Wednesday, 27th November 2024

ಅಪೂರ್ಣಗೊಂಡಿರುವ ಹೆದ್ದಾರಿ: ಕ್ರಮ ಜರುಗಿಸುವಂತೆ ಸರ್ವಸದಸ್ಯರ ಆಗ್ರಹ

ಚಿಕ್ಕನಾಯಕನಹಳ್ಳಿ : ಪಟ್ಟಣದ ವ್ಯಾಪ್ತಿಯಲ್ಲಿ ಮಾಡಿರುವ ರಾಷ್ಟಿçÃಯ ಹೆದ್ದಾರಿ ಕಾಮಾಗಾರಿ ಅಪೂರ್ಣವಾಗಿದ್ದು, ಕಳಪೆಯಿಂದ ಕೂಡಿದೆ. ಇಲ್ಲಿಯವರೆಗೂ ಪೂರ್ಣಗೊಳಿಸುವಲ್ಲಿ ವಿಫಲವಾಗಿರುವ ಗುತ್ತಿಗೆದಾರರನ್ನು ಸಭೆಗೆ ಆಹ್ವಾನಿಸಬೇಕಿತ್ತು. ಮುಂದಿನ ಸಭೆಯಲ್ಲಿ ಅವರನ್ನು ಕರೆಸಿ ಸೂಕ್ತ ಕಾರಣ ಕೇಳಿ ಹಾಗು ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸರ್ವ ಸದಸ್ಯರು ಆಗ್ರಹಿಸಿದರು. ಅಧ್ಯಕ್ಷರು ಸಮ್ಮತಿ ಸೂಚಿಸಿದರು.

ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರುಗಿತು. ಪಟ್ಟಣದಲ್ಲಿ ಎರಡು ವರ್ಷದಿಂದ ರಸ್ತೆ ಕಾಮಾಗಾರಿಯು ನಡೆಯುತ್ತಿದ್ದು, ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ವಿದ್ಯುತ್ ದೀಪಗಳನ್ನು ಅಳವಡಿಸಲು ಸಾಧ್ಯವಾಗದೆ ಹೆದ್ದಾರಿಯು ಅಂಧಕಾರ ದಿ0ದ ಮುಳುಗಿದ್ದು ನಗರದ ಸೌಂದರ್ಯ ಹಾಳಾಗಿರುವ ಕಾರಣ ನಾಗರೀಕರು ನಮ್ಮ ಯೋಗ್ಯತೆ ಪ್ರಶ್ನಿಸುತ್ತಿದ್ದಾರೆ ಗುತ್ತಿದಾರನ ವರ್ತನೆ ಹೀಗೆಯೇ ಮುಂದು ವರಿದರೆ ಸಹಿಸಲು ಸಾಧ್ಯವಿಲ್ಲ ಎಂದು ಸದಸ್ಯರು ಗುಡುಗಿದರು.

ಒತ್ತುವರಿ ತೆರವಿಗೆ ಆಗ್ರಹ
ಪುರಸಭಾ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ ಜಾಗವನ್ನು ಸರ್ವೆ ಮಾಡಿ ಗುರುತಿಸಿ, ಪ್ರಮುಖವಾಗಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪೂರ್ವ ಭಾಗದಲ್ಲಿರುವ ಜಾಗವನ್ನು ಸರ್ವೆ ಮಾಡಿಸಿ ಸ್ಕೆಚ್ ತಯಾರಿಸಿ ಪುರಸಭೆಗೆ ಹಸ್ತಾಂತರ ಮಾಡಿ, ಅಲ್ಲದೆ ನಕಾಶೆ ರಸ್ತೆಗಳನ್ನು ಗುರುತಿಸಿ ಒತ್ತುವರಿ ಯಾಗಿರುವ ರಸ್ತೆಗಳನ್ನು ತೆರವು ಮಾಡಿ ಸಾರ್ವಜನಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳುವಂತೆ ಸದಸ್ಯ ಶ್ಯಾಮ್ ಒತ್ತಾಯಿಸಿದರು.

ನಾಲ್ಕು ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡ ಪಟ್ಟಣದ ಸಾರ್ವಜನಿಕ ಆಸ್ಪತ್ರೆ
ಸರಕಾರಿ ಕಟ್ಟಡಗಳು ಲಕ್ಷಾಂತರ ರೂಪಾಯಿ ಕಂದಾಯ ಬಾಕಿಯನ್ನು ಉಳಿಸಿಕೊಂಡಿದ್ದು ಅದರ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಟಿಂಬರ್ ಮಲ್ಲೇಶ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಆರೋಗ್ಯ ಇಲಾಖೆ ಹೊರತು ಪಡಿಸಿ ಉಳಿದ ಎಲ್ಲಾ ಇಲಾಖೆಗಳಿಂದ ಕಂದಾಯ ವಸೂಲಿ ಮಾಡಲಾಗಿದೆ. ಇವರು ೪ ಲಕ್ಷಕ್ಕೂ ಅಧಿಕ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು ನೋಟಿಸ್ ಕೊಡಲಾಗಿದೆ. ಆರಕ್ಷಕ ಇಲಾಖೆಯವರು ಕಂದಾಯ ಕಟ್ಟಿದ್ದೇವೆ ಎನ್ನುತ್ತಾರೆ ಆದರೆ ದಾಖಲೆಗಳನ್ನು ಒದಗಿಸುತ್ತಿಲ್ಲ ಎಂದರು.

ಯುಜಿಡಿ ಕಾಮಾಗಾರಿಗೆ ಗುತ್ತಿಗೆದಾರರಿಂದ ಸಕರಾತ್ಮಕ ಸ್ಪಂದನೆ ದೊರಕುತ್ತಿಲ್ಲ. ಮೂರು ಬಾರಿ ಟೆಂಡರ್ ವಾಪಸ್ ಆಗಿದೆ. ಹಾಗಾಗಿ ಸದಸ್ಯರು ತಮ್ಮ ತಮ್ಮ ಬಡಾವಣೆಗಳಲ್ಲಿ ರಸ್ತೆ ಅಭಿವೃದ್ದಿ ನಡೆಸಲು ಸಾಧ್ಯವಾಗುತ್ತಿಲ್ಲ. ಯುಜಿಡಿ ನೆಪದಿಂದ ಪಟ್ಟಣದ ಅಭಿವೃದ್ದಿ ಕುಂಠಿತವಾಗುತ್ತಿದ್ದು ಯುಜಿಡಿ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡುವಂತೆ ಸದಸ್ಯರು ಸಲಹೆ ನೀಡಿದರು. ನಮ್ಮ ಮಾತಿಗೆ ಅಧಿಕಾರಿಗಳು ಗೌರವ ನೀಡುವುದಿಲ್ಲ. ಗಮನಕ್ಕೆ ತಾರದೆ ನಮ್ಮ ವಾರ್ಡ್ಗಳಲ್ಲಿ ಅಧಿಕಾರಿಗಳು ಕಾಮಾಗಾರಿ ನಡೆಸಿರುತ್ತಾರೆ. ಇದರಿಂದ ನಾವು ಸಾರ್ವಜನಿಕವಾಗಿ ಮುಜುಗರ ಅನುಭವಿಸುವ ಪರಿಸ್ಥಿತಿಯಿದೆ ಎಂದು ಪೂರ್ಣಿಮ ಅಸಮಧಾನ ವ್ಯಕ್ತಪಡಿಸಿದರು.

ಖಾಸಗಿ ಬಸ್ ನಿಲ್ದಾಣದಲ್ಲಿರುವ ಮಳಿಗೆಗಳು ಖಾಲಿ ಇದ್ದು ಮಳಿಗೆಗಳನ್ನು ಹಂಚುವ0ತೆ ನಾಮಿನಿ ಸದಸ್ಯ ಮಲ್ಲಿಕಾರ್ಜುನ್ ಒತ್ತಾಯಿಸಿದರು. ಪುರಸಭೆ ಮಳಿಗೆಗಳನ್ನು ಕೆಲವರು ಕಡಿಮೆ ಬೆಲೆಗೆ ಬಾಡಿಗೆ ಪಡೆದು ಅದನ್ನು ಮತ್ತೊಬ್ಬರಿಗೆ ನೀಡಿ ದಿನಕ್ಕೆ ಸಾವಿರಕ್ಕೂ ಅಧಿಕ ಮೊತ್ತವನ್ನು ವಸೂಲಿ ಮಾಡು ತ್ತಿದ್ದಾರೆಂದು ಸಿ.ಡಿ.ಸುರೇಶ್ ದೂರಿದರು.

ಕಟ್ಟಡ ಪರವಾನಗಿ ಶುಲ್ಕವನ್ನು ಸರಿಯಾದ ಮಾನದಂಡ ಅನುಸರಿಸಿ ಪಡೆಯುತ್ತಿಲ್ಲ. ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಖುದ್ದು ಸಹಿ ಮಾಡ ಬೇಕಾದ ಇಂಜಿನಿಯರ್ ಯೋಗನಂದಬಾಬು ಗುತ್ತಿಗೆ ನೌಕರರಿಂದ ದಾಖಲೆಗಳನ್ನು ಬರೆಸಿ ಪರಿಶೀಲಿಸದೆ ಸಹಿ ಹಾಕುತ್ತಿದ್ದಾರೆಂದು ರಾಜಶೇಖರ್ ದೂರಿದರು.

ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪಾ, ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ್, ಮುಖ್ಯಾಧಿಕಾರಿ ಶ್ರೀನಿವಾಸ್, ಸದಸ್ಯರಾದ ಮಲ್ಲಿಕಾರ್ಜುನ್, ತಿಪ್ಪೇಸ್ವಾಮಿ, ನಾಗರಾಜ್, ಸಾಮಿಲ್ ಬಾಬು, ರಾಜಶೇಖರ್ ಸಿ.ಡಿ.ಸುರೇಶ್ ಸದಸ್ಯೆ ಲಕ್ಷಿö್ಮÃ, ಉಮಾ, ರತ್ನಮ್ಮ, ರೇಣುಕಮ್ಮ, ಸುಧಾ, ಜಯಮ್ಮ, ರಾಜಮ್ಮ, ಮಮತಾ, ದ್ರಾಕ್ಷಯಣಮ್ಮ, ನಾಮಿನಿ ಸದಸ್ಯರಾದ ಗೋವಿಂದರಾಜು, ಜಕಾವುಲ್ಲಾ, ಶಿವಣ್ಣ ಹಾಗು ಇತರರಿದ್ದರು.