Friday, 20th September 2024

ಮನೆಕೆಲಸದಾಕೆ ಮೇಲೆ ಡಿಜಿಟಲ್​ ರೇಪ್: ವೃದ್ದನ ಬಂಧನ

ನೋಯ್ಡಾ: ಮನೆ ಕೆಲಸದಾಕೆಯ ಮೇಲೆ 80 ವರ್ಷದ ಮಾಲೀಕ ಡಿಜಿಟಲ್ ರೇಪ್ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಮನೆಕೆಲಸದಾಕೆ ಮೇಲೆ ಕಳೆದ 7 ವರ್ಷಗಳಿಂದ ನಿರಂತರ ದೌರ್ಜನ್ಯ ಎಸಗಿ ದ್ದಾನೆ.

ಅಲಹಾಬಾದ್ ಮೂಲದ ಪೇಂಟರ್ ಮಾರಿಸ್ ರೈಡರ್ (80) ಎಂಬಾತ ಮಹಿಳಾ ಸ್ನೇಹಿತೆಯೊಂದಿಗೆ ಸೆಕ್ಟರ್ 46ರಲ್ಲಿ ವಾಸಿಸು ತ್ತಿದ್ದ. ಈತನ ಜೊತೆ 17 ವರ್ಷದ ಬಾಲಕಿಯೂ ವಾಸಿಸುತ್ತಿದ್ದಳು. ಈ ಬಾಲಕಿ ಕಳೆದ 10 ವರ್ಷದಿಂದಲೂ ಈತನ ಮನೆಯಲ್ಲೇ ನೆಲೆಸಿದ್ದು, ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿ ದ್ದಳು.

ಆರೋಪಿಯು ತನ್ನ ಬೆರಳು, ಹೆಬ್ಬೆರಳು ಅಥವಾ ಕಾಲ್ಬೆರಳುಗಳನ್ನು ಬಾಲಕಿ ಯ ದೇಹದ ಖಾಸಗಿ ಭಾಗಗಳ ಸ್ಪರ್ಶಿಸುತ್ತಿದ್ದ. ಇದರಿಂದ ಬೇಸತ್ತ ಬಾಲಕಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್‌ ಮಾಡಿ ದೂರು ನೀಡಿದ್ದಾಳೆ.

ಡಿಜಿಟಲ್ ರೇಪ್ ಎಂದರೆ ಯಾವುದೇ ಹುಡುಗಿ ಅಥವಾ ಹುಡುಗ ಇಂಟರ್ನೆಟ್ ಮೂಲಕ ಶೋಷಣೆಗೆ ಒಳಗಾಗಬೇಕು ಎಂದೂ ಇಲ್ಲ. ಇಂಗ್ಲಿಷ್‌ನಲ್ಲಿ ಡಿಜಿಟ್​ ಎಂದರೆ ಸಂಖ್ಯೆ ಎಂದರ್ಥ, ದೇಹದ ಕೆಲವು ಭಾಗಗಳನ್ನು ಸಂಖ್ಯೆಗಳಿಂದ ಗುರುತಿಸುತ್ತೇವೆ.

ಉದಾಹರಣೆಗೆ ಬೆರಳು, ಹೆಬ್ಬೆರಳು, ಕೈಬೆರಳು ಅಥವಾ ಕಾಲ್ಬೆರಳು ಸೇರಿದಂತೆ ದೇಹದ ಅಂಗಗಳನ್ನು ಎಣಿಸುವುದು, ಗುರುತಿಸುವು ದನ್ನು ಮಾಡುತ್ತೇವೆ. ಈ ಕೈಬೆರಳು ಮತ್ತು ಕಾಲ್ಬೆರಳುಗಳಿಂದ ಹೆಣ್ಮಕ್ಕಳ ಖಾಸಗಿ ಸ್ಥಳಗಳನ್ನು ಸ್ಪರ್ಶಿಸುವುದಕ್ಕೆ ಡಿಜಿಟಲ್​ ರೇಪ್​ ಎನ್ನಲಾಗಿದೆ.