Thursday, 19th September 2024

ಎಂಟು ಯೂಟ್ಯೂಬ್ ವಾಹಿನಿಗಳ ನಿರ್ಬಂಧ

ನವದೆಹಲಿ: ಐಟಿ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರ ಗಳನ್ನು ಬಳಸಿಕೊಂಡು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಂಟು ಯೂಟ್ಯೂಬ್ ವಾಹಿನಿಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.

ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್ಗಳು 114 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು, 85 ಲಕ್ಷಕ್ಕೂ ಹೆಚ್ಚು ಬಳಕೆ ದಾರರು ಚಂದಾ ದಾರರಾಗಿದ್ದಾರೆ.

ಈ ಕೆಲವು ಚಾನೆಲ್ ಗಳು ಪ್ರಕಟಿಸಿದ ವಿಷಯದ ಉದ್ದೇಶವು ಭಾರತದಲ್ಲಿನ ಧಾರ್ಮಿಕ ಸಮುದಾಯಗಳಲ್ಲಿ ದ್ವೇಷವನ್ನು ಹರಡು ವುದಾಗಿತ್ತು. ನಿರ್ಬಂಧಿಸ ಲಾದ ಯೂಟ್ಯೂಬ್ ಚಾನೆಲ್ ಗಳ ವಿವಿಧ ವೀಡಿಯೊಗಳಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗಿದೆ.