದ ಮಂಜುನಾಥ ಬೇಸತ್ತು ಆತ್ಮಹತ್ಯೆೆಗೆ ಪ್ರಯತ್ನಿಿಸುತ್ತಾಾನೆ. ವಿಷ ಸೇವಿಸಿದ ವಾಂತಿಯೂ ಆಗಿ, ಮನೆಯಿಂದ ಹೊರಗೆ ಮಲಗಿದ್ದಾಾಗ ಮಳೆ ಬಂದು ಆ ಮಳೆ ನೀರನ್ನು ಕುಡಿಯುವ ಅನಿವಾರ್ಯತೆ. ನಂತರ ತಾಯಿ ಅವನನ್ನು ಆಸ್ಪತ್ರೆೆಗೆ ಸೇರಿಸುತ್ತಾಾಳೆ. ಚಿಟಗೇರಿ ಆಸ್ಪತ್ರೆೆಯಲ್ಲಿ ಒಬ್ಬನೇ ದಿನ ನೂಕುತ್ತಾಾನೆ. ಮನೆಯವರು ಏನಾಯಿತೆಂದು ವಿಚಾರಿಸಲು ಬರುವದಿಲ್ಲ. ನಂತರ ತಾಯಿಯ ಸೀರೆಗಳನ್ನು ತೆಗೆದುಕೊಂಡು ಮರಿಯಮ್ಮನಹಳ್ಳಿಿಗೆ ಪಲಾಯನ ಮಾಡುತ್ತಾಾನೆ. ಮುಂದೆ ಚಿಲಕನಹಳ್ಳಿಿಯ ಸುಶೀಲಮ್ಮನವರ ನೆರವಿನೊಂದಿಗೆ ಇಡ್ಲಿಿ ಮಾರಿ, ಶಾಲಾ ಮಕ್ಕಳಿಗೆ ಪಾಠ ಮಾಡಿ ಬಂದ ಹಣದಿಂದ ಬದುಕು ಸಾಗಿಸುತ್ತಾಾನೆ.

ಮಂಜುನಾಥ, ಮಂಜಮ್ಮನಾಗಿ ಗಟ್ಟಿಿ ನಿರ್ಧಾರ ಮಾಡಿ ಸಮಾಜಮುಖಿಯಾಗುತ್ತಾಾರೆ. ಮಂಜಮ್ಮಳಿಗೆ ಹೊಸಪೇಟೆ ತಾಲೂಕಿನ ಗೊಲ್ಲರ ಹಳ್ಳಿಿಯ ಜೋಗತಿ ಕಾಳವ್ವ, ಗುರುವಾಗಿ ದೊರಕುತ್ತಾಾರೆ. ಮಂಜಮ್ಮಳಿಗೆ ಮನೆಯ ಮಗಳಂತೆ ಕಂಡು ತಾವು ಕಲಿತಿದ್ದ ಎಲ್ಲ ವಿದ್ಯೆೆಯನ್ನು ಧಾರೆ ಎರೆಯುತ್ತಾಾರೆ. ನಂತರ ಮಂಜಮ್ಮ ಜೋಗತಿಯರ ತಂಡವನ್ನು ಕಟ್ಟಿಿಕೊಂಡು, ರಾಜ್ಯದಲ್ಲೆೆಡೆ ಪ್ರದರ್ಶನ ನೀಡುತ್ತಾಾರೆ. ಜೋಗತಿ ನೃತ್ಯಕ್ಕೆೆ ಹೊಸ ಅರ್ಥವನ್ನು ತಂದ ಘನತೆ ಕೂಡಾ ಅವರಿಗೆ ಸಿಕ್ಕಿಿದೆ. ಮಂಜಮ್ಮ ಮಂಗಳ ಮುಖಿಯಾಗಿ ಜೋಗತಿ ವೃತ್ತಿಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡು ತಮ್ಮ ವಯಸ್ಸಿಿನಿಂದಲೂ ಕಲಾ ಸೇವೆ ಮಾಡುತ್ತ ಬಂದಿದ್ದಾಾರೆ. ಕಲೆಯನ್ನೇ ಉಸಿರನ್ನಾಾಗಿಸಿಕೊಂಡು, ಜೋಗತಿ ನೃತ್ಯದಲ್ಲಿ ಪರಿಣತಿ ಸಾಧಿಸಿದ್ದರ ಜತೆಯಲ್ಲೇ, ಇತರ ಜೋಗತಿಯರನ್ನು ಜತೆಗೆ ಸೇರಿಸಿಕೊಂಡು, ಅವರಿಗೂ ತರಬೇತಿ ನೀಡಿದರು.

