ಮುಂಬೈ: ಸಾಮಾಜಿಕ ಮಾಧ್ಯಮವು 20 ವರ್ಷಗಳಿಂದ ನಾಪತ್ತೆಯಾಗಿದ್ದ ತನ್ನ ತಾಯಿಯನ್ನು ಹುಡುಕಲು ಮುಂಬೈ ಮೂಲದ ಮಹಿಳೆಯೊಬ್ಬರಿಗೆ ಸಹಾಯ ಮಾಡಿದೆ.
ಮುಂಬೈನ ನಿವಾಸಿ ಯಾಸ್ಮಿನ್ ಶೇಖ್ ಅವರು ತಮ್ಮ ತಾಯಿ ಹಮೀದಾ ಬಾನು ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದರು. ಆದರೆ, ಹಿಂತಿರುಗಲಿಲ್ಲ. 20 ವರ್ಷಗಳ ನಂತರ ನನ್ನ ತಾಯಿಯ ಬಗ್ಗೆ ಪಾಕಿಸ್ತಾನ ಮೂಲದ ಸಾಮಾಜಿಕ ಜಾಲತಾಣದ ಖಾತೆ ಯೊಂದರ ಮೂಲಕ ತಿಳಿದುಕೊಂಡೆ ಎಂದು ತಿಳಿಸಿದ್ದಾರೆ.
ನನ್ನ ತಾಯಿ ಇರುವಿಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಏಜೆಂಟ್ ಅನ್ನು ಭೇಟಿ ಮಾಡಲು ಹೋದೆವು. ನನ್ನ ತಾಯಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಿಮ್ಮ ತಾಯಿ ನಮ್ಮ ಬಳಿಯೇ ಇದ್ದಾರೆ ಎಂದು ವೀಡಿಯೋದಲ್ಲಿ ತೋರಿಸಿದ್ದರು.
ವಿಡಿಯೋ ದಲ್ಲಿ ನನ್ನ ತಾಯಿ ಸಹೋದರಿ ಶಾಹಿದಾ ಅವರು ತಮ್ಮ ಪತಿ, ಒಡಹುಟ್ಟಿ ದವರ ಹೆಸರು ಮತ್ತು ನಿವಾಸವನ್ನು ಸರಿಯಾಗಿ ಹೇಳಿದ ನಂತರ ಅವಳನ್ನು ಗುರುತಿಸಿ ದ್ದಾರೆ. ವೀಡಿಯೊ ನಮ್ಮನ್ನು ತಲುಪಿದ ನಂತರವೇ ಅವಳು ಪಾಕಿಸ್ತಾನದಲ್ಲಿ ವಾಸಿಸು ತ್ತಿರುವ ಬಗ್ಗೆ ನಮಗೆ ತಿಳಿದುಬಂದಿತು. ಇಲ್ಲದಿದ್ದರೆ ಅವಳು ದುಬೈ, ಸೌದಿ ಅಥವಾ ಬೇರೆಡೆ ಇದ್ದಾಳೆ ಎಂದು ನಮಗೆ ತಿಳಿದಿರಲಿಲ್ಲ.
ಬಳಿಕ, ಸತ್ಯವನ್ನು ಯಾರಿಗೂ ಬಹಿರಂಗಪಡಿಸಬೇಡಿ ಎಂದು ಏಜೆಂಟ್ ಹೇಳಿದ್ದರು ಎಂದು ಯಾಸ್ಮಿನ್ ಹೇಳಿದರು.