Wednesday, 27th November 2024

‘ಹಲ್ದಿ’ ವೇಳೆ 13 ಮಹಿಳೆಯರು ಬಾವಿಯಲ್ಲಿ ಮುಳುಗಿ ಸಾವು

ಕುಶಿನಗರ: ಉತ್ತರ ಪ್ರದೇಶದ ಕುಶಿನಗರದಲ್ಲಿ ಬುಧವಾರ ತಡರಾತ್ರಿ ಮದುವೆ ಸಮಾರಂಭವೊಂದ ರಲ್ಲಿ  ‘ಹಲ್ದಿ’ ಸಂಪ್ರದಾಯ ನಡೆಯುವ ವೇಳೆ 13 ಮಹಿಳೆಯರು ಬಾವಿಯಲ್ಲಿ ಮುಳುಗಿ ಮೃತಪಟ್ಟಿ ದ್ದಾರೆ.

ಬಾವಿಯ ಮೇಲಿನ ಕಬ್ಬಿಣದ ಹೊದಿಕೆಯ ಮೇಲೆ ಮಹಿಳೆಯರು ಕುಳಿತಿದ್ದರು ಎನ್ನಲಾಗಿದೆ. ಈ ವೇಳೆ ಅದು ಕುಸಿದಿದ್ದು ಮಹಿಳೆಯರು ಬಾವಿಗೆ ಬಿದ್ದಿದ್ದಾರೆ. ಕುಶಿನಗರದ ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ದುರ್ಘಟನೆ ಸಂಭವಿಸಿದೆ.

ಸ್ಥಳೀಯರು, ಪೊಲೀಸರು ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 15 ಮಹಿಳೆಯರನ್ನು ರಕ್ಷಿಸಲಾಯಿತಾದರೂ, 13 ಮಹಿಳೆಯರು ಘಟನೆಯಲ್ಲಿ ಮೃತಪಟ್ಟಿದ್ದಾರೆ.

ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಚುರುಕುಗೊಳಿಸುವಂತೆ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸಿಎಂ ಯೋಗಿ ಆದಿತ್ಯನಾಥ್‌ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ.