ಶಿಶಿರ ಕಾಲ
shishirh@gmail.com
ಬಹಳಷ್ಟು ಮಂದಿ ಬರೆಯುತ್ತಾರೆ, ಕೆಲವರಷ್ಟೇ ಅದನ್ನು ಸಿದ್ಧಿಸಿಕೊಂಡಿರುತ್ತಾರೆ. ಓದುಗರನ್ನು ಹಂದಾಡಲು ಬಿಡದೆ ಓದಿಸಿ ಕೊಂಡು ಹೋಗುವ ಶಕ್ತಿ ಕೆಲವರ ಕಥೆ-ಕಾದಂಬರಿಗೆ, ಲೇಖನಕ್ಕೆ, ಪ್ರಬಂಧಕ್ಕೆ ಮಾತ್ರ ಇರುತ್ತದೆ. ಅಂಥವರನ್ನು ಓದುವುದು ರೋಡ್ ಹಂಪು, ಗುಂಡಿಗಳಿಲ್ಲದ ಸೂಪರ್ ಹೈವೆಯಲ್ಲಿ ಎಸಿ ಹಚ್ಚಿ ಕಾರು ಓಡಿಸಿದಂತೆ. ಇನ್ನು ಕೆಲವರಲ್ಲಿ ವಿಷಯ ಬೇಕಾ ದಷ್ಟಿರುತ್ತದೆ.
ಆದರೆ ಅವರು ಬರೆದದ್ದು ಓದಿ ಮುಗಿಸುವುದು ಕಷ್ಟ. ಎರಡನೇ ಪ್ಯಾರದಲ್ಲಿಯೇ ಸುಸ್ತುಗಟ್ಟುತ್ತದೆ. ಓದುಗನ ಸ್ಥಿತಿ ಶಿರಾಡಿ ಘಟ್ಟವನ್ನು ಹತ್ತುವ ಹಳೆಯ ಬಸ್ಸಿ ನಂತಾಗಿಬಿಡುತ್ತದೆ. ಒಂದೇ ಜಪಾಟಿಗೆ ಓದಲಾಗುವುದಿಲ್ಲ. ತೇಜಸ್ವಿ, ಭಟ್ಟರು, ಜಯಂತ್ ಕಾಯ್ಕಿಣಿ, ಜೋಗಿ ಹೀಗೆ ಇನ್ನು ಅನೇಕರ ಬರಹದ ನುಣುಪು ಓದುವಾಗ ನಮ್ಮರಿವಿಗೆ ಬಾರದೇ ಇರುವುದಿಲ್ಲ. ಕನ್ನಡದಲ್ಲಿ ಅಂತ ಅಲ್ಲ, ಇಂಗ್ಲಿಷಿನಲ್ಲೂ ಹಾಗೆಯೇ. ಕೆಲವರು ಕ್ಲಿಷ್ಟವಾಗಿ ಬರೆಯುವವರು, ಇನ್ನು ಕೆಲವರು ಬಹಳ ಸಿಂಪಲ್ ಆದರೆ ಪರಿಣಾಮಕಾರಿ.
ಲೋಕೋ ಭಿನ್ನ ರುಚಿಃ. ನನ್ನ ಮಟ್ಟಿಗಂತೂ ಓದು ಆರಾಮಾಗಿರಬೇಕು, ರಂಜಿಸುವಂತಿರಬೇಕು, ಜತೆಗೆ ವಿಷಯವೂ ಬೇಕು. ಸರಳವಾಗಿ ಬರೆಯು ವವರ ಪ್ರಮಾಣ ಕಡಿಮೆ. ಏಕೆಂದರೆ ಅದು ಕಷ್ಟದ ಕೆಲಸ. Simple is difficult. ಅತ್ಯಂತ ಸರಳ ವಾಗಿ, ಮನೋಜ್ಞವಾಗಿ ಬರೆಯುವ- ನಾನು ಓದಿಕೊಂಡ ಬರಹಗಾರರಲ್ಲಿ ಸಲ್ಮಾನ್ ರಶ್ದಿ ಕೂಡ ಒಬ್ಬರು. ಅವರ ’’Language of Truth: Essays 2003-2020 20032020’ ಈಗ ಎರಡು ವಾರದ ಹಿಂದೆಯಷ್ಟೇ ಓದಲು ಎತ್ತಿಕೊಂಡಿದ್ದೆ. ಅದರ ಮೊದಲ ಪ್ರಬಂಧ ‘ಕಥೆ’ಯ ಮೇಲೆ.
