ಯೋಜನೆಯಡಿ ರಾಜ್ಯದಲ್ಲಿ ಒಟ್ಟು 2.85 ಕೋಟಿ ರೈತರನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 21 ಲಕ್ಷ ಫಲಾನುಭವಿಗಳು ಅನರ್ಹರು ಎಂದು ಶಾಹಿ ಹೇಳಿದರು. ಈ ಯೋಜನೆ ಯಡಿ ಪತಿ ಮತ್ತು ಪತ್ನಿ ಇಬ್ಬರೂ ಫಲಾನುಭವಿಗಳಾಗಿರುವ ಹಲವು ಪ್ರಕರಣಗಳು ಪತ್ತೆಯಾಗಿವೆ.
ಕಿಸಾನ್ ಪೋರ್ಟಲ್ನಲ್ಲಿ ದತ್ತಾಂಶವನ್ನು ಅಪ್ಲೋಡ್ ಮಾಡುವ ಪ್ರಕ್ರಿಯೆಯನ್ನು ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ ಮತ್ತು ಎಲ್ಲಾ ಅರ್ಹ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ 12 ನೇ ಕಂತು ನೀಡಲಾಗುವುದು ಎಂದು ಕೃಷಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಹೇಳಿದರು.
ಇದುವರೆಗೆ 1.51 ಕೋಟಿ ರೈತರ ಭೂ ದಾಖಲೆಗಳನ್ನು ಪೋರ್ಟಲ್ನಲ್ಲಿ ತುಂಬುವ ಕಾರ್ಯ ನಡೆದಿದೆ ಎಂದು ಕೃಷಿ ಸಚಿವರು ತಿಳಿಸಿದರು.