ಆದರ್ಶ್ ಶೆಟ್ಟಿ ಉಪ್ಪಿನಂಗಡಿ, ಪುತ್ತೂರು
ವಿಶ್ವದಲ್ಲೇ ಅತೀ ದೊಡ್ಡ ಸರಕಾರಿ ಪ್ರಾಾಯೋಜಿತ ಆರೋಗ್ಯ ಯೋಜನೆ ಎಂಬ ಖ್ಯಾಾತಿಗೆ ಪಾತ್ರವಾದ ಆಯುಷ್ಮಾಾನ್ ಭಾರತ ಯೋಜನೆಯ ಬಗೆಗಿನ ಜನರಲ್ಲಿನ ಗೊಂದಲಗಳು ಇನ್ನೂ ಜೀವಂತವಾಗಿ ಉಳಿದಿದೆ. ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಹೃದಯಾಘಾತ, ಕ್ಯಾಾನ್ಸರ್, ಶಸ್ತ್ರಚಿಕಿತ್ಸೆೆ ಸೇರಿದಂತೆ ನೂರಾರು ಆರೋಗ್ಯ ಸಮಸ್ಯೆೆಗೆ ಈ ಯೋಜನೆಯಡಿ ಚಿಕಿತ್ಸೆೆ ಪಡೆಯಬಹುದೆಂಬುವುದು ಈ ಯೋಜನೆಯ ಉದ್ದೇಶ. ಇದರಲ್ಲಿ ಪ್ರತಿ ಬಡಕುಟುಂಬದ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಿಗಳಿಗೆ 5 ಲಕ್ಷ ರು. ಮೊತ್ತದ ವೈದ್ಯಕೀಯ ಚಿಕಿತ್ಸಾಾ ವೆಚ್ಚ ಉಚಿತವಾದರೆ, ಬಡತನ ರೇಖೆಗಿಂತ ಮೇಲೆ ಇರುವ ಎಪಿಎಲ್ ಕುಟುಂಬಕ್ಕೆೆ ಚಿಕಿತ್ಸಾಾ ವೆಚ್ಚದ ಶೇ.30 ರಷ್ಟು ನೆರವು ಅಂದರೆ ಗರಿಷ್ಠ 1.5 ಲಕ್ಷ ರೂ ತನಕ ವೈದ್ಯಕೀಯ ನೆರವು ದೊರಕುತ್ತದೆ. ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರ ಅಥವಾ ಸೈಬರ್ ಸೆಂಟರ್ಗಳಲ್ಲಿ
ಆಧಾರ್ ಮತ್ತು ಪಡಿತರ ಚೀಟಿ ನೀಡಿ ಬೆರಳಚ್ಚು ನೀಡಿದಾಕ್ಷಣ ಕ್ಷಣ ಮಾತ್ರದಲ್ಲೇ ಆರೋಗ್ಯ ಕಾರ್ಡ್ ಪಡೆಯಬಹುದಾಗಿದೆ.
ಈ ಯೋಜನೆಯಿಂದ ಈಗಾಗಲೇ ಲಕ್ಷಾಂತರ ಜನರು ಉಪಯೋಗವನ್ನು ಪಡೆದುಕೊಂಡಿದ್ದು, ಈ ಯೋಜನೆಯನ್ನು ಪಡೆದುಕೊಳ್ಳಲು ನಿಗದಿಪಡಿಸಿರುವ ಮಾನದಂಡಗಳನ್ನೇ ಕೆಲವು ಆಸ್ಪತ್ರೆೆಗಳು ದುರುಪಯೋಗಪಡಿಸಿಕೊಂಡು ಗ್ರಾಾಮೀಣ ಹಳ್ಳಿಿಗಾಡಿನ ರೋಗಿಗಳನ್ನು, ಅವಿದ್ಯಾಾವಂತ ಬಡಜನರನ್ನು ದಿಕ್ಕು ತಪ್ಪಿಿಸುವ ಕೆಲಸಗಳನ್ನು ನಡೆಸುತ್ತಿಿವೆ ಎಂಬ ಆರೋಪಗಳು ವ್ಯಕ್ತವಾಗುತ್ತಿಿವೆ.
ಒಬ್ಬ ವ್ಯಕ್ತಿಿಗೆ ಅಪಘಾತವಾದಾಕ್ಷಣ ಅಥವಾ ಇನ್ನಿಿತರ ಯಾವುದೇ ಅವಘಡಗಳು ಸಂಭವಿಸಿದಾಕ್ಷಣ ಆಯುಷ್ಮಾಾನ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ಪ್ರಪ್ರಥಮವಾಗಿ ರೋಗಿಯನ್ನು ಸರಕಾರಿ ಆಸ್ಪತ್ರೆೆಗೆ ದಾಖಲಿಸಿ ನೋಂದಣಿ ಮಾಡಿದ ಬಳಿಕ ಮತ್ತು ಆಸ್ಪತ್ರೆೆಯ ವೈದ್ಯಾಾಧಿಕಾರಿಗಳು ಬರೆದುಕೊಟ್ಟ ನಂತರ ಯಾವುದೇ ಖಾಸಗಿ ಆಸ್ಪತ್ರೆೆಗೆ ದಾಖಲಿಸಬಹುದು. ನಂತರ ಆಯುಷ್ಮಾಾನ್ ಭಾರತ ಆರೋಗ್ಯ ಕಾರ್ಡ್ನ ಧನಸಹಾಯ ದೊರಕುತ್ತದೆ. ಅದರಲ್ಲೂ ಬಿಪಿಎಲ್ ಕಾರ್ಡ್ದಾರ ಈ ಆರೋಗ್ಯ ಕಾರ್ಡ್ ಹೊಂದಿದ್ದರೆ 5 ಲಕ್ಷ ರು.ವರೆಗೆ ವೈದ್ಯಕೀಯ ನೆರವು ದೊರೆಯುತ್ತದೆ. ಒಬ್ಬ ವ್ಯಕ್ತಿಿಯ ಶಸ್ತ್ರಚಿಕಿತ್ಸೆೆಗೆ ಹಾಗೂ ಆಯಾಯ ಅಂಗಗಳಲ್ಲಿ ಉಂಟಾದ ನ್ಯೂನ್ಯತೆಗಳಿಗೆ ಇಂತಿಷ್ಟು ಎಂಬ ನೆರವಿನ ಮಾನದಂಡಗಳಿವೆ. ಅದರ ಹೊರತು ಯಾವುದೇ ಪ್ರಾಾಥಮಿಕ ಹಂತದ ಕಾಯಿಲೆ, ಶಸ್ತ್ರಚಿಕಿತ್ಸೆೆಗಳಿಗೆ ಏಕಕಾಲದಲ್ಲಿ 5 ಲಕ್ಷ ರು. ಚಿಕಿತ್ಸಾಾ ವೆಚ್ಚ ದೊರಕುವುದಿಲ್ಲ. ಆದರೆ ಇದನ್ನು ರೋಗಿಗಳಿಗೆ ಸರಿಯಾಗಿ ಅರ್ಥೈಸದೆ ಆರೋಗ್ಯ ಕಾರ್ಡ್ ಹೊಂದಿದ್ದರೆ ಯಾವುದೇ ಕಾಯಿಲೆಗಳಿಗೂ 5 ಲಕ್ಷ ರು. ದೊರಕುವುದೆಂಬ ತಪ್ಪುುಮಾಹಿತಿ ಬಹುತೇಕ ಜನಸಾಮಾನ್ಯರಲ್ಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗ್ರಾಾಮಮಟ್ಟದಲ್ಲಿ ಜನಸಾಮಾನ್ಯರಿಗೆ ಅರಿವು, ಜಾಗೃತಿ ಮೂಡಿಸುವ ಅವಶ್ಯಕತೆಯಿದೆ.
ಕೆಲ ಖಾಸಗಿ ಆಸ್ಪತ್ರೆೆಗಳು ಏನೂ ತಿಳಿಯದ ಬಡಜನರಿಗೆ ಆಯುಷ್ಮಾಾನ್ ಕಾರ್ಡ್ ಹೊಂದಿದ್ದರೂ ನಿಮ್ಮ ಕಾರ್ಡ್ ನಮ್ಮ ಆಸ್ಪತ್ರೆೆ
ವ್ಯಾಾಪ್ತಿಿಗೊಳಪಡುವುದಿಲ್ಲ ಎಂದು ಹಣ ಪಾವತಿಸುವಂತೆ ಪೀಡಿಸುವ ಘಟನೆಗಳು, ಆಯುಷ್ಮಾಾನ್ ಕಾರ್ಡ್ ಹೊಂದಿರುವ ರೋಗಿಗಳನ್ನು ನಾಲ್ಕು ದಿನಗಳಿಗಿಂತ ಹೆಚ್ಚು ಒಳರೋಗಿಗಳಾಗಿ ಇಟ್ಟುಕೊಳ್ಳಲಾಗುವುದಿಲ್ಲ ಎಂದು ತಾಕೀತು ಮಾಡಿ ಹಣ ಪಡೆಯುವ ಘಟನೆಗಳು ಕೆಲವು ಖಾಸಗಿ ಆಸ್ಪತ್ರೆೆಗಳಲ್ಲಿ ಕಂಡುಬರುತ್ತಿಿವೆ. ಇದರಿಂದ ಕೆಲವು ಆಸ್ಪತ್ರೆೆಗಳೇ ಆಯುಷ್ಮಾಾನ್ ಯೋಜನೆಯ ಹಾದಿ ತಪ್ಪಿಿಸುತ್ತಿಿವೆಯೇ ಎಂಬ ಅನುಮಾನಗಳು ಕಾಡತೊಡಗುತ್ತವೆ.
ಇನ್ನು ಕೆಲ ಪ್ರತಿಷ್ಠಿಿತ ಖಾಸಗಿ ಆಸ್ಪತ್ರೆೆಗಳು ಗಂಭೀರ ಸ್ಥಿಿತಿಯಲ್ಲಿರುವ ರೋಗಿಗಳನ್ನು ವಾರಗಟ್ಟಲೆ ತುರ್ತು ನಿಗಾ ಘಟಕದಲ್ಲಿರಿಸಿ ಕೃತಕ ಉಸಿರಾಟವನ್ನು ನೀಡಿ ಲಕ್ಷಾಂತರ ರುಪಾಯಿ ಬಿಲ್ಲನ್ನು ರೋಗಿಯ ತಲೆಗೆ ಕಟ್ಟುವ ಪ್ರಕರಣಗಳು ಸಹ ಮಹಾನಗರಗಳಲ್ಲಿ ನಡೆಯುತ್ತಿಿವೆ. ಇನ್ನು ಇಷ್ಟೊೊಂದು ದೊಡ್ಡ ಮೊತ್ತವನ್ನು ಪಾವತಿಸಲು ಅಸಮರ್ಥರಾದಂತಹ ಸಂದರ್ಭಗಳಲ್ಲಿ ಹೆಣವನ್ನು ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಾಂತರಿಸಲು ಹಿಂದೇಟು ಹಾಕುವ ಘಟನೆಗಳೂ ಸಹ ಇವೆ. ಈ ಎಲ್ಲಾ ಪರಿಸ್ಥಿಿತಿಯಲ್ಲಿ ಉಳ್ಳವರು ಮೊತ್ತ ಭರಿಸಲು ಮುಂದಾಗುತ್ತಾಾರೆ. ಕೆಲವು ಬಡಕುಟುಂಬಗಳು ಇಂತಹ ದೊಡ್ಡ ಮೊತ್ತ ಕಟ್ಟಲಾಗದೆ ದಿಕ್ಕು ತೋಚದಂತಾಗುವ ಸ್ಥಿಿತಿಗೆ ತಲುಪುತ್ತಾಾರೆ. ಈ ಎಲ್ಲಾ ವ್ಯವಸ್ಥೆೆಗಳಲ್ಲಿ ಸುಧಾರಣೆಗಳನ್ನು ತರುವಲ್ಲಿ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿವಹಿಸುವ ಅವಶ್ಯಕತೆ ಕಂಡುಬರುತ್ತಿಿದೆ.