Saturday, 14th December 2024

ಕರ್ನಾಟಕದಲ್ಲಿ ಕನ್ನಡ ತಾಯಿಯೇ ’ದೊಡ್ಡಮ್ಮ’

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ಇತ್ತೀಚೆಗೆ ಹಿಂದಿ ಭಾಷೆಯ ವಿಷಯಕ್ಕೆ ಕನ್ನಡಿಗರ ವಿರೋಧ ಕಟ್ಟಿಕೊಂಡಿರುವವರಲ್ಲಿ ಬಾಲಿವುಡ್‌ನ ಪಾನ್ ಇಂಡಿಯಾ ಸ್ಟಾರ್ ಅಜಯ್ ದೇವಗನ್ ಮತ್ತು ನಮ್ಮ ಕನ್ನಡದ ನಿರ್ದೇಶಕ ಯೋಗರಾಜ್ ಭಟ್ ಪ್ರಮುಖರು. ಈ ವಿಷಯದಲ್ಲಿ ಅಜಯ್ ದೇವಗನ್ ಅದು ಟ್ರಾಲೇಷನ್
ಮಿಸ್ಟೇಕ್ ಎಂದಿದ್ದರೆ, ಪತ್ರಿಕಾಗೋಷ್ಠಿಯೊಂದರಲ್ಲಿ ಈ ಬಗ್ಗೆ ನೇರವಾಗಿ ಉತ್ತರ ಕೊಡದಿದ್ದ ಭಟ್ಟರು, ನಂತರ ನಾನು ಕನ್ನಡ ಪ್ರೇಮಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಆದರೆ ಈ ಇಬ್ಬರೂ ತಮ್ಮ ಅನಿಸಿಕೆಗೆ ವಿರುದ್ಧವಾಗಿದ್ದರು ಅನ್ನೋ ಕಾರಣಕ್ಕೆ ಸೋಷಿ ಯಲ್ ಮೀಡಿಯಾದಲ್ಲಿ ಇವರ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತಿರೋದು ಬೇಸರದ ವಿಷಯ. ಹಿಂದಿ ಭಾ’ಷೆ ವಿಷಯದಲ್ಲಿ ಅಜಯ್ ದೇವಗನ್ ಏನೇ ಮಾತಾ ಡಲಿ, ಆದರೆ, ಹಾಗಂತ ಆ ಕಾರಣಕ್ಕೆ ಅವನಿಗೆ ನಟನೆಯೇ ಬರಲ್ಲ ಅಂತೆ ಮಾತಾ ಡೋದನ್ನು ಯಾರೂ ಒಪ್ಪೊಲ್ಲ. ಪಕ್ಕಾ ಆಕ್ಷನ್, ಕಾಮಿಡಿ ಚಿತ್ರಗಳ ಹೊರತಾಗಿಯೂ ಕಂಪನಿ, ಹ ಬೋಲ, ಯುವ, ಓಂಕಾರ, ಝಕಮ, ರೈನ್ ಕೋಟ್, ಕಚ್ಛೇ ಧಾಗೆ, ಹಮ್ ದಿಲ್ ದೇ ಚುಕೆ ಸನಮ್‌ನಂಥ ಅನೇಕ ವಿಶೇಷ ಚಿತ್ರಗಳಲ್ಲೂ ಅಜಯ್ ತಮ್ಮ ನಟನಾ ಸಾಮರ್ಥ್ಯ ತೋರಿಸಿದ್ದಾರೆ.

ಆದರೆ ಈಗ ಅವರನ್ನು ಇದ್ದಕ್ಕಿದ್ದಂತೆ ಹೀಗಳೆಯುವವರು ಜಾಸ್ತಿ ಆಗಿದ್ದಾರೆ. ಇನ್ನು ಕೆಲವು ಅತೃಪ್ತರು ಸೋಷಿಯಲ್ ಮೀಡಿಯಾದಲ್ಲಿ ಅಜಯ್ ದೇವಗನ್ ವ್ಯಕ್ತಿತ್ವನೇ ಸರಿ ಇಲ್ಲ, ಶೂಟಿಂಗ್ ಸೆಟ್‌ನಲ್ಲಿ ಕೆಟ್ಟದಾಗಿ ಎಲ್ಲರನ್ನೂ ಬೈತಾನೆ ಅಂತೆ ಕಥೆಗಳನ್ನು ಹೇಳಿ ಅವನನ್ನು ವಿಲನ್ ಆಗಿಸಲು ಪ್ರಯತ್ನ ಮಾಡ್ತಾ ಇದ್ದಾರೆ. ಇನ್ನು ನಮ್ಮ ಯೋಗರಾಜ್ ಭಟ್ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಇಂದಿನ ಕೆಜಿಎಫ್ ಗೆ ಮುಂಚೆಯೇ ಮುಂಗಾರು ಮಳೆಯಂಥ ಮೆಗಾ ಹಿಟ್ ಕೊಟ್ಟವರು.

ಅಲ್ಲದೆ ಅನೇಕ ವರ್ಷಗಳಿಂದ ತಮ್ಮ ಅಪ್ಪಟ ದೇಸಿ ಕನ್ನಡದ, ವಿಶಿಷ್ಟ ಸಾಹಿತ್ಯ, ಬರವಣಿಗೆಯಿಂದ ಎಲ್ಲರ ಮನ ಗೆದ್ದವರು. ಆದರೆ ಈಗ ಅವರು ಕನ್ನಡ ಭಾಷೆಗೆ ಸಂಬಂಧಪಟ್ಟ ವಿಷಯಕ್ಕೆ ತಮಗೆ ಬೇಕಾದಂತೆ ಹೇಳಿಕೆ ಕೊಡಲಿಲ್ಲ ಅನ್ನೋ ಕಾರಣಕ್ಕೆ ಅವರು ಇದ್ದಕ್ಕಿದ್ದಂತೆ ಉಡಾಫೆ ನಿರ್ದೇಶಕ, ಕನ್ನಡದ ಹುಡುಗರ ಅಭಿರುಚಿ ಹಾಳು ಮಾಡಿದವರು ಎಂದೆಲ್ಲ ಕೆಲವರಿಗೆ ಅನಿಸುತ್ತಿರೋದು ವಿಪರ್ಯಾಸದ ಸಂಗತಿ. ಕೆಲವು ವಿಷಯಗಳಲ್ಲಿ ಅವರು ಮಾಡಿದ್ದು, ಹೇಳಿದ್ದು, ತಮಗೆ ಇಷ್ಟ ಆಗಲಿಲ್ಲ ಅನ್ನೋ ಕಾರಣಕ್ಕೆ ನಮ್ಮ ಜನ ಅವರ ವೈಯಕ್ತಿಕ ಚಾರಿತ್ರ್ಯ ಹರಣಕ್ಕೆ ಇಳಿಯೋದು ಹೊಸದೇನೂ ಅಲ್ಲ. ಆದರೆ ಗುಟ್ಕಾ ತಿನ್ನುವ ರೀತಿಯ ಇದೂ ಕೂಡ ಆರೋಗ್ಯಕರ ಬೆಳವಣಿಗೆ ಅಂತೂ ಖಂಡಿತಾ ಅಲ್ಲ.

ಲೂಸ್ ಟಾಕ್
ಯಶ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ಹಿಂದಿ ರಾಷ್ಟ್ರ ಭಾಷೆ ಅಂತ ಗಲಾಟೆ ಶುರು ಆಗಿದೆಯಲ್ಲ, ಇದರ ಬಗ್ಗೆ ನಿಮ್ಮ ಅಭಿಪ್ರಾಯ?
-ಅವೆಲ್ಲ ಗೊತ್ತಿಲ್ಲ, ಆದ್ರೆ ಕರ್ನಾಟಕದಲ್ಲಿ ಕನ್ನಡ ತಾಯಿ ಭುವನೇಶ್ವರಿಯೇ ‘ದೊಡ್ಡಮ್ಮ’.

ಮುತ್ತಿನಂಥ ಮಾತ್ ಹೇಳಿದ್ರಿ, ಸರಿ, ಹಾಗಾದ್ರೆ, ಅಜಯ್ ದೇವ್‌ಗನ್ ಹೇಳಿದ ಮಾತಿಗೆ ಏನಂತೀರಿ?
ಹೋಗ್ಲಿ ಬಿಡ್ರೀ, ನಾಲಿಗೆಗೆ ‘ಪಾನ್ ಪರಾಗ ಸ್ಪರ್ಶ’ ಆದ್ಮೇಲೆ ಏನೇನೋ ಮಾತಾಡ್ತಾರೆ. ಹೊಟ್ಟೆಗೆ ಗುಟ್ಕಾ ತಿನ್ನೋರು ಇನ್ನೇನ್ ಹೇಳ್ತಾರೆ?

ಸರಿ, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆನಾ ಅಲ್ವಾ?
-ರಾಷ್ಟ್ರಭಾಷೆನೋ ಅಲ್ವೋ ಗೊತ್ತಿಲ್ಲ, ಆದ್ರೆ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ರೋ ಮಾಡೋರ ಭಾಷೆ ಆಗಿರೋದಂತೂ ಸತ್ಯ.

ಆದ್ರೂ ನಿಮ್ಮಂಥವರೆಲ್ಲಾ ಅಜಯ್ ದೇವಗನ್ ಅವರ ಮಾತಿಗೆ ವಿರೋಧ ವ್ಯಕ್ತಡಿಸಬೇಕಲ್ವಾ?

-ಅಯ್ಯೋ, ಅವರೆಲ್ಲಾ ಪ್ಯಾನ್ ಇಂಡಿಯಾ ಸ್ಟಾರ‍್ಸ್, ಅದರಲ್ಲೂ ಅವರದ್ದು, ನಾನ್ ಸ್ಟಿಕ್ ಪ್ಯಾನ್. ಎಷ್ಟೇ ಬೈದ್ರೂ ಬಾಯಲ್ಲಿ ವಿಮಲ್ ಇದ್ದಾನಿಗೆ ಅದೆ ಅಂಟೋದೂ ಇಲ್ಲ

ಅದೂ ನಿಜನೇ, ಅಂದಹಾಗೆ, ಅಮೂಲ್ಯ ತಾಯಿ ಆಗಿ ಎರಡು ತಿಂಗಳಾಯ್ತು ಅಂತ ಎಲ್ಲಾ ಟಿವಿ ಚಾನೆಲ್ ಗಳಲ್ಲಿ ಸುದ್ದಿ ಬರ್ತಾ ಇದೆ. ಇದಕ್ಕೇನಂತೀರಾ?
-ದಿಸ್ ಈಸ್ ದ ಬಿಗ್ಗೆ ನ್ಯಾಷನಲ್ ಇಷ್ಯೂ.

ನೆಟ್ ಪಿಕ್ಸ್

ಖೇಮು ಒಂದು ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡೋಕೆ ಸೇರಿಕೊಂಡ. ಅಲ್ಲಿಗೆ ಬರುವ ಕಸ್ಟಮರ್‌ಗಳಿಗೆ ಏನು ಬೇಕು ಅಂತ ಕೇಳಿ, ಅವರಿಗೆ ಗೈಡ್ ಮಾಡೋ ಕೆಲಸ ಅವನದ್ದು. ಮೊದಲ ದಿನ ಖೇಮು ಕೆಲಸಕ್ಕೆ ಹೋದ ಎಲ್ಲರ ಬಳಿಯೂ ನಗುಮೊಗದಿಂದ ವರ್ತಿಸುತ್ತಿದ್ದ. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಹೆಂಗಸು ಬಂದಳು. ಅವಳ ಜತೆ ಎರಡು ಪುಟ್ಟ ಮಕ್ಕಳಿದ್ದವು. ಬಂದ ಕೂಡಲೇ ಆಕೆ ಎಲ್ಲರ ಜತೆಯೂ ಕಿರಿಕಿರಿ ಮಾಡೋಕೆ ಶುರು ಮಾಡಿದಳು. ಯಾರೇ ಬಂದು ಮಾತನಾಡಿಸಲು ಹೋದರೂ ನಿನ್ನ ಮುಖ ನೋಡ್ಕೊಂಡಿದೀಯ, ನಿನ್ನ ಮುಖಕ್ಕೆ ನೀನು ನಂಗೆ ಹೆಲ್ಪ್ ಮಾಡ್ತೀಯಾ? ಅಂತ ಎದುರಿಗಿದ್ದವರ ಮುಖದ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಳು.

