Wednesday, 27th November 2024

ಫಾರೆಸ್ಟ್ ಬೆಲ್ಟ್ನಲ್ಲಿ ಸ್ಮಾರಕ ಶಿಲ್ಪ ನಿರ್ಮಿಸಲು ಕಲಾವಿದರಿಂದ ಪ್ರವೇಶಗಳ ಆಹ್ವಾನ

ಬೆಂಗಳೂರು ವಿಮಾನ ನಿಲ್ದಾಣದಿಂದ ಟಿ2ರ ಫಾರೆಸ್ಟ್ ಬೆಲ್ಟ್ನಲ್ಲಿ ಸ್ಮಾರಕ ಶಿಲ್ಪ ನಿರ್ಮಿಸಲು ಕಲಾವಿದರಿಂದ ಪ್ರವೇಶಗಳ ಆಹ್ವಾನ
• ಈ ಉಪಕ್ರಮವು ಸ್ಥಳೀಯ ಮತ್ತು ಜಾಗತಿಕ ಕಲಾವಿದರಿಗೆ ಕರ್ನಾಟಕದ ಸಂಸ್ಕೃತಿಯನ್ನು ಜೀವಂತವಾಗಿ ಮರು ರೂಪಿಸುವ ಮೂಲಕ ಅವರ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಲಿದೆ

ಬೆಂಗಳೂರು: ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟಿçÃಯ ವಿಮಾನ ನಿಲ್ದಾಣ(ಕೆಐಎಬಿ/ಬಿಎಲ್‌ಆರ್ ವಿಮಾನ ನಿಲ್ದಾಣ)ದಲ್ಲಿ ಮುಂದೆ ಬರಲಿರುವ ಟರ್ಮಿನಲ್ 2(ಟಿ2)ನ ಫಾರೆಸ್ಟ್ ಬೆಲ್ಟ್ನಲ್ಲ್ಲಿ 20 ಮೀಟರ್ ಎತ್ತರದ ಸ್ಮಾರಕ ಶಿಲ್ಪವನ್ನು ನಿರ್ಮಿಸಲು ಕಲಾವಿದರು ಮತ್ತು ಕಲಾ ಸಮೂಹಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲು ಮುಕ್ತ ಕರೆ ನೀಡಿದೆ.

ಬೆಂಗಳೂರು ವಿಮಾನ ನಿಲ್ದಾಣದ ಟಿ2ರಲ್ಲಿನ ಕಲಾ ಕಾರ್ಯಕ್ರಮವು ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಹಾಗೂ ಭರತ ನಾಟ್ಯಶಾಸ್ತçದಲ್ಲಿ ಹೇಳಲಾದ ಒಂಬತ್ತು ಭಾವಗಳಾದ ನವರಸ ಒಳಗೊಂಡು ಎರಡು ವಿಷಯಗಳನ್ನು ಪ್ರತಿಫಲಿಸಲಿದೆ. ಆಯ್ಕೆಯಾದ ಪ್ರಸ್ತಾವನೆಯನ್ನು ಮುಖ್ಯ ಟರ್ಮಿನಲ್ ಕಟ್ಟಡ ಮತ್ತು ಬೋರ್ಡಿಂಗ್ ಗೇಟ್‌ಗಳ ನಡುವಿನ ಫಾರೆಸ್ಟ್ ಬೆಲ್ಟ್ನಲ್ಲಿ ಪ್ರದರ್ಶಿಸಲಾಗುತ್ತದೆ.

ಪ್ರಸ್ತಾವನೆಗಳು ಸ್ವಂತದ್ದಾಗಿರಬೇಕು ಮತ್ತು ಹಿಂದಿನ ಕೃತಿಗಳ ಪ್ರತಿಕೃತಿಯಾಗಿರಬಾರದು. ಕರ್ನಾಟಕ ಅಥವಾ ದಕ್ಷಿಣ ಭಾರತದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯಿAದ ಸ್ಫೂರ್ತಿ ಪಡೆದಿರಬೇಕು. ಅವುಗಳನ್ನು ಸ್ವತಂತ್ರ ಸಲಹಾ ಮಂಡಳಿ ಹಾಗೂ ಬಿಐಎಎಲ್ ಪಾಲುದಾರರು ಪರಿಶೀಲಿಸುತ್ತಾರೆ.

“ಈ ಉಪಕ್ರಮವು ಕರ್ನಾಟಕದ ಶ್ರೀಮಂತ ಪರಂಪರೆ ಹಾಗೂ ವಿಶ್ವಾಸಾರ್ಹ ಅನುಭವ ನೀಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ವಾಗಿದೆ. ಈ ಕಾರ್ಯಕ್ರಮದ ಮೂಲಕ ನಾವು ಕಲಾವಿದರನ್ನು ಬೆಂಬಲಿಸಿ, ಅವರಲ್ಲಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಿದ್ದೇವೆ. ಮತ್ತು ಕಲೆಯನ್ನು ಮಾಧ್ಯಮವಾಗಿ ಪ್ರತಿ ಪ್ರಯಾಣವನ್ನೂ ಸ್ಮರಣೀಯವಾಗಿಸುವ ಉದ್ದೇಶ ಹೊಂದಿದ್ದೇವೆ” ಎಂದು ಬಿಐಎಎಲ್ ವಕ್ತಾರರು ಹೇಳಿದರು.

ಈ ಕಲಾ ಕಾರ್ಯಕ್ರಮಕ್ಕೆ 2020ರಲ್ಲಿ ವಿಮಾನ ನಿಲ್ದಾಣದ ಮೊದಲ ಮುಕ್ತ ಕರೆಯಾಗಿತ್ತು, ಅದು ಅಪಾರ ಯಶಸ್ಸು ಪಡೆಯಿತು ಮತ್ತು 300 ಪ್ರವೇಶಗಳನ್ನು ಪಡೆದಿತ್ತು. ಇದು ಈ ವಿನೂತನ ಬಗೆಯ ಸ್ಮಾರಕ ಶಿಲ್ಪಕ್ಕೆ ಎರಡನೆಯ ಕರೆಯಾಗಿದೆ ಮತ್ತು ಕಲಾವಿದರಿಗೆ ಅವರ ಪ್ರತಿಭೆ ಪ್ರದರ್ಶಿಸಲು ಮಹತ್ತರ ಅವಕಾಶವಾಗಿದೆ.

ಸೆಪ್ಟೆಂಬರ್ 15,2022ರಂದು 23:59ಕ್ಕೆ ಮುನ್ನ ಪ್ರವೇಶಗಳನ್ನು artprogramme@bialairport.comಗೆ ಇಮೇಲ್ ಮಾಡಬಹುದು. ವಿಜೇತರನ್ನು ಅಕ್ಟೋಬರ್ 10, 2022ರ ವೇಳೆಗೆ ಪ್ರಕಟಿಸಲಾಗುತ್ತದೆ.