Wednesday, 27th November 2024

ಭಾರತ ಚುನಾವಣಾ ಆಯೋಗ ವತಿಯಿಂದ ಮಾಧ್ಯಮಗಳಿಗೆ ರಾಷ್ಟ್ರೀಯ ಪ್ರಶಸ್ತಿ: ಅರ್ಜಿ ಆಹ್ವಾನ

Bengaluru News

ತುಮಕೂರು: ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬ೦ಧಿಸಿದ೦ತೆ ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಸುದ್ದಿಗಳನ್ನು ಪ್ರಕಟಿಸಿದ / ಪ್ರಸಾರ ಮಾಡಿದ ಕಾರ್ಯಕ್ಕಾಗಿ ಮಾಧ್ಯಮ ಸಂಸ್ಥೆಗಳಿಗೆ ರಾಷ್ಟ ಮಟ್ಟದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು “ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ -2022” ಗಾಗಿ ಅರ್ಜಿ ಆಹ್ವಾನಿಸಿದೆ.

ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ(ಟಿ.ವಿ.), ವಿದ್ಯುನ್ಮಾನ ಮಾಧ್ಯಮ (ರೇಡಿಯೋ) ಹಾಗೂ ಆನ್‌ಲೈನ್ (ಇಂಟರ್‌ ನೆಟ್) / ಸಾಮಾಜಿಕ ಜಾಲತಾಣ ಹೀಗೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸ ಲಾಗಿದ್ದು, 2022ರ ಸಾಲಿನಲ್ಲಿ ಮತದಾರರ ಜಾಗೃತಿ ಕುರಿತು ಪ್ರಕಟಿಸಿದ ಲೇಖನ ಅಥವಾ ಪ್ರಸಾರ ಮಾಡಿದ ಸುದ್ದಿಗಳನ್ನು ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಕಳುಹಿಸಬಹು ದಾಗಿದೆ.

ಮುದ್ರಣ ಮಾಧ್ಯಮದ ಸಂಸ್ಥೆಗಳು ತಮ್ಮ ಸುದ್ದಿಯ ತುಣುಕುಗಳನ್ನು ಪ್ರಕಟಿಸಿದ ದಿನಾಂಕ ಸೇರಿದಂತೆ ಮುದ್ರಣ ಮಾಡಿದ ಸುದ್ದಿ / ಲೇಖನ ಹಾಗೂ ಪ್ರಕಟವಾಗಿರುವ ಸುದ್ದಿಯ ಅಳತೆಯನ್ನು ಪಿಡಿಎಫ್ ಸಾಫ್ಟ್ ಕಾಪಿ / ಸಂಬ೦ಧಿಸಿದ ಜಾಲತಾಣದ ವಿಳಾಸ / ಪೂರ್ಣ ಅಳತೆಯ ವೃತ್ತಪತ್ರಿಕೆ ಛಾಯಾಪ್ರತಿ / ಲೇಖನಗಳನ್ನು, ನೇರ ಸಾರ್ವಜನಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳು ವಂತಹ ಇತರೆ ಯಾವುದೇ ವಿವರಗಳನ್ನು ಸಲ್ಲಿಸ ಬೇಕು.

ವಿದ್ಯುನ್ಮಾನ ಮಾಧ್ಯಮ ಸಂಸ್ಥೆ(ಎಲೆಕ್ಟ್ರಾನಿಕ್)ಗಳು ಮತ್ತು ರೇಡಿಯೋ (ಎಲೆಕ್ಟ್ರಾನಿಕ್) ಸಂಬ೦ಧಿತ ಅವಧಿಯಲ್ಲಿ ನಡೆಸಿದ ಪ್ರಚಾರ / ಕೆಲಸದ ಕುರಿತು ಸಂಕ್ಷಿಪ್ತವಾಗಿ ಮಾಹಿತಿ, ಪ್ರಸಾರದ ಅವಧಿ ಮತ್ತು ಟೆಲಿಕಾಸ್ಟ್ ಕಾರ್ಯಕ್ರಮವನ್ನು ಸಿಡಿ ಅಥವಾ ಡಿವಿಡಿ ಅಥವಾ ಪೆನ್‌ಡ್ರೆöವ್‌ನಲ್ಲಿ ಮತದಾರರ ಜಾಗೃತಿ ಕುರಿತು ಸುದ್ದಿ ವೈಶಿಷ್ಟ್ಯಗಳು ಮತ್ತು ಆ ಅವಧಿಯಲ್ಲಿ ಪ್ರಸಾರವಾದ ಪ್ರತಿ ಸ್ಥಳದ ಒಟ್ಟು ಸಮಯ ಹಾಗೂ ಪ್ರಸಾರ ಸಮಯದ ಮೊತ್ತ ಸಲ್ಲಿಸಬೇಕು.

