Sunday, 5th January 2025

ಬೆಲೆ ಏರಿಕೆ ಎಂದರೆ ಬರೀ ಪೆಟ್ರೋಲ್ ಅಲ್ಲ 

#Petrol #Diesel

ಬೆಲೆ ಏರಿಕೆ ಎಂಬುದು ಚುನಾವಣೆಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದು ಸರಕಾರಕ್ಕೆ ಇದೀಗ ಮನವರಿಕೆಯಾಗಿದೆ. ಈ ಕಾರಣದಿಂದಲೇ ಡಿಸೇಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಇದನ್ನು ಅನುಸರಿಸಿದ ರಾಜ್ಯ ಸರಕಾರ ಕೂಡ ರಾಜ್ಯ ದಲ್ಲಿಯೂ ತೆರಿಗೆ ಕಡಿತಗೊಳಿಸಿದೆ.

ಹೀಗಾಗಿ, ಒಟ್ಟು 12 ರು. ಪೆಟ್ರೋಲ್ ಮೇಲೆ, 17 ರು.ನಷ್ಟು ಡೀಸೆಲ್ ಮೇಲೆ ತೆರಿಗೆ ಕಡಿಮೆಯಾಗಿದೆ. ಹೀಗಾಗಿ, ಇಷ್ಟು ಕಡಿಮೆ ಬೆಲೆಗೆ ಇಂಧನ ಸಿಗುತ್ತಿದೆ. ಆ ಮೂಲಕ ಸರಕಾರಗಳು ಜನರು ಬೆಲೆ ಏರಿಕೆ ಮಾಡಿದರೆ ಚುನಾ ವಣೆಗಳಲ್ಲಿ ಪಾಠ ಕಲಿಸುತ್ತಾರೆ ಎಂಬುದನ್ನು ಅರಿತುಕೊಂಡಿವೆ. ಆದರೆ, ಬೆಲೆ ಏರಿಕೆ ಎಂದರೆ ಪೆಟ್ರೋಲ್ ಮತ್ತು ಡಿಸೇಲ್ ಮಾತ್ರವಲ್ಲ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಬೆಲೆ ಏರಿಕೆಯಿಂದ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ. ಇದರಿಂದ ಸಾಮಾನ್ಯ ಜನರು ಕೆಟ್ಟ ಪರಿಣಾಮ ಎದುರಿಸುತ್ತಾರೆ ಎಂಬುದು ಸತ್ಯವೇ ಆದರೂ, ಸಿಲಿಂಡರ್ ಮತ್ತು ವಾಣಿಜ್ಯ ಸಿಲಿಂಡರ್‌ಗಳ ಮೇಲೆಯೂ ಬೆಲೆ ನಿರಂತರವಾಗಿ ಏರಿಕೆಯಾಗು ತ್ತಿದೆ. ಇದರ ಪರಿಣಾಮವಾಗಿ ಈಗ ಹೊಟೇಲ್‌ಗಳು ತಮ್ಮ ಉತ್ಪನಗಳ ಬೆಲೆ ಏರಿಕೆ ಮಾಡಲು ತೀರ್ಮಾನಿ ಸಿವೆ.

ಈ ತೀರ್ಮಾನದಿಂದ ಹೊಟೇಲ್‌ಗಳನ್ನೇ ಅವಲಂಭಿಸಿರುವ ಸಾವಿರಾರು ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈಗಾಗಲೇ ಕರೋನಾ ಸಂಕಷ್ಟದಿಂದ ನಷ್ಟ ದಲ್ಲಿರುವ ಹೊಟೇಲ್ ಉದ್ಯಮಿಗಳಿಗೂ ಬೆಲೆ ಏರಿಕೆ ಮಾಡಬೇಕಿರುವ ಅನಿವಾರ್ಯವಿದೆ. ಸಂಕಷ್ಟದಲ್ಲಿರವಾಗ 2000 ರು.ಗೆ ಸಿಲಿಂಡರ್ ಖರೀದಿ ಮಾಡಿ, ತಮ್ಮ ಉತ್ಪನಗಳ ಬೆಲೆ ಏರಿಕೆ ಮಾಡದಿದ್ದರೆ ನಷ್ಟ ಎದುರಿಸಬೇಕಾಗುತ್ತದೆ ಎಂಬ ಆತಂಕವಿದೆ. ಈ ಎಲ್ಲ ಆತಂಕಗಳ ಹಿನ್ನೆಲೆಯಲ್ಲಿ ಊಟ ಮತ್ತು ತಿಂಡಿಗಳ ಮೇಲಿನ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಹೀಗೆ ದಿನನಿತ್ಯ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಹೋದರೆ ಸಾಮಾನ್ಯ ಜನರ ಬದುಕು ಆತಂಕಕ್ಕೆ ದೂಡಲ್ಪಡುತ್ತದೆ. ಇಂತಹ ಪ್ರಯತ್ನಕ್ಕೆ ಸಾಮಾನ್ಯ ಜನರು ಚುನಾವಣೆಗಳಲ್ಲಿಸ ಏಡು ತೀರಿಸಿಕೊಳ್ಳುವ ಪ್ರಯತ್ನ ಮಾಡುವುದು ಸಹಜ.

ಇತ್ತೀಚೆಗೆ ದೇಶದಲ್ಲಿ ನಡೆದ 29 ಕ್ಷೇತ್ರದ ಉಪಚುನಾವಣೆಗಳ ಪೈಕಿ 8 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ನೆಲ ಕಚ್ಚಿದೆ. ಇದಕ್ಕೆ ಸಾಮಾನ್ಯ ಜನರ ಮೇಲಿನ ಬೆಲೆ ಏರಿಕೆ ಬರೆಯೇ ಕಾರಣ ಎಂಬುದನ್ನು ಸರಕಾರಗಳು ಒಪ್ಪಿಕೊಂಡಿವೆ. ಇದೇ ಕಾರಣಕ್ಕೆ ಈಗ ಬೆಲೆ ಇಳಿಕೆ ಮಾಡು ವಂತಹ ಪ್ರಯತ್ನ ನಡೆಸುತ್ತಿವೆ. ಈ ಪ್ರಯತ್ನ ಪೆಟ್ರೋಲ್ ಮತ್ತು ಡಿಸೇಲ್‌ಗೆ ಮಾತ್ರವೇ ಸೀಮಿತವಾಗದೆ, ಸಾಮಾನ್ಯ ಜನರಿಗೆ ಬೇಕಿರುವ ಎಲ್ಲ ಅಗತ್ಯವಸ್ತು ಗಳ ಮೇಲಿನ ಬೆಲೆಗಳನ್ನು ನಿಯಂತ್ರಣದಲ್ಲಿಡುವ ಪ್ರಯತ್ನವಾಗಬೇಕು. ಆಗ ಮಾತ್ರ ಬೆಲೆ ಏರಿಕೆಯ ಬಿಸಿ ತಟ್ಟದಂತೆ ಬಡ, ಮಧ್ಯಮ ವರ್ಗವನ್ನು ಕಾಪಾಡಬಹುದು. ಈ ನಿಟ್ಟಿನಲ್ಲಿ ಸರಕಾರಗಳು ಯೋಚಿಸುವಂತಾಗಲಿ ಎಂಬುದಷ್ಟೇ ಜನರಿಗೆ ಉಳಿದಿರುವ ಆಶಯ.

Leave a Reply

Your email address will not be published. Required fields are marked *