Sunday, 5th January 2025

ರೇಸ್‌ ಓಡಿಸಲು ಬೇಕೇ ಬೈಕ್ ?

ಬೈಕೋಬೇಡಿ

ಅಶೋಕ್ ನಾಯಕ್

ಯಮಾಹಾ ಆರ್೧೫ಎಸ್

ಒಂದೂವರೆ ಲಕ್ಷ ರುಪಾಯಿ ಆಸುಪಾಸು ದರದಲ್ಲಿ ಲಭ್ಯವಾಗುವ ಯಾಮಾಹಾ ಆರ್೧೫ಎಸ್ ಬೈಕಿನ ಲುಕ್ ಬಹಳ  ಸ್ಟೈಲಿಯಾಗಿದೆ ಮತ್ತು ರೇಸ್‌ಗೆ ಸೂಕ್ತವಾಗಿದೆ. ೧೫೫ ಸಿಸಿ ಎಂಜಿನ್ ಸಾಮರ್ಥ್ಯ, ಪ್ರತೀ ಲೀಟರ್ ಇಂಧನಕ್ಕೆ ಸುಮಾರು ೪೫ ಕಿ.ಮೀ. ಕ್ರಮಿಸುವ ಈ ವಾಹನದಲ್ಲಿ ೧೧ ಲೀಟರಿನಷ್ಟು ಪೆಟ್ರೋಲ್ ಸಂಗ್ರಹ ಸಾಧ್ಯ. ಈ ಮೊದಲೇ ತಿಳಿಸಿದಂತೆ ಇದೊಂದು ಸ್ಪೋರ್ಟ್ಸ್ ಬೈಕ್ . ಆರು ಗೇರ್ ಬಾಕ್ಸ್, ಗೇರ್ ಬದಲಾಯಿಸುವ ಸಂದರ್ಭ ಕಾಣುವ ಸೂಚ ನಾ ಫಲಕ, ಡುಯೆಲ್ ಚಾನೆಲ್ ಎಬಿಎಸ್, ಸ್ಲಿಪ್ಪರ್ ಕ್ಲಚ್, ಸೈಡ್ ಸ್ಟ್ಯಾಂಡ್ ಇಂಡಿಕೇರ್ಟ ಮುಂತಾದವು ಹೆಚ್ಚಿನ ಹಾಗೂ ಅಧಿಕೃತ ಫೀಚರ್ಸ್‌ಗಳು.

ರಾಯಲ್ ಎನೀಲ್ಡ್ ಸ್ಕ್ರಾಮ್ ೪೧೧
೪೧೧ ಸಿಸಿ ಎಂಜಿನ್, ಪ್ರತೀ ಲೀಟರ್ ಪೆಟ್ರೋಲಿಗೆ ಸುಮಾರು ೩೦.೫ ಕಿಮೀ ನಷ್ಟು ಮೈಲೇಜ್ ನೀಡಬಲ್ಲುದು. ೧೫ ಲೀಟರ್ ಪೆಟ್ರೋಲ್ ಸಂಗ್ರಹ ಸಾಧ್ಯ. ಮೂರು ವೇರಿಯಂಟ್ ಹಾಗೂ ೭ ಬಣ್ಣಗಳಲ್ಲಿ ಈ ವಾಹನ ಖರೀದಿಗೆ ಲಭ್ಯ. ಈ ವಾಹನದಲ್ಲಿ ಆಂಟಿ ಲಾಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಈ ಮಾಡೆಲ್ ವಾಹನದ ಅಂದಾಜು ದರ ಎರಡು ಲಕ್ಷ ರೂಪಾಯಿ. ಹಿಮಾಲಯನ್
ಮಾಡೆಲ್ ವಾಹನದ ಕೆಲವು ಫೀಚರ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಸ್ಕ್ರಾಮ್ ಮಾಡೆಲ್‌ನ ಲುಕ್ನಲ್ಲಿ ಮಾರ್ಪಾಡು ತರಲಾಗಿದೆ. ದುಂಡಾಕಾರದ ಹೆಡ್ ಲೈಟ್, ಹಿಮಾಲಯನ್ ಮಾಡೆಲ್‌ಗಿಂತ ವಿಭಿನ್ನವಾಗಿ ಕಾಣುವಂತೆ ಮಾಡುವುದು.

ಇದಕ್ಕಿರುವ ಹ್ಯಾಲೋಗೆನ್ ಫ್ಲಾಂಕ್ಡ್ ಲೈಟ್ ಜತೆಗಿರುವ ಬಲ್ಬ ಇಂಡಿಕೇಟರ್ ಮತ್ತು ಎಲಇಡಿ ಟೇಲ್ ಲೈಟ್ ಮುಂತಾದವು. ಸ್ಪೀಡೋ ಮೀಟರ್, ಒಡೋ ಮೀಟರ್, ಟ್ಯಾಕೋ ಮೀಟರ್, ಟ್ರಿಪ್ ಮೀಟರ್, ಫುಯೆಲ್ ಲೆವೆಲ್ ಇಂಡಿಕೇಟರ್ ಮತ್ತು ಟ್ರಿಪ್ಪರ್ ಇಂಡಿಕೇಟರ್ ಪಾಡ್ ಮುಂತಾದವು ಇತರ ಫೀಚಸ್ ಗಳಾದರೂ ಆಯ್ಕೆಯಾಗಿವೆ.

ಗ್ರಾಫೈಟ್ ರೆಡ್/ಹಳದಿ/ನೀಲಿ, ಬ್ಲೇಜಿಂಗ್ ಕಪ್ಪು, ಸ್ಕೈಲೈನ್ ಬ್ಲೂ, ವೈಟ್ ಫ್ರೇಮ್ ಹಾಗೂ ಸಿಲ್ವರ್ ಸ್ಪಿರಿಟ್ ಮುಂತಾದ
ಬಣ್ಣ ಗಳಲ್ಲಿ ಈ ಮಾಡೆಲ್ ವಾಹನ ಲಭ್ಯವಿದೆ. ಯೆಜ್ದಿ ಸ್ಕ್ರಾಂಬ್ಲರ್ ಹಾಗೂ ಯೆಜ್ದಿ ಅಡ್ವೆಂಚರ್ ವಾಹನ ಸ್ಪರ್ಧೆ ನೀಡಬಲ್ಲವು.