ಅದನ್ನು ನೋಡಿದ ಸ್ಟೋರ್ ಮ್ಯಾನೇಜರ್‌ಗೆ ಕೋಪ ಬಂತು. ಆದ್ರೂ ಕಸ್ಟಮರ್ ಜತೆ ರೂಡ್ ಆಗಿ ಬಿಹೇವ್ ಮಾಡಬಾರದು ಅಂತ ಸುಮ್ಮನಿದ್ದ. ಆದರೆ ಆಕೆ ಮಿತಿ ಮೀರಿದಾಗ, ಖೇಮುವನ್ನು ಕರೆದು, ನೋಡು ಇದು ನಿನ್ನ ಕೆಲಸದ ಮೊದಲ ದಿನ, ನೀನು ಆಕೆಯನ್ನು
ಇಲ್ಲಿಂದ ಹೋಗುವಂತೆ ಮಾಡಿದರೆ ನಿನಗೆ ಇವತ್ತೇ ಪ್ರಮೋಷನ್ ಕೊಡ್ತೀನಿ ಅಂತ ಹೇಳಿದ.

ಅದಕ್ಕೆ ಖೇಮು ಸರಿ ಸರ್ ಎಂದವನೇ ಆಕೆಯ ಬಳಿ ಹೋಗಿ ಮಾತನಾಡಲು ಯತ್ನಿಸಿದ. ಆಕೆ ಮಾಮೂಲಿಯಂತೆ ನಿನ್ನ ಮಖಾ ಮುಚ್ಚಾ ಅಂತಲೇ ಶುರು ಮಾಡಿದಳು. ಆಗ ಖೇಮು ಸಡನ್ನಾಗಿ, ಆಕೆಯ ಜತೆಗಿದ್ದ ಇಬ್ಬರು ಮಕ್ಕಳನ್ನು ನೋಡಿ, ನಿಮ್ಮ ಅವಳಿ ಜವಳಿ ಮಕ್ಕಳು ತುಂಬಾ ಮುzಗಿವೆ ಅಂದ. ಆಕೆಗೆ ಇನ್ನಷ್ಟು ಕೋಪ ಬಂತು. ನಿನಗೇನು ತಲೆ ಕೆಟ್ಟಿದೆಯಾ, ಈ ಮಕ್ಕಳಲ್ಲಿ ಇಬ್ಬರಿಗೂ ಹೋಲಿಕೆನೇ ಇಲ್ಲ, ಅಲ್ಲದೆ ಅವನಿಗೆ ಆರು ವರ್ಷ.

ಇವನಿಗೆ ೧೦ ವರ್ಷ. ಇವರನ್ನ ಅವಳಿ ಜವಳಿ ಅಂತೀಯಾ, ಅಷ್ಟೂ ಗೊತ್ತಾಗಲ್ವಾ ಅಂತ ಬಯ್ದಳು. ಅದಕ್ಕೆ ಖೇಮು ಸೀರಿಯಸ್ಸಾಗಿ ಹೇಳಿದ ಗೊತ್ತಾಗುತ್ತೆ, ಆದ್ರೂ ನಿಮ್ಮ ಮುಖ ನೋಡಿದ ಮೇಲೆ, ಯಾವ ಗಂಡಸೂ ಈ ಮುಖದ ಜತೆ ಎರಡೆರಡು ಸಲ ಮಲಗುವಷ್ಟು
ಬರಗೆಟ್ಟಿರಲ್ಲ ಅನ್ನಿಸಿತು, ಅದಕ್ಕೇ ಕೇಳ್ದೆ. ಖೇಮುಗೆ ಪ್ರಮೋಷನ್ ಸಿಕ್ತು.

ಲೈನ್ ಮ್ಯಾನ್

ಹಿಂದಿ ಮಾತಾಡೋಕೆ ಬರದೇ ಇರೋರೆ ಭಾರತೀಯರಲ್ಲ, ವಿದೇಶಕ್ಕೆ ಹೋಗಿ-ಯುಪಿ ಸಚಿವ

-ಹಂಗಾದ್ರೆ, ನಮ್ಮೂರಲ್ಲಿ ಗೋಲ್ ಗಪ್ಪ ಮಾರ್ತಾ ಇರೋರೆಲ್ಲ, ಮನೆಯಿಂದ ಬರುವಾಗ ಫಾರಿನ್ನಿಗ್ ಹೋಗ್ತಾ ಇದ್ದೀವಿ ಅಂತ ಹೇಳಿ ಬಂದಿರ್ತಾರಾ ?

ಆಗ, ಅಕ್ಷಯ್ ಕುಮಾರ್‌ಗೆ, ಈಗ ಅಜಯ್ ದೇವ್‌ಗನ್‌ಗೆ ಊರವರೆಲ್ಲ ವಿಮಲ್ ಹಾಕ್ಕೊಂಡ್ ಉಗಿತಿದ್ದಾರೆ. ಏನಿದು ?

-‘ಆಪರೇಷನ್ ವಿಮಲ’

ಐಪಿಎಲ್ ಮಾತು
ನೀರಲ್ಲಿ ಮೀನಿನ ಹೆಜ್ಜೆ ಕಂಡು ಹಿಡೀಬಹುದು, ಹುಡುಗೀರ ಮನಸ್ಸು ಕೂಡಾ ಗೊತ್ತಾಗಬಹುದು.. ಆದ್ರೆ, ಇಆ ಯಾವಾಗ್ ಕೈ ಕೊಡ್ತಾರೋ ಹೇಳೋಕಾಗಲ್ಲ.

ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಗೆ ಅಭಿಮಾನಿಗಳ ಕೋರಿಕೆ
ನೀವ್ ಸೆಟ್ಲ್ ಆಗಿ ಆಡೋದೇನು ಬೇಡ, ಟಿವಿ ಮುಂದೆ ನಾವ್ ಸೆಟ್ಲ್ ಆಗೋವರೆಗಾದ್ರೂ ಔಟ್ ಆಗ್ಬೇಡ್ರೋ

Swiggy instamartಹೊಸ ಆಫರ್

RCB inningsಮುಗಿಯೋದ್ರೊಳಗೆ ಡೆಲಿವರಿ ಕೊಡ್ತೀವಿ ಐಪಿಎಲ್ ನಲ್ಲಿ Pan India star ಯಾರು?
-ರಿಯಾನ್ ‘ಪರಾಗ್’
ವಿರಾಟ್ ಕೊಹ್ಲಿ ಬಗ್ಗೆ ಆರ್‌ಸಿಬಿ ಅಭಿಮಾನಿಗಳ ಬೇಸರದ ಮಾತು
-ಹುಲಿ ಥರ VI’RAT’ಆಗ್ಬಿಟ್ಟಿದ್ದಾನೆ

ಸಾಧಾರಣ ಬೋಲರ್ ಉನಾದ್ಕಟ್ ಬೋಲಿಂಗ್ ನಲ್ಲಿ ಒಂದು ಮ್ಯಾಚ್ ಫಿನಿಷ್ ಮಾಡಿ,
ಮತ್ತೊಂದರಲ್ಲಿ ಫ್ಲಾಪ್ ಆದ ಧೋನಿ ಬಗ್ಗೆ ಟ್ರೋಲ್
ಜಡೇಜಾ- ಪಿಚಾಚಿ, ಯಾಕಪ್ಪಾ ಇವತ್ತು ಫಿನಿಷ್ ಮಾಡ್ತಿಲ್ಲ, ಪಿಚ್ ಚೆನ್ನಾಗಿಲ್ಲ ಅಂತಾನಾ?
ಧೋನಿ – ಊಹ್ಞೂ..
ಜಡೇಜಾ – ಬ್ಯಾಟ್ ಚೆನ್ನಾಗಿಲ್ವ?
ಧೋನಿ – ಊಹ್ಞೂ
ಜಡೇಜಾ – ಅಂಪೇರ್ ಹೆಲ್ಪ್ ಮಾಡ್ತಿಲ್ವಾ?
ಧೋನಿ -ಊಹ್ಞೂ
ಜಡೇಜಾ – ಮತ್ತೇನಾಗಿದೆ ಪಿಚಾಚಿ?
ಧೋನಿ – ಮಾರಮ್ಮನ್ ಡಿಸ್ಕು…ಇನ್ನೂ ಉನಾದ್ಕಟ್ ಬೋಲಿಂಗಿಗೇ ಬರ್ಲಿಲ್ವೇ..