Monday, 25th November 2024

ಹಣದ ಹಿಂದೆ ಬಿದ್ದ ಸ್ನೇಹಿತರು ಗೋವಿಂದ ಗೋವಿಂದ

ಚಂದನವನದಲ್ಲಿ ವಿಭಿನ್ನ ಪ್ರಯೋಗಗಳು ನಡೆಯುತ್ತಿವೆ. ವಿಭಿನ್ನ ಕಥೆಯ ಹೊಸ ಹೊಸ ಚಿತ್ರಗಳು ತೆರೆಗೆ ಬರುತ್ತಿವೆ. ಅವುಗಳಲ್ಲಿ ಗೋವಿಂದ ಗೋವಿಂದ ಚಿತ್ರವೂ ಒಂದು. ಚಿತ್ರದ ಟೈಟಲ್ ಕೇಳಿದಾಕ್ಷಣ ಇದು ಪಕ್ಕಾ ಕಾಮಿಡಿಯ ಸಿನಿಮಾ ಅನ್ನುವುದು ಖಚಿತ ವಾಗುತ್ತದೆ.

ಅಂದುಕೊಂಡಂತೆ ಅದು ಸತ್ಯವೂ ಹೌದು. ಗೋವಿಂದ ಗೋವಿಂದ ಅಪ್ಪಟ ಕಾಮಿಡಿಯ ಕಥೆ. ಹಾಗಂತ ಈ ಹಿಂದೆ ಬಂದಿರುವ ಕೆಲವು ಕಾಮಿಡಿ ಚಿತ್ರಗಳಂತೆ ಇಲ್ಲಿ, ಅಶ್ಲೀಲ ಸಂಭಾಷಣೆ ಇಲ್ಲ. ಬದಲಾಗಿ ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆ ಹೇಳಿ ನಗಿಸುವ ಅಪ್ಪಟ ಕನ್ನಡಿಗರ ಚಿತ್ರ. ಹಾಗಾಗಿಯ ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ ಯು ಪ್ರಮಾಣ ಪತ್ರ ನೀಡಿದೆ. ಈ ಚಿತ್ರವನ್ನು ಕಟುಂಬ ಸಮೇತ ಕುಳಿತು ನೋಡಲು ಯಾವುದೇ ಅಡ್ಡಿ ಇಲ್ಲ.

ಗೆಳೆಯರ ವ್ಯಥೆ: ಈ ಒತ್ತಡದ ಜೀವನದಲ್ಲಿ ಹಣ ಸಂಪಾದಿಸಬೇಕು, ಅಂದುಕೊಂಡಂತೆ ಬದುಕಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅಂತೆಯೇ ಇಲ್ಲಿ ಸ್ನೇಹಿತರ ತಂಡ ವೊಂದು ಹಣ ಸಂಪಾದಿಸಲು ಅಡ್ಡ ದಾರಿ ಹಿಡಿಯುತ್ತಾರೆ. ಹಾಗಂತ ಇವರು ಯಾರಿಗೂ ಮೋಸ ಮಾಡಬೇಕು, ದರೋಡೆ ಮಾಡಬೇಕು ಎಂಬ ಉದ್ದೇಶದಿಂದ ಹಣ ಸಂಪಾದಿಸಲು ಅನ್ಯ ಮಾರ್ಗ ಹಿಡಿಯವು ದಿಲ್ಲ. ಕೆಲವು ಗೆಳೆಯರ ಉಪಾಯದಿಂದ ಈ ವೃತ್ತಿಗೆ ಕಾಲಿಡು ತ್ತಾರೆ. ಅಲ್ಲಿ ನೂರೆಂಟು ಸಮಸ್ಯೆಗಳು ಉದ್ಭವಿಸುತ್ತವೆ.

ತಮಗೆ ಎದುರಾದ ಸಮಸ್ಯೆ ಗಳಿಂದ ಹೊರಬರಲು ಚಡಪಡಿಸುತ್ತಾರೆ. ಈ ಚಡಪಡಿಕೆ ಯನ್ನು ಹಾಸ್ಯದ ಮೂಲಕ ತೆರೆಯಲ್ಲಿ ತೋರಿಸಿ ದ್ದಾರೆ ನಿರ್ದೇಶಕ ತಿಲಿಕ್. ಹಣ ಮಾಡಲು ತೆರಳಿ ತಾವು ಸಿಲುಕಿ ಕೊಂಡಿದ್ದ ವ್ಯೂಹದಿಂದ ಸ್ನೇಹಿತರು ಹೇಗೆ ಪಾರಾಗುತ್ತಾರೆ ಎಂಬುದೇ ಚಿತ್ರದ ಕಥೆ. ಮಾಮುಲಿಯಂತೆ ಸಂದೇಶದ ಬದಲು ಇಲ್ಲಿ ಮನರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ. ಈ ಹಿಂದೆ ತಿರುಪತಿ ಎಕ್ಸ್‌ಪ್ರೆಸ್ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಸುಮಂತ್ ಶೈಲೇಂದ್ರ ಗೋವಿಂದ ಗೋವಿಂದ ಚಿತ್ರದ ನಾಯಕನಾಗಿ ನಟಿಸಿದ್ದಾರೆ.

***

ನಾನು ರವಿ ಆರ್ ಗರಣಿ ಅವರ ಗರಡಿಯಲ್ಲಿ ಪಳಗಿದವನು. ನನಗೂ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಆಸೆ ಬಹುದಿನ ಗಿಂದಲೂ ಇತ್ತು. ಅದಕ್ಕಾಗಿ ಕಥೆ ಹುಡುಕುವಾಗ ಈ ಸ್ಟೋರಿ ಹೊಳೆಯಿತು. ಈ ಕಥೆಯನ್ನೇ ಯಾಕೆ ವಿಭಿನ್ನವಾಗಿ ತೆರೆಗೆ ತರಬಾರದು ಎಂದು ಕೊಂಡೆ, ಅಂತೆಯೇ ಚಿತ್ರ ಕಥೆ ಸಿದ್ಧವಾಯಿತು. ಅಂದುಕೊಂಡಂತೆ ಚಿತ್ರ ಮೂಡಿಂದಿದೆ. ಉತ್ತರ ಕರ್ನಾಟಕದ ಸೊಗಡಿನ ಸಂಭಾಷಣೆ ಚಿತ್ರದುದ್ದಕ್ಕೂ ಮನರಂಜನೆ ನೀಡುತ್ತದೆ. ರವಿ ಆರ್ ಗರಣಿ, ಶೈಲೇಂದ್ರ ಬಾಬು ಹಾಗೂ ಕಿಶೋರ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಲಿದ್ದಾರೆ. ಚಿತ್ರವನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ನಂಬಿಕೆ ನಮಗಿದೆ.
-ತಿಲಕ್ ನಿರ್ದೇಶಕ