Friday, 20th September 2024

ಟಿ-20 ಸರಣಿಗೆ ಶಿಖರ್ ಧವನ್ ಔಟ್

ದೆಹಲಿ ಅನುಭವಿ ಆರಂಭಿಕ ಬ್ಯಾಾಟ್‌ಸ್‌‌ಮನ್‌ಗೆ ಮೊಣಾಕಾಲು ಗಾಯ ಮತ್ತೇ ಟೀಮ್ ಇಂಡಿಯಾಗೆ ಮರಳಿದ ಸಂಜು ಸ್ಯಾಾಮ್ಸನ್

ದೆಹಲಿ:
ಗಾಯಗೊಂಡು ಚೇತರಿಸಿಕೊಳ್ಳುತ್ತಿಿರುವ ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಶಿಖರ್ ಧವನ್ ಅವರ ಸ್ಥಾಾನಕ್ಕೆೆ ಕೇರಳ ವಿಕೆಟ್ ಕೀಪರ್, ಬ್ಯಾಾಟ್‌ಸ್‌‌ಮನ್ ಸಂಜು ಸ್ಯಾಾಮ್ಸನ್ ಅವರಿಗೆ ಮುಂಬರುವ ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20 ಸರಣಿಗೆ ಅವಕಾಶ ಕಲ್ಪಿಿಸಲಾಗಿದೆ.
ಶಿಖರ್ ಧವನ್ ಅವರು ಸೈಯದ್ ಮುಷ್ತಾಾಕ್ ಅಲಿ ಟಿ-20 ದೇಶೀಯ ಕ್ರಿಿಕೆಟ್ ಟೂರ್ನಿಯಲ್ಲಿ ಮಹಾರಾಷ್ಟ ವಿರುದ್ಧ ದೆಹಲಿ ಪರ ಆಡುವಾಗ ತಮ್ಮ ಮೊಣಕಾಲಿಗೆ ಗಾಯವಾಗಿತ್ತು. ಚಿಕಿತ್ಸೆೆ ಪಡೆದು ವಿಶ್ರಾಾಂತಿ ಪಡೆಯುತ್ತಿಿರುವ ಅವರು ವಿಂಡೀಸ್ ಸರಣಿಗೆ ಅಲಭ್ಯರಾಗಿದ್ದಾಾರೆ.
ಮೊಣಕಾಲು ಗಾಯಕ್ಕೆೆ ಒಳಗಾಗಿ ಚಿಕಿತ್ಸೆೆ ಪಡೆದು ಚೇತರಿಸಿಕೊಳ್ಳುತ್ತಿಿರುವ ಶಿಖರ್ ಧವನ್ ಅವರ ಹಾಕಿರುವ ಒಲಿಗೆ ಸಂಪೂರ್ಣ ವಾಸಿಯಾಗುವವರೆಗೂ ವಿಶ್ರಾಾಂತಿ ಪಡೆಯುವಂತೆ ವೈದ್ಯಕೀಯ ತಂಡ ಸಲಹೆ ನೀಡಿದೆ. ಹೀಗಾಗಿ ಅವರ ಸ್ಥಾಾನಕ್ಕೆೆ ಯುವ ಆಟಗಾರ ಸಂಜು ಸ್ಯಾಾಮ್ಸನ್ ಟಿ-20 ಸರಣಿ ಆಡಲು ಮತ್ತೊೊಮ್ಮೆೆ ತಂಡಕ್ಕೆೆ ಮರಳಿದ್ದಾಾರೆಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಬಾಂಗ್ಲಾಾದೇಶ ವಿರುದ್ಧದ ಟಿ-20 ಸರಣಿಗೆ ಸಂಜು ಸ್ಯಾಾಮ್ಸನ್ ಅವರನ್ನು ಆಯ್ಕೆೆ ಮಾಡಲಾಗಿತ್ತು. ಆದರೆ, ಅವರಿಗೆ ಒಂದೂ ಪಂದ್ಯದಲ್ಲಿ ಸ್ಥಾಾನ ಸಿಕ್ಕಿಿರಲಿಲ್ಲ. ಕಳೆದ ನ.21 ರಂದು ವೆಸ್‌ಟ್‌ ಇಂಡೀಸ್ ವಿರುದ್ಧ ಟಿ-20 ಹಾಗೂ ಏಕದಿನ ಸರಣಿಗೆ ಭಾರತ ತಂಡವನ್ನು ಎಂ.ಎಸ್.ಕೆ ಪ್ರಸಾದ್ ನೇತೃತ್ವದಲ್ಲಿ ಆಯ್ಕೆೆ ಮಾಡಲಾಗಿತ್ತು. ಈ ವೇಳೆ ಸಂಜು ಸ್ಯಾಾಮ್ಸನ್ ಗೆ ತಂಡಕ್ಕೆೆ ಆಯ್ಕೆೆ ಮಾಡಿರಲಿಲ್ಲ.
ಸಂಜು ಸ್ಯಾಾಮ್ಸನ್ ಅವರಿಗೆ ಒಂದೂ ಪಂದ್ಯದಲ್ಲಿ ಸ್ಥಾಾನ ನೀಡದೆ, ಅವರನ್ನು ವಿಂಡೀಸ್ ಸರಣಿಗೆ ಕೈಬಿಟ್ಟಿಿದ್ದ ಬಿಸಿಸಿಐ ವಿರುದ್ಧ ಕಾಂಗ್ರೆೆಸ್ ಸಂಸದ ಶಶಿ ತರೂರ್ ಸೇರಿದಂತೆ ಹಲವು ಅಭಿಮಾನಿಗಳು ಟ್ವಿಿಟರ್ ನಲ್ಲಿ ಆಕ್ರೋೋಷ ವ್ಯಕ್ತಪಡಿಸಿದ್ದರು.
ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟೂರ್ನಿಯಲ್ಲಿ ಸಂಜು, ನಾಲ್ಕು ಪಂದ್ಯಗಳಿಂದ 112 ರನ್ ಗಳಿಸಿದ್ದಾರೆ. ಭಾರತ ಹಾಗೂ ವೆಸ್‌ಟ್‌ ಇಂಡೀಸ್ ನಡುವೆ ಮೂರು ಪಂದ್ಯಗಳ -20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ಮುಂದಿನ ತಿಂಗಳು ಆರಂಭವಾಗಲಿದೆ.

ಶಸ್ತ್ರಚಿಕಿತ್ಸೆೆಗೊಳಗಾದ ಸಹಾ
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾಾದೇಶ ವಿರುದ್ಧ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್‌ಟ್‌ ಪಂದ್ಯದಲ್ಲಿ ಕೈಬೆರಳಿನ ಗಾಯದ ಸಮಸ್ಯೆೆಗೊಳಗಾಗಿರುವ ವೃದ್ಧಿಿಮಾನ್ ಸಹಾ, ಮಂಗಳವಾರದಂದು ಯಶಸ್ವಿಿ ಶಸ್ತ್ರಚಿಕಿತ್ಸೆೆಗೊಳಗಾಗಿದ್ದಾರೆ. ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನದಲ್ಲಿ ಭಾಗವಹಿಸಲಿದ್ದಾರೆ.

ವಿಂಡೀಸ್ ಸರಣಿಗೆ ಭಾರತ ಟಿ20 ತಂಡ:
ವಿರಾಟ್ ಕೊಹ್ಲಿಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಸಂಜು ಸ್ಯಾಾಮ್ಸನ್

ಅಂತಿಮ 11 ರಲ್ಲಿ ಆಡಲು ಅವಕಾಶ ಸಿಕ್ಕರೆ ದೊಡ್ಡ ಮೊತ್ತ ಗಳಿಸಲು ಪ್ರಯತ್ನಿಿಸುತ್ತೇನೆ. ಒಂದು ವೇಳೆ ಐದು ಪಂದ್ಯಗಳಲ್ಲಿ ಅವಕಾಶ ಸಿಕ್ಕಿಿದ್ದೇ ಆದಲ್ಲಿ ಅದರಲ್ಲಿ ಒಂದು ಅಥವಾ ಎರಡು ಇನಿಂಗ್‌ಸ್‌‌ಗಳಲ್ಲಿ ದೊಡ್ಡ ಮೊತ್ತ ಕಲೆಹಾಕಿ ತಂಡದ ಗೆಲುವಿಗೆ ನೆರವಾಗುತ್ತೇನೆ. ನನ್ನ ಸ್ಥಿಿರ ಪ್ರದರ್ಶನ ತಂಡದ ಗೆಲುವಿಗೆ ನೆರವಾಗಲ್ಲ.
ಸಂಜು ಸ್ಯಾಾಮ್ಸನ್, ಭಾರತ ತಂಡದ ಆಟಗಾರ