ರಶ್ದಿ ‘ಕಥೆ’ ಎನ್ನುವ ಮನುಷ್ಯನ ಆವಿಷ್ಕಾರವನ್ನು ಬಹಳ ಸೂಕ್ಷ್ಮವಾಗಿ ವಿವರಿಸುತ್ತ ಹೋಗುತ್ತಾರೆ. ಪುಸ್ತಕಕ್ಕಿಂತ ಮೊದಲು ಕಥೆ ಹುಟ್ಟಿಕೊಂಡದ್ದು, ಕಥೆಗಳು ನಮ್ಮೆಲ್ಲರ ಬಾಲ್ಯವನ್ನು ಆವರಿಸಿಕೊಳ್ಳುವ ಪರಿ, ಯಾವ ಕಥೆಗಳು ನಮಗಿಷ್ಟ ಎನ್ನುವುದು ನಮ್ಮ ವ್ಯಕ್ತಿತ್ವ ಸೂಚಕವಾಗುವುದು- ಇವೆಲ್ಲ ವಿಚಾರಗಳು ಅವರ ಪ್ರಬಂಧದಲ್ಲಿ ಒಂದು ಲಹರಿಯಲ್ಲಿ ಹರಿಯುತ್ತ ಹೋಗುತ್ತದೆ. ರಶ್ದಿ ಆ ಕಾರಣಕ್ಕೇ ಇಷ್ಟವಾಗೋದು.
ಸಲ್ಮಾನ್ ರಶ್ದಿ ಹುಟ್ಟಿದ್ದು ಮುಂಬೈನಲ್ಲಿ. ಸ್ವಾತಂತ್ರ್ಯಕ್ಕಿಂತ ಎರಡು ತಿಂಗಳ ಮೊದಲು. ಅವರದು ಅಪರೂಪದ ಮುಸ್ಲಿಂ ಲಿಬರಲ್ ಕುಟುಂಬ. ಅರೇಬಿಯನ್ ನೈಟ್ಸ್, ಮಹಾಭಾರತ, ರಾಮಾಯಣ ಹೀಗೆ ಎಲ್ಲ ರೀತಿಯ ಕಾವ್ಯಗಳನ್ನು, ಕಥೆಗಳನ್ನು
ಕೇಳುತ್ತ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿಗಳ ಸೌಹಾರ್ದದ ಬದುಕಿನ ನಡುವೆ ಬೆಳೆದವರು ರಶ್ದಿ. ಬಾಲ್ಯದಿಂದಲೂ
ಕಥೆ ಅವರ ಜೀವನದ ಅವಿಭಾಜ್ಯ ಅಂಗ. ಚಿಕ್ಕ ಹುಡುಗ ರಶ್ದಿಯನ್ನು ದೊಡ್ಡವನಾದ ಮೇಲೆ ಏನಾಗುತ್ತೀ ಎಂದು ಕೇಳಿದರೆ ಕಥೆಗಾರ, ಬರಹಗಾರನಾಗುತ್ತೇನೆ ಎಂದೇ ಹೇಳುತ್ತಿದ್ದರಂತೆ.
ಬರೆಯುವ ಗೀಳೇ ಹಾಗೆ, ಯಾವತ್ತೋ ಹುಟ್ಟಿಕೊಂಡುಬಿಡುತ್ತದೆ. ಹೀಗೆ ಕಥೆಯೇ ಬದುಕೆಂದವನ ಬದುಕೇ ಕಥೆ ಯಂತಾದದ್ದರ ಒಂದು ಇಣುಕುನೋಟ ಇಲ್ಲಿ- ನಿಮಗೆ. ಆಗಿನ ಕಾಲದಲ್ಲಿ ಸ್ವಲ್ಪ ಹಣವಿದ್ದವರೆಲ್ಲ ಇಂಗ್ಲೆಂಡಿಗೆ ಓದಿಗೆ ತಮ್ಮ ಮಕ್ಕಳನ್ನು ಕಳುಹಿ ಸುವ ಪರಿಪಾಠವಿತ್ತು. ಆಗಿನ್ನೂ ಭಾರತದಲ್ಲಿ, ಸ್ವಾತಂತ್ರ್ಯದ ನಂತರದಲ್ಲಿ ಶಿಕ್ಷಣಕ್ಕೊಂದು ದಿಕ್ಕು ಸಿಕ್ಕಿರಲಿಲ್ಲ. ರಶ್ದಿಯನ್ನು ‘ನೀನೂ ಇಂಗ್ಲೆಂಡಿಗೆ ಹೋಗುತ್ತೀಯಾ?‘ ಎಂದು ಕೇಳಿದಾಗ ‘ಸರಿ’ ಎಂದು ಹೊರಟರು.
ಅವರ ಇತ್ತೀಚಿನ ಮಾತಿನಲ್ಲಿ ತಾನು ಆಗ ಅದೇಕೆ ಅಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡೆ ಎಂಬುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಿದೆ. ‘ನಾನು ಅಂದು ಇಂಗ್ಲೆಂಡಿಗೆ ಓದಿಗೆ ಹೋಗಲು ಬಹುಶಃ ನಾನು ಚಿಕ್ಕವನಿದ್ದಾಗ ಇಂಗ್ಲೆಂಡಿನ ಬಗ್ಗೆ ಓದಿಕೊಂಡಿದ್ದೇ ಕಾರಣವಿರಬೇಕು, ಪುಸ್ತಕದ ಇಂಗ್ಲೆಂಡ್ ಒಂದು ರೀತಿಯ ಮಾಯಾ ಬಜಾರಿನಂತಿತ್ತು. ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು, ಇಂಗ್ಲೆಂಡ್ ಎಂದರೆ ಏನು ಹೇಗೆ ಎಂದು’ ಎಂದಿದ್ದಾರೆ ಅವರು.
ರಶ್ದಿ ಬೆಳ್ಳಗೆ, ಬಿಳಿಯರಂತೆ ಇದ್ದರೂ ಅವರನ್ನು ಅಂದಿನ ಇಂಗ್ಲೆಂಡ್ ಒಪ್ಪಿಕೊಳ್ಳಲಿಲ್ಲ. 1970-80ರ ಕಾಲಘಟ್ಟದಲ್ಲಿ ಇಂಗ್ಲೆಂಡಿ ನಲ್ಲಿ ಎಲ್ಲಿಲ್ಲದ ಪ್ರಮಾಣದಲ್ಲಿ ವರ್ಣಭೇದ, ತಾರತಮ್ಯವಿತ್ತು. ಈ ದೇಶಕ್ಕೆ ವಲಸೆ ಬಂದ ದಕ್ಷಿಣ ಏಷ್ಯಾದವರು ಅಲ್ಲಲ್ಲಿ ದಂಗೆ ಯೇಳುವುದು, ಸಮಾನತೆಗೆ ಹೋರಾಡುವುದು ಸಾಮಾನ್ಯವಾಗಿತ್ತು. ತಾವು ಬರಹಗಾರನಾಗಬೇಕೆಂಬ ಒತ್ತಾಸೆ ಇಂಗ್ಲೆಂಡಿ ನಲ್ಲಿ ಪದವಿ ಪಡೆದ ನಂತರವೂ ಕ್ಷೀಣಿಸಲಿಲ್ಲ.
ಇಂಗ್ಲೆಂಡಿನಲ್ಲಿ ಪರಕೀಯರಾಗಿದ್ದ ರಶ್ದಿಗೆ ಮೊದಲು ತಾನು ಯಾವ ರೀತಿಯ ಬರಹಗಾರನಾಗಬೇಕು ಎನ್ನುವುದರೆಡೆಗೆ ಒಂದಿಷ್ಟು ಗೊಂದಲಗಳಿದ್ದವು. ಅವರು ಬರೆದದ್ದು ಚೆನ್ನಾಗಿಯೇ ಇದ್ದಿದ್ದರೂ ಅದು ಆ ಪರಕೀಯ ಸಮಾಜಕ್ಕೆ ಹೊಂದಿ ಬರುತ್ತಿರ ಲಿಲ್ಲ. ಬರೆದು ಕಳಿಸಿದ್ದೆಲ್ಲ ಪತ್ರಿಕಾಲಯದ, ಪಬ್ಲಿಷರ್‌ಗಳ ಕಸದಬುಟ್ಟಿ ಸೇರುತ್ತಿತ್ತು. Grimus ಎನ್ನುವ ಕಾದಂಬರಿ ಪ್ರಕಟವಾ ಯಿತು, ಯಾರೂ ಖರೀದಿಸಿ ಓದಲಿಲ್ಲ. ಆ ಸಂದರ್ಭದಲ್ಲಿ ರಶ್ದಿ ಒಬ್ಬ ಸೋತ ಬರಹಗಾರ. ತಮ್ಮ ಬರಹಗಳಲ್ಲಿ ಏನೋ ಒಂದು ಮಿಸ್ ಹೊಡೆಯಿತ್ತಿದೆ ಎನ್ನುವುದು ಅವರಿಗೆ ತಿಳಿಯಿತು.
ಆಗ ಮುಂಬೈಗೆ ವಾಪಸ್ಸಾದರು. ಆರು ತಿಂಗಳು ಬೀದಿ ಸುತ್ತಿದರು. ನಂತರ ಒಂದು ಅದ್ಭುತ ಕಾದಂಬರಿ ಜನ್ಮತಾಳುತ್ತದೆ. ಅದುವೇ ’’Midnight’s Children’. ಈ ಪುಸ್ತಕ ಅವರಂತೆ ಅಂದಿನ ಸ್ವತಂತ್ರ ಭಾರತದ ಮೊದಲ ಪೀಳಿಗೆಯ ಬಗ್ಗೆ- ಪ್ರಕಟವಾಗಿದ್ದು 1981ರಲ್ಲಿ. ಅಲ್ಲಿಂದ ಮುಂದೆ ರಶ್ದಿ ಹಣೆಬರಹ ಬದಲಾಯಿತು. ಈ ಪುಸ್ತಕ ಅಂದಿನ ಬ್ಲಾಕ್‌ಬಸ್ಟರ್. ಅದೆಷ್ಟೋ ಲಕ್ಷ ಪ್ರತಿಗಳು ಮಾರಾಟವಾದವು- ಸುಮಾರು ಐವತ್ತು ಭಾಷೆಗಳಲ್ಲಿ ತರ್ಜುಮೆ ಕೂಡ ಕಂಡಿತು, ಬುಕರ್ ಪ್ರಶಸ್ತಿಯನ್ನು ಕೂಡ
ತಂದುಕೊಟ್ಟಿತು.
ಅಂದು ಬುಕರ್ ಪಡೆಯುವುದು ಇಂದಿನಂತಿರಲಿಲ್ಲ. ಈಗಷ್ಟೇ ಹೇಳಿದಂತೆ ವರ್ಣಭೇದವಿತ್ತು, ಭಾರತೀಯರನ್ನು ಥರ್ಡ್ ಗ್ರೇಡ್ ಸಿಟಿಜನ್ ಎಂದೇ ನೋಡುತ್ತಿದ್ದ ಕಾಲ. ಆದಾಗ್ಯೂ ಕಾದಂಬರಿಗೆ ಬ್ರಿಟಿಷ್ ಲೇಖಕರಲ್ಲ ಮೆಚ್ಚುಗೆ ಸಿಕ್ಕಿತ್ತು. ಇದು ಒಂದಿಷ್ಟು ಬಿಳಿಯ ಬರಹಗಾರರಲ್ಲಿ ಅಸೂಯೆಯನ್ನೂ ಹುಟ್ಟುಹಾಕಿತ್ತು. ಏಕೆಂದರೆ ರಶ್ದಿ ಭಾರತೀಯ ಮತ್ತು ಅವರಿಗೆ ಆಗಿನ್ನೂ ೩೪ ವರ್ಷ- ಚಿಗುರು ಮೀಸೆ.
ಈ ಪುಸ್ತಕದ ಪ್ರಸಿದ್ಧಿಯಿಂದಾಗಿ ರಶ್ದಿ ಬರಹಗಾರನಾಗಿಯೇ ಉಳಿದುಕೊಂಡು ಮುಂದುವರಿಯುವಂತಾಯಿತು. ಸಲ್ಮಾನ್ ರಶ್ದಿ ಮುಂದಿನ ಐದು ವರ್ಷ ತೆಗೆದುಕೊಂಡು ಬರೆದದ್ದು ’The Satanic Verses’. ಈ ಕಾದಂಬರಿ ಬರೆಯದಿದ್ದಲ್ಲಿ ಬಹುಶಃ ರಶ್ದಿ ಬದುಕು ಹೀಗಾಗಿರುತ್ತಿರಲಿಲ್ಲ, ಪ್ರಕಟಿಸಿದ ನಂತರದ ಹತ್ತು ವರ್ಷ ಐವತ್ತಾರು ಬಾರಿ ಮನೆ ಬದಲಿಸಬೇಕಾದ ಸ್ಥಿತಿ ಅವರಿ ಗಾಗುತ್ತಿರಲಿಲ್ಲ, ಅವರ ಮೇಲೆ ಇಪ್ಪತ್ತಕ್ಕಿಂತ ಹೆಚ್ಚಿನ ಕೊಲೆ ಪ್ರಯತ್ನವಾಗುತ್ತಿರಲಿಲ್ಲ, ಈಗ ಒಂದು ವಾರದ ಹಿಂದೆ ನ್ಯೂಯಾ ರ್ಕ್‌ನ ಒಂದು ಸ್ಟೇಜಿನಲ್ಲಿ- ಜನರ ಮಧ್ಯೆ ಇರಾನಿನ ಮೂಲದ ಭಯೋತ್ಪಾದಕ ಅವರ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕು ಚುಚ್ಚುತ್ತಿರಲಿಲ್ಲ, ಒಬ್ಬ ಕಥೆಗಾರನ ಬದುಕೇ ಒಂದು ಕಥೆಯಾಗುತ್ತಿರಲಿಲ್ಲ.
ಸೆಟಾನಿಕ್ ವರ್ಸಸ್- ಅದೊಂದು ಕಾಲ್ಪನಿಕ ಕಾದಂಬರಿ. ಅದರ ಮುಖ್ಯ ಪಾತ್ರಗಳಲ್ಲಿ ಇಬ್ಬರು ಭಾರತೀಯ ಮೂಲದ,
ಅಂದಿನ ಕಾಲದಲ್ಲಿ ಇಂಗ್ಲೆಂಡಿನಲ್ಲಿ ವಾಸಿಸುತ್ತಿದ್ದ ಮುಸ್ಲಿಂ ನಟರು. ಗಿಬ್ರೀಲ್ ಫರಿಸ್ತಾ ಮತ್ತು ಸಾಲದಿನ್ ಚಮಚಾ- ಈ ಪಾತ್ರ ಗಳ ಹೆಚ್ಚು ಕಡಿಮೆ ಹೋಲಿಕೆ ಅಮಿತಾಬ್ ಬಚ್ಚನ್ ಮತ್ತು ಎನ್. ಟಿ.ರಾಮರಾವ್. ಈ ಪಾತ್ರಗಳು ಭಾರತದಿಂದ ಇಂಗ್ಲೆಂಡಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿzಗ ಭಯೋತ್ಪಾದಕರು ವಿಮಾನವನ್ನು ಸೋಟಿಸಿದಾಗ ಈ ಇಬ್ಬರೂ ಮ್ಯಾಜಿಕಲ್ ರೀತಿಯಲ್ಲಿ ಬದುಕಿ, ಅವರಲ್ಲಿ ಒಬ್ಬ ಸೈತಾನನಾಗಿ, ಇನ್ನೊಬ್ಬ ದೇವದೂತನಾಗಿ ನಂತರ ಮನುಷ್ಯರೂಪ ಪಡೆಯುತ್ತಾರೆ.
ನಂತರದಲ್ಲಿ ಕಥೆ ನಾನಾ ಮಗ್ಗುಲು ಪಡೆಯುತ್ತದೆ. ಅಲ್ಲಿ ಕನಸುಗಳ ಹಲವು ಅನುಕ್ರಮಗಳು ಬರುತ್ತವೆ ಇತ್ಯಾದಿ. ಇಲ್ಲಿ ವೇಶ್ಯಾಗೃಹಗಳು, ವೇಶ್ಯೆಯರ ಬಗ್ಗೆ, ಆಯೇಷಾ ಬಗ್ಗೆ ಪ್ರಸ್ತಾಪಗಳಿವೆ. ವೇಶ್ಯೆಯರು ಪ್ರೊಫೆಟ್‌ನ ಹೆಂಡತಿಯ ರೂಪವನ್ನು ತಾಳುತ್ತಾರೆ ಎಂದು ಕೆಲವು ಮುದ್ರಿತ ಅವತರಣಿಕೆಗಳಲ್ಲಿ ಬಂದಿದೆಯಂತೆ. ನಾನು ಓದಿದ್ದರಲ್ಲಿ ಈ ವೇಶ್ಯೆಯರು ಪ್ರೊಫೆಟ್‌ನ ಹೆಂಡತಿಯ ಹೆಸರುಗಳನ್ನು ಮಾತಿನಲ್ಲಿ ತೆಗೆದುಕೊಳ್ಳುತ್ತಾರೆ, ಅಷ್ಟೆ. ಸೆಪ್ಟೆಂಬರ್ 1988- ಈ ಪುಸ್ತಕ ಬಿಡುಗಡೆಯಾಗುವ ಸಮಯದಗಲೇ ಇಸ್ಲಾಮ್ ಮೂಲಭೂತವಾದ ಎಡೆ ತೀವ್ರವಾಗಿತ್ತು. ಹಾಗಾಗಿ ಮೇಲೆ ಹೇಳಿದ ಕಾರಣಕ್ಕೆ ಈ ಪುಸ್ತಕ ವನ್ನಿಟ್ಟುಕೊಂಡು ಮುಸ್ಲಿಂ ಜಗತ್ತಿನಲ್ಲಿ, ಅರಬ್ ರಾಷ್ಟ್ರಗಳಲ್ಲಿ ಚಿಕ್ಕಪುಟ್ಟ ಗಲಾಟೆಗಳು ಶುರುವಾದವು.
