ಪೋರ್ಟ್ ಬ್ಲೇರ್ನಲ್ಲಿ ಭೂಕಂಪ : 4.3 ತೀವ್ರತೆ Tuesday, July 5th, 2022 ವಿಶ್ವವಾಣಿ ಪೋರ್ಟ್ ಬ್ಲೇರ್ : ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಪೋರ್ಟ್ ಬ್ಲೇರ್ನಲ್ಲಿ ಭೂಕಂಪ ಸಂಭವಿಸಿದ್ದು, 4.3 ತೀವ್ರತೆ ದಾಖಲಾಗಿದೆ. ಮಂಗಳವಾರ ಬ್ಲೇರ್ನಿಂದ ಆಗ್ನೇಯಕ್ಕೆ 187 ಕಿಮೀ ದೂರದಲ್ಲಿ ಮತ್ತು 30 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, 4.3 ತೀವ್ರತೆ ದಾಖಲಾಗಿದೆ ಎಂದು ಟ್ವೀಟ್ ಮಾಡಿದೆ. ಪೋರ್ಟ್ ಬ್ಲೇರ್ನ ಪೂರ್ವ ಆಗ್ನೇಯದ 215 ಕಿಮೀ ದೂರದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿತ್ತು.