ಪಣಜಿ: ಹಡಗಿನಲ್ಲಿದ್ದ 2000 ಜನ ಪ್ರವಾಸಿಗರ ಪೈಕಿ 66 ಜನರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಡಗನ್ನು ಪ್ರವಾಸಿಗರ ಸಮೇತವಾಗಿ ಮುಂಬೈಗೆ ವಾಪಸ್ಸು ಕಳುಹಿಸಲಾಗುತ್ತಿದೆ.
ಹಡಗಿನಲ್ಲಿದ್ದ ಪ್ರವಾಸಿಗರ ಆರ್ಪಿ್ಸಿಆರ್ ತಪಾಸಣೆ ನಡೆಸಲಾಗಿದ್ದು, ಅದರಲ್ಲಿ 66 ಜನ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಕಾರ್ಡೆಲಿಯಾ ಕ್ರೂಜ್ ಹಡಗಿನಲ್ಲಿದ್ದ ಪ್ರಯಾಣಿಕರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲ ಪ್ರವಾಸಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಹಡಗು ವಾಸ್ಕೊ ಮುರಗಾಂವ ಬಂದರು ಪ್ರವೇಶಿಸಲು ನಿರಾಕರಿಸಲಾಗಿತ್ತು. ಇದರಿಂದಾಗಿ ಒಂದು ವಾರಗಳ ಕಾಲ ಸಮುದ್ರ ಮಧ್ಯ ದಲ್ಲಿಯೇ ನಿಲ್ಲುವಂತಾಗಿತ್ತು.