ಇತ್ತ ಪಾಶ್ಚಿಮಾತ್ಯ ದೇಶಗಳಲ್ಲಿ ಪುಸ್ತಕ ಲೆಕ್ಕ ಮೀರಿ ಮಾರಾಟವಾಗುತ್ತಿತ್ತು. ಹೇಳಿ ಕೇಳಿ ಬುಕರ್ ಪ್ರಶಸ್ತಿ ಪಡೆದ ಲೇಖಕನ ಇನ್ನೊಂದು ಕಾದಂಬರಿ. ಅದೇ ಸಮಯದಲ್ಲಿ ಇಂಗ್ಲೆಂಡಿನ ಇಮಾಮನೊಬ್ಬ ಒಂದೈವತ್ತು ಜನರನ್ನು ಸೇರಿಸಿ ಗಲಾಟೆ ಮಾಡಿದ್ದ. ಹೀಗೆ ಪುಸ್ತಕ ಇಂಗ್ಲೆಂಡಿನಲ್ಲಿ ಮತ್ತು ಪಾಶ್ಚಾತ್ಯದಲ್ಲಿ ಹಾಗೂ ಅರಬ್ ಜಗತ್ತಿನಲ್ಲಿ ಸುದ್ದಿಯಲ್ಲಿತ್ತು. ಪ್ರಕಟವಾದ ಸುಮಾರು ಐದು ತಿಂಗಳ ನಂತರ ಇರಾನಿನ ಅಂದಿನ, ಮೊದಲ ಸುಪ್ರೀಂ ಲೀಡರ್ ಅಯತೊ ಖೊಮೇನಿ, ‘ರಶ್ದಿ ಪ್ರೊಫೆಟ್ ಮೊಹಮ್ಮದ್ ಮತ್ತು ಕುರಾನಿಗೆ ಅವಮಾನ ಮಾಡಿದ್ದಾನೆ, ಮುಸ್ಲಿಮರು ಆತನನ್ನು ಕಂಡಲ್ಲಿ ಕೊಲ್ಲಬೇಕು, ಆ ಮೂಲಕ ಮುಂದಿನ ದಿನಗಳಲ್ಲಿ ಜಗತ್ತಿನಲ್ಲಿ ಯಾರೇ ಇಸ್ಲಾಮನ್ನು ಪ್ರಶ್ನಿಸುವುದಕ್ಕೆ ಹೆದರುವಂತಾಗಬೇಕು’ ಎಂದು ಫತ್ವಾ ಹೊರ ಡಿಸಿಬಿಟ್ಟ.
ಖೊಮೇನಿ ಆಗತಾನೆ ಪರ್ಶಿಯನ್ ರಾಜಮನೆತನದ ಆಡಳಿತ ಕೊನೆಗೊಂಡು ಷೆರಿಯಾ ಕಾನೂನನ್ನು, ಆಡಳಿತವನ್ನು ಇರಾನಿನಲ್ಲಿ ಸ್ಥಾಪಿಸಿದ್ದ. ಷೆರಿಯಾ, ಫಿಕ್, ಫತ್ವಾ ಇವೆಲ್ಲ ಅಲ್ಲಿಯವರೆಗೆ ಅಷ್ಟು ಜಾರಿಯಲ್ಲಿರಲಿಲ್ಲ- ಹೊಸತು. ಖೊಮೇನಿಯ ಫತ್ವಾ ಎಲ್ಲಿಲ್ಲದ ಪ್ರಚಾರವನ್ನು ಪಡೆದುಕೊಂಡಿತು. ರಶ್ದಿ ದೂರದ ಇಂಗ್ಲೆಂಡಿನಲ್ಲಿದ್ದರೂ ಜೀವ ಇಟ್ಟುಕೊಳ್ಳಲು ದಿನಬೆಳಗಾಗು ವುದರೊಳಗೆ ಭೂಗತವಾಗಬೇಕಾಯಿತು. ಏಕೆಂದರೆ ಇಂಗ್ಲೆಂಡಿನಲ್ಲಿ ಮುಸ್ಲಿಮರಿದ್ದರು.
ಇಂಗ್ಲೆಂಡಿನ ಪೊಲೀಸರು ಮುಂದಿನ ಬಹುಕಾಲ ರಶ್ದಿಯನ್ನು ಅಜ್ಞಾತ ಜಾಗದಲ್ಲಿ ಇಟ್ಟು, ವಾರಕ್ಕೊಮ್ಮೆ ಸ್ಥಳಾಂತರಿಸುತ್ತ
ಕಾಪಾಡಿಕೊಳ್ಳಬೇಕಾಯಿತು. ಫತ್ವಾ ಹೊರಬಿದ್ದದ್ದೇ ಬಿದ್ದದ್ದು, ಈ ಕಲ್ಪಿತ ಕಾದಂಬರಿಯ ಮೇಲೆ ಮುಸ್ಲಿಂ ಜಗತ್ತು ದಂಗೆ ಯೆದ್ದಿತು. ‘ಅಹು ಅಕ್ಬರ್, ಹ್ಯಾಂಗ್ ರಶ್ದಿ’ ಕೂಗುಗಳು ಎಡೆ ಎದ್ದವು. ಗಲಾಟೆ ಮಾಡುತ್ತಿದ್ದವರಲ್ಲಿ ಬಹುತೇಕರು ಕಾದಂಬರಿಯಲ್ಲಿ ಏನಿದೆ, ಅವಮಾನವಾಗಿದ್ದು ಹೌದೇ ಎನ್ನುವುದನ್ನು ಪರಾಮರ್ಶಿಸಲೂ ಇಲ್ಲ.
ಅತ್ತ ಈ ಫತ್ವಾದಿಂದ ಖೊಮೇನಿಗೆ ಒಂದಿಷ್ಟು ಅಂತಾರಾಷ್ಟ್ರೀಯ ರಾಜಕೀಯ ಮೈಲೇಜ್ ಸಿಕ್ಕಿತು. ಆತ ಫತ್ವಾವನ್ನು
ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಕೂತ. ಇದಾದ ನಾಲ್ಕೇ ತಿಂಗಳಲ್ಲಿ ಖೊಮೇನಿ ತೀರಿಕೊಂಡ. ಆದರೆ ಫತ್ವಾ
ಮಾತ್ರ ಹಾಗೆಯೇ ಉಳಿದುಕೊಂಡಿತು. ಇದಷ್ಟೇ ಅಲ್ಲ, ಇದೆಲ್ಲ ಇನ್ನಷ್ಟು ತೀವ್ರವಾಯಿತು. ಬ್ರುಸೆಲ್ಸನ ಇಸ್ಲಾಮಿಕ್ ಸೆಂಟರ್‌ನ ಮುಖ್ಯಸ್ಥ ಅಬ್ದು ಅಹ್ಲಾದ್ ಮತ್ತು ಅಲ್ಲಿನ ಗ್ರಂಥಪಾಲಕ ರಶ್ದಿಯ ಪರವಾಗಿ ಮಾತನಾಡಿದರು. ಅವರಿಬ್ಬರನ್ನು ರಸ್ತೆ ಮಧ್ಯೆ ಹಣೆಗೆ ಗುಂಡಿಕ್ಕಿ ಕೊಲ್ಲಲಾಯಿತು. ರಶ್ದಿ ಪ್ರತಿಕೃತಿಗಳಿಗೆ ದಂಗೆಗಳಲ್ಲಿ ಬೆಂಕಿ ಹಚ್ಚಲಾಯಿತು.
ಬ್ರಿಟಿಷ್ ಪುಸ್ತಕದಂಗಡಿಗಳಿಂದ ಈ ಕಾದಂಬರಿಯನ್ನು ಹಿಂತೆಗೆದುಕೊಳ್ಳಲಾಯಿತು. ಅಂದಿನ ಫೇಮಸ್ ಬರಹಗಾರ ಸ್ಟಿಫನ್ ಕಿಂಗ್ ಮತ್ತು ಹಲವು ಪಾಶ್ಚಾತ್ಯ ಬರಹಗಾರರು ರಶ್ದಿಯ ಬೆಂಬಲಕ್ಕೆ ನಿಂತರು. ರಶ್ದಿ ಪುಸ್ತಕವನ್ನು ಮಾರಾಟ ಮಾಡದಿದ್ದ ಅಂಗಡಿಯಲ್ಲಿ ನಮ್ಮ ಪುಸ್ತಕವಿಡುವುದು ಬೇಡವೆಂದರು. ಇದರಿಂದಾಗಿ ಸೆಟಾನಿಕ್ ವರ್ಸಸ್ ಮತ್ತೆ ಪುಸ್ತಕದ ಮಳಿಗೆಗಳಿಗೆ ಬಂದವು. ಅಂತಹ ಪುಸ್ತಕದ ಮಳಿಗೆಗಳಿಗೆ ಕಲ್ಲು ಹೊಡೆಯಲಾಯಿತು. ಇದು ನೋಡನೋಡುತ್ತ ಇರಾನ್ ಮತ್ತು ಪಾಶ್ಚಾತ್ಯ ರಾಜಕೀಯದ ಬಣ್ಣವನ್ನೂ ಪಡೆದುಕೊಂಡಿತು.
ರಶ್ದಿಯ ಔನ್ನತ್ಯವನ್ನು ಕಂಡರಾಗದ ಹೊಟ್ಟೆಕಿಚ್ಚಿನ ಬರಹಗಾರರು ರಶ್ದಿಯನ್ನು ಅವಕಾಶವಾದಿ, ಪುಸ್ತಕ ಮಾರಾಟಕ್ಕೆಂದೇ ಮಾಡಿದ ಗಿಮಿಕ್ಕು ಎಂದರು. ಅಮೆರಿಕದ ಅಂದಿನ ಅಧ್ಯಕ್ಷ ಇರಾನಿನ ಜತೆ ಸಂಬಂಧ ಗಟ್ಟಿಮಾಡಿಕೊಳ್ಳಲು ರಶ್ದಿ ಪುಸ್ತಕವನ್ನು ಖಂಡಿಸಿದ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಪುಸ್ತಕದನಿದೆ ಎಂದು ನೋಡದೇ, ಸಕಾರಣ ಕೊಡದೇ ಬ್ಯಾನ್ ಮಾಡಿ ದವು. ಖೊಮೇನಿ ನಿಧನಾನಂತರ ಅಧಿಕಾರಕ್ಕೆ ಬಂದ ಅಯತೊ ಖಮೇನೇ ಕೂಡ ರಶ್ದಿಯನ್ನು, ಕಾದಂಬರಿಯನ್ನು ರಾಜ ಕೀಯಕ್ಕೆ, ಜನಪ್ರಿಯತೆಗೆ ಬಳಸಿಕೊಂಡ.
ಏಕೆಂದರೆ ಆಗ ಇರಾನ್ ಮತ್ತು ಮುಸ್ಲಿಂ ಜಗತ್ತು ರಶ್ದಿ ಎಂದಾಕ್ಷಣ ಒಂದಾಗಿಬಿಡುತ್ತಿತ್ತು. ನಂತರದಲ್ಲಿ ಈ ಪುಸ್ತಕದ ಅನುವಾ ದಕರನ್ನು ಕೂಡ ಬಿಡಲಿಲ್ಲ. ಇಟಲಿಯಲ್ಲಿ ಕಾದಂಬರಿಯನ್ನು ತರ್ಜುಮೆ ಮಾಡಿದವನ ಮೇಲೆ ದಾಳಿಯಾಯಿತು. ಜಪಾನಿನ ಪ್ರೊಫೆಸರ್ ಹಿತೋಷಿ ಇಗರಾಶಿ ಈ ಪುಸ್ತಕವನ್ನು (ಜಪಾನಿ ಭಾಷೆಗೆ) ತರ್ಜುಮೆ ಮಾಡಿದ ವರ್ಷದೊಳಗೆ ಯೂನಿವರ್ಸಿಟಿಯ ಒಳಗೇ ಚಾಕು ಇರಿತದಿಂದ ಕೊಲೆಯಾಗಿ ಹೋದ. ಟರ್ಕಿ ಯಲ್ಲಿ ಈ ಕಾದಂಬರಿಯನ್ನು ಭಾಷಾಂತರಿಸಿದ ವ್ಯಕ್ತಿ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುತ್ತಾನೆ ಎನ್ನುವ ಸುದ್ದಿಯಾಗಿ ಇಡೀ ಹೋಟೆಲ್ ಅನ್ನು ಸುಟ್ಟುಹಾಕಲಾಯಿತು.
ಅದರಲ್ಲಿ 37 ಮಂದಿ ಪ್ರಾಣ ಕಳೆದುಕೊಂಡರು. ರಶ್ದಿಯನ್ನು ಒಪ್ಪಿ ಮಾತನಾಡಿದ್ದ ಕಾರಣಕ್ಕೆ ನೊಬೆಲ್ ಪುರಸ್ಕೃತ ನಜೀಬ್ ಮೆಹಫೂಜ್ ಗೆ ಈಜಿಪ್ಟ್‌ನ ರಸ್ತೆ ಮಧ್ಯೆ ಚಾಕುವಿನಿಂದ ಇರಿಯಲಾಯಿತು. 1991ರಲ್ಲಿ ಇರಾನ್, ‘ನಾವು ರಶ್ದಿ ಯನ್ನು ಏನೂ ಮಾಡುವು ದಿಲ್ಲ’ ಎಂದು ಬಹಿರಂಗ ಹೇಳಿಕೆ ಕೊಟ್ಟರೂ ಇಂದಿಗೂ ಫತ್ವಾ ಜಾರಿಯಲ್ಲಿಯೇ ಇದೆ- ರಶ್ದಿಯನ್ನು ಹೇಗಾದರೂ ಮಾಡಿ ಕೊಲ್ಲಲೇಬೇಕು ಎನ್ನುವ ದೊಡ್ಡ ಮುಸ್ಲಿಂ ಮೂಲಭೂತ ವರ್ಗ ಇಂದಿಗೂ ಜಗತ್ತಿನಲ್ಲ ಇದೆ.
ಅದೇ ಕಾರಣಕ್ಕೆ ರಶ್ದಿಯ ಮೇಲೆ ಇಪ್ಪತ್ತಕ್ಕೂ ಹೆಚ್ಚು ಬಾರಿ ಕೊಲೆ ಪ್ರಯತ್ನವಾಗಿದ್ದು. ಕಳೆದ 22 ವರ್ಷದಿಂದ ಅಮೆರಿಕದಲ್ಲಿ
ಬದುಕು ಕಟ್ಟಿಕೊಂಡಿರುವ ರಶ್ದಿ ಜೀವಭಯದ ನಡುವೆ ಕೂಡ ಬರೆಯುತ್ತಲೇ ಇದ್ದಾರೆ. ಹಿಂದಿನ ವಾರ ನ್ಯೂಯಾಕ್ ನ ಸಭೆ ಯಲ್ಲಿ ನುಗ್ಗಿದ ಮುಸ್ಲಿಂ ಯುವಕ ರಶ್ದಿ ಯ ಹೊಟ್ಟೆ, ಕುತ್ತಿಗೆಯ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ರಶ್ದಿ ಬರೆದದ್ದೆ.