Thursday, 24th October 2024

ರಜನಿಕಾಂತ್ ಅಭಿಮಾನಿಯಿಂದ ರೂಪಾಯಿಗೆ ದೋಸೆ ಮಾರಾಟ

ಚೆನೈ: ನಟ ರಜಿನಿ ಪ್ರಸ್ತುತ ಸಿರುತೈ ಶಿವ ನಿರ್ದೇಶನದ ಅಣ್ಣಾತೆ ಚಿತ್ರದಲ್ಲಿ ನಟಿಸು ತ್ತಿದ್ದಾರೆ. ದೀಪಾವಳಿಗೆ ಚಿತ್ರ ಬಿಡುಗಡೆ ಯಾಗಿದೆ. ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು ಜನರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ಅಣ್ಣಾತೆ ಸಿನಿಮಾ ಬಿಡುಗಡೆಯ ಸಂಭ್ರಮಾಚರಣೆಗಾಗಿ ರೆಸ್ಟೋ ರೆಂಟ್ ನಡೆಸುತ್ತಿರುವ ತಿರುಚ್ಚಿಯ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಹೋಟೆಲ್ ನಲ್ಲಿ ಕೇವಲ ಒಂದು ರೂಪಾಯಿಗೆ ದೋಸೆ ಮಾರಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಅಣ್ಣಾತೆಗಾಗಿ ಇಂಥದ್ದೊಂದು ವಿಶೇಷ ಆಫರ್ ಕೊಟ್ಟಿದ್ದೇನೆ ಎಂದರು.

ವಿಷಯ ತಿಳಿದ ಆ ಭಾಗದ ಜನರು ಉತ್ಸಾಹದಿಂದ ಅಲ್ಲಿಗೆ ಧಾವಿಸಿ ತಿಂಡಿ ತಿಂದು ಅಭಿನಂದಿಸಿದರು.