Wednesday, 27th November 2024

ಅವೈಜ್ಞಾನಿಕ ತೆರೆದ ಚರಂಡಿ: ತಲೆಕೆಟ್ಟ ಯೋಜನೆಗೆ ವಿರೋಧ

ತಿಪಟೂರು: ಅಮಾನಿಕೆರೆಯ ಕಲ್ಲೇಶ್ವರ ದೇವಾಸ್ಥಾನದ ಹಿಂಬಾಗದಲ್ಲಿರುವ ರಸ್ತೆಯ ಪಕ್ಕದಲ್ಲಿ ಅವೈಜ್ಞಾನಿಕವಾದ ದೊಡ್ಡದಾದ ತೆರೆದ ಚರಂಡಿಯನ್ನು ಮಾಡಿ ಸುಮಾರು ೩ ಕೋಟಿಗಳ ಸರ್ಕಾರಿ ಹಣವನ್ನು ಹಾಳುಮಾಡುವುದಲ್ಲದೇ ಕೆರೆಯ ಏರಿಗೆ, ದೇವಾಸ್ಥಾನಕ್ಕೆ ಮತ್ತು ಪಕ್ಕದಲ್ಲಿ ವಾಸಿಸುವ ಸಾವಿರಾರು ನಿವಾಸಿಗಳಿಗೆ ತೊಂದರೆ ಮಾಡಲು ಹೊರಟಿರುವ ಸಣ್ಣ-ನೀರಾವರಿ ಇಲಾಖೆ, ನಗರಸಭೆ ಮತ್ತು ತಾಲ್ಲೂಕಿನ ಜನಪ್ರತಿನಿಧಿಯ ತಲೆಕೆಟ್ಟ ಯೋಜನೆಯನ್ನು ವಿರೋಧಿಸುವ ಈ ಹೋರಾಟಕ್ಕೆ ನಿಮ್ಮ ಗಳ ಬೆಂಬಲ ಅವಶ್ಯಕವಾಗಿದೆ.

ತಿಪಟೂರಮ್ಮನ ದೇವಾಸ್ಥಾನ, ಕಲ್ಲೇಶ್ವರ ದೇವಾಸ್ಥಾನ ಮತ್ತು ತಿಪಟೂರು ಗಣಪತಿಯ ಉತ್ಸವದ ಎಲ್ಲಾ ಕಾರ್ಯಕ್ರಮಗಳು ಸಾವಿರಾರು ಜನಸಂಖ್ಯೆಯಲ್ಲಿ ಈ ಭಾಗದಲ್ಲೇ ಸೇರಿ ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಈಗಾಗಲೇ ಹಿಂದಿನ ಮತ್ತು ಈಗಿನ ಪ್ರಜಾ ಪ್ರತಿನಿಧಿಗಳ ತೀರ್ಮಾನದಿಂದ ಕೆರೆಯ ವಾಸ್ತು ಮತ್ತು ಗಾತ್ರ ಹಾಳಾಗಿದೆ. ಸುಮಾರು ೧೨೫ ಎಕರೆ ವಿಸ್ತೀರ್ಣದ ಕೆರೆಯು ಈಗ ೭೫ ಎಕರೆಗೆ ಬಂದು ನಿಂತಿದೆ.