ಆನ್‌ಲೈನ್(ಇಂಟರ್‌ನೆಟ್) / ಸಾಮಾಜಿಕ ಮಾಧ್ಯಮಗಳು ಪ್ರಸಾರದ ಯಾವುದೇ ಕೆಲಸದ ಸಾರಾಂಶವನ್ನು ಒಳಗೊಂಡಿರು ವ೦ತರಹ ಪೋಸ್ಟರ್‌ಗಳ ಸಂಖ್ಯೆ / ಬ್ಲಾಗ್/ ಅಭಿಯಾನ/ ಟ್ವೀಟ್ / ಲೇಖನ ಸೇರಿದಂತೆ ಇತ್ಯಾದಿಗಳನ್ನು ಸಾಫ್ಟ್ ಕಾಪಿ ಅಥವಾ ಸಂಬ೦ಧಿತ ವೆಬ್ ವಿಳಾಸಕ್ಕೆ ಲಿಂಕ್‌ನೊAದಿಗೆ ಸಲ್ಲಿಸಬೇಕು.

ಇಂಗ್ಲಿಷ್/ಹಿ೦ದಿ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಸಲ್ಲಿಸಲಾಗುವ ಅರ್ಜಿಗಳ ಜೊತೆಗೆ ಇಂಗ್ಲಿಷ್ ಅನುವಾದದ ಪ್ರತಿಯೊಂದಿಗೆ ಸಲ್ಲಿಸಬೇಕು. ವಿಫಲವಾದರೆ ನಿರಾಕರಣೆಗೆ ಒಳಪಡುತ್ತದೆ. ಪ್ರಸಾರದ ವಿಷಯವನ್ನು ಸಲ್ಲಿಸುವ ಪ್ರವೇಶದಾರರು ಜ್ಯೂರಿ ವೈಶಿಷ್ಟ್ಯಗಳು / ಕಾರ್ಯಕ್ರಮದ ಮೊದಲ ಹತ್ತು ನಿಮಿಷಗಳನ್ನು ಮಾತ್ರ ಬಳಸಬಹುದಾಗಿರುತ್ತದೆ.

ಆಯೋಗದ ತೀರ್ಮಾನವು ಅಂತಿಮವಾಗಿದ್ದು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ. ಈ ನಿಟ್ಟಿನಲ್ಲಿ ಆಯೋಗ ವು ಎಲ್ಲಾ ಹಕ್ಕುಗಳನ್ನು ಹೊಂದಿದೆ. ಅರ್ಜಿ ಸಲ್ಲಿಸುವವರು ತಮ್ಮ ಹೆಸರು, ವಿಳಾಸ, ದೂರವಾಣಿ ಮತ್ತು ಫ್ಯಾಕ್ಸ್ ಸಂಖ್ಯೆಗಳು ಮತ್ತು ಇ-ಮೇಲ್ ಅನ್ನು ಸ್ಪಷ್ಟವಾಗಿ ನಮೂದಿಸಿರಬೇಕು.

ಅರ್ಜಿಗಳನ್ನು ನವೆಂಬರ್ 30ರೊಳಗಾಗಿ ನೇರವಾಗಿ ಶ್ರೀ ಲವ್‌ಕುಶ್ ಯಾದವ್, ಅಧೀನ ಕಾರ್ಯದರ್ಶಿ(ಸಂವಹನ), ಭಾರತ ಚುನಾವಣಾ ಆಯೋಗ, ನಿರ್ವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001 ಇವರಿಗೆ ಅಥವಾ ಇಮೇಲ್: ಜiಚಿ-ಜivisioಟಿ@eಛಿi.gov.iಟಿ ವಿಳಾಸಕ್ಕೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.ವಾ.ಸಂ.: 011-23052033ನ್ನು ಸಲ್ಲಿಸಬಹುದಾಗಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ (ಸಿಆರ್‌ಸಿಇ) ಡಿ.ಶಂಭು ಭಟ್ ತಿಳಿಸಿದ್ದಾರೆ.