ಮಂಜಮ್ಮ ತಂಡ ಕಟ್ಟಿಿಕೊಂಡು ಕಳೆದ ಮೂರುದಶಕಗಳಿಂದ ತುಮಕೂರು, ಬೆಂಗಳೂರು, ಹಂಪಿ, ಬಳ್ಳಾಾರಿ, ಬೆಳಗಾವಿ, ಅಥಣಿ, ಧಾರವಾಡ, ಮೈಸೂರು, ಮೂಡುಬಿದ್ರೆೆ, ರಾಯಚೂರು, ವಿಜಯಪುರ ಮುಂತಾದೆಡೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾಾರೆ. ಅವರ ನೃತ್ಯ ಭಂಗಿಗಳನ್ನು ನೋಡುತ್ತಿಿದ್ದರೆ ಎಂತಹವರಾದರೂ ಬಾಯಿ ಮೇಲೆ ಕೈ ಇಟ್ಟುಕೊಳ್ಳಲೇಬೇಕು. ಎಲ್ಲಮ್ಮ, ಹೇಮರಡ್ಡಿಿ ಮಲ್ಲಮ್ಮ, ಭಸ್ಮಾಾಸುರ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಿಯಾಗಿದ್ದಾಾರೆ.

ಇವರ ನೃತ್ಯಪ್ರಕಾರವನ್ನು ಗುರುತಿಸಿ, ಸರಕಾರವು ರಾಜ್ಯೋೋತ್ಸವ ಪ್ರಶಸ್ತಿಿ ನೀಡಿದಾಗ, ಇವರ ಕುಟುಂಬದವರು ಇವರನ್ನು ಸಂಪರ್ಕಿಸಿ, ಮನೆಗೆ ಬರುವಂತೆ ಆಹ್ವಾಾನಿಸಿದ್ದು ಒಂದು ಅಭೂತಪೂರ್ವ ಘಟನೆ. ಅದರಿಂದ ಮಂಜಮ್ಮ ಖುಷಿ ಪಟ್ಟರು, ತನ್ನ ಕಲೆಯಿಂದಾದ ಸಾಧನೆ ಇದು ಎಂದು ತೃಪ್ತಿಿಪಟ್ಟರು. ಆದರೆ, ತನ್ನ ತಂಡದ ಸಹೋದ್ಯೋೋಗಿಗಳ ಭವಿಷ್ಯದ ದೃಷ್ಟಿಿಯಿಂದ, ತಂಡದ ಬೆಳವಣಿಗೆಗಾಗಿ ತನ್ನ ಜೀವನವನ್ನೇ ನೃತ್ಯ ಮಾಡುವುದನ್ನು ಮುಂದುವರಿಸಿದ್ದಾಾರೆ. . ಮಂಜಮ್ಮ ಮೂವರು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾಾರೆ. ಇಬ್ಬರು ಜೋಗತಿಯರ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಾರೆ. ‘ನನ್ನಂತೆಯೇ ಎಷ್ಟೋೋ ಕಲಾವಿದರಿಗೆ ಮನೆಯೇ ಇಲ್ಲ. ಕಲಾವಿದರಿಗೆ ಪ್ರಶಸ್ತಿಿಗಳ ಮೂಲಕ ಹೊಟ್ಟೆೆ ತುಂಬಿಸಲಾಗುವದಿಲ್ಲ. ಅವರಿಗೆಲ್ಲ ವಾಸಿಸಲು ಮನೆ ಮತ್ತು ಪೆಶನ್ ದೊರಕುವ ಹಾಗೇ ಸರ್ಕಾರಕ್ಕೆೆ ಒತ್ತಡ ತರುತ್ತೇನೆ’ ಎನ್ನುತ್ತಾಾರೆ ಮಂಜಮ್ಮ.

ಪದವಿಯಲ್ಲಿ ಪಠ್ಯ
ಮಂಜಮ್ಮ ಅವರ ಜೀವನ ಕಥೆಯನ್ನು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಾಲಯದವರು ಪದವಿಯ ಸೆಮಿಸ್ಟರ್‌ನಲ್ಲಿ ಪಠ್ಯವಾಗಿ, ಗೆ ಕನ್ನಡ ಪಠ್ಯಪುಸ್ತಕದಲ್ಲಿ ಅಳವಡಿಸಿರುವದು ಹೆಮ್ಮೆೆಯ ಸಂಗತಿ. ಮಂಜಮ್ಮ ತಂಡದವರು ಜೋಗತಿ ನೃತ್ಯ ಮತ್ತು ಹಾಡುಗಾರಿಕೆಯ ಮೂಲಕ ಗ್ರಾಾಮೀಣ ರಂಗಭೂಮಿಗೆ ಒಂದು ಹೊಸ ಪರಿಭಾಷೆ ಬರೆದಿದ್ದಾಾರೆ.
ಸಮಾಜದಲ್ಲಿ ಜೋಗತಿಯರನ್ನು ಕಂಡರೆ ಗೌರವ ಭಾವನೆಯಿಂದ ಕಾಣುವವರಿಗಿಂತ ಕೀಳರಿಮೆಯಿಂದ ಕಾಣುವವರೇ ಹೆಚ್ಚು. ಭಿಕ್ಷಾಟನೆ ಕಾರಣಕ್ಕೆೆ ಮಂಗಳಮುಖಿಯರು ತಾತ್ಸಾಾರಕ್ಕೆೆ ಒಳಗಾಗಿದ್ದಾಾರೆ. ಅನೇಕರು ದೌರ್ಜನ್ಯ ಶೋಷಣೆಗಳಿಗೆ ಗುರಿಯಾಗಿದ್ದಾಾರೆ. ಆದರೆ ಮಂಜಮ್ಮ ತನಗೆ ಬಂದಂತ ಎಲ್ಲ ಕಷ್ಟಗಳನ್ನೆೆಲ್ಲಾಾ ಎದುರಿಸಿ ಜಾನಪದ ಲೋಕದಲ್ಲಿ ಗುರುತಿಸಿಕೊಂಡಿದ್ದಾಾರೆ. ವಯಸ್ಸಿಿನ ಜೋಗತಿ ಮಂಜಮ್ಮರ ಆತ್ಮಕಥನವನ್ನು ಡಾ.ಚಂದ್ರಪ್ಪ ಸೊಬಟಿ ಪ್ರಕಟಿಸಿರುವದು ಶ್ಲಾಾಘನೀಯ.

ಜಾನಪದ ಕಲೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಮಂಜಮ್ಮ ಅವರ ಕೀರ್ತಿ ನೆರೆಯ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಸ್ಸಾಾಂ ಹಾಗೂ ದೆಹಲಿಯ ವರೆಗೂ ಹಬ್ಬಿಿದೆ. ಉಡುಪಿ, ಮಂಗಳೂರು ಭಾಗದ ತುಳುನಾಡು ಕಲಾವಿದರು ಇವರ ನೃತ್ಯಕ್ಕೆೆ ಮನಸೋತಿದ್ದಾಾರೆ. ಅಲ್ಲದೇ ಆಂಧ್ರಪ್ರದೇಶದ ಮಾಸಿಕ ಪತ್ರಿಿಕೆಯಲ್ಲಿ ‘ಜೋಗತಿ ಮಂಜಮ್ಮ’ ಎನ್ನುವ ಶೀರ್ಷಿಕೆಯಡಿ ಅವರ ಆತ್ಮಕಥನವು ಧಾರವಾಹಿ ರೂಪದಲ್ಲಿ ಪ್ರಕಟವಾಗುತ್ತಿಿದ್ದು, ಬಹುಜನರ ಗಮನ ಸೆಳೆದಿದೆ.

ಬರೆದ ಹಣೆ ಬರಹವೇ ಅಂತಿಮ. ಮಂಗಳಮುಖಿಯಾದ ನಾನು ಆರಂಭದ ದಿನಗಳಲ್ಲಿ ಬಹಳ ಕಷ್ಟನೋವುಗಳನ್ನು ಅನುಭವಿಸಿದ್ದೇನೆ. ನನಗೆ ಜೋಗತಿ ಕಾಳಮ್ಮ ಗುರುವಾಗಿ ಸಿಗದಿದ್ದರೆ, ಅವರು ನನಗೆ ಸೂಕ್ತ ಮಾರ್ಗದರ್ಶನ ನೀಡದೇ ಇದ್ದಿದ್ದರೆ, ಇವತ್ತು ನಾನು ಈ ಮಟ್ಟಕ್ಕೆೆ ಬೆಳೆಯುತ್ತಿಿರಲಿಲ್ಲ. ಎಷ್ಟೇ ಕಷ್ಟ ಬರಲಿ, ತೊಡಕುಗಳು ಎದುರಾಗಲಿ, ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಸ್ಪಷ್ಟ ಗುರಿ ಹೊಂದಿರಬೇಕು. ಅದನ್ನು ತಲುಪುವ ದೃಢ ಸಂಕಲ್ಪ ಮಾಡಬೇಕು’ ಎನ್ನುತ್ತಾಾರೆ ಜೋಗತಿ ಮಂಜಮ್ಮ ತಿಳಿಸುತ್ತಾಾರೆ.

ಜಾನಪದ ಅಕಾಡೆಮಿಯ ಸ್ಥಾಾನ
ಈಗಾಗಲೇ ಜಾನಪದ ಅಕಾಡೆಮಿಯ ಸದಸ್ಯೆೆಯಾಗಿ ಸೇವೆ ಸಲ್ಲಿಸಿದ ಮಂಜಮ್ಮ ಅವರನ್ನು ಕರ್ನಾಟಕ ಸರ್ಕಾರ ಇತ್ತೀಚಿಗೆ ಅಕಾಡೆಮಿಯ ಅಧ್ಯಕ್ಷೆಯಾಗಿ ಆಯ್ಕೆೆ ಮಾಡಿರುವದು ಹೆಮ್ಮೆೆಯ ವಿಷಯ. ಅಲ್ಲದೇ ರಾಜ್ಯದಲ್ಲಿ ಮೊದಲ ಬಾರಿಗೆ ಮಂಗಳಮುಖಿಯೊಬ್ಬರು ಈ ಮಟ್ಟದ ಸ್ಥಾಾನವನ್ನು ಅಲಂಕರಿಸಿದ್ದಾಾರೆ. ಇದು ಮಂಗಳಮುಖಿಯರ ಸಮುದಾಯಕ್ಕೆೆ ಸಲ್ಲಿಸಿದ ಗೌರವ. ಇವರ ಕಲೆಯನ್ನು ಗುರುತಿಸಿ 2010ರಲ್ಲೇ ರಾಜ್ಯೋೋತ್ಸವ ಪ್ರಶಸ್ತಿಿಯನ್ನು ಸರಕಾರ ಕೊಡಮಾಡಿದೆ. ಮಂಜಮ್ಮನವರ ಕಲಾ ಕೌಶಲವನ್ನು ಕಂಡು ಹಲವಾರು ಪ್ರಶಸ್ತಿಿ ಪುರಸ್ಕಾಾರಗಳು ಅರಸಿಕೊಂಡು ಬಂದಿವೆ. ಜಾನಪದ ಅಕಾಡೆಮಿ ಪ್ರಶಸ್ತಿಿ, ಜಾನಪದ ಲೋಕ ಪ್ರಶಸ್ತಿಿ, ಕನ್ನಡ ರಾಜ್ಯೋೋತ್ಸವ ಪ್ರಶಸ್ತಿಿ, ಸಮಾಜ ಸಖೀ ಪ್ರಶಸ್ತಿಿ, ಟಿ.ಆರ್.ಟಿ. ಕಲಾ ಪ್ರಶಸ್ತಿಿ ಮೊದಲಾದವು ಮುಖ್ಯವಾದವು.

ಮಂಗಳಮುಖಿಯಾದ ಮಂಜಮ್ಮ ಛಲಗಾರ್ತಿ ಎಂದೇ ಪರಿಚಿತರು. ಕಲೆಯ ಮೂಲಕವೇ ನಾಡಿನಾದ್ಯಂತ ಮನೆ ಮಾತಾಗಿದ್ದಾಾರೆ. ಜೋಗತಿ ನೃತ್ಯ ಕಲಾ ಪ್ರಕಾರಕ್ಕೆೆ ಅಂತರಾಷ್ಟ್ರೀಯ ಮನ್ನಣೆ ಸಿಗಬೇಕೆನ್ನುವ ಕನಸು ಅವರದಾಗಿದೆ. ಅವರ ಕನಸು ನನಸಾಗಲಿ. ಅವರು ಸಾಧನೆಯ ಮಾರ್ಗದಲ್ಲಿ ಬದುಕು ರೂಪಿಸಿಕೊಂಡು, ಜೀವನದಲ್ಲಿ ಕಷ್ಟವನ್ನು ಎದುರಿಸುತ್ತಿಿರುವ ಇತರ ಅಸಂಖ್ಯಾಾತ ಮಾದರಿಯಾಗಿದ್ದಾಾರೆ. (ಜೋಗತಿ ಮಂಜಮ್ಮ ಸಂಪರ್ಕ ನಂ.9449464075)

ಪ್ರಶಸ್ತಿಿಗಳು
2006 : ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿಿ
2007 : ಜಾನಪದ ಜಾನ ಪ್ರಶಸ್ತಿಿ
2008 : ಜಾನಪದ ಲೋಕ ಪ್ರಶಸ್ತಿಿ
2010 : ಕನ್ನಡ ರಾಜ್ಯೋೋತ್ಸವ ಪ್ರಶಸ್ತಿಿ
2012 : ತಾಯಮ್ಮ ಮಲ್ಲಯ್ಯ ದತ್ತಿಿನಿಧಿ ಪ್ರಶಸ್ತಿಿ
2014 : ಸಮಾಜ ಸಖಿ ಪ್ರಶಸ್ತಿಿ
2019: ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾಾನ

ಕೆಲವು ಜೋಗತಿ ನೃತ್ಯ ಪ್ರದರ್ಶನಗಳು

ಮಂಜಮ್ಮ ಜೋಗತಿ ಗಂಡು ಜೋಗತಿಯರ ತಂಡವನ್ನು ಕಟ್ಟಿಿಕೊಂಡು ಜೋಗತಿ ಕಲೆ ಪ್ರದರ್ಶನ ಮಾಡುವುದರೊಂದಿಗೆ, ನಾಟಕ ಪ್ರದರ್ಶನ, ನಾಟಕ ನಿರ್ದೇಶನ, ಹಾಡು, ಕುಣಿತ ಮುಂತಾದ ಮನೋರಂಜಕ ಕಲೆಗಳನ್ನು ರೂಢಿಸಿಕೊಂಡಿದ್ದಾರೆ. ಅಂತಹ ಕೆಲವು ಪ್ರದರ್ಶನಗಳು:
1986 : ಅಖಿಲ ಕರ್ನಾಟಕ ಮಹಿಳಾ ಜನಪದ ಸಮ್ಮೇಳನ – ತುಮಕೂರು.
1992 : ಜಾನಪದ ಕಲಾ ಮಹೋತ್ಸವ, ರವೀಂದ್ರ ಕಲಾಕ್ಷೇತ್ರ – ಬೆಂಗಳೂರು.
1995 : ಬುಡಕಟ್ಟು ಉತ್ಸವ ವಿಶ್ವವಿದ್ಯಾಾನಿಲಯ – ಹಂಪಿ ಹಾಗೂ ಕರ್ನಾಟಕ ಬುಡಕಟ್ಟು ಮತ್ತು ಜನಪದನೃತ್ಯೋೋತ್ಸವ – ಕನ್ನಡ ವಿಶ್ವವಿದ್ಯಾಾನಿಲಯ – ಹಂಪಿ
1995 : ಬಳ್ಳಾಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನ – ಬಳ್ಳಾಾರಿ
1995 : ರಾಜ್ಯ ಮಟ್ಟದ ಜಾನಪದ ಸಮಾವೇಶ – ಹೂವಿನ ಹಡಗಲಿ, ಬಳ್ಳಾಾರಿ ಜಿಲ್ಲೆ
1998 : ಅಖಿಲ ಕರ್ನಾಟಕ ಜಾನಪದ ಸಮ್ಮೇಳನ
2000 : ಜಾನಪದ ರಂಗ ಮಹೋತ್ಸವ – ರವೀಂದ್ರ ಕಲಾಕ್ಷೇತ್ರ – ಬೆಂಗಳೂರು.
2002 ಪ್ರಸಾರ ಭಾರತಿ ಆಕಾಶವಾಣಿ, ದಶಮಾನೋತ್ಸವ ಕಾರ್ಯಕ್ರಮ – ಹೊಸಪೇಟೆ
2003 : ರಾಜ್ಯ ಮಟ್ಟದ ಚೌಡಕಿಮೇಳ – ಸವದತ್ತಿಿ, ಧಾರವಾಡ ಜಿಲ್ಲೆ
2004 : ರಂಗಾಯಣ ಕಾರ್ಯಕ್ರಮ ಮತ್ತು ಜನಪದ ಉತ್ಸವ – ಮೈಸೂರು
2005 : ನವರಸ ಉತ್ಸವ – ಬಿಜಾಪುರ
2005 : ತಿಂಗಳ ಸೊಬಗು ಕಾರ್ಯಕ್ರಮ – ಮೈಸೂರು ಮತ್ತು ಬಿಜಾಪುರ
2006 : ರಾಜ್ಯ ಜಾನಪದ ಕಲಾಸಾಗರ- ರಾಮದುರ್ಗ, ಬೆಳಗಾವಿ ಜಿಲ್ಲೆ
2006 ಆಳ್ವಾಾಸ್ ನುಡಿಸಿರಿ ಕಾರ್ಯಕ್ರಮ – ಮೂಡಬಿದರೆ
2006 : ದಸರಾ ನಾಡಹಬ್ಬ – ರಾಯಚೂರು
2006 : ಸುವರ್ಣ ಕರ್ನಾಟಕ ಸಾಂಸ್ಕೃತಿಕ ಕಾರ್ಯಕ್ರಮ – ಬಳ್ಳಾಾರಿ
2006 : ರಾಜ್ಯೋೋತ್ಸವ ಕಾರ್ಯಕ್ರಮ ಚಿನ್ನಸ್ವಾಾಮಿ ಕ್ರೀಡಾಂಗಣ – ಬೆಂಗಳೂರು.
2006 : ಜಾನಪದ ಜಾತ್ರೆೆ ಹಲವು ಜಿಲ್ಲೆೆಗಳಲ್ಲಿ