ಹಿಂದೆ ಮಾಡಿದ ಯು.ಜಿ.ಡಿ ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ಯೋಜನೆಯಿಂದ ಈಗ ಮಳೆಯ ನೀರು ಮತ್ತು ಚರಂಡಿ ನೀರು ನಗರದ ಎಲ್ಲಾ ಭಾಗದಲ್ಲೂ ಹೊರಚೆಲ್ಲಿ ಅಸಹ್ಯ ಉಂಟು ಮಾಡುತ್ತಿರುವುದನ್ನು ನೀವೆಲ್ಲ ನೊಡಿದ್ದಿರಾ. ಆದರಲ್ಲೂ ಗಣೇಶ ಚಿತ್ರಮಂದಿರದ ಮುಂದೆ ನದಿಯಂತೆ ಚರಂಡಿ ನೀರು ಹರಿದು ತೋಟಗಳನ್ನು ದಾಟಿ ಕೊಪ್ಪದ ಬಳಿ ಕುಡಿಯುವ ನೀರಿಗೆ ಸೇರಿ ಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಕಳೆದ ೨ ವರ್ಷಗಳಿಂದ ಅನೇಕ ಅಪಘಾತಗಳು ಆ ಭಾಗದಲ್ಲಿ ಆಗಿ ಒಬ್ಬ ವ್ಯಕ್ತಿಯ ಪ್ರಾಣ ತೆಗೆದುಕೋಡಿದೆ, ಏನೇ ಅವಹಾಲು ಮತ್ತು ರೋದನೆಯನ್ನು ಮಾಡಿದರು ಸ್ಥಳಿಯ ನಗರಸಭೆ ಮತು ಆಡಳಿತ ವ್ಯವಸ್ಥೆ ಹಾಗೂ ಶಾಸಕರ ಕಿವಿ ಕಿವುಡಾಗಿರುತ್ತದೆ.

ಮೊನ್ನೆ ಅಂದರೆ ಕಳೆದ ವಾರ ರಾತ್ರಿ ಬಿದ್ದ ಮಳೆಯಿಂದ ವೈಭವ ಮಾಲ್ ಮುಂದೆ ೨ ದಿಕ್ಕಿನಲ್ಲೂ ಸೊಂಟದವರೆಗೂ ನೀರು ನಿಂತಿದ್ದು ತಾಲ್ಲೂಕು ಆಡಳಿತ ಅಧಿಕಾರಿಗಳು ಕೆರೆ-ಕೋಡಿಯ ಗೋಡೆಯನ್ನು ಒಡೆದು ನೀರನ್ನು ಹೊರ ಚೆಲ್ಲಿದ್ದು ನಮ್ಮ ತಿಪಟೂರಿನ ಇತಿಹಾಸದಲ್ಲಿ ಸೇರಿಕೊಂಡಿದೆ. ಈ ಅನಾಹುತವನ್ನು ಜನರು ತೀರ್ವವಾಗಿ ವಿರೋಧಿಸಿ ಚರ್ಚೆ ಮಾಡುತ್ತಿರುವುದು ತಿಳಿದು ಈ ತೆರೆದ ಚರಂಡಿಯ ಅವೈಜ್ಞಾನಿಕ ಯೋಜನೆಯನ್ನು ಮಾಡಿ ಜನರ ಕಣ್ಣೊರೆಸುವ ಪ್ರಯತ್ನಕ್ಕೆ ಹೋರಟಿದ್ದಾರೆ.

ಕಲುಷಿತ ಚರಂಡಿ ನೀರು ತಗ್ಗು ಪ್ರದೇಶಗಳಾದ ಹಿಂಡೀಸ್ಕೇರೆ.ಈಡೇನಹಳ್ಳಿ. ಗೊರಗೊಂಡನಹಳ್ಳಿ ಕೆರೆಗಳಿಗೆ ಸೇರಿ ಚಾನಲ್ ಮುಖಾಂತರ ಬುಗಡನಹಳ್ಳಿಗೆ ಸೇರಿ ತುಮಕೂರಿನ ಜನರಿಗೂ ಕುಡಿಯುವ ನೀರು ಪೊರೈಕೆಯಾಗುತ್ತಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಜಿಲ್ಲಾಧಿಕಾರಿಗಳು ಅಲ್ಲಿಯೆ ಕುಳಿತು ಎಲ್ಲಾ ಸರಿಯಿದೆ ಎಂದು ಸುಳ್ಳು ಹೇಳುತ್ತಿದ್ದಾರೆ

ಜನರ ಜೀವದ ಜೊತೆ ಚಲ್ಲಾಟವಾಡಬೇಡಿ ಎಂದು ಲೊಕೇಶ್ವರ ಎಚ್ಚರಿಕೆ ನೀಡಿದರು. ಈ ಯೋಜನೆಯಿಂದ ಕೆರೆ ಏರಿಯ ಗಟ್ಟಿತನವು ಹಾಳಾಗುತ್ತದೆ, ಸ್ವಿಪೆಜ್ ನೀರು ಸೋರಿಕೆ ಉಂಟಾಗಿ ದೇವಾಸ್ಥಾನದ ತಳ ಪಾಯವು ಹಾಳಾಗುವ ಸಾಧ್ಯತೆಯಿದೆ, ಕೆರೆ ಪಕ್ಕ ವಾಸವಾಗಿರುವ ನೂರಾರು ಮನೆಗಳಿಗೂ ತೊಂದರೆ ಆಗುವ ಅವಕಾಶವಿರುತ್ತz,.

ಚರಂಡಿಯ ವಾಸನೆ ಮತ್ತು ಸೊಳ್ಳೆ ಕಾಟದಿಂದ ಅಲ್ಲಿಯ ನಿವಾಸಿಗಳು ನರಳ ಬೇಕಾಗುತ್ತದೆ, ಅಕ್ಕ ಪಕ್ಕದಲ್ಲಿ ಹಾದು ಹೋಗುವ ಮನುಷ್ಯರು, ದನಗಳು ಮತ್ತು ನಾಯಿ ಇತರೆ ಪ್ರಾಣಿಗಳು ಆಳವಾದ ಚರಂಡಿಯಲ್ಲಿ ಬಿದ್ದು ಸಾಯುವ ಅವಕಾಶಗಳು ಹೆಚ್ಚಾ ಗಿರುತ್ತª,. ದೇವರ ಎಲ್ಲಾ ಉತ್ಸವಗಳಿಗೆ ಇಲ್ಲಿ ತುಂಬಾ ತೊಂದರೆ ಆಗುತ್ತದೆ ಮತ್ತು ವಾಹನ ಸಂಚಾರಕ್ಕೂ ತೊಂದರೆ ಆಗುತ್ತದೆ.

ಒಂದು ಸಮಯ ಅವುಗಳಿಗೆ ಸ್ಲಾಬ್ ಜೋಡಿಸಿದರು ಅಲ್ಲಿ ಓಡಾಡುವ ಬಾರಿ ವಾಹನಗಳಿಂದ ಅವುಗಳು ಹೊಡೆದು ಹೋಗಿ ಮತ್ತೆ ಅಪಾಯಕಾರಿ ಜಾಗಗಳಾಗುವ ಅವಕಾಶವಿರುತ್ತದೆ. ಆದ್ದರಿಂದ ಈ ೮ ಅಡಿ ೧೫ ಅಡಿ ಉದ್ದದ ದೊಡ್ಡ ಚರಂಡಿ ಮಾಡುವ ಯೋಜನೆಯನ್ನು ಕೈ ಬಿಟ್ಟು ಯು.ಜಿ.ಡಿ ಗೆ ಅಳವಡಿಸಿದಂತೆ ಭೂಮಿಯ ಒಳಗಡೆ ಪೈಪ್‌ಗಳನ್ನು ಅಳವಡಿಸಿ ಮುಚ್ಚುವುದರಿಂದ ಮೇಲಿನ ಎಲ್ಲಾ ಸಮಸ್ಯೆಗಳಿಂದ ಹೊರಬರಲು ಅವಕಾಶವಿರುತ್ತದೆ. ಈ ಬದಲಾವಣೆಯನ್ನು ಮಾಡದೇ ಸರ್ಕಾರದ ಪ್ರತಿನಿಧಿಗಳು ಮುಂದುವರೆದಿದ್ದೆ ಆದಲ್ಲಿ ಈ ಯೋಜನೆಯನ್ನು ಎಲ್ಲಾ ಸಾರ್ವಜನಿಕರು ವಿರೋಧಿಸಿ ಎಲ್ಲಾ ಹೋರಾಟಕ್ಕು ಸಿದ್ದರಾಗಬೇಕಾಗುತ್ತದೆ.ಈ ಸಂದರ್ಭದಲ್ಲಿ ತಾಲ್ಲೋಕು ದಂಡಾದಿಕಾರಿ ಚಂದ್ರಶೇಖರ್.ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ದೊಡ್ಡಯ್ಯ.ಅಕ್ಕಪಕ್ಕದ ಗ್ರಾಮದ ನೂರಾರು ಜನರು ಇದ್ದರು.