Wednesday, 27th November 2024

ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸಮಸ್ಯೆಗಳ ಅಧ್ಯಯನ ನಡೆಸಬೇಕು: ಮುರುಳೀಧರ ಹಾಲಪ್ಪ

ಚಿಕ್ಕನಾಯಕನಹಳ್ಳಿ: ಕೃಷಿ, ತೋಟಗಾರಿಕೆ ಮತ್ತು ಪಶು ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರದೇ ಗ್ರಾಮಗಳಿಗೆ ತೆರಳಿ ಅಲ್ಲಿಯ ಸಮಸ್ಯೆಯ ಬಗ್ಗೆ ಅಧ್ಯಯನ ನೆಡಸಬೇಕೆಂದು ಕೌಶಲ್ಯಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರು ಳೀಧರ ಹಾಲಪ್ಪ ಕಿವಿಮಾತು ಹೇಳಿದರು.

ತರಬೇನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಧಿಕಾರಿಗಳು ಅಂಕಿಅ0ಶ ನೀಡುವ ಬದಲು ಗ್ರಾಮಗಳಿಗೆ ಹಾಗು ಕ್ಷೇತ್ರ ಮಟ್ಟಕ್ಕೆ ತೆರಳಿ ತಮ್ಮ ಇಲಾಖೆಯ ಕಾರ್ಯ ಚಟುವಟಿಕೆ ಗಳ ಪ್ರಗತಿ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ರಾಜ್ಯಾದ್ಯಂತ ಚರ್ಮಗಂಟು ರೋಗ ಉಲ್ಬಣಗೊಂಡಿದೆ. ಅಧಿಕಾರಿಗಳು ರೈತನ ಮನೆ ಬಾಗಿಲಿಗೆ ತೆರಳಿ ತಿಳಿವಳಿಕೆ ನೀಡಿ ಚಿಕಿತ್ಸೆಗೆ ನೆರವು ನೀಡಬೇಕು. ಈ ಕಾಯಿಲೆಗೆ ನಿರ್ದಿಷ್ಠ ವಾದ ಲಸಿಕೆ ಇಲ್ಲದಿರುವುದರಿಂದ ಕಾಯಿಲೆಯ ಲಕ್ಷಣ ಕಂಡುಬ0ದರೆ ರೈತರು ಜಾನುವಾರುಗಳ ಬಗ್ಗೆ ಯಾವ ರೀತಿ ನಿಗಾವಹಿಸಬೇಕು ಎಂಬ ಬಗ್ಗೆ ಮಾಹಿತಿ ಒದಗಿಸ ಬೇಕು. ಜಿಲ್ಲೆಯಲ್ಲಿ ೫ ಲಕ್ಷಕ್ಕೂ ಹೆಚ್ಚು ರಾಸುಗಳಿದ್ದು ಕೇವಲ ೯೮೦೦ ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ನೀಡಿದ್ದೀರ.

ಕೃಷಿ ಇಲಾಖೆಯ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಗೊಬ್ಬರ ಹಾಗು ಬೀಜಗಳ ಬಗ್ಗೆ ಮಾಹಿತಿ ಪಡೆಯಬೇಕು. ತೋಟಗಾರಿಕೆ ಬೆಳೆಗಳಿಗೆ ಹುಳದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಅಧಿಕಾರಿಗಳು ಕ್ಷೇತ್ರ ಮಟ್ಟಕ್ಕೆ ಹೋದಾಗ ಮಾತ್ರ ಸಮಸ್ಯೆಗಳ ಅರಿವಾಗು ತ್ತದೆ. ರೈತರು ಸಣ್ಣ ಕೆಲಸಗಳಿಗೂ ಶಾಸಕರು, ಲೋಕಸಭಾ ಸದಸ್ಯರ ಹಿಂದೆ ಸುತ್ತ ಬೇಕಾಗಿದ್ದು ಇದು ಕೂಡಲೇ ತಪ್ಪಬೇಕೆಂದು ಮುರುಳೀಧರ ಹಾಲಪ್ಪ ಎಚ್ಚರಿಕೆ ನೀಡಿದರು.

ಕೃಷಿ ಕಾಯಕ ಸವಾಲು
ಸವಾಲುಗಳ ನಡುವೆಯೂ ಕೃಷಿ ಕಾಯಕದಿಂದ ವಿಮುಖನಾಗದೆ ನಮ್ಮ ಕೃಷಿಕ ತನ್ನ ಕೆಲಸದಲ್ಲಿ ತೊಡಗಿದ್ದಾನೆ.

ಮೌಲ್ಯವರ್ಧಿತ ಉತ್ಪನ್ನಗಳನ್ನು ಬೆಳೆಯಲು ಮುಂದಾದರೆ ರೈತರು ಲಾಭ ಗಳಿಸಬಹುದು. ಹಾಲು, ತೆಂಗಿನ ಉತ್ಪನ್ನಗಳಿಂದ ಹೆಚ್ಚು ಹಣ ಸಂಪಾದಿಸಬಹುದು ಎಂದು ರೈತ ಸಾಸಲು ಮಂಜುನಾಥ್ ಹೇಳಿದರು.

ಪ್ರಗತಿಪರ ರೈತ ಷಡಕ್ಷರಿ, ಹೊನ್ನಗಿರಿಗೌಡ, ಲೋಕೇಶ್, ಬಿ.ಜಿ.ರಾಜಣ್ಣ, ಗಂಗಾಧರ್, ರಘುನಾಥ್, ಸಂವಾದದಲ್ಲಿ ಮಾತನಾಡಿ ದರು. ಕೃಷ್ಣೇಗೌಡ, ಚಂದ್ರಶೇಖರ್, ತಿಮ್ಲಾಪುರ ಶಂಕರಣ್ಣ, ಸೇರಿದಂತೆ ಅನೇಕರು ಹಾಜರಿದ್ದರು.