ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಖಾಸಗಿ ಶಾಲೆಗಳ ಆನ್ ಲೈನ್ ತರಗತಿಗಳಿಗೆ ಸಡ್ಡು ಹೊಡೆದಿರುವ ಶಿಕ್ಷಣ ಇಲಾಖೆ, ಸರಕಾರಿ ಸ್ವಾಾಮ್ಯದ ಡಿಡಿ ಚಂದನ ವಾಹಿನಿಯಲ್ಲಿ ಮಕ್ಕಳಿಗೆ ಪಾಠ ಮಾಡಲು ಚಿಂತನೆ ನಡೆಸುತ್ತಿದೆ.
ಶೇ.50 ರಿಂದ 60 ರಷ್ಟು ಮಕ್ಕಳ ಹಾಗೂ ಪೋಷಕರ ಬಳಿ ಇಂಟರ್ ನೆಟ್ ಸಂಪರ್ಕ ಇಲ್ಲ. ಹಾಗಾಗಿ ಆನ್‌ಲೈನ್ ತರಗತಿ ಕಾರ್ಯ
ಸಾಧುವಲ್ಲ ಎಂಬ ಹಿನ್ನೆಲೆಯಲ್ಲಿ ಸರಕಾರ ಡಿಡಿ ಚಂದನದ ಮೊರೆ ಹೋಗಿದೆ. ಈಗಾಗಲೇ ಅಧಿಕಾರಿಗಳ ಜತೆ ಚರ್ಚೆ ನಡೆಸಿರುವ ಸಚಿವ ಸುರೇಶ್ ಕುಮಾರ್ ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜೂನ್ 20 ರಿಂದ ಡಿಡಿ ಚಂದನದಲ್ಲಿ ಪಾಠ ಶುರುವಾಗುವ ಸಾಧ್ಯತೆ ಇದ್ದು, 1 ರಿಂದ 9 ನೇ ತರಗತಿವರೆಗೂ ಡಿಡಿ ಚಂದನದಲ್ಲಿ ಪಾಠ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದ್ದಾಾರೆ. ಡಿಎಸ್‌ಆರ್‌ಟಿಇ ಅಧಿಕಾರಿಗಳಿಗೆ ಪಾಠಗಳ ರೆಕಾರ್ಡಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಾಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವರ ಕಚೇರಿಯಿಂದ ಮಾಹಿತಿ ನೀಡಿದ್ದಾರೆ.