ಕಳವಳ
ಡಾ. ಮಲ್ಲಿಕಾರ್ಜುನ ಗುಮ್ಮಗೋಳ
ತನಗೆ ಏನಾದರೂ ಸಿಗುತ್ತದೆ ಎಂಬ ಕಾರಣಕ್ಕೆೆ ಆತನ ವಂದಿಮಾಗಧ ಪರಿಚಾರಕರು ಕಳ್ಳ ನಾಯಕನನ್ನು ಆರಾಧಿಸ ಅಂಗಾಲು ನೆಕ್ಕುವ, ಆತ್ಮವಂಚನೆಯಿಲ್ಲದೆ ಬಹುಪರಾಕ ಹೇಳುವ ಈ ಮಹಾಕೂಟವನ್ನು ಜನತಂತ್ರ ಎಂದು ಹೇಗೆ ಕರೆಯುವುದು?
ಜೈಲಿಗೆ ಹೋಗಿ ಬರುವುದೆಂದರೆ ವಿಜಯ ವಿಕ್ರಮವೆ? ತನಗೆ ಕಾನೂನು ಮತ್ತು ನ್ಯಾಾಯದ ರಕ್ಷಣೆ ಸಿಗುತ್ತದೆ ಎಂಬ ಭರವಸೆ ವ್ಯಕ್ತಿಿಗೆ ಇದ್ದರೆ ಮಾತ್ರ ಆತ ನಿರ್ಭೀತಿಯಿಂದ ವರ್ತಿಸುತ್ತಾಾನೆ. ಆರ್ಥಿಕ ಸಮಾನತೆ ನಿರ್ಮಾಣವಾಗಿ ಎಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತಿಿಯಲ್ಲಿ ಒಡಮೂಡಿದಾಗ ಮಾತ್ರ ಆತನ ಮನಸ್ಸಿಿನಲ್ಲಿನ ಅಸೂಯೆ, ಅಸಹನೆ, ಅಪನಂಬಿಕೆ ಮಾಯವಾಗುತ್ತದೆ. ತನ್ನ ಅಗತ್ಯಗಳಿಗಾಗಿ ಇನ್ನೊೊಬ್ಬರ ಹಂಗಿನಲ್ಲಿ ಬೀಳುವ ಮನುಷ್ಯ ಸಹಜವಾಗಿ ಕೊಡುವವನು ಕಳ್ಳನು, ಅನೀತಿವಂತನು ಆಗಿದ್ದರೂ ಆತನನ್ನು ಆರಾಧಿಸುತ್ತಾಾನೆ. ಆತನಿಗೆ ಅಧೀನನಾಗಿ ಬದುಕುತ್ತಾಾನೆ. ಇಂತಹ ಸಾಮಾಜಿಕ ಸ್ಥಿಿತಿ ಉಳಿಗಮಾನ್ಯಶಾಹಿ(ಫ್ಯೂೂಡಲ್) ಭಾರತದಲ್ಲಿ ಇತ್ತು. ಸ್ವಾಾತಂತ್ರ್ಯ ಸಿಕ್ಕಮೇಲೂ ಅದು ಬದಲಾಗಿಲ್ಲ ಎಂದರೆ ಅದಕ್ಕಿಿಂತ ದುರಂತ ಮತ್ತೊೊಂದಿಲ್ಲ. ಅಧಿಕಾರ ದುರುಪಯೋಗ, ಲೂಟಿ, ಕಳ್ಳತನ, ಹವಾಲಾ, ಕಿಕ್ ಬ್ಯಾಾಕ್ ಮುಂತಾದ ಅಕ್ರಮ ದಂಧೆಗಳ ಮೂಲಕ ಹಣ ಸಂಪಾದಿಸಿದವರು, ಕೊಲೆ, ಅತ್ಯಾಾಚಾರ ಮಾಡಿದವರು ಜೈಲಿಗೆ ಹೋಗಿ ಕಾನೂನು/ಶಿಕ್ಷೆ ಎಂಬ ದುರ್ಬಲ ಬಲೆಯನ್ನು ಹರಿದು ಹೊರಗೆ ಬರುತ್ತಾಾರೆ. ಜನ ಅವರನ್ನು ಹೆಗಲ ಮೇಲೆ ಹೊತ್ತು ಕೇಕೆ ಹಾಕುತ್ತ ಕಂಡು ಕೇಳರಿಯದ ವಸ್ತುಗಳ ಹಾರ, ತುರಾಯಿ ಹಾಕಿ, ತೇರು, ಪಲ್ಲಕ್ಕಿಿಯಲ್ಲಿ ಕುಳ್ಳಿಿರಿಸಿ ಅದ್ಧೂರಿ ಮೆರವಣಿಗೆಯಲ್ಲಿ ಜೈಲಿನಿಂದ ಕರೆತರುತ್ತಾಾರೆ. ಎಂತಹ ನಾಚಿಕೆಗೇಡಿನ ವಿಜಯೋತ್ಸವ ಇದು! ಆ ಜನರು ಅಥವಾ ಈ ಸಮಾಜ ಏನನ್ನು ಸಾಬೀತುಪಡಿಸಲು ಹೊರಟಿದೆ?
ಭಾರತ ಉಳಿಗಮಾನ್ಯ ಶಾಹಿಯ ಅನಾಗರಿಕ ಆಡಳಿತದಲ್ಲಿ ಇದ್ದಾಾಗ ಹೀಗೆಯೇ ಆಗುತ್ತಿಿತ್ತು. ಒಬ್ಬ ಅರಸ ತನ್ನ ಅರಮನೆ ಕಟ್ಟುವುದಕ್ಕಾಾಗಿ, ವಜ್ರ-ಚಿನ್ನದ ಸಿಂಹಾಸನ ಮಾಡಿಸುವುದಕ್ಕಾಾಗಿ, ಸಂಪತ್ತಾಾಭಿವೃದ್ಧಿಿಗಾಗಿ ಕೊಳ್ಳೆೆ ಹೊಡೆಯಲು ಶಸ್ತ್ರಗಳನ್ನು ಹಿಡಿದುಕೊಂಡು ಪುಂಡರ ಪಡೆಯನ್ನು ಕಟ್ಟಿಿಕೊಂಡು ಕಳ್ಳತನಕ್ಕೆೆ ಹೊರಡುತ್ತಿಿದ್ದ. ಅದನ್ನು ಆತ ಯುದ್ಧ, ದಂಡಯಾತ್ರೆೆ, ಸಾಮ್ರಾಾಜ್ಯ ವಿಸ್ತರಣೆ, ಕ್ಷಾತ್ರ, ಪರಾಕ್ರಮ ಎಂದು ಶಾಸನ ಬರೆಸುತ್ತಿಿದ್ದ. ಇನ್ನೊೊಬ್ಬರ ದುಡಿಮೆಯನ್ನು ಬಡಿದು ಕಸಿದುಕೊಳ್ಳುವುದನ್ನು ವಿಜಯವಿಕ್ರಮ ಎನ್ನಲು ಸಾಧ್ಯವೆ? ರಾಜರ ಕಾಲಕ್ಕೆೆ ರೈತರೆಲ್ಲ ಗುಲಾಮರಂತೆ ದುಡಿದು ಕಂದಾಯ ಕಟ್ಟಬೇಕಾಗಿತ್ತು. ಈಗಲೂ ಟ್ಯಾಾಕ್‌ಸ್ ಹೇರಿಕೆ ಕಡಿಮೆಯಾಗಿಲ್ಲ. ಸ್ವಾಾತಂತ್ರ್ಯ ಸಿಕ್ಕಮೇಲೂ ನಮ್ಮ ರಕ್ತದಲ್ಲಿ ಉಳಿದುಕೊಂಡ ಆ ಭಯ, ಬೆದರಿಕೆ ಅಥವಾ ನಂಬಿಕೆ ಇನ್ನೂ ಹೋಗದಿರುವುದನ್ನು ನೋಡಿದರೆ ಈ ಸಮಾಜ ಕಾನೂನು ಧರ್ಮ, ನ್ಯಾಾಯ-ನೀತಿ ಎಂಬ ನಾಗರಿಕತೆಯ ಕಡೆಗೆ ಬಂದೇ ಇಲ್ಲ ಎಂದು ಅನ್ನಿಿಸುತ್ತದೆ.
ತನಗೆ ಏನಾದರೂ ಸಿಗುತ್ತದೆ ಎಂಬ ಕಾರಣಕ್ಕೆೆ ಆತನ ವಂದಿಮಾಗಧ ಪರಿಚಾರಕರು ಕಳ್ಳ ನಾಯಕನನ್ನು ಆರಾಧಿಸ ಅಂಗಾಲು ನೆಕ್ಕುವ, ಆತ್ಮವಂಚನೆಯಿಲ್ಲದೆ ಬಹುಪರಾಕ ಹೇಳುವ ಈ ಮಹಾಕೂಟವನ್ನು ಜನತಂತ್ರ ಎಂದು ಹೇಗೆ ಕರೆಯುವುದು? ಅಧಿಕಾರದ ಬಲದಿಂದ ಯಾರನ್ನು ಬೇಕಾದರೂ ಜೈಲಿಗೆ ಕಳಿಸುವ, ದುಡಿಯದೆಯೂ ನೂರಾರು ಸಾವಿರಾರು ಕೋಟಿ ಸಂಪಾದಿಸುವ, ಹಣ ಬಲದಿಂದ ಅಧಿಕಾರ ಖರೀದಿಸುವ, ತೋಳ್ಬಲದಿಂದ ತನ್ನ ವಿರೋಧಿಗಳನ್ನು ಹತ್ಯೆೆ ಮಾಡುವ ತಾಕತ್ತು ಇರುವುದು ರಾಜಕಾರಣಕ್ಕೆೆ ಮಾತ್ರ. ಹಾಗಾದರೆ ನಮ್ಮನ್ನು ಆಳುವ ಪ್ರಜಾಪ್ರಭುಗಳು ಡಕಾಯಿತರಾದರೆ, ಅವರನ್ನು ಗೆಲ್ಲಿಸುವ ಆರಾಧಿಸುವ ಜನರು ಎಂಥವರು?
‘ನಾನು ಜೈಲಿನಲ್ಲಿ ಇದ್ದಾಾಗ ನನ್ನ ಅಭಿಮಾನಿಗಳು ಹಗಲು ರಾತ್ರಿಿ ನನ್ನ ಬಿಡುಗಡೆಗಾಗಿ ಪ್ರಾಾರ್ಥನೆ ಮಾಡಿದ್ದಾಾರೆ, ಹರಕೆ ಹೊತ್ತಿಿದ್ದಾಾರೆ, ಬೀದಿಗಿಳಿದು ಹೋರಾಟ ಮಾಡಿದ್ದಾಾರೆ, ನನಗಾಗಿ ಕಣ್ಣೀರು ಹಾಕಿದ್ದಾಾರೆ. ಅವರ ಋಣ ತೀರಿಸಬೇಕಾದ್ದು, ಉಪಕಾರ ಸ್ಮರಣೆ ಮಾಡಬೇಕಾದದ್ದು ನನ್ನ ಧರ್ಮ’ ಎಂದು ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾದ ರಾಜಕಾರಣಿಯೊಬ್ಬರು ಕೃತಜ್ಞತಾ ವಚನಗಳನ್ನು ಆಡಿದ್ದಾಾರೆ. ಋಣ ತೀರಿಸುವುದೆಂದರೆ ಏನು? ತನ್ನ ಅಧಿಕಾರ, ಅಕ್ರಮ ಸಂಪಾದನೆ ಬಳಸಿ ಅವರಿಗೆ ಸ್ಥಳೀಯ ಸಂಸ್ಥೆೆಗಳ ಅಧಿಕಾರ ದೊರಕಿಸಿ ಕೊಡುವುದು. ಯೋಜನೆ, ಕಾಮಗಾರಿಗಳ ಟೆಂಡರ್ ಕೊಡಿಸುವುದು. ಅವರು ಕಳಪೆ ಕಾಮಗಾರಿ ಮಾಡಿ ಅಥವಾ ಕೆಲಸವನ್ನು ಮಾಡದೆಯೇ ಗೋಲ್‌ಮಾಲ್ ಮಾಡಿ ಸಾರ್ವಜನಿಕರ ಹಣ ನುಂಗುವಂತೆ ಮಾಡುವುದೆ? ಹೀಗೆ ನುಂಗಿದ ಹಣದಿಂದ ತಮ್ಮ ಅಧಿನಾಯಕನಿಗೆ ಕಾಣಿಕೆ, ಸನ್ಮಾಾನ, ಹಾರ, ತುರಾಯಿ, ಮಾಲೀಸ್ ಮಸಾಜ್, ಬಹುಪರಾಕ ಮಾಡುವ ಕಾರ್ಯಕರ್ತರ ಸೋಗಿನ ಪುಢಾರಿಗಳು ತಮ್ಮ ನಾಯಕನನ್ನು ಹೆಗಲ ಮೇಲೆ ಏಕೆ, ತಮ್ಮ ಮನೆಯ ದೇವರ ಜಗುಲಿಯ ಮೇಲೆಯಾದರೂ ತಂದು ಕೂಡಿಸುತ್ತಾಾರೆ. ಇವರು ಒಂದು ರೀತಿ ನವಸಾಮ್ರಾಾಜ್ಯಶಾಹಿಯ ಮಾಂಡಲೀಕರು, ಸಾಮಂತರು.
ಜಾತಿ, ಮತ, ಊರು, ಪ್ರದೇಶ ಎಂಬ ಭಾವೋನ್ಮಾಾದವನ್ನು ಬಿತ್ತಿಿ ಸ್ವಲಾಭದ ಬೆಳೆ ತೆಗೆಯುವುದು ನವ ಪ್ರಜಾಪ್ರಭುತ್ವದ ಒಂದು ಮಾದರಿ. ಅಧಿಕಾರ ಸಿಕ್ಕಾಾಗ ತನ್ನ ಮತಕ್ಷೇತ್ರ, ಜಿಲ್ಲೆೆ, ತನ್ನ ಜಾತಿಮತದ ಕುಲಬಾಂಧವರಿಗೆ ಯೋಜನೆ-ಅನುದಾನಗಳನ್ನು ನೀಡುವುದು. ಆ ಮೂಲಕ ಸಂವಿಧಾನದತ್ತವಾಗಿ ತೆಗೆದುಕೊಂಡ ಪ್ರಮಾಣವಚನವನ್ನು ಮರೆತು ಸ್ವಜನ ಪಕ್ಷಪಾತ ಮಾಡಿ ತನ್ನ ಗೆಲುವನ್ನು, ಅಧಿಕಾರವನ್ನು ಭದ್ರಪಡಿಸಿಕೊಳ್ಳವುದು. ಇದು ಉಳಿಗಮಾನ್ಯ ಶಾಹಿಯಲ್ಲದೆ ಮತ್ತೇನು? ಅರಸೊತ್ತಿಿಗೆ ಕಾಲದಿಂದ ಆರಂಭಗೊಂಡ ಈ ಅನಾರ್ಕಿ ಮೊಗಲ್, ನಿಜಾಮರ ಕಾಲದಲ್ಲಿ ಅತ್ಯಂತ ಕ್ರೂರ ಸ್ವರೂಪವನ್ನು ಪಡೆದುಕೊಂಡಿತು. ಅವರು ಅಧಿಕಾರ ಮತ್ತು ಹೆಣ್ಣಿಿಗಾಗಿ ಹೆತ್ತ ತಂದೆಯನ್ನು, ಒಡಹುಟ್ಟಿಿದವರನ್ನು ನಿದರ್ಯವಾಗಿ ಹತ್ಯೆೆ ಮಾಡಿದರು. ಸಕಲ ಸಂಪತ್ತಿಿನ ಒಡೆತನ, ನ್ಯಾಾಯ, ಆಡಳಿತ, ಕಂದಾಯ, ಸುಲಿಗೆ, ಗುಲಾಮಗಿರಿ, ಹತ್ಯೆೆ, ಅತ್ಯಾಾಚಾರ ಮುಂತಾದವು ತನಗೆ ದೈವದತ್ತವಾಗಿ ಬಂದ ಅಧಿಕಾರ ಎಂದು ಭಾವಿಸಿದ್ದರು. ಇವತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ಶಾಸನ ರೂಪಿಸುವ ಚುನಾಯಿತರು ಅಂತಹದೇ ಮನಸ್ಥಿಿತಿಯನ್ನು ಬೆಳೆಸಿಕೊಂಡಿದ್ದಾಾರೆ. ಕಾನೂನು, ಶಾಸನಗಳಿಗಿಂತ ತಾವು ಅತೀತರು ಎಂದುಕೊಂಡಿದ್ದಾಾರೆ.
