Thursday, 19th September 2024

ಕಂದಕಕ್ಕೆ ಉರುಳಿದ ಯುಟಿಲಿಟಿ ವಾಹನ: 13 ಮಂದಿ ಸಾವು

ಡೆಹ್ರಾಡೂನ್: ಭೀಕರ ರಸ್ತೆ ಅಪಘಾತದಲ್ಲಿ ಯುಟಿಲಿಟಿ ವಾಹನ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 13 ಜನರು ಮೃತಪಟ್ಟಿದ್ದಾರೆ.

ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ಚಕ್ರತಾ ಪ್ರದೇಶದ ಬುಲ್ಹಾದ್-ಬೈಲಾ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೈಲಾ ಗ್ರಾಮದಿಂದ ವಿಕಾಸ ನಗರಕ್ಕೆ ಹೋಗುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. 16 ಜನರು ಯುಟಿಲಿಟಿ ವಾಹನದಲ್ಲಿದ್ದರು.

 

ಸ್ಥಳಕ್ಕೆ ಎಸ್ ಡಿ ಆರ್ ಎಫ್ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ದುರ್ಗಮ ಪ್ರದೇಶ ವಾದ್ದರಿಂದ ಮೃತದೇಹ ಗಳನ್ನು ಹೊರತೆಗೆಯುವ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ.