Tuesday, 26th November 2024

ಕೆಟ್ಟ ಅನುಭವವು ಸಿನಿಮಾರಂಗದಿಂದ ದೂರ ಉಳಿಯಲು ಪ್ರಮುಖ ಕಾರಣ: ನಟಿ ಆಶಿತಾ

ಬೆಂಗಳೂರು: ಮೀ ಟೂ ಅಭಿಯಾನ ಹೆಚ್ಚು ಸದ್ದು ಮಾಡಿದ್ದು ಸಿನಿಮಾ ಇಂಡಸ್ಟ್ರಿ ಯಲ್ಲಿ.  ಬಾಲಿವುಡ್​ನಿಂದ ಹಿಡಿದು ಸ್ಯಾಂಡಲ್​​ವುಡ್ ತನಕ ಪ್ರಾದೇಶಿಕ ಸಿನಿಮಾ ಕ್ಷೇತ್ರದಲ್ಲಿಯೂ ಮೀ ಟೂ ಸದ್ದು ಮಾಡಿದೆ.
ನಟಿ ಶ್ರುತಿ ಹರಿ ಹರನ್ ನಂತರ ಈಗ ಮತ್ತೊಬ್ಬ ನಟಿ ಇದೇ ರೀತಿ ಆರೋಪ ಮಾಡಿದ್ದು ಸುದ್ದಿಯಾಗಿದೆ. ರೋಡ್ ರೋಮಿಯೋ ಸಿನಿಮಾದ ನಟಿ,ಬಾ ಬಾರೋ ರಸಿಕ ಖ್ಯಾತಿಯ ಆಶಿತಾ ಮೀ ಟೂ ಆರೋಪ ಮಾಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಆಶಿತಾ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ.

ಕೆಲವು ವರ್ಷಗಳ ಹಿಂದೆ ಸದ್ದು ಮಾಡಿದ್ದ ನಟಿ ಬಳಿಕ ಮತ್ತೆ ಕ್ಯಾಮರಾ ಮುಂದೆ ಬಂದಿ ದ್ದಾರೆ. ಆಶಿತಾ ಕನ್ನಡ ಚಿತ್ರರಂಗದ ಕರಾಳಮುಖ ಬಹಿರಂಗ ಪಡಿಸಿದ್ದಾರೆ. ರಘುರಾಮ್ ಅವರ ಯೂಬ್ಯೂಬ್ ವಾಹಿನಿ ಜೊತೆ ಮಾತನಾಡಿದ ನಟಿ ಆಶಿತಾ ಮೀ ಟೂ ಕಾಟದ ಕುರಿತು ಸಾಕಷ್ಟು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ.

ಕೆಟ್ಟ ಅನುಭವವಾಗಿರುವುದು ಸಿನಿಮಾರಂಗದಿಂದ ದೂರ ಉಳಿಯಲು ಪ್ರಮುಖ ಕಾರಣ ಎಂದು ನೇರವಾಗಿ ಆರೋಪ ಮಾಡಿ ದ್ದಾರೆ. ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೆ ಬೇಸರವಿಲ್ಲ. ನಟಿಯಾಗಿ ಗುರುತಿಸಿ ಕೊಂಡ ಮೇಲೂ ತಮಗೆ ಕೆಟ್ಟ

ಅನುಭವಗಳು ಆದವು ಎಂದಿದ್ದಾರೆ.

ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ತನಗೆ ಕೆಟ್ಟ ಅನುಭವವಾಯಿತು ನಟಿ ಹೇಳಿದರು. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸು ತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ’ ಎಂದು ಆಶಿತಾ ಹೇಳಿದ್ದಾರೆ.

‘ಸರ್, ಸರ್, ಸರ್ ಅನ್ನಬೇಕು, ಮೆಸೇಜ್ ಮಾಡಬೇಕು, ಹಾಯ್ ಅಂತ ಹೇಳ್ತಾ ಇರಬೇಕು ಇದನ್ನೆಲ್ಲ ನಾನು ಮಾಡ್ತಾ ಇರ್ಲಿಲ್ಲ ಅಂತ ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂದರೆ ಅಷ್ಟು ಕೊಟ್ಟಿದ್ದಾರೆ. ಇದು ನನ್ನ ಜೀವನದಲ್ಲಿ ಪೀಕ್ ನಲ್ಲಿ ಇದ್ದಾಗ ಆಗಿದ್ದು. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ’ ಎಂದು ಹೇಳಿದ್ದಾರೆ.

ಈಗಲೂ ನಟಿಸುವ ಆಸಕ್ತಿ ಇದೆ ಎಂದಿರುವ ನಟಿ ಆಶಿತಾ ಉತ್ತಮ ಪಾತ್ರ ಸಿಕ್ಕರೆ ಬರುವುದಾಗಿ ಹೇಳಿದ್ದಾರೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು’ ಎಂದು ಹೇಳಿದರು.

ರೋಡ್ ರೊಮಿಯೋ ಸಿನಿಮಾ ಬಳಿಕ ಆಶಿತಾ ಮತ್ತೆ ಸಿನಿಮಾ ಮಾಡಿಲ್ಲ. ಉತ್ತಮ ಪಾತ್ರ ಸಿಕ್ಕಿದರೂ ಸಹ ಆಶಿತಾ ಸಿನಿಮಾಗಳಲ್ಲಿ ನಟಸಿಲ್ಲ.