Sunday, 5th January 2025

ಕಮಿಷನ್ ಆರೋಪ ರಾಜಕೀಯದ ದಾಳವಷ್ಟೇ ಆಗದಿರಲಿ

ರಾಜ್ಯದಲ್ಲಿ ಗುತ್ತಿಗೆದಾರರ ಹಗರಣ, ಕಮಿಷನ್ ರಾಜಕೀಯದ ಆರೋಪ ಮತ್ತೆ ಮುನ್ನೆಲೆಗೆ ಬಂದಿದ್ದು ಎರಡು ದಿನಗಳಿಂದ ರಾಜಕೀಯದಲ್ಲಿ ಹೊಸದಾಗಿ ಸಂಚಲನ ಸೃಷ್ಟಿಸಿದೆ.

ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ‘ಪರ್ಸೆಂಟ್ ಕಮಿಷನ್’ ಆರೋಪ ಗಳು ಆಡಳಿತಾರೂಢ ಬಿಜೆಪಿ ಮತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರ ಚಾಟಕ್ಕೆ ಕಾರಣವಾಗಿವೆ. ಯಾವುದೇ ಪಕ್ಷದ ಸರಕಾರವಿದ್ದರೂ ‘ಒಂದು ಮಟ್ಟಿನ’ ಕಮಿಷನ್ ವ್ಯವಹಾರ ನಡೆಯುತ್ತದೆ ಎನ್ನುವುದು ಒಪ್ಪಿಕೊಳ್ಳಲಾಗದಿದ್ದರೂ ಬಹಿರಂಗ ಸತ್ಯ. ಭ್ರಷ್ಟಾಚಾರದ ಬೇರುಗಳು ಬಲಗೊಳ್ಳುವುದೇ ಇಲ್ಲಿಂದ ಎನ್ನುವುದೂ ಸಾರ್ವ ಜನಿಕವಾಗಿ ತಿಳಿದಿರುವ ವಿಚಾರ. ಹಾಗಿದ್ದರೂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಕಾನೂನು ಹೋರಾಟ ನಡೆಸಬಹುದಾಗಿತ್ತು.

ನ್ಯಾಯಾಲಯದ ಕಟ್ಟೆ ಏರುವ ರಾಜಮಾರ್ಗದ ಅವಕಾಶ ಇದ್ದೇ ಇತ್ತು. ಆದರೆ ಅವರು ಆ ಮಾರ್ಗವನ್ನು ಬಳಸಿಕೊಳ್ಳದೆ ಪ್ರತಿಪಕ್ಷದ ನಾಯಕರ ಆಣತಿಗೆ ತಕ್ಕಂತೆ ಕುಣಿಯು ತ್ತಿದ್ದಾರೆ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ಅವರ ನಡೆಗಳು ಗೋಚರಿ ಸುತ್ತಿವೆ. ವಸ್ತುಶಃ ಪ್ರತಿಪಕ್ಷದ ಮುಖಂಡರಂತೆಯೇ ಮುಖ್ಯಮಂತ್ರಿಗಳು, ಸಚಿವರು, ಶಾಸಕರ ವಿರುದ್ಧ ಶೇ ೪೦ರ ಕಮಿಷನ್ ಆರೋಪಗಳನ್ನು ಮಾಡಿದ್ದಾರೆ.

ಭ್ರಷ್ಟಾಚಾರದಲ್ಲಿ ರಾಜ್ಯ ನಂ.೧ ಅಂತಲೂ ಹೇಳಿದ್ದಾರೆ. ಸಹಜವಾಗಿಯೇ ಈ ಆರೋಪಗಳನ್ನು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ನಿರಾಕರಿಸಿದ್ದು, ರಾಜ್ಯದಲ್ಲಿ ಕೆಂಪಣ್ಣನವರ ಸಂಘ ಒಂದೇ ಅಲ್ಲ, ಇನ್ನೂ ಹಲವು ಗುತ್ತಿಗೆ ದಾರರ ಸಂಘಗಳಿವೆ,. ಅವರ್ಯಾರೂ ಇಂತಹ ಆರೋಪಗಳನ್ನು ಮಾಡಿಲ್ಲ. ಕೆಂಪಣ್ಣ ಕೂಡ ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯನವರನ್ನು ಭೇಟಿ ಮಾಡಿದ ಬಳಿಕವೇ ಈ ಆರೋಪಗಳನ್ನು ಹೊರಿಸುತ್ತಿದ್ದಾರೆ. ಅಂದ ಮೇಲೆ ಕೆಂಪಣ್ಣ ಕಾಂಗ್ರೆಸ್‌ನ ರಾಜಕೀಯ ದಾಳವಾಗಿಯೇ ಈ ಆರೋಪ ಮಾಡಿದ್ದಾರೆ ಎಂದು ಬೊಮ್ಮಾಯಿ ಅವರೇ ಹೇಳಿ ಬಿಟ್ಟಿದ್ದಾರೆ.

ಕೆಲ ತಿಂಗಳ ಹಿಂದೆ ಗುತ್ತಿಗೆದಾರ ಸಂತೋಷ್ ಸಾವು, ಅದನ್ನನುಸರಿಸಿ ಸಚಿವ ಈಶ್ವರಪ್ಪ ರಾಜೀನಾಮೆಯ ಘಟನೆಗಳೊಂದಿಗೆ ಕಮಿಷನ್ ರಾಜಕೀಯ ತಲೆಯೆತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಂತಹ ಆರೋಪ-ಪ್ರತ್ಯಾರೋಪ, ಸಮರ್ಥನೆ, ವಿರೋ
ಧಗಳು ಸಹಜವಾಗಿಯೇ ಚುರುಕು ಪಡೆಯುತ್ತವೆ. ಭ್ರಷ್ಟಾಚಾರ ನಡೆದಿದ್ದರೆ ನ್ಯಾಯಾಂಗದ ಮೂಲಕವೇ ಅವುಗಳನ್ನು ಪ್ರಶ್ನಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು.