ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತ್ರಿಶೂರ್‌ನಲ್ಲಿ ಮಾತನಾಡಿ, ಹತ್ಯೆಗೀಡಾ ದವನು ಆರ್‌ಎಸ್‌ಎಸ್ ಕಾರ್ಯಕರ್ತ ನಾಗಿದ್ದು, ಡ್ರಗ್ ಮಾಫಿಯಾದ ಸದಸ್ಯರು ಅವರನ್ನು ನಿರ್ದಯವಾಗಿ ಇರಿದು ಕೊಂದಿದ್ದಾರೆ.
ಪ್ರಕರಣದ ಆರೋಪಿಗಳೆಲ್ಲರೂ ಸಿಪಿಐ(ಎಂ) ಕಾರ್ಯಕರ್ತರು. ಹತ್ಯೆಗೀಡಾದ ಶರತ್ ಚಂದ್ರನ್ ಹಿಂದೆ ಬಿಜೆಪಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ ದ್ದರೆ, ಈಗಲೂ ಅವರು ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾ ರೆಯೇ ಎಂಬುದು ಖಚಿತವಾಗಿಲ್ಲ. ಬುಧವಾರ ರಾತ್ರಿ ಶರತ್ ಚಂದ್ರನ್ ತನ್ನ ಕೆಲವು ಸ್ನೇಹಿತರೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಪುಥೇನ್ಕರಿಯಿಲ್ ದೇವಿ ದೇವಸ್ಥಾನದಲ್ಲಿ ಸಂತ್ರಸ್ತೆಯೊಂದಿಗೆ ವಾಗ್ವಾದ ನಡೆಸಿದ ದಾಳಿಕೋರರು ಅವರಿಗಾಗಿ ಕಾಯುತ್ತಿದ್ದರು. ಮಾರಾಮಾರಿ ನಡೆದಾಗ ಚಂದ್ರನ್‌ಗೆ ಇರಿದಿದ್ದಾರೆ.ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.
ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಗುರುತಿಸಲು ಸಾಧ್ಯವಾಯಿತು ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.