Friday, 20th September 2024

ಕೇದಾರನಾಥದಲ್ಲಿ ಹೆಲಿಕಾಪ್ಟರ್ ಪತನ: 6 ಜನರ ಸಾವು

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥದಲ್ಲಿ ಯಾತ್ರಿಕರನ್ನು ಕರೆ ದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು 6 ಜನರು ಮೃತಪಟ್ಟಿದ್ದಾರೆ.

ಕೇದಾರನಾಥದಿಂದ 2 ಕೀ.ಮೀ. ದೂರದಲ್ಲಿರುವ ಗರುಡಚಟ್ಟಿ ಬಳಿ ಹೆಲಿಕಾ ಪ್ಟರ್ ಪತನಗೊಂಡು ಈ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ನಲ್ಲಿದ್ದ 8 ಜನರ ಪೈಕಿ 6 ಜನರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ ಡಿ ಆರ್ ಎಫ್, ಪೊಲೀಸರು ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಹವಾಮಾನ ವೈಪರಿತ್ಯದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.