ಮುಂಬೈ
ಟಾಟಾ ಟ್ರಸ್‌ಟ್ ದೇಶಾದ್ಯಂತ ಕೋವಿಡ್-19 ಪರಿಸ್ಥಿತಿಯನ್ನು ಎದುರಿಸಲು ಅನುವಾಗುವಂತೆ ಅಗತ್ಯ ವಸ್ತುಗಳನ್ನು ವಾಯುಮಾರ್ಗದ ಮೂಲಕ ಸಾಗಣೆಗೆ ನೆರವಾಗಲು ಮುಂದೆ ಬಂದಿದೆ. ಈ ಕಾರ್ಯಾಚರಣೆಯನ್ನು ಟಾಟಾ ಇಂಟರ್ ನ್ಯಾಷನಲ್ ಲಿಮಿಟೆಡ್ ಸಹಯೋಗದಲ್ಲಿ ಮಾಡಲಾಗುತ್ತಿದೆ.
ಆಮದು ಮಾಡಿಕೊಳ್ಳುತ್ತಿರುವ ಪರಿಕರಗಳಲ್ಲಿ ವೈಯಕ್ತಿಕ ಸಂರಕ್ಷಣಾ ಪರಿಕರ ಕಿಟ್‌ಗಳು (ಕವರ್ ಆಲ್‌ಗಳು, ಮುಖಗವಸು, ಕೈಗವಸು, ಗಾಗಲ್‌ಗಳು ಸೇರಿದಂತೆ), ಎನ್85 ಮತ್ತು ಕೆಎನ್95 ಮುಖಗವಸುಗಳು, ವಿವಿಧ ದಜೆರ್ಯ ಸರ್ಜಿಕಲ್ ಮಾಸ್‌ಕ್‌ಗಳು ಸೇರಿವೆ. ಸುಮಾರು ಒಂದು ಕೋಟಿ ವೈಯಕ್ತಿಕ ಘಟಕಗಳನ್ನು ಒಳಗೊಂಡ ಈ ದಾಸ್ತಾನು ವಿವಿಧ ಹಂತಗಳಲ್ಲಿ ದೇಶಕ್ಕೆ ಬರುವ ವಾರಗಳಲ್ಲಿ ತರಲಾಗುತ್ತದೆ. ಈ ಬದ್ಧತೆಯ ಒಟ್ಟು ಮೌಲ್ಯವು ಸುಮಾರು ರೂ. 150 ಕೋಟಿ ರೂಪಾಯಿ ಆಗಿರುತ್ತದೆ.
ಕೋವಿಡ್-19 ಬ್ಕಿೃಟ್ಟಿನ ಸಂದರ್ಭದಲ್ಲಿ ಜನರು ಎದುರಿಸುತ್ತಿರುವ ಕಷ್ಟಗಳಿಗೆ ಸ್ಪಂದಿಸಲು ತುರ್ತಾಗಿ ಅಗತ್ಯ ವಸ್ತುಗಳು, ಪರಿಕರಗಳು ಅಗತ್ಯವಿದೆ ಎಂಬ ಸಂಸ್ಥೆಯ ಅಧ್ಯಕ್ಷ ರತನ್ ಎನ್.ಟಾಟಾ ಅವರ ಹೇಳಿಕೆಯನ್ನು ಆಧರಿಸಿ ಟ್ರಸ್‌ಟ್ ಈ ಕ್ರಮ ಕೈಗೊಳ್ಳುತ್ತಿದೆ.