Monday, 16th September 2024

ಆನ್ಲೈನ್‌ನಲ್ಲಿ ವಿಸ್ಕಿ ಖರೀದಿ: ಮಹಿಳೆಗೆ 5.35 ಲಕ್ಷ ರೂಪಾಯಿ ಪಂಗನಾಮ

ಮುಂಬೈ : ಆನ್ಲೈನ್‌ನಲ್ಲಿ ವಿಸ್ಕಿ ಖರೀದಿ ನೆಪದಲ್ಲಿ ಮಹಿಳೆಯೊಬ್ಬರು ಬರೋಬ್ಬರಿ 5.35 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ.

ರಾತ್ರಿ ವೇಳೆ ವಿಸ್ಕಿಯನ್ನು ಹೋಮ್ ಡೆಲಿವರಿ ಮಾಡುವುದಾಗಿ ಭರವಸೆ ನೀಡಿ ಮಹಿಳೆಯ ಖಾತೆಯಿಂದ 5.35 ಲಕ್ಷ ರೂ.ಗಳನ್ನ ಲಪಾಟಾಯಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, ರಾತ್ರಿ ಕೇಕ್ ಅಲಂಕರಿಸಲು ಮತ್ತು ವಿನ್ಯಾಸಗೊಳಿಸಲು ವಿಸ್ಕಿ ಬಾಟಲಿಯ ಅಗತ್ಯವಿತ್ತು. ಆ ಸಮಯದಲ್ಲಿ ಮದ್ಯ ದಂಗಡಿಗಳನ್ನ ಮುಚ್ಚಿದ್ದರಿಂದ, ಮಹಿಳೆ ಆನ್ಲೈನ್ ಮದ್ಯ ವಿತರಣೆಗಾಗಿ ಅಂತರ್ಜಾಲ ದಲ್ಲಿ ಹುಡುಕಿದ್ದು, ವಂಚಕರ ಸಂಖ್ಯೆಗೆ ಕರೆ ಮಾಡಿದ್ಧಾಲೆ.

ಮಹಿಳೆ ಅಂತರ್ಜಾಲದಲ್ಲಿ ವಂಚಕರ ಸಂಖ್ಯೆ ಪಡೆದು ಕರೆ ಮಾಡಿದ್ದು, ವಂಚಕ ತಾನು ಮದ್ಯದಂಗಡಿಯ ಮಾಲೀಕ ಎಂದು ಗುರುತಿಸಿಕೊಂಡಿದ್ದಾನೆ. ಅಂಗಡಿ ಮುಚ್ಚಲಾಗಿದೆ. ಆದರೆ ಮನೆಗೆ ಮದ್ಯವನ್ನ ತಲುಪಿಸುತ್ತೇವೆ ಎಂದು ನಂಬಿಸಿದ್ದಾನೆ.

ಅದರಂತೆ, ಕ್ಯೂಆರ್ ಕೋಡ್ ಮೂಲಕ 550 ರೂ.ಗಳನ್ನ ಪಾವತಿಸುವಂತೆ ಕೇಳಿದ್ದಾನೆ. ಬಳಿಕ ಸೇಲ್ಸ್ ಎಕ್ಸಿಕ್ಯುಟೀವ್ ಕಳುಸಿ ಮದ್ಯ ಕಳಿಸುವುದಾಗಿ ಹೇಳಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ಹಣ ಪಾವತಿಸಿದ ಸ್ವಲ್ಪ ಸಮಯದ ಬಳಿಕ ಒಬ್ಬ ವ್ಯಕ್ತಿಯಿಂದ ನನಗೆ ಕರೆ ಬಂದು, ಆತ ತನ್ನನ್ನು ಸೇಲ್ಸ್ ಎಕ್ಸಿಕ್ಯುಟೀವ್ ಎಂದು ಪರಿಚಯಿಸಿಕೊಂಡ. ಮನೆಯಲ್ಲಿ ಮದ್ಯವನ್ನು ತಲುಪಿಸಲು ನೋಂದಾಯಿಸಿಕೊಳ್ಳಬೇಕು ಎಂದು ಮಹಿಳೆಗೆ ಹೇಳಿದ್ದು, ಇದನ್ನ ಮಾಡಲು ಒಬ್ಬ ಕಾರ್ಯನಿರ್ವಾಹಕನು ಸಹಾಯ ಮಾಡುತ್ತಾನೆ ಎಂದಿದ್ದಾನೆ. ಇನ್ನೊಬ್ಬ ವ್ಯಕ್ತಿ ತನಗೆ ಕರೆ ಮಾಡಿ ಮೊಬೈಲ್ ಪಾವತಿ ಸೇವೆ ಗೂಗಲ್ ಪೇಗೆ ಹೋಗುವಂತೆ ಕೇಳಿಕೊಂಡಿದ್ದು, ಪಾವತಿಯ ಸ್ಥಳದಲ್ಲಿ ರಸೀದಿ ಸಂಖ್ಯೆ 19,051 ನಮೂದಿಸಲು ಕೇಳಿದ್ದಾನೆ. ಬಳಿಕ ಮಹಿಳೆಯ ಖಾತೆಯಿಂದ 19,051 ರೂ.ಗಳನ್ನ ವರ್ಗಾಯಿಸಲಾಗಿದೆ ಎಂಬ ಸಂದೇಶವನ್ನ ತಕ್ಷಣವೇ ಆಕೆ ಸ್ವೀಕರಿಸಿದ್ದಾಳೆ.

ವ್ಯವಸ್ಥೆಯಲ್ಲಿನ ಸಮಸ್ಯೆಯಿಂದಾಗಿ, ಹಣವನ್ನ ಕ್ರೆಡಿಟ್ ಮಾಡುವ ಬದಲು ಡೆಬಿಟ್ ಮಾಡಲಾಗುತ್ತಿದೆ ಎಂದು ದರೋಡೆಕೋರ ಮಹಿಳೆಗೆ ಹೇಳಿದ್ದಾನೆ. ಅವ್ರ ಮಾತನ್ನ ನಂಬಿದ ಮಹಿಳೆ ಆಕೆಯ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳನ್ನ ನೀಡಿದ್ದಾಳೆ.

ಈ ರೀತಿ ಮಾಡಿದ ಬಳಿಕ ಮಹಿಳೆ ಖಾತೆಯಿಂದ 95,051, 1,71,754, 48,000 ಮತ್ತು 96,045 ರೂ. ಈ ರೀತಿಯಾಗಿ, ವಂಚಕ ಮಹಿಳೆಗೆ 5.35 ಲಕ್ಷ ರೂ.ಗಳನ್ನ ವಂಚಿಸಿದ್ದಾನೆ.