Wednesday, 27th November 2024

ಕುರುಬ ಸಮುದಾಯದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಶಾಸಕ ಗೌರಿಶಂಕರ್ ಧನಸಹಾಯ

ತುಮಕೂರು : ಗ್ರಾಮಾಂತರದ ಸಿರಿವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇಗೌಡನ ಪಾಳ್ಯ ಗ್ರಾಮಕ್ಕೆ, ಜನಪ್ರಿಯ ಶಾಸಕ ಡಿ.ಸಿ ಗೌರಿಶಂಕರ್  ಭೇಟಿ ನೀಡಿ, ಶ್ರೀ ಬೀರೇಶ್ವರ ಸ್ವಾಮಿ, ಹಾಗೂ ಚಿಕ್ಕಮ್ಮ ದೊಡ್ಡಮ್ಮ ದೇವಿಗೆ ಪೂಜೆ ಸಲ್ಲಿಸಿ, ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ವೈಯಕ್ತಿಕವಾಗಿ ಐದು ಲಕ್ಷ  ಧನಸಹಾಯವನ್ನು ಶ್ರೀ ಬೀರೇಶ್ವರ ಸ್ವಾಮಿ ಹಾಗೂ ಚಿಕ್ಕಮ್ಮ-ದೊಡ್ಡಮ್ಮ ದೇವಾಲಯದ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಗ್ರಾಮಸ್ಥರ ಸಮೂಹದೊಂದಿಗೆ ದೇವಸ್ಥಾನ ಜೀರ್ಣೋ ದ್ಧಾರಕ್ಕೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು,  ಸಿರವಾರ ಗ್ರಾಮದ ಸತ್ಯಪ್ಪ ದೇವಸ್ಥಾನದ ಜೀರ್ಣೋ ದ್ಧಾರಕ್ಕೆ ಈಗಾಗಲೇ ವೈಯಕ್ತಿಕವಾಗಿ 8 ಲಕ್ಷ ರು.ಗಳನ್ನು ನೀಡಿದ್ದು, ದೇವಸ್ಥಾನ ಉದ್ಘಾ ಟನೆ ಕಾರ್ಯಕ್ರಮಕ್ಕೆಸಂದರ್ಭದಲ್ಲಿ 3, ದಿವಸದ ಸಂಪೂರ್ಣ ಊಟದ ವ್ಯವಸ್ಥೆ ಯನ್ನು ಶಾಸಕರು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ,

ಹಾಗೂ ಸಿರುವಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವಂತಹ ಗ್ರಾಮಗಳಾದ -ಕಲ್ಲು ಪಾಳ್ಯ, ಹುಚ್ಚ ಅಯ್ಯನಪಾಳ್ಯ, ಗರುಡ ಯ್ಯನ ಪಾಳ್ಯ, ಈ ಮೂರು ಗ್ರಾಮಗಳಲ್ಲಿ ಸುಮಾರು 85 ಲಕ್ಷ ರುಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಮತ್ತು ಮನೆಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಯುವಕನೋರ್ವನ ಕೋರಿಕೆಯಂತೆ ಅವರ ಮನೆಗೆ ಭೇಟಿ ನೀಡಿ ಯುವಕನ ತಾಯಿ ಕ್ಯಾನ್ಸರ್ ಕಾಯಿಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದು, ಕುಟುಂಬಸ್ಥರು ತೀವ್ರ ಸಂಕಷ್ಟದಲ್ಲಿದ್ದು, ಆ ಕುಟುಂಬಕ್ಕೆ ಶೀಘ್ರವಾಗಿ ಮನೆಯ ಅವಶ್ಯಕತೆ ಇದ್ದುದ್ದರಿಂದ ಇದನ್ನರಿತ ಮಾನ್ಯ ಶಾಸಕರು ಶೀಘ್ರವಾಗಿ ಮನೆ ಕೆಲಸ ಶುರು ಮಾಡುವಂತೆ ಸೂಚಿಸಿ, ವೈಯಕ್ತಿಕವಾಗಿ ಎರಡು ಲಕ್ಷ ನೀಡುವುದಾಗಿ ತಿಳಿಸಿದರು.

ಈ ವೇಳೆ ಕುರುಬ ಸಮುದಾಯದ ನೂರಾರು ಮುಖಂಡರುಗಳು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಕುರುಬ ಸಮುದಾಯ ಮುಖಂಡರುಗಳಾದ ಶಿವರಾಮಯ್ಯ , ಬೀರಪ್ಪ, ಚಿಕ್ಕಯ್ಯ, ಸಿರವಾರ ದೊಡ್ಡ ರಾಮಯ್ಯ, ಕಾಡಿ ಪಾಳ್ಯ ಮೂರ್ತಪ್ಪ, ಸೆಲ್ಫಿ ನಾಗಣ್ಣ, ರವಿ, ಮೂರ್ತಿ, ಕೆಂಪರಾಜು, ರಾಜು, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರುಗಳು ಉಪಸ್ಥಿತರಿದ್ದರು.