Saturday, 23rd November 2024

ಸ್ಪೈಡರ್ ಮ್ಯಾನ್: ನೋ ವೇ ಹೋಮ್..ಸಿನೆಮಾ 292 ಬಾರಿ ವೀಕ್ಷಿಸಿ ಗಿನ್ನಿಸ್ ದಾಖಲೆ

ಫ್ಲೋರಿಡಾ : ಒಬ್ಬ ವ್ಯಕ್ತಿಯು ತನ್ನ ನೆಚ್ಚಿನ ಚಿತ್ರದ ಬಗ್ಗೆ ಎಷ್ಟು ಉತ್ಸುಕನಾಗಿದ್ದಾನೆ ಅಂದ್ರೆ ಆತ ಚಲನಚಿತ್ರ ವನ್ನ ನೋಡುವ ಮೂಲಕ ದಾಖಲೆ ನಿರ್ಮಿಸಿದ್ದಾನೆ.

ಈ ವ್ಯಕ್ತಿಯ ನೆಚ್ಚಿನ ಚಿತ್ರ ಸ್ಪೈಡರ್ ಮ್ಯಾನ್: ನೋ ವೇ ಹೋಮ್.. ಇವರು ಈ ಚಿತ್ರವನ್ನ 292 ಬಾರಿ ವೀಕ್ಷಿಸಿದ್ದಾನೆ. ಮೂರು ತಿಂಗಳಲ್ಲಿ 292 ಬಾರಿ ಚಲನಚಿತ್ರವನ್ನ ನೋಡಿದ್ದಾನೆ. ಈ ಮೂಲಕ ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದ್ದಾನೆ. ಜತೆಗೆ ಒಂದೇ ಚಿತ್ರದಲ್ಲಿ ಅತಿ ಹೆಚ್ಚು ಸಿನೆಮಾ ನಿರ್ಮಾಣಗಳಲ್ಲಿ ಭಾಗವಹಿಸಿದ ಗಿನ್ನಿಸ್ ವಿಶ್ವದಾಖಲೆ ಸಹ ಸಾಧಿಸಿದೆ.

ಯುಎಸ್‌ಎಯ ಫ್ಲೋರಿಡಾದಲ್ಲಿ ವಾಸಿಸುವ ರಮಿರೋ ಅಲಾನಿಸ್, ಡಿಸೆಂಬರ್ 16, 2021 ಮತ್ತು ಮಾರ್ಚ್ 15, 2022ರ ನಡುವೆ 292 ಬಾರಿ ‘ಸ್ಪೈಡರ್-ಮ್ಯಾನ್: ನೋ ವೇ ಹೋಮ್’ ಅನ್ನು ವೀಕ್ಷಿಸಿದ್ದಾರೆ. ಮಾರ್ವೆಲ್ ಕಾಮಿಕ್ಸ್ ಪಾತ್ರ ಸ್ಪೈಡರ್ ಮ್ಯಾನ್ ಆಧಾರಿತ ಸೂಪರ್ಹೀರೋ ಚಲನಚಿತ್ರವನ್ನ ವೀಕ್ಷಿಸಲು ವ್ಯಕ್ತಿ 720 ಗಂಟೆಗಳ ಕಾಲ ಕಳೆದ್ದಾನೆ. ಟಿಕೆಟ್ʼಗಾಗಿ 3,400 ಡಾಲರ್ (ಸುಮಾರು ₹ 2.59 ಲಕ್ಷ) ಖರ್ಚು ಮಾಡಿದ್ದಾನೆ.

2019ರಲ್ಲಿ ಅವೆಂಜರ್ಸ್: ಎಂಡ್ಗೇಮ್ ಅನ್ನು 191 ಬಾರಿ ವೀಕ್ಷಿಸಿದ ದಾಖಲೆಯನ್ನ ರಮಿರೋ ಅಲಾನಿಸ್ ಈ ಹಿಂದೆ ಸಾಧಿಸಿದ್ದರು. ಆ ದಾಖಲೆಯನ್ನ 2021ರಲ್ಲಿ ಅರ್ನಾಡ್ ಕ್ಲೈನ್ ಮುರಿದರು. ಅವರು ಕಾಮೆಲೊಟ್: ದಿ ಫಸ್ಟ್ ಎಡಿಷನ್ʼನ್ನ 204 ಬಾರಿ ವೀಕ್ಷಿಸಿದರು. ರಮಿರೋ ಅಲಾನಿಸ್ ತನ್ನ ಅಜ್ಜಿಗಾಗಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಗೆದ್ದರು.