ದ್ವೇಷದ ರಾಜಕಾರಣದಿಂದ ಇದೆಲ್ಲ ನಡೆಯುತ್ತಿಿದೆಯಂತೆ! ಆರೋಪಿಯನ್ನು ಜೈಲಿಗೆ ಹಾಕುವ ಅಧಿಕಾರ ನ್ಯಾಾಯಾಲಯವನ್ನು ಬಿಟ್ಟು ಬೇರೆ ಯಾರಿಗೂ ಇಲ್ಲ. ನ್ಯಾಾಯಾಲಯಗಳು ದ್ವೇಷದ ರಾಜಕಾರಣ ಮಾಡುತ್ತಿಿವೆಯೆ?! ಈ ಸಂಶೋಧನೆ ಕುರಿತು ತನಿಖೆಯಾಗಲೇಬೇಕು! ಈ ಹಿಂದೆ ಜೈಲಿಗೆ ಹೋದವರನ್ನು ಬಹಿಷ್ಕರಿಸುತ್ತಿಿದ್ದರು. ಆದರೆ, ಈಗ ಅವರನ್ನು ಅದ್ಧೂರಿಯಾಗಿ ಸ್ವಾಾಗತಿಸುತ್ತಿಿದ್ದಾಾರೆ. ಅತ್ಯಂತ ಭ್ರಷ್ಟವ್ಯವ್ಥೆೆಯಲ್ಲಿ ನಾವು ಬದುಕುತ್ತಿಿದ್ದೇವೆ. ಜೈಲಿಗೆ ಹೋದವರು ಏನೂ ತಪ್ಪೇ ಮಾಡಿಲ್ಲ ಎಂಬಂತೆ ಸಂಭ್ರಮಿಸುತ್ತಿಿದ್ದಾಾರೆ. ಇದು ಯಾವ ಸೂಚನೆ ನೀಡುತ್ತದೆ? ಭ್ರಷ್ಟರನ್ನು ಆರಾಧಿಸುವ ಸಮಾಜ ಯಾವ ದಿಕ್ಕಿಿನತ್ತ ಹೋಗುತ್ತಿಿದೆ? ಎಂದು ನ್ಯಾಾ. ಸಂತೋಷ ಹೆಗ್ಡೆೆ ಹೇಳಿದ ಮಾತು ಕಿಂಚಿತ್ತಾಾದರೂ ಆತ್ಮಾಾವಲೋಕನಕ್ಕೆೆ ಹಚ್ಚಬೇಕು. ಧರ್ಮಸಂರಕ್ಷಣೆಯ ದೀಕ್ಷೆಪಡೆದ ಕಾವಿಧಾರಿಗಳೇ ಅಪರಾಧಿಗಳ ಬೆಂಬಲಕ್ಕೆೆ ನಿಲ್ಲುತ್ತಾಾರೆ ಎಂದರೆ ನೈತಿಕತೆ ಎಲ್ಲಿ ಉಳಿಯುತ್ತದೆ.