Monday, 25th November 2024

ಗಾಯಕಿ ಲತಾ ಮಂಗೇಶ್ಕರ್’ಗೆ ಕರೋನಾ

ಮುಂಬೈ: ಗಾಯಕಿ ಲತಾ ಮಂಗೇಶ್ಕರ್ ಅವರು ಕರೋನಾ ವೈರಸ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಚಿಕಿತ್ಸೆಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗಾಗಲೇ ಅನೇಕ ಜನಪ್ರತಿನಿಧಿಗಳು, ನಟ-ನಟಿಯರಿಗೆ ಕೊರೋನಾ ಸೋಂಕು ತಗುಲಿತ್ತು. ಈಗ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗೇಶ್ಕರ್ ಹಿಂದಿ, ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವರ ಕೊನೆಯ ಪೂರ್ಣ ಆಲ್ಬಂ ದಿವಂಗತ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ನಿರ್ದೇಶನದ 2004ರ ಚಲನಚಿತ್ರ ‘ವೀರ್ ಜಾರಾ’ ಆಗಿತ್ತು.

ಮಂಗೇಶ್ಕರ್ ಅವರು 2021ರಲ್ಲಿ ತಮ್ಮ ಕೊನೆಯ ಹಾಡನ್ನು ರೆಕಾರ್ಡ್ ಮಾಡಿದರು – ‘ಸೌಗಂದ್ ಮುಜೆ ಈಸ್ ಮಿಟ್ಟಿ ಕಿ’, ಇದು ಮಾರ್ಚ್ 30, 2021ರಂದು ಭಾರತೀಯ ಸೇನೆಗೆ ಗೌರವ ಸೂಚಕವಾಗಿ ಬಿಡುಗಡೆಯಾಯಿತು. ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಇದು 2001ರಲ್ಲಿ ಅತ್ಯುನ್ನತ ನಾಗರಿಕ ಗೌರವವಾಗಿದೆ.