ತುಮಕೂರು: ನಗರದ ಸಮಸ್ತ ಬೀದಿಬದಿ ವ್ಯಾಪಾರಿಗಳಿಗೆ ಸಮಗ್ರವಾದ ವೆಂಡಿಗ್ ಜೋನ್ ನಿರ್ಮಿಸಿಕೊಡಲು ಮುಂದಿನ ಸಾಮಾನ್ಯಸಭೆಯಲ್ಲಿ ಚರ್ಚಿಸುವಂತೆ ಒತ್ತಾಯಿಸಿ ತುಮಕೂರು ಪುಟ್‌ಪಾತ್ ವ್ಯಾಪಾರಿಗಳ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ವಸೀ0 ಅಕ್ರಂ, ಮೇಯರ್ ಪ್ರಭಾವತಿ ಮತ್ತು ಉಪಮೇಯರ್ ನರಸಿಂಹಮೂರ್ತಿಗೆ ಮನವಿ ಸಲ್ಲಿಸಿದರು.
ವ್ಯಾಪಾರಿ ವಲಯ ನಿರ್ಮಾಣ ಕುರಿತಂತೆ ಶಿರಾನಿ ರಸ್ತೆ, ಜೆ.ಸಿ.ರಸ್ತೆ, ಶೆಟ್ಟಿಹಳ್ಳಿ, ಪಿ&ಟಿ ಕ್ವಾಟ್ರಸ್, ಸಾಯಿಬಾಬಾ ದೇವಾಲಯ, ಶಿರಾ ಗೇಟ್, ಅಂತರಸನಹಳ್ಳಿ, ಅಶೋಕ ರಸ್ತೆಯಲ್ಲಿ ಲಭ್ಯವಿರುವ ಕನ್ಸರ್ವೇನ್ಸಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸ ಬೇಕು. ವಸತಿ ಇಲ್ಲದೆ ಇರುವ ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ವಸತಿ ಯೋಜನೆಯಡಿ ಮನೆ, ನಿವೇಶನ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾಜಿ ಮೇಯರ್ ಕೃಷ್ಣಪ್ಪ, ಮುಖಂಡರಾದ ರಾಜಶೇಖರ್, ಮುತ್ತುರಾಜ್ ಇದ